Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶ್ರಾವಣ ಮಾಸದಲ್ಲಿ ಹುಟ್ಟಿದ ಮಕ್ಕಳಲ್ಲಿ ಏನೆಲ್ಲಾ ವಿಶೇಷ ಗುಣಗಳಿರುತ್ತೆ ಗೊತ್ತಾ?
ಶ್ರಾವಣ ಮಾಸ ಆರಂಭವಾಗಿದ್ದು ಮುಂದಿನ ತಿಂಗಳು ಆಗಸ್ಟ್ ಮಧ್ಯ ಭಾಗವರೆಗೂ ಶ್ರಾವಣ ಮಾಸವಿರಲಿದೆ. ಇದು ಮೂರು ವರ್ಷಕ್ಕೆ ಒಂದು ಸಾರಿ ಬರುತ್ತದೆ. ಈ ಸಮಯವನ್ನು ಶುಭ ಕಾರ್ಯಗಳನ್ನು ಮಾಡೋದಕ್ಕೆ ಅಶುಭವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಶಿವನ ಆರಾಧನೆ ಮಾಡೋದ್ರಿಂದ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ.
ಈ ಶ್ರಾವಣದಲ್ಲಿ ಆದಷ್ಟು ಭಕ್ತಿ-ಭಾವದಿಂದ ದೇವರ ಪೂಜೆಯನ್ನು ಮಾಡಬೇಕು. ಆದಷ್ಟು ದೇವರ ಕಾರ್ಯಕ್ಕೆ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಳ್ಳಬೇಕು. ಇನ್ನೂ ಈ ತಿಂಗಳಿನ ವಿಶೇಷ ಏನೆಂದರೆ ಈ ತಿಂಗಳಿನಲ್ಲಿ ಹುಟ್ಟಿದ ಮಕ್ಕಳು ತುಂಬಾನೇ ಅದೃಷ್ಟವಂತರು ಎಂದು ಪರಿಗಣಿಸಲಾಗಿದೆ. ಜೊತೆಗೆ ಅವರಲ್ಲಿ ಅಸಾಧಾರಣ ಗುಣಗಳು ಕೂಡ ಇರುತ್ತಂತೆ. ಅಷ್ಟಕ್ಕು ಶ್ರಾವಣ ಮಾಸದಲ್ಲಿ ಜನಿಸಿದ ಮಕ್ಕಳ ಗುಣ ಹೇಗಿರುತ್ತದೆ? ಅವರು ಯಾವೆಲ್ಲಾ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಿರುತ್ತಾರೆ ಅನ್ನೋದನ್ನು ತಿಳಿಯೋಣ.

1. ನಾಯಕತ್ವದ ಗುಣಗಳಿರುತ್ತದೆ
ಶ್ರಾವಣ ತಿಂಗಳಿನಲ್ಲಿ ಹುಟ್ಟಿದವರಲ್ಲಿ ನಾಯಕತ್ವದ ಗುಣ ಹುಟ್ಟಿನಿಂದಲೇ ಬಂದಿರುತ್ತದೆ. ಇವರಲ್ಲಿರುವ ಬುದ್ಧಿವಂತಿಕೆ ಹಾಗೂ ನಡತೆಯಿಂದಾಗಿ ಇವರು ಒಳ್ಳೆಯ ನಾಯಕರೆಂದೆನಿಸಿಕೊಳ್ಳುತ್ತಾರೆ. ಈ ತಿಂಗಳಿನಲ್ಲಿ ಹುಟ್ಟಿದವರು ತಾವು ವಹಿಸಿಕೊಂಡ ಜವಾಬ್ದಾರಿಯನ್ನು ಸಂಪೂರ್ಣ ಮಾಡದೇ ಇರುವವರಲ್ಲ. ಇವರು ಭವಿಷ್ಯದಲ್ಲಿ ಒಂದು ಉತ್ತಮ ಹುದ್ದೆಗೆ ಏರುತ್ತಾರೆ. ಅಥವಾ ಒರ್ವ ಉತ್ತಮ ನಾಯಕನಾಗಿ ಗುರುತಿಸಿಕೊಳ್ಳುತ್ತಾರೆ. ಜೀವನದಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಪಡೆಯುತ್ತಾರೆ.
2. ಬುದ್ಧಿವಂತರಾಗಿರುತ್ತಾರೆ
ಶ್ರಾವಣ ಮಾಸದಲ್ಲಿ ಹುಟ್ಟಿದ ಮಕ್ಕಳು ಅತೀ ಬುದ್ಧಿವಂತರಾಗಿರುತ್ತಾರೆ. ಇವರು ತುಂಬಾನೇ ಸೃಜನ ಶೀಲರಾಗಿ ಇರುತ್ತಾರೆ. ಹಾಗೂ ಜೀವನದಲ್ಲಿ ಸ್ವತಂತ್ರರಾಗಿ ಇರುತ್ತಾರೆ. ತಮ್ಮ ಬುದ್ಧಿವಂತಿಕೆಯಿಂದ ಕಷ್ಟದ ಸಂದರ್ಭಗಳಲ್ಲಿಯೂ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ. ಎಷ್ಟು ದೊಡ್ಡ ಸಮಸ್ಯೆ ಬಂದರೂ ಕೂಡ ಅದರಿಂದ ಸುಲಭವಾಗಿ ಪಾರಾಗುವ ಚಾಕಚಕ್ಯತೆ ಇವರಲ್ಲಿದೆ. ಬುದ್ಧಿವಂತಿಕೆಯ ಜೊತೆ ಜೊತೆಗೆ ಇವರಲ್ಲಿ ಬಲವಾದ ಇಚ್ಛಾಶಕ್ತಿ ಇರುತ್ತದೆ.
3. ಹೊಸತನ್ನು ಕಲಿಯೋದಕ್ಕೆ ಇಷ್ಟ ಪಡುತ್ತಾರೆ
ಶ್ರಾವಣ ಮಾಸದಲ್ಲಿ ಜನಿಸಿದ ಮಕ್ಕಳು ಬುದ್ಧಿವಂತರೂ ಮಾತ್ರವಲ್ಲದೇ ಜೊತೆಗೆ ಇವರಿಗೆ ಏನಾದರೂ ಹೊಸತನ್ನು ಕಲಿಯಬೇಕು ಎನ್ನುವ ತುಡಿತ ಹೆಚ್ಚಾಗಿ ಇರುತ್ತದೆ. ಹೊಸ ವಿಚಾರಗಳನ್ನು ಕಲಿಯುವ ಮೂಲಕ ಜ್ಞಾನ ಸಂಪಾದನೆಯನ್ನು ಮಾಡಿಕೊಳ್ಳುತ್ತಾರೆ. ಒಂದು ವಿಚಾರವನ್ನು ಇವರು ಬೇರೆ ಬೇರೆ ದೃಷ್ಟಿಕೋನದಿಂದ ಆಲೋಚಿಸುತ್ತಾರೆ. ಯಾವುದೇ ವಿಚಾರವಾದರೂ ಸರಿ ತಕ್ಷಣಕ್ಕೆ ನಿರ್ಧಾರ ತೆಗೆದುಕೊಳ್ಳೋದಿಲ್ಲ. ಆಳವಾಗಿ ಆಲೋಚಿಸಿ ನಂತರ ನಿರ್ಧರಿಸುತ್ತಾರೆ.
4. ಹಠಮಾರಿಗಳಾಗಿರುತ್ತಾರೆ
ಬಲವಾದ ಇಚ್ಛಾಶಕ್ತಿಯ ಜೊತೆಗೆ ಶ್ರಾವಣ ತಿಂಗಳಿನಲ್ಲಿ ಜನಿಸಿದ ಈ ಮಕ್ಕಳು ಮೊಂಡುತನದ ಸ್ವಭಾವವನ್ನು ಹೊಂದಿರುತ್ತಾರೆ. ಅವರು ಯಾವುದೇ ವಿಚಾರದಲ್ಲೂ ರಾಜಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಇವರ ಮೊಂಡುತನವು ಕೆಲವೊಮ್ಮೆ ಇತರರಿಗೆ ತೊಂದರೆ ನೀಡಬಹುದು. ಆದರೆ ಕಷ್ಟದ ಸಂದರ್ಭದಲ್ಲಿ ಅಳುತ್ತಾ, ಕೊರಗುತ್ತಾ ಸುಮ್ಮನೆ ಕೂರೋದಿಲ್ಲ. ಕಷ್ಟ ಪಟ್ಟು ಹೋರಾಡಿ ಗೆಲ್ಲುವ ತಾಕತ್ತು ಇವರಲ್ಲಿದೆ.
ಶ್ರಾವಣ ಮಾಸದಲ್ಲಿ ಮಕ್ಕಳು ಜನಿಸಿದರೆ ಆ ಮಕ್ಕಳು ಇಷ್ಟೆಲ್ಲಾ ಉತ್ತಮ ಗುಣಗಳನ್ನು ಹೊಂದಿರುತ್ತಾರಂತೆ.
ಸೂಚನೆ : ಇಂಟರ್ನೆಟ್ ನಲ್ಲಿ ದೊರೆತ ಮಾಹಿತಿಯನ್ನು ಆಧಾರಿಸಿ ಈ ಲೇಖನವನ್ನು ಬರೆಯಲಾಗಿದೆ. ಇದಕ್ಕೆ ಬೋಲ್ಡ್ ಸ್ಕೈ ಕನ್ನಡ ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರೋದಿಲ್ಲ.



Click it and Unblock the Notifications

