Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಚಾಣಕ್ಯ ಪ್ರಕಾರ ಮಹಿಳೆ ತನ್ನ ಪುರುಷನಲ್ಲಿ ಈ ಗುಣಗಳಿರಬೇಕೆಂದು ಬಯಸುತ್ತಾಳೆ
ಹೆಣ್ಣು ಮಕ್ಕಳಿಗೆ ಮದುವೆ ಬಗ್ಗೆ ನೂರಾರು ಕನಸುಗಳಿರುತ್ತದೆ. ಅದ್ರ ಜೊತೆ ತಾನು ಮದುವೆಯಾಗೋ ಹುಡುಗನಲ್ಲೂ ಕೂಡ ಕೆಲವೊಂದು ಗುಣಗಳನ್ನು ಇರಲೇಬೇಕೆಂದು ಮಹಿಳೆ ಬಯಸೋದು ಸಹಜ. ಆಚಾರ್ಯ ಚಾಣಕ್ಯ ಕೂಡ ಪುರುಷರಲ್ಲಿ ಈ ಗುಣಗಳಿದ್ದರೆ ಒಳ್ಳೆಯದು ಹಾಗೂ ಮಹಿಳೆಯರು ಇಂತಹ ಹುಡಗನನ್ನೇ ತನ್ನ ಜೀವನ ಸಂಗಾತಿಯಾಗಲು ಬಯಸುತ್ತಾರೆ ಅಂತ ಚಾಣಕ್ಯ ಹೇಳಿದ್ದಾರೆ.
ಹೌದು, ಅದು ಅಂತಿತಾ ಗುಣಗಳಲ್ಲ ಪ್ರಾಣಿಗಳಲ್ಲಿ ಇರುವ ಕೆಲವು ಗುಣಗಳನ್ನು ಮಹಿಳೆಯರು ತನ್ನ ಹುಡುಗನಲ್ಲೂ ಇರಬೇಕು ಎಂದು ಬಯಸುತ್ತಾಳೆ. ಅಷ್ಟಕ್ಕು ಪುರುಷರಲ್ಲಿ ಮಹಿಳೆಯರು ಇಷ್ಟ ಪಡುವ ಗುಣಗಳು ಯಾವುದು? ಅನ್ನೋದನ್ನ ನೋಡೋಣ.

1. ದೈರ್ಯವಂತ ಹುಡುಗನನ್ನು ಮಹಿಳೆಯರು ಇಷ್ಟ ಪಡುತ್ತಾರೆ
ಚಾಣಕ್ಯನ ಪ್ರಕಾರ ಪುರುಷರು ದೈರ್ಯವಂತರಾಗಿರಬೇಕು. ಉದಾಹರಣೆ ನಾವು ಮನೆಯಲ್ಲಿ ಸಾಕೋ ಮೂಖ ಪ್ರಾಣಿ ನಾಯಿ. ಯಾವ ಕ್ಷಣದಲ್ಲಾದರೂ ಶ್ವಾನವು ತನ್ನನ್ನಾಗಲಿ ಅಥವಾ ತನ್ನ ಕುಟುಂಬಸ್ಥರನ್ನು ಬಿಟ್ಟು ಕೊಡೋದಿಲ್ಲ. ದೈರ್ಯದಿಂದ ಹೋರಾಡುತ್ತೆ. ಅಷ್ಟೇ ಯಾಕೆ ತನಗೆ ಅನ್ನ ಹಾಕಿದ ಮನೆಯನ್ನು ಎಷ್ಟು ನಿಷ್ಠೆಯಿಂದ ಕಾಯುತ್ತದೆ. ಏನೇ ತೊಂದರೆ ಎದುರಾದ್ರು ಕೂಡ ಅದನ್ನು ದೈರ್ಯದಿಂದ ಎದುರಿಸಿ ಮುನ್ನುಗುತ್ತದೆ. ಇದೇ ರೀತಿ ಪುರುಷರು ಕೂಡ ತನ್ನ ಹೆಂಡತಿ ಹಾಗೂ ಮಕ್ಕಳನ್ನು ಕಾಪಾಡಬೇಕು ಎಂದು ಚಾಣಕ್ಯ ಹೇಳಿದ್ದಾರೆ.
2. ಪತ್ನಿಗೆ ಮೋಸ ಮಾಡಬೇಡಿ ನಿಷ್ಠೆಯಿಂದರಿ
ಚಾಣಕ್ಯನ ಪ್ರಕಾರ ನಿಷ್ಠೆಗೆ ಮತ್ತೊಂದು ಹೆಸರು ನಾಯಿ. ಪ್ರಾಣ ಹೋಗೋ ಸಂದರ್ಭ ಬಂದರೂ ಕೂಡ ನಾಯಿ ತನ್ನ ಮನೆಯನ್ನು ಬಿಟ್ಟು ಕೊಡೋದಿಲ್ಲ. ಅದೇ ರೀತಿ ಪುರುಷನಾದವನಿಗೆ ನಿಷ್ಠೆ ತುಂಬಾನೇ ಮುಖ್ಯ. ತಾಳಿ ಕಟ್ಟಿದ ಹೆಂಡತಿ ಜೊತೆಗೆ ಕೊನೆವರೆಗೂ ಒಟ್ಟಾಗಿ ಬಾಳಬೇಕು. ಅದನ್ನು ಬಿಟ್ಟು ಬೇರೆ ಹೆಂಗಸರ ಮೇಲೆ ಆಸೆ ಪಡೋದು ಸರಿಯಲ್ಲ ಎಂದು ಚಾಣಕ್ಯ ಹೇಳಿದ್ದಾರೆ.
3. ಮಲಗಿದ್ದಾಗಲೂ ಜಾಗರೂಕತೆಯಿಂದಿರಬೇಕು
ಚಾಣಕ್ಯನ ಪ್ರಕಾರ ಪುರುಷರು ಹೇಗಿದ್ದರೂ, ಎಲ್ಲೇ ಹೋದರೂ ಕೂಡ ತನ್ನ ಮನೆ ಹಾಗೂ ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಬೇಕು. ಉದಾಹರಣೆಗೆ ನಾಯಿ ಬೆಳಗ್ಗೆ ಮಾತ್ರವಲ್ಲ ರಾತ್ರಿಯ ವೇಳೆ ಕೂಡ ತನ್ನ ಮನೆಯನ್ನ ಕಾಯುತ್ತದೆ. ಮಲಗಿದ್ದಾಗ ಕೊಂಚ ಶಬ್ಧವಾದ್ರೂ ಕೂಡ ತಕ್ಷಣ ಎಚ್ಚೆತ್ತುಕೊಳ್ಳುತ್ತದೆ. ಹಾಗೂ ಸಮಸ್ಯೆಯನ್ನು ಪತ್ತೆ ಹಚ್ಚೋವರೆಗೂ ಅದಕ್ಕೆ ನೆಮ್ಮದಿ ಇರೋದಿಲ್ಲ. ಪುರುಷರು ಕೂಡ ಹಾಗೆಯೇ ಎಲ್ಲೇ ಹೋದ್ರು ಹೆಂಡತಿ ಹಾಗೂ ಮಕ್ಕಳ ಮೇಲೆ ಒಂದು ಕಣ್ಣಿರಲೇಬೇಕು.
4. ಕುಟುಂಬಕ್ಕಾಗಿ ಉಳಿತಾಯ ಮಾಡಿ
ಪುರುಷನಾದವನಿಗೆ ಜವಾಬ್ದಾರಿ ಅನ್ನೋದು ತುಂಬಾನೇ ಮುಖ್ಯ ಎನ್ನುತ್ತಾರೆ ಚಾಣಕ್ಯ. ಎಷ್ಟು ದುಡಿದರೂ ಕೂಡ ಅದನ್ನು ನಾಳೆಗಾಗಿ ಉಳಿತಾಯ ಮಾಡಬೇಕು. ದುಂದು ವೆಚ್ಚ ಮಾಡಬಾರದು. ತನಗಾಗಿ ಹಾಗೂ ತನ್ನ ಕುಟುಂಬಕ್ಕಾಗಿ ಕೂಡಿಡಬೇಕು. ಉದಾಹರಣೆ ನಾಯಿ ಹೇಗೆ ತನ್ನ ಮಕ್ಕಳಿಗಾಗಿ ಕೊಂಚ ಆಹಾರವನ್ನು ಉಳಿಸುತ್ತದೆಯೋ ಅದೇ ರೀತಿ ಗುಣಗಳು ಇರಬೇಕು ಎನ್ನುತ್ತಾರೆ ಚಾಣಕ್ಯ.
5. ಹೆಂಡತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಕೂಡ ಗಮನ ನೀಡಿ
ಆಚಾರ್ಯ ಚಾಣಕ್ಯರ ಪ್ರಕಾರ ಗಂಡನಾದವನಿಗೆ ಹೆಂಡತಿಯ ಮೇಲೆ ಪ್ರೀತಿ, ಅಕ್ಕರೆ, ಕಾಳಜಿ ಇರಲೇಬೇಕು. ಮನೆಗಾಗಿ ದುಡಿಯುವ ಆಕೆಯನ್ನು ಕೆಲಸದವಳ ತರ ನೋಡಿಕೊಳ್ಳಬಾರದು. ಬದಲಿಗೆ ಆಕೆಯನ್ನು ಗೌರವದಿಂದ ಕಾಣಬೇಕು. ಆಕೆಯನ್ನು ಹೊಡೆಯೋದು, ಬಡೆಯೋದು ಮಾಡಬಾರದು. ಆಕೆಯ ಮಾನಸಿಕ ಸ್ಥಿತಿ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು.
ಈ ಎಲ್ಲಾ ಗುಣಗಳು ಪುರುಷರಿಗಿದ್ರೆ ಆತ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬಹುದು.



Click it and Unblock the Notifications



