Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನೀವು ಯಾವಾಗ ಸಾಯುತ್ತೀರಿ.? ನಿಖರ ಭವಿಷ್ಯ ಹೇಳಲಿದೆ ಹೊಸ AI..!
ನಮ್ಮ ಭವಿಷ್ಯದಲ್ಲಿ ಏನಾಗುತ್ತೆ ಅಂತ ತಿಳಿಯೋಕೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ನಾಳೆ ಏನಾಗುತ್ತೆ, ನಾನು ಯಾವಾಗ ಶ್ರೀಮಂತ ಆಗುತ್ತೀನಿ, ಯಾವಾಗ ಸಾಯುತ್ತೇನೆ ಹೀಗೆ ಹತ್ತಾರು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿರುತ್ತೆ. ಒಂದಿಷ್ಟು ಮಂದಿ ಭವಿಷ್ಯದಲ್ಲಿ ಏನಾಗುತ್ತೆ ಅಂತ ತಿಳಿದುಕೊಳ್ಳಲು ಜಾತಕ, ಕೈಶಾಸ್ತ್ರ, ಕವಡೆ ಶಾಸ್ತ್ರ ಎಂಬ ಹತ್ತಾರು ಮಾರ್ಗ ಹುಡುಕುತ್ತಾರೆ. ಆದ್ರೆ ವಿಜ್ಞಾನಿಗಳು ಈಗ ಒಂದು ಹೆಜ್ಜೆ ಮುಂದೆ ಹೋಗಿ ಇದನ್ನೂ ಸಾಧಿಸಿಯೇ ಬಿಟ್ಟಿದ್ದಾರೆ.
ಹೌದು ನಾವು ಯಾವಾಗ ಸಾಯುತ್ತೇನೆ. ಎಷ್ಟು ಹಣ ಸಂಪಾದನೆ ಮಾಡುತ್ತೇವೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ವಿಜ್ಞಾನಿಗಳು ತಕ್ಕ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ನಮ್ಮ ಜೀವನದ ಕಥೆಯನ್ನು ಹೇಳುವ ಅಲ್ಗಾರಿದಮ್ ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಹೊಸ ಅಧ್ಯಯನದ ಪ್ರಕಾರ, 'life2vec' ಎಂಬ ಕೃತಕ ಬುದ್ಧಿಮತ್ತೆಯ ಮಾದರಿಯು ಶೇ.78 ರಷ್ಟು ನಿಖರವಾಗಿ ಭವಿಷ್ಯ ನುಡಿಯಲಿದೆಯಂತೆ. ಆದರೆ ಇತರ ಮಾದರಿಗಳಿಗಿಂತ ಭಿನ್ನವಾಗಿ, ಇದು ಚಾಟ್‌ಬಾಟ್‌ನಂತೆ ಕಾರ್ಯನಿರ್ವಹಿಸುತ್ತದೆ, ಮುಂದೆ ಏನಾಗುತ್ತದೆ ಎಂಬುದನ್ನು ಊಹಿಸಲು ಅಸ್ತಿತ್ವದಲ್ಲಿರುವ ವಿವರಗಳನ್ನು ಬಳಸುತ್ತದೆ.
ಇದನ್ನು ಡೆನ್ಮಾರ್ಕ್ ಮತ್ತು ಯುಎಸ್‌ನ ವಿಜ್ಞಾನಿಗಳು ನಿರ್ಮಿಸಿದ್ದಾರೆ, ಅವರು ಡ್ಯಾನಿಶ್ ಡೇಟಾ ಬಳಸಿ ಈ ಮಾದರಿಯನ್ನು ತಯಾರು ಮಾಡಿದ್ದಾರೆ. ಆದಾಯ, ವೃತ್ತಿ, ವಾಸಸ್ಥಳ, ಗಾಯಗಳು ಮತ್ತು ಗರ್ಭಧಾರಣೆ ಸೇರಿದಂತೆ ಆರು ಮಿಲಿಯನ್‌ಗಿಂತಲೂ ಹೆಚ್ಚು ಜನರ ಬಗ್ಗೆ ಎಲ್ಲಾ ರೀತಿಯ ಮಾಹಿತಿಯನ್ನು ಪಡೆದಿದ್ದಾರೆ.
ಈ ವಿನ್ಯಾಸದಿಂದ ವ್ಯಕ್ತಿಯ ಜೀವಿತಾವಧಿ ಹಾಗೂ ಆದಾಯದ ಬಗ್ಗೆ ಭವಿಷ್ಯ ನುಡಿಯಬಹುದು. ಅವಧಿ ಮುನ್ನ ಸಾವಿಗೆ ಕಾರಣವಾಗುವ ಕೆಲವು ಅಂಶಗಳು ಪುರುಷ, ಮಾನಸಿಕ ಆರೋಗ್ಯ ರೋಗನಿರ್ಣಯ ಅಥವಾ ನುರಿತ ವೃತ್ತಿಯಲ್ಲಿರುವುದು ಸೇರಿವೆ. ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ವಿಷಯಗಳು ಹೆಚ್ಚಿನ ಆದಾಯ ಅಥವಾ ನಾಯಕತ್ವದ ಪಾತ್ರವನ್ನು ಒಳಗೊಂಡಿರುತ್ತವೆ.
ನಿಮ್ಮ ಜೀವನದ ಪ್ರತಿಯೊಂದು ಭಾಗವನ್ನು ಒಂದು ವಾಕ್ಯದಲ್ಲಿನ ಪದಗಳಂತೆ ಪರಿಗಣಿಸಿ, ಇಲ್ಲಿಯವರೆಗೆ ಬರೆದಿರುವ ಕಥೆಯ ಆಧಾರದ ಮೇಲೆ ನಿಮ್ಮ ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು life2vec ಊಹಿಸುತ್ತದೆ. ChatGPT ಬಳಕೆದಾರರು ಹಾಡು, ಕವಿತೆ ಅಥವಾ ಪ್ರಬಂಧವನ್ನು ಬರೆಯಲು ಕೇಳುವಂತೆಯೇ, ವಿಜ್ಞಾನಿಗಳು 'ನಾಲ್ಕು ವರ್ಷಗಳೊಳಗೆ ಸಾವು?' ನಂತಹ life2vec ಸರಳ ಪ್ರಶ್ನೆಗಳನ್ನು ಕೇಳಬಹುದು.
ಈ ದತ್ತಾಂಶದಲ್ಲಿ 2020ರ ವೇಳೆ ಯಾರೆಲ್ಲಾ ಮರಣ ಹೊಂದಿದ್ದರು ಎಂಬ ಮಾಹಿತಿ ಆಧಾರದ ಮೇಲೆ life2vec ಭವಿಷ್ಯ ನುಡಿಯಲಿದೆ. ಮಾದರಿ ಅಭಿವೃದ್ಧಿ ಪಡಿಸಲು ಜನರ ಮಾಹಿತಿ ಪಡೆದಿರುವುದರಿಂದ ಈ ಸೌಲಭ್ಯ ಜನರಿಗೆ ಅಥವಾ ಕಂಪನಿಗಳ ಬಳಕೆಗೆ ಇನ್ನು ಸಿಕ್ಕಿಲ್ಲ.
ಆದರೆ ಈ ಮಾದರಿ ಬಳಕೆಗೆ ಯೋಗ್ಯವಾದರೆ ಜನರ ವೈಯಕ್ತಿಕ ಮಾಹಿತಿ ಕಳವು ಆಗುವ ಸಂಭವವಿರುತ್ತದೆ ಎಂದು ಅಂದಾಜಿಸಲಾಗಿದೆ. ಮೇಲ್ನೋಟಕ್ಕೆ ವಿಮಾ ಪಾಲಿಸಿ, ಶೇರ್‌ಗಳು ಸೇರಿ ಹಲವು ಕಡೆ ದುರ್ಬಳಕೆಯಾಗಬಹುದು ಎಂಬ ಅನುಮಾನಕ್ಕೂ ಕಾರಣವಾಗಿದೆ.
ಈ ಮಾದರಿಯಲ್ಲಿ ಯಾರು ಯಾವ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ವರ್ಗೀಕರಿಸಲಾಗಿದೆ. ಉದಾಹರಣೆಗೆ ನೀವು ತಂಬಾಕು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಕೋಡ್ IND4726 ಎಂದು ತೆಗೆದುಕೊಳ್ಳುತ್ತದೆ. ಕೈ ಮುರಿತವಾಗಿದ್ದರೆ S52 ಎಂದು ಪರಿಗಣಿಸುತ್ತದೆ. ಹೀಗೆ ನೀವು ನೀಡಿರುವ ಮಾಹಿತಿ ಆಧಾರದ ಮೇಲೆ ಅಂತಿಮವಾಗಿ ನಿಮ್ಮ ಜೀವಿತಾವದಿ ಎಷ್ಟು ಎಂಬುದನ್ನು ಲೆಕ್ಕ ಹಾಕಲಿದೆ.
AI ತಂತ್ರಜ್ಞಾನದಿಂದ ಆತಂಕ ಹೆಚ್ಚಳ
ಕೃತ ಬುದ್ಧಿಮತ್ತೆಯ ಬಳಕೆ ಹೆಚ್ಚಾಗುತ್ತಿರುವುದು ಆತಂಕಕ್ಕೂ ಕಾರಣವಾಗುತ್ತಿದೆ. ಹಲವಾರು ಕ್ಷೇತ್ರಗಳಲ್ಲಿ AI ಕಾಲಿಟ್ಟಿರುವುದು ಆರೋಗ್ಯಕರ ಬೆಳವಣಿಗೆಯ ಬದಲಾಗಿ ವ್ಯತಿರಿಕ್ತ ಪರಿಣಾಮವೇ ಹೆಚ್ಚಾಗುತ್ತಿದೆ. ಕೆಲವು ವಲಯವು ಉದ್ಯೋಗ ಕಡಿತದಂತಹ ಗಂಭೀರ ಸಮಸ್ಯೆಗೂ ಒಳಗಾಗಿದೆ. ಅಲ್ಲದೆ ಬಳಕೆದಾರರ ವೈಯಕ್ತಿಕ ಮಾಹಿತಿ ಕಳವಿಗೂ AI ಕಾರಣವಾಗುತ್ತಿದೆ ಎಂಬ ಆರೋಪವೂ ಇದೆ. ಹೀಗಿರುವಾಗ ವ್ಯಕ್ತಿಯೊಬ್ಬನ ಮಾಹಿತಿ ಪಡೆದು ಆತ ಎಷ್ಟು ವರ್ಷ ಬದುಕಿರುತ್ತಾನೆ ಎಂದು ತಿಳಿಸುವ ತಂತ್ರಜ್ಞಾನವು ಸಹ ಆತಂಕಕ್ಕೆ ಕಾರಣವಾಗಿದೆ.



Click it and Unblock the Notifications
