Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ರಾಯಚೂರು ಕೃಷ್ಣಾನದಿಯಲ್ಲಿ ಪುರಾತನ ವಿಷ್ಣು-ಶಿವಲಿಂಗ ಪತ್ತೆ..! ಯಾವ ಕಾಲದ್ದು ಗೊತ್ತಾ?
ದೇವಾಲಯಗಳ ನಾಡಾದ ಭಾರತದಲ್ಲಿ ಭೂಮಿಯೊಳಗೆ ದೇವರ ಮೂರ್ತಿಗಳು ಪತ್ತೆಯಾಗುವಂತಹ ಘಟನೆ ನಡೆಯುತ್ತಲೇ ಇರುತ್ತದೆ. ಭೂಮಿ ಅಗೆಯುವಾಗ ಹಲವಾರು ಭಾರಿ ಶಾಸನಗಳು, ದೇವರ ಮೂರ್ತಿಗಳು ಕಂಡುಬರುತ್ತವೆ. ಇದೀಗ ರಾಯಚೂರು-ತೆಲಂಗಾಣ ಗಡಿಯಲ್ಲಿಯೂ ಇಂತಹ ದೇವರ ಮೂರ್ತಿ ಸಿಕ್ಕಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಇಲ್ಲಿನ ಕೃಷ್ಣಾ ನದಿಯ ಸೇತುವೆ ಕಾಮಗಾರಿ ಸಂದರ್ಭದಲ್ಲಿ ಪುರಾತನ ಕಾಲದ ವಿಷ್ಣುವಿನ ಮೂರ್ತಿ ಹಾಗೂ ಶಿವಲಿಂಗ ದೊರೆತಿದೆ. ದೇವಸೂಗೂರು ಗ್ರಾಮದ ಸಮೀಪ ಹರಿಯುವ ಕೃಷ್ಣ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಆದರೆ ಈ ವೇಳೆ ಈ ಎರಡು ಮೂರ್ತಿಗಳು ಪತ್ತೆಯಾಗಿವೆ.

ಪ್ರಭಾವಳಿಯ ಹೊದಿಕೆಯ ಜೊತೆಗೆ ವಿಷ್ಣುವಿನ ದಶಾವತಾರದ ಕೆತ್ತನೆಗಳು ಮೂರ್ತಿಯ ಮೇಲೆ ಕಂಡು ಬಂದಿವೆ. ಈ ವಿಗ್ರಹ ನೋಡಲು ಅಯೋಧ್ಯೆಯಲ್ಲಿರುವ ಶ್ರೀರಾಮ ಲಲ್ಲಾನ ಮೂರ್ತಿಯನ್ನೇ ಹೊಲುತ್ತಿದೆ.ವಿಷ್ಣುವಿನ ಕೂರ್ಮ, ವರಾಹ, ನರಸಿಂಹ, ವಾಮನ, ರಾಮ, ಕೃಷ್ಣ ಸೇರಿದಂತೆ ಹತ್ತು ಅವತಾರದಲ್ಲಿ ಮೂರ್ತಿ ಸಮಭಂಗಿಯಲ್ಲಿದೆ.
ಜೊತೆಗೆ ಇದು ವಿಷ್ಣುವಲ್ಲ ವೆಂಕಟೇಶ್ವರನ ಹೋಲುತ್ತಿದೆ ಅಂತಲೂ ಹೇಳಲಾಗುತ್ತಿದೆ. ಮೂರ್ತಿ ಇಂದಿಗೂ ಹಾಳಾಗದೆ ಉಳಿದಿದೆ. ಇದು ದಾಳಿಗೊಳಗಾಗಿ ನದಿಗೆ ಎಸೆಯಲಾಗಿದ್ಯೋ ಇಲ್ಲವೆ ಯಾವುದಾದರು ದೇವಾಲಯ ಪ್ರವಾಹದಲ್ಲಿ ಸಿಲುಕಿತ್ತೆ ಎಂಬುದು ಮುಂದಿನ ಅಧ್ಯಯನದಿಂದ ತಿಳಿದುಬರಬೇಕಿದೆ.
ಯಾವ ಕಾಲದ ಮೂರ್ತಿಗಳು
ಆರಂಭಿಕ ಅಧ್ಯಯನಗಳ ಅಂದಾಜಿನಂತೆ ನದಿಯಲ್ಲಿ ಸಿಕ್ಕ ಮೂರ್ತಿಗಳು 11ನೇ ಶತಮಾನಕ್ಕೆ ಸೇರಿರಬಹುದು ಎನ್ನಲಾಗಿದೆ. ಈಗ ದೊರೆತಿರುವ ಮೂರ್ತಿಗಳನ್ನು ಶ್ರೀರಾಮಲಿಂಗೇಶ್ವರ ದೇವಾಲಯದ ಬಳಿ ಇರಿಸಲಾಗಿದೆ. ಸೇತುವೆ ಕಾಮಗಾರಿ ವೇಳೆ ದೇವರ ಮೂರ್ತಿ ಸಿಕ್ಕ ವಿಚಾರ ತಿಳಿದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಜೊತೆಗೆ ಮೂರ್ತಿ ಸಿಕ್ಕ ದಿನದಂದೆ ಅದಕ್ಕೆ ನೀರು ಹಾಕಿ ತೊಳೆದು ತೆಂಗನ ಕಾಯಿ ಒಡೆದು ಪೂಜೆ ಸಹ ಮಾಡಲಾಗಿದೆ.
ವಿಗ್ರಹದ ವೈಶಿಷ್ಟ್ಯಗಳೇನು?
ವಿಗ್ರಹದ ವೈಶಿಷ್ಟ್ಯಗಳನ್ನು ವಿವರಿಸುತ್ತಾ, ವಿಷ್ಣು ನಿಂತಿರುವ ಭಂಗಿಯಲ್ಲಿದ್ದಾನೆ ಮತ್ತು ಪ್ರತಿಮೆಯಲ್ಲಿ ನಾಲ್ಕು ತೋಳುಗಳನ್ನು ಒಳಗೊಂಡಿದೆ. ಮೇಲಿನ ಎರಡು ಕೈಗಳು 'ಶಂಖ' ಮತ್ತು 'ಚಕ್ರ' ಮತ್ತು ಎರಡು ಕೆಳಗಿನ ಕೈಗಳನ್ನು ವರಗಳನ್ನು ನೀಡುವ ಸ್ಥಾನದಲ್ಲಿ ಹಿಡಿದಿವೆ ('ಕತಿ ಹಸ್ತ' ಮತ್ತು 'ವರದ ಹಸ್ತ').
ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವಂತೆ ವಿಗ್ರಹವು ವೆಂಕಟೇಶ್ವರನನ್ನು ಹೋಲುತ್ತದೆ ಎಂದು ಉಪನ್ಯಾಸಕರೊಬ್ಬರು ತಿಳಿಸಿದ್ದಾರೆ.ಆದಾಗ್ಯೂ, ಈ ವಿಗ್ರಹವು ಸಾಮಾನ್ಯವಾಗಿ ವಿಷ್ಣುವಿನ ವಿಗ್ರಹಗಳಲ್ಲಿ ಕಂಡುಬರುವ ಗರುಡನನ್ನು ಒಳಗೊಂಡಿರುವುದಿಲ್ಲ.
ವಿಷ್ಣುವು ಅಲಂಕಾರವನ್ನು ಇಷ್ಟಪಡುವ ಕಾರಣ, ನಗುತ್ತಿರುವ ವಿಷ್ಣುವನ್ನು ತೋರಿಸುವ ಈ ವಿಗ್ರಹವನ್ನು ಹೂಮಾಲೆ ಮತ್ತು ಆಭರಣಗಳಿಂದ ಅಲಂಕರಿಸಲಾಗಿದೆ. "ಈ ವಿಗ್ರಹವು ದೇವಾಲಯದ ಗರ್ಭಗುಡಿಯನ್ನು ಆರಾಧಿಸಿರಬೇಕು. ಪ್ರತಿಮೆಯ ಮೂಗಿಗೆ ಸ್ವಲ್ಪ ಹಾನಿಯಾಗದಂತೆ ಕಾಣುತ್ತದೆ. ದೇವಾಲಯದ ಮೇಲೆ ದಾಳಿಯಾದಾಗ ವಿಗ್ರಹಕ್ಕೆ ಹಾನಿಯಾಗದಂತೆ ನೀರಿನಲ್ಲಿ ಎಸೆದಿರಬಹುದು'' ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.
ಜೂನ್‌ನಲ್ಲಿ ಸಿಕ್ಕಿತ್ತು ಅಷ್ಟಧಾತು ವಿಗ್ರಹ
ಕಳೆದ ವರ್ಷ ಜೂನ್‌ನಲ್ಲಿ ಬಿಹಾರದ ರಾಮ್‌ಪುರ್ ಬಾಲು ಘಾಟ್ ಕಾಮಗಾರಿ ವೇಳೆ ಸುಮಾರು 2 ಸಾವಿರ ವರ್ಷ ಹಳೆಯ ಅಷ್ಟಧಾತುವಿನ ಮೂರ್ತಿಯೊಂದು ಪತ್ತೆಯಾಗಿತ್ತು. ಇದು ಸಹ ನದಿಯಲ್ಲಿ ತಟದಲ್ಲೇ ಪತ್ತೆಯಾಗಿತ್ತು. ಕುಶಾನ್ ಸಾಮ್ರಾಜ್ಯದ ಸಮಯದಲ್ಲಿ ಈ ಅಷ್ಟಧಾತು ನೆಲದೊಳಗೆ ಸೇರಿರಬಹುದು ಎಂದು ಅಂದಾಜಿಸಲಾಗಿತ್ತು. ಈ ವಿಗ್ರಹವನ್ನು ಬೌದ್ಧರಿಗೆ ಸೇರಿದ ಜಾನಪದ ದೇವತೆ ಎಂದು ಕರೆಯಲಾಯಿತು.



Click it and Unblock the Notifications
