Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
300 ವರ್ಷಗಳ ಗಣೇಶ ಚತುರ್ಥಿಯಂದು ಬಂದಿದೆ 3 ಶುಭಯೋಗ: ಯಾರಿಗೆಲ್ಲಾ ತುಂಬಾ ಒಳ್ಳೆಯದು
ಭಾದ್ರಪದ ಮಾಸದ ಚೌತಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುವುದು, ಈ ವರ್ಷ ಸೆಪ್ಟೆಂಬರ್ 18-19ರಂದು ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ವರ್ಷದ ವಿಶೇಷವೆಂದರೆ ಸುಮಾರು 300 ವರ್ಷಗಳ ಬಳಿಕ ಗಣೇಶ ಚತುರ್ಥಿಯಂದು 3 ಶುಭ ಯೋಗ ಏರ್ಪಡಲಿದೆ. ಈ ವರ್ಷ ಶುಕ್ಲ ಯೋಗ, ಬ್ರಹ್ಮ ಯೋಗ ಹಾಗೂ ರವಿ ಯೋಗ ಏರ್ಪಡಲಿದೆ.

ಮೇಷ ರಾಶಿ
ಈ ಮೂರ ಶುಭ ಯೋಗ ಏರ್ಪಡಿರುವುದರಿಂದ ಮಗುವಿಗಾಗಿ ಹಂಬಲಿಸುತ್ತಿದ್ದರೆ ಸಂತಾನ ಭಾಗ್ಯ ದೊರೆಯಲಿದೆ. ಆರ್ಥಿಕವಾಗಿಯೂ ತುಂಬಾನೇ ಅಭಿವೃದ್ಧಿ ಹೊಂದುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ, ಪ್ರತಿಷ್ಠೆ ಹೆಚ್ಚಾಗುವುದು. ಏನಾದರೂ ಹೊಸ ಉದ್ಯಮ ಪ್ರಾರಂಭಿಸಲು ಈ ದಿನ ನಿಮಗೆ ತುಂಬಾನೇ ಶ್ರೇಷ್ಠವಾಗಿದೆ. ನಿಮ್ಮ ಎಲ್ಲಾ ಯೋಜನೆಗಳು ಯಶಸ್ವಿಯಾಗಲಿದೆ. ಈ ಚತುರ್ಥಿ ಬಳಿಕ ನೀವು ಆಸ್ತಿ ಅಥವಾ ಮನೆ ಖರೀದಿಸಬಹುದು.
ಮಿಥುನ ರಾಶಿ
ಈ ಮೂರು ಶುಭಯೋಗದಿಂದಾಗಿ ಮಿಥುನ ರಾಶಿಯವರಿಗೆ ಅದೃಷ್ಟದ ಯೋಗ ಕೂಡಿ ಬಂದಿದೆ. ಈ ಅವಧಿಯಲ್ಲಿ ನಿಮ್ಮ ಭಾಗ್ಯ ಹೆಚ್ಚಾಗಲಿದೆ. ಚತುರ್ಥಿ ಬಳಿಕ ನೀವು ಧನಯೋಗವನ್ನು ಪಡೆಯುತ್ತೀರಿ. ಅಲ್ಲದೆ ನಿಮ್ಮ ಮಹತ್ವಾಕಾಂಕ್ಷೆಯ ಯೋಜನೆ ಪೂರ್ಣಗೊಳ್ಳಲಿದೆ. ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ, ಜನರು ನಿಮಗೆ ಗೌರವ ಕೊಡಲಾರಂಭಿಸುತ್ತಾರೆ. ನೀವು ಮಾಡುವಂಥ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಕುಟುಂಬ ಜೀವನ ಚೆನ್ನಾಗಿರಲಿದೆ.
ಮಕರ ರಾಶಿ
ಈ ಮೂರು ಶುಭ ಮುಹೂರ್ತದಿಂದಾಗಿ ನಿಮಗೆ ಅದೃಷ್ಟದ ಬೆಂಬಲ ಸಿಗುವುದರಿಂದ ನಿಮ್ಮ ಎಲ್ಲಾ ಕಾರ್ಯಗಳು ಯೋಜನೆಯಂತೆಯೇ ನಡೆಯಲಿದೆ. ನೀವು ಧನ ಲಾಭ ಗಳಿಸುವಿರಿ, ನೌಕರಿಯಲ್ಲಿ ಇರುವವರು ಬಡ್ತಿಯನ್ನು ಪಡೆಯುತ್ತೀರಿ. ಈ ಚತುರ್ಥಿ ಬಳಿಕ ಹಠಾತ್ ಹಣ ಲಾಭ ಪಡೆಯುವಿರಿ.
ಶುಭ ಕಾರ್ಯಗಳಿಗೆ ಸೆಪ್ಟೆಂಬರ್ 18ರಂದು ಶುಭ ಮುಹೂರ್ತ
ಅಮೃತ ಸರ್ವೋತ್ತಮ ಮುಹೂರ್ತ: ಬೆಳಗ್ಗೆ 06:09ರಿಂದ 07:37ರವರೆಗೆ
ಶುಭ ಉತ್ತಮ ಮುಹೂರ್ತ: ಬೆಳಗ್ಗೆ 09:11ರಿಂದ 10:43
ಚರ ಸಾಮಾನ್ಯ ಮುಹೂರ್ತ: ಮಧ್ಯಾಹ್ನ 01:47ರಿಂದ 03:19ರವರೆಗೆ
ಲಾಭ ಯನ್ನತಿ ಮುಹೂರ್ತ: ಮಧ್ಯಾಹ್ನ 03:19 ಗಂಟೆಯಿಂದ ಸಂಜೆ 04:51ರವರೆಗೆ
ಅಮೃತ ಸರ್ವೋತ್ತಮ ಮುಹೂರ್ತ: 04:51ರಿಂದ ಸಂಜೆ 06:23ರವರೆಗೆ
ಈ ವರ್ಷ ಗಣೇಶ ಸ್ಥಾಪನೆಯನ್ನು ಯಾವಾಗ ಮಾಡಲಾಗುವುದು
ಈ ವರ್ಷ ಮನೆಯಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಗಣೇಶನನ್ನು ಕೂರಿಸುವುದಾದರೆ ಸೆಪ್ಟೆಂಬರ್ 19 ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶುಭ ಮುಹೂರ್ತವಿದೆ.
ಗಣೇಶನ ಈ ಮಂತ್ರಗಳನ್ನು ಪಠಿಸಿ
ಓಂ ಗಮ್ ಗಣಪತಯೇ ನಮಃ
ಓಂ ಶ್ರೀ ಗಣೇಶಾಯ ನಮಃ
ಓಂ ಏಕದಂತಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಬಾಲಚಂದ್ರಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿನಾಯಕಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಕಪಿಲಾಯ ನಮಃ
ಓಂ ವಿಕ್‌ತ್ರಾಯ ನಮಃ
ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಮೇಲೆ ಈ ಮಂತ್ರಗಳನ್ನು 108 ಬಾರಿ ಪಠಿಸಿ.



Click it and Unblock the Notifications
