Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ಅಭ್ಯಾಸಗಳಿದ್ದರೆ ಮನುಷ್ಯ ಖಂಡಿತ ನಾಶವಾಗುತ್ತಾನೆ ಎನ್ನುತ್ತೆ ಗರುಡ ಪುರಾಣ
ಜಗತ್ತಿನ ಪ್ರತಿಯೊಂದು ಜೀವಿಗೂ ಏಳು ಜನ್ಮಗಳಿರುತ್ತವೆ ಅನ್ನೋ ನಂಬಿಕೆ ಇದೆ. ಆದರೆ ಇದು ಎಷ್ಟು ಸತ್ಯ ಅನ್ನೋದು ಗೊತ್ತಿಲ್ಲ. ನಮಗೆ ಗೊತ್ತಿರೋ ಪ್ರಕಾರ ಭಗವಂತ ನಮಗೆಲ್ಲರಿಗೂ ಅದ್ಭುತವಾದ ಜೀವನವನ್ನು ಕೊಟ್ಟಿದ್ದಾನೆ. ಈ ಕ್ಷಣ ಆ ಬದುಕನ್ನು ಬಾಳಬೇಕು ಅಷ್ಟೇ.
ಮನುಷ್ಯ ಭೂಮಿ ಮೇಲೆ ಬದುಕಿರುವ ಅಷ್ಟು ದಿನವೂ ಬೇರೆಯವರಿಗೆ ನಮ್ಮಿಂದ ತೊಂದರೆ ಆಗದ ರೀತಿಯಲ್ಲೇ ಬದುಕಬೇಕು. ಅದ್ರಲ್ಲೂ ಗರುಡ ಪುರಾಣದ ಪ್ರಕಾರ ಮನುಷ್ಯ ಜೀವಿತಾವಧಿಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಲೇಬಾರದು. ಯಾಕಂದ್ರೆ ಅಂತಹ ತಪ್ಪುಗಳು ನಮ್ಮ ಜೀವನವನ್ನೇ ನಾಶ ಮಾಡಿ ಬಿಡಬಹುದು. ಅಷ್ಟಕ್ಕು ಆ ತಪ್ಪುಗಳು ಯಾವುದು ಅನ್ನೋದನ್ನ ಹೇಳ್ತೀವಿ.

1. ಅಹಂಕಾರ
ಅಹಂಕಾರ ಮನುಷ್ಯನಿಗಿರುವ ಕೆಟ್ಟ ಗುಣಗಳಲ್ಲಿ ಒಂದು. ನೀವು ಎಷ್ಟೇ ಶ್ರೀಮಂತರಾಗಿರಬಹುದು, ಕೋಟ್ಯಾಂತರ ರೂಪಾಯಿ ಆಸ್ತಿ, ಅಂತಸ್ತು ಎಲ್ಲವೂ ಇದ್ರೂ ಕೂಡ ಮನುಷ್ಯನಿಗೆ ಅಹಂಕಾರ ಅನ್ನೋದು ಇರಬಾರದು. ಯಾಕಂದ್ರೆ ಅದು ನಿಮಗೆ ಖಂಡಿತ ಶೋಭೆ ತರುವುದಿಲ್ಲ. ಇದೇ ಅಂಹಂಕಾರ ಒಂದು ದಿನ ನಿಮ್ಮನ್ನು ಸುಟ್ಟು ಬಿಡಬಹುದು ಅನ್ನುತ್ತೆ ಗರುಡ ಪುರಾಣ.
2. ಸೂರ್ಯೋದಯದ ನಂತರವು ಮಲಗುವುದು ಒಳ್ಳೆಯದಲ್ಲ
ಇತ್ತೀಚಿನ ಆಧುನಿಕ ಜೀವನದಲ್ಲಿ ಜನ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ರಾತ್ರಿ ತಡವಾಗಿ ಮಲಗುವುದು, ಬೆಳಗ್ಗೆ ತಡವಾಗಿ ಏಳುವುದು. ಈ ಅಭ್ಯಾಸ ಖಂಡಿತ ಒಳ್ಳೆಯದಲ್ಲ. ಇದರಿಂದಾಗಿ ತಾಯಿ ಲಕ್ಷ್ಮೀ ಮಾತ್ರವಲ್ಲ, ಶನಿದೇವನು ನಿಮ್ಮ ಈ ನಡವಳಿಕೆಯಿಂದ ಮುನಿಸಿಕೊಳ್ಳುತ್ತಾನಂತೆ.
3. ದುರ್ಬಲರ ಮೇಲೆ ದಬ್ಬಾಳಿಕೆ ನಡೆಸುವುದು
ಗರುಡ ಪುರಾಣದ ಪ್ರಕಾರ ಯಾವ ವ್ಯಕ್ತಿಯು ಬಡವರ ಮೇಲೆ, ಕೈಲಾಗದವರ ಮೇಲೆ, ವಿಧವೆ, ದುರ್ಬಲರ ಮೇಲೆ ದಬ್ಬಾಳಿಕೆ ನಡೆಸುತ್ತಾನೋ ಅವನು ಉದ್ಧಾರವಾಗೋದಿಲ್ಲ. ಆದಷ್ಟು ಬೇಗ ಆತನ ಆಸ್ತಿಯೆಲ್ಲಾ ಕರಗಿ ಅವನು ಕೂಡ ಬಡತನವನ್ನು ಅನುಭವಿಸುತ್ತಾನೆ. ಇಂತಹ ವ್ಯಕ್ತಿಯ ಮನೆಯಲ್ಲಿ ಲಕ್ಷ್ಮೀ ಒಂದು ಕ್ಷಣವೂ ಇರೋದಕ್ಕೆ ಇಷ್ಟ ಪಡೋದಿಲ್ಲ.
4. ಉದಾಸೀನವನ್ನು ಮೈಗೂಡಿಸಿಕೊಂಡ ವ್ಯಕ್ತಿ
ಗರುಡ ಪುರಾಣದ ಪ್ರಕಾರ ಕೆಲ ವ್ಯಕ್ತಿಗಳಿಗೆ ಕೆಲಸದ ಮೇಲೆ ಆಸಕ್ತಿಯೇ ಇರೋದಿಲ್ಲ. ಉದಾಸೀನವನ್ನೇ ಮೈಗೂಡಿಸಿಕೊಂಡಿರುತ್ತಾರೆ. ಇಂತಹ ವ್ಯಕ್ತಿಗಳ ಮೇಲೆ ಮಾತೆ ಲಕ್ಷ್ಮೀ ಕೋಪಿಸಿಕೊಳ್ಳುತ್ತಾಳಂತೆ. ಅಷ್ಟೇ ಅಲ್ಲ ಯಾವತ್ತೂ ಬೇರೆಯವರ ಕೆಲಸದಲ್ಲಿ ತಪ್ಪು ಹುಡುಕುವ ವ್ಯಕ್ತಿಗಳ ಜೀವನವು ನಾಶವಾಗಲಿದ್ಯಂತೆ. ಬೇರೆಯವರ ಬಗ್ಗೆ ಚಿಂತಿಸದೇ ನಿಮ್ಮ ಬಗ್ಗೆ ನೀವು ಯಾವಾಗ ಆಲೋಚನೆ ಮಾಡೋದಕ್ಕೆ ಶುರು ಮಾಡುತ್ತಿರೋ ಆವಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸೋದಕ್ಕೆ ಸಾಧ್ಯ.
5. ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದಾಗ
ಗರುಡ ಪುರಾಣದಲ್ಲಿ ನಾವು ಹೇಗಿರಬೇಕು ಹಾಗೂ ನಮ್ಮ ಮನೆಯನ್ನು ಯಾವ ರೀತಿ ಇಟ್ಟು ಕೊಂಡಿರಬೇಕು ಅನ್ನೋದ್ರ ಬಗ್ಗೆ ಕೂಡ ಉಲ್ಲೇಖವಾಗಿದೆ. ಸ್ನಾನದ ನಂತರವೂ ನಾವು ಕೊಳಕು ಬಟ್ಟೆಗಳನ್ನು ಧರಿಸಿದ್ದರೆ ಖಂಡಿತ ತಾಯಿ ಲಕ್ಷ್ಮೀ ನಮ್ಮ ಮೇಲೆ ಕೋಪಿಸಿಕೊಳ್ಳುತ್ತಾಳೆ. ವ್ಯಕ್ತಿ ಎಷ್ಟು ಸ್ವಚ್ಛವಾಗಿದ್ದಾನೆ ಅನ್ನೋದನ್ನ ಆತನ ಮನೆಯನ್ನು ನೋಡಿ ಹೇಳಬಹುದು. ಯಾವ ಮನೆ ಸ್ವಚ್ಛವಾಗಿರುತ್ತದೆಯೋ ಅಲ್ಲಿ ಮಾತ್ರ ಲಕ್ಷ್ಮೀ ನೆಲೆಸುತ್ತಾಳೆ ಎಂದು ಹೇಳುತ್ತದೆ ಗರುಡ ಪುರಾಣ.
ಇರೊದೊಂದು ಜೀವನ ಈ ಜೀವನದಲ್ಲಿ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ಒಳ್ಳೆಯವರಾಗಿ ಬದುಕಿ. ಆಗ ಮಾತ್ರ ನೀವು ನಂಬಿದ ದೇವರು ನಿಮ್ಮ ಕೈ ಬಿಡೋದಿಲ್ಲ.



Click it and Unblock the Notifications



