Latest Updates
-
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ
3ನೇ ಮಹಾಯುದ್ಧದ ನಿಖರ ದಿನಾಂಕ ತಿಳಿಸಿದ ಜ್ಯೋತಿಷಿ.! ಯಾವ ದಿನ ಗೊತ್ತಾ?
ಹಲವು ಮಂದಿ ಮುಂದೆ ಆಗುವ ಜಾಗತಿಕ ವಿದ್ಯಮಾನಗಳನ್ನು ಮೊದಲೇ ತಿಳಿಸುವ ಶಕ್ತಿ ಹೊಂದಿರುತ್ತಾರೆ. ಇಂತವರಲ್ಲಿ ನಾವು ನಾಸ್ಟ್ರಾಡಾಮಸ್ , ಬಾಬಾ ವಂಗಾ ಕುರಿತು ಕೇಳಿರುತ್ತೇವೆ. ಆಕೆ ಜಾಗತಿಕ ಆಗು ಹೋಗುಗಳ ಕುರಿತು ಭವಿಷ್ಯ ನುಡಿಯುವಲ್ಲಿ ಫೇಮಸ್ ಆಗಿರುವುದು ಗೊತ್ತೆ ಇದೆ.
ಇಂತಹ ನೂರಾರು ಮಂದಿ ಹತ್ತಾರು ವಿಚಾರಗಳ ಕುರಿತು ಭವಿಷ್ಯ ನುಡಿದಿದ್ದಾರೆ. ಕೆಲವರು ಏಳಿಯನ್‌ಗಳ ಕುರಿತು, ಕಲಿಯುಗ ಅಂತ್ಯದ ಕುರಿತು, ಪುಟಿನ್ ಕುರಿತು, ಇಂಗ್ಲೆಂಡ್ ರಾಣಿ ಕುರಿತು ಹಾಗೆ 3ನೇ ಮಹಾಯುದ್ಧದ ಕುರಿತಂತೆಯೂ ಹಲವರು ಭವಿಷ್ಯ ನುಡಿದಿದ್ದಾರೆ.

ಆದರೆ ಇದೀಗ ಭಾರತದ ಜ್ಯೋತಿಷಿಯೊಬ್ಬರು ಜಾಗತಿಕ ಮಹಾಯುದ್ಧದ ಕುರಿತು ಭವಿಷ್ಯ ನುಡಿದಿದ್ದು, ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ವಿಶ್ವ ಸಮರ ಯಾವಾಗ ಆರಂಭವಾಗಲಿದೆ ಎಂಬ ನಿಖರ ದಿನಾಂಕವನ್ನು ಅವರು ಹೇಳಿದ್ದಾರೆ.
ಅನೇಕ ವರ್ಷಗಳಿಂದ ಜನರು ಮೂರನೇ ಮಹಾಯುದ್ಧದ ಸಾಧ್ಯತೆಯ ಬಗ್ಗೆ ನೂರಾರು ಮಂದಿ ಊಹಿಸಿದ್ದಾರೆ ಮತ್ತು ಚರ್ಚೆ ನಡೆಸಿದ್ದಾರೆ. ಮೊದಲ ಎರಡು ಮಹಾಯುದ್ಧಗಳು ನಡೆದು ಲಕ್ಷ ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದು ಅಲ್ಲದೆ ಅನೇಕ ದೇಶಗಳು ಇಂದಿಗೂ ಅದರ ಪರಿಣಾಮ ಎದುರಿಸುತ್ತಿವೆ. ಈ ನಡುವೆ ಹಲವು ದೇಶಗಳಲ್ಲಿ ಇಂದಿಗೂ ಯುದ್ಧ ನಡೆಯುತ್ತಿದೆ.
ಗಡಿ ಸಂಬಂಧವಾಗಿ, ಆರ್ಥಿಕ ಕಾರಣಕ್ಕಾಗಿ, ಭಯೋತ್ಪಾದನೆ ಸೇರಿದಂತೆ ಹಿಡಿತ ಸಾಧಿಸುವ ಸಲುವಾಗ ಇಂದಿಗೂ ಯುದ್ಧಗಳು ನಡೆಯುತ್ತಿರುವುದು ನಾವು ನೋಡಬಹುದು. ಆದರೆ ಈ ನಡುವೆ 3ನೇ ಮಹಾಯುದ್ಧದ ಕುರಿತು ನುಡಿದಿರುವ ಭವಿಷ್ಯ ಆತಂಕ ಹುಟ್ಟಿಸುತ್ತಿದೆ.
ಕುಶಾಲ್ ಕುಮಾರ್ ಎಂಬ ಭಾರತೀಯ ಜ್ಯೋತಿಷಿ, ಕೊರಿಯಾ, ಚೀನಾ, ತೈವಾನ್ ಮತ್ತು ನ್ಯಾಟೋ ಜೊತೆಗಿನ ರಷ್ಯಾದ ಉದ್ವಿಗ್ನತೆಗಳ ಜೊತೆಗೆ ಇಸ್ರೇಲ್ ಮತ್ತು ಹಮಾಸ್ ಒಳಗೊಂಡ ಇತ್ತೀಚಿನ ಘರ್ಷಣೆಗಳ ಬಗ್ಗೆ ಅವರ ಭವಿಷ್ಯವಾಣಿಗಳಿಗೆ ಗಮನ ಸೆಳೆದಿವೆ. ಇವರು ಹಲವು ವಿದ್ಯಮಾನಗಳ ಕುರಿತಂತೆ ಭವಿಷ್ಯ ನುಡಿದು ಈಗಾಗಲೇ ಅವು ಸತ್ಯವಾಗಿರುವ ಉದಾಹರಣೆಗಳೂ ಸಹ ಇದೆ.
ಅವರ ಪ್ರಕಾರ ಇದೇ ಜೂನ್ 18 ರಂದು 3ನೇ ಮಹಾಯುದ್ಧಕ್ಕೆ ಪ್ರಚೋದನೆ ನೀಡುವಂತಹ ವಿಚಾರಗಳು ಸಂಭವಿಸಲಿದೆಯಂತೆ. ಅಂದರೆ ಆ ದಿನದಂದು ಪ್ರಪಂಚದ ಯಾವುದೇ ಭಾಗದಲ್ಲಿ ಬೇಕಾದರು ಈ ಯುದ್ಧಕ್ಕೆ ಪ್ರಚೋದನೆ ಆಗುವಂತಹ ಘಟನಾವಳಿಗಳು ಸಂಭವಿಸಬಹುದಂತೆ. ಇದಲ್ಲದೆ ಜೂನ್ 29ರಂದು ಸಹ ಇದೇ ರೀತಿ ಗ್ರಹಗತಿಗಳಿವೆ ಎಂದು ಅವರು ಅಂದಾಜಿಸಿದ್ದಾರೆ.
2024 ಪ್ರಪಂಚದಾದ್ಯಂತದ ಯುದ್ಧದ ಸ್ಥಿತಿಗೆ ಸಂಬಂಧಿಸಿದಂತೆ ಹಲವು ಘಟನಾವಳಿಗಳು ನಡೆಯುತ್ತಿದ್ದು ಇದು ಜಗತ್ತಿಗೆ ತಲೆನೋವಾಗಿ ಪರಿಣಮಿಸಿದೆ. 2024 ರಲ್ಲಿ ಮೇ ತಿಂಗಳು, ವಿಶೇಷವಾಗಿ ಮೇ 8 ರ ಸುಮಾರಿಗೆ, ಕೊರಿಯಾ, ಚೀನಾ-ತೈವಾನ್, ಮಧ್ಯಪ್ರಾಚ್ಯದಂತಹ ಯುದ್ಧದ ರಂಗಗಳಲ್ಲಿ ಹೆಚ್ಚಿನ ಉಲ್ಬಣವನ್ನು ಹೊಂದಿದೆ.
ಉಕ್ರೇನ್-ರಷ್ಯಾ, NATO ದ ಕೋಪವು ಅಭಿವ್ಯಕ್ತಿಯನ್ನು ಕಂಡುಕೊಳ್ಳಬಹುದು. ಜೊತೆಗೆ ಅನೇಕ ನಾಯಕರು ರಾಜೀನಾಮೆ ನೀಡಬೇಕಾಗಬಹುದು. ಅಲ್ಲದೆ ಅಲ್ಲಲ್ಲಿ ನಾಯಕರ ಮೇಲೆ ದಾಳಿ ಪ್ರಕರಣಗಳು ಸಹ ಹೆಚ್ಚುತ್ತಿರುವ ಸಂದರ್ಭದಲ್ಲಿ 3ನೇ ಮಹಾ ಯುದ್ಧದ ಕುರಿತಂತೆ ಹರಡಿರುವ ಈ ಭವಿಷ್ಯ ಆತಂಕ ಹುಟ್ಟಿಸಿದೆ.
ಹರಿಯಾಣದ ಪಂಚಕುಲದವರಾದ ಕುಶಾಲ್ ಕುಮಾರ್ ಇದಿಷ್ಟೇ ಅಲ್ಲ ಹಲವು ವಿದ್ಯಮಾನಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ವಿಮಾನಯಾನ ಕ್ಷೇತ್ರ ಮತ್ತು ಪ್ರವಾಸೋದ್ಯಮಕ್ಕೂ ಗಂಭೀರ ಪರಿಣಾಮ ಬೀರಲಿದೆ. ಸಂಭವನೀಯ ಪಿತೂರಿಗಳು ನಡೆಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಹಲವು ದೇಶಗಳಲ್ಲಿ ಅಂತರ್ಯುದ್ಧ ಹಾಗೂ ರಷ್ಯಾ, ಉಕ್ರೇನ್, ಲೆಬನಾನ್ ಯುದ್ಧದ ಕುರಿತು ನಿಮಗೆ ತಿಳಿದಿದೆ. ಇದು ಮಧ್ಯ ಪ್ರಾಚ್ಯದ ಬಹುತೇಕ ರಾಷ್ಟ್ರಗಳಿಗೆ ಹರಡಬಹುದು. ಅಲ್ಲದೆ 3ನೇ ಮಹಾಯುದ್ಧಕ್ಕೆ ಇದೊಂದು ಪ್ರಚೋದಿತ ಕಾರಣವೂ ಆಗಬಹುದು.



Click it and Unblock the Notifications











