Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬೆನ್ನಲ್ಲಿ ಬಾಲ ಇರುವ ಹನುಮನ ಪ್ರತಿರೂಪ; ಯಾರು ಈ ದೈವೀಕ ಪುರುಷ? ಆತನ ಕಥೆ ಗೊತ್ತಾ?
ಜಗತ್ತಿನ ಕೆಲವು ವಿಚಿತ್ರ ಘಟನೆಗಳು, ವಿಚಿತ್ರ ಜೀವಿಗಳ ನೋಡಬ ದು, ಅದ್ರಲ್ಲೂ ಕೆಲವೊಮ್ಮೆ ವಿಜ್ಞಾನಕ್ಕೂ ಸವಾಲು ಎಸಗುವಂತಹ ಹಲವು ವಿಚಾರಗಳ ನೋಡಿರುತ್ತೇವೆ. ಅದ್ರಲ್ಲೂ ಕೆಲವೊಂದು ವಿಚಾರಗಳು ನಮ್ಮಲ್ಲಿ ಅಚ್ಚರಿ ಮೂಡಿಸುತ್ತವೆ. ಹಲವರು ಜನಿಸುವಾಗ ವಿಶೇಷ ಚೇತನರಾಗಿ, ವಿಭಿನ್ನ ರಚನೆಯಲ್ಲಿ ಹಾಗೆ ಹೆಚ್ಚುವರಿ ಅಂಗಗಳ ಹೊಂದಿರುವುದು ನೋಡಿರಬಹುದು.
ಕೆಲವೊಮ್ಮೆ 6 ಬೆರಳುಗಳೊಂದಿಗೆ ಮೂರು ಕಾಲು, ಮೂರು ಕೈ ಹೀಗೆ ವಿಚಿತ್ರ ರಚನೆಗಳೊಂದಿಗೆ ಜನಿಸುವುದು ನೋಡಿರುತ್ತೀರಿ. ಇವೆಲ್ಲವು ವೈದ್ಯಕೀಯ ಕಾರಣಗಳಿಂದ ಗಮನ ಸೆಳೆಯುತ್ತವೆ. ಹೀಗೆ ನಾವಿಂದು ಬಾಲದೊಂದಿಗೆ ಜನಿಸಿರುವ ವಿಶೇಷ ವ್ಯಕ್ತಿಯೋರ್ವನ ಕುರಿತಾಗಿ ತಿಳಿದುಕೊಳ್ಳೋಣ. ಹೌದು ಇಲ್ಲೊಬ್ಬ ವ್ಯಕ್ಯಿಯ ಬೆನ್ನಿನ ಬಳಿ ಬಾಲ ಬೆಳೆಯುತ್ತಿರುವುದು ಈಗ ಅಚ್ಚರಿಯ ವಿಚಾರವಗಿದೆ.

ಮಂಗನಿಂದ ಮಾನವರಾಗಿದ್ದೇವೆ ಎಂಬ ಸಿದ್ದಾಂತವನ್ನು ಒಪ್ಪಿಕೊಂಡಿದ್ದಾನೆ. ಶತಮಾನಗಳ ಹಿಂದೆ ಮಂಗನ ಮುಂದುವರಿದ ವಿಕಸಿತ ರೂಪಾಂತರ ಆಗಿದ್ದೇವೆ. ಆದ್ರೆ ಶತಮಾನಗಳಿಂದ ಮಂಗನಿಂದ ಮಾನವರಾದ ನಾವು ಅಂಗಗಳ ರಚನೆಯಲ್ಲೂ ಬದಲಾವಣೆ ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿಗೆ ಬೆನ್ನಿನಲ್ಲಿ ಬಾಲ ಬೆಳೆದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬನಿಗೆ ಸುಮಾರು 15 ಇಂಚಿನ ಕೂದಲಿನಿಂದ ಕೂಡಿದ ಬಾಲವಿದೆ. ಇಲ್ಲಿನ ಅಲಿಪುರ್ದೂರ್‌ನ ನಿವಾಸಿ ಚಂದ್ರೆ ಒರಾನ್ ಎಂಬಾತನ ಕೆಳ ಬೆನ್ನಿನ ಭಾಗದಲ್ಲಿ ಬಾಲ ಬೆಳೆಯುತ್ತಲೇ ಇದೆ. ಇನ್ನೂ ಅಚ್ಚರಿ ಅಂದರೆ ಆತನನ್ನು ಹನುಮಂತನ ಪ್ರತಿರೂಪ ಎಂದು ಊರಿನವರು ಪೂಜೆ ಸಲ್ಲಿಸುತ್ತಾರೆ. ಆತನ ನೋಡಲು ಸಾಲುಗಟ್ಟಿ ನಿಲ್ಲುತ್ತಾರೆ. ಆತ ಬೆನ್ನ ಹಿಂದಿನ ಕೂದಲು ರಚನೆಯ ಅಂಗವನ್ನು ಕತ್ತರಿಸಿದರೂ ಮತ್ತೆ ಮತ್ತೆ ಬೆಳೆಯುತ್ತಿದೆಯಂತೆ.
ಆತನ ಮನೆಯ ಹೊರಗೆ ಕ್ಯೂ ನಿಲ್ಲಲು ಭಕ್ತರು ನೂರಾರು ಮೈಲುಗಳಷ್ಟು ಪ್ರಯಾಣಿಸುತ್ತಾರೆ, ಅವರ ಬಾಲವನ್ನು ಸ್ಪರ್ಶಿಸುವ ಮೂಲಕ ಆಶೀರ್ವಾದ ಪಡೆಯುತ್ತಾರೆ. ಮರವನ್ನು ಏರಿ ತೆಂಗಿನಕಾಯಿ, ಎಳನೀರು ತೆಗೆಯುವ ಕೆಲಸ ಮಾಡುವ ಅವರು ಹನುಮಂತನಿಂದ ವಿಶೇಷ ಶಕ್ತಿ ಪಡೆದಿದ್ದಾರೆ ಎಂದು ಹಲವರು ನಂಬುತ್ತಾರೆ.
ಹುಟ್ಟುವಾಗಲೇ ಬಾಲದ ರಚನೆ
ಚಂದ್ರೆ ಒರಾನ್ ಜನಿಸುವಾಗಲೇ ಬೆನ್ನಿನ ಭಾಗದಲ್ಲಿ ಸಣ್ಣ ಬಾಲದ ಆಕಾರವಿತ್ತಂತೆ. ಆದ್ರೆ ಆ ಸಮಯದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲವಂತೆ. ಮಗು ಬೆಳವಣಿಗೆಯಾದಂತೆ ಬಾಲದ ರಚನೆ ಸಹ ನಿಧಾನವಾಗಿ ಬೆಳೆಯುತ್ತಿತ್ತು. ಹಾಗೆ ಬರುಬರುತ್ತಾ ಈ ರಚನೆ ದೊಡ್ಡದಾಗುತ್ತಾ ಸಾಗಿತ್ತು. ನಂತರ ಈ ವಿಚಾರ ಇಡೀ ಊರಿಗೆ ತಿಳಿದಾಗ ಅವರಲ್ಲಿ ವಿಶೇಷ ದೈವೀಕ ಶಕ್ತಿ ಇದೆ ಎಂದು ಜನರು ನಂಬಿದರು.
ಹಾಗೆ ಸುತ್ತಮುತ್ತಲಿನ ಜನರು ಇವರನ್ನು ವಿಶೇಷ ಶಕ್ತಿ ಹೊಂದಿರುವ ವ್ಯಕ್ತಿ ಎಂದು ನಂಬಿದರು. ಕೆಲವೊಮ್ಮೆ ಮನೆಯಲ್ಲಿ ಯಾರಾದರು ಜ್ವರದಂತಹ ಸಮಸ್ಯೆಗೆ ತುತ್ತಾದರೆ ಅವರನ್ನು ವೈದ್ಯರ ಬಳಿಕ ಕರೆದುಕೊಂಡು ಹೋಗುವ ಬದಲು ಚಂದ್ರೆ ಅವರ ಬಳಿ ಕರೆತಂದು ಬಾಲವನ್ನು ಅವರಿಗೆ ಸ್ಪರ್ಶಿಸುವ ಕೆಲಸ ಮಾಡುತ್ತಿದ್ದರು. ಇದರಿಂದ ಅವರ ಅನರೋಗ್ಯ ಸಮಸ್ಯೆಗಳು ದೂರಾಗುತ್ತಿದ್ದವು ಎಂದು ನಂಬಿದ್ದರು. ಇನ್ನೊಂದು ಕಥೆಯ ಪ್ರಕಾರ ಚಂದ್ರೆ ಒರಾನ್ ಹನುಮಾನ್ ಜಯಂತಿ ದಿನವೇ ಜನಿಸಿದರಂತೆ. ಇದರಿಂದ ಹನುಮನ ಪ್ರತಿರೂಪವೆಂದು ಅವರನ್ನು ಬಿಂಬಿಸಲಾಗಿದೆ. ವೈದ್ಯರು ಈ ಬಾಲವನ್ನು ಯಶಸ್ವಿಯಾಗಿ ಕತ್ತರಿಸುವುದಾಗಿ ಹೇಳಿದ್ದರು, ಆದ್ರೆ ಸ್ವತಃ ಚಂದ್ರೆ ಒರಾನ್ ಅವರೆ ಅದನ್ನು ನಿರಾಕರಿಸಿದ್ದರು.
ಮಾನವರಲ್ಲಿ ಬಾಲ ಬರುವುದೇಕೆ?
ವೈದ್ಯಕೀಯ ಲೋಕಕ್ಕೆ ಇದು ಹೊಸ ಪ್ರಕರಣವಲ್ಲ, ಬದಲಿಗೆ ಇಂದೊಂದು ಅಸಮಾನಾನ್ಯ ಕ್ರಿಯೆ ಆಗಿರಲಿದೆ. ಓರಾನ್ ಅವರ ಬಾಲವು ಜನ್ಮಜಾತ ದೋಷವಾದ ಸ್ಪೈನಾ ಬೈಫಿಡಾದ ಪರಿಣಾಮವಾಗಿದೆ, ಇದು ಕೆಳ ಬೆನ್ನಿನ ಬೆಳವಣಿಗೆಗೆ ಕಾರಣವಾಗಬಹುದು ಅಥವಾ ಇದೊಂದು ಕೂದಲಿಗ ಗಡ್ಡೆಯಾಗಿಯೂ ಅದನ್ನು ಕತ್ತರಿಸದೆ ಬಿಟ್ಟರೆ ಉದ್ದವಾಗಿ ಬೆಳೆಯುವುದು ನೋಡಬಹುದು.
ಬೆನ್ನುಮೂಳೆಯು ಸಂಪೂರ್ಣವಾಗಿ ಮುಚ್ಚದಿದ್ದಾಗ ಸ್ಪೈನಾ ಬೈಫಿಡಾ ಸಂಭವಿಸುತ್ತದೆ ಓರಾನ್ ಅವರು ಸ್ಪೈನಾ ಬೈಫಿಡಾ ಅಕ್ಲ್ಟಾ ಎಂದು ಕರೆಯಲ್ಪಡುವ ಸ್ಪೈನಾ ಬೈಫಿಡಾದ ರೂಪದೊಂದಿಗೆ ಜನಿಸಿದ ಸಾಧ್ಯತೆ ಹೆಚ್ಚು. ಆದ್ರೆ ಇದು ಯಾವುದೇ ವಿಶೇಷ ಶಕ್ತಿಯನ್ನು ನೀಡುವುದಿಲ್ಲ ಎಂದು ವಿವರಿಸಲಾಗುತ್ತದೆ.
ಸದ್ಯ ಈಗ ಒರಾನ್ ಅವರು ತಮ್ಮದೆ ಸ್ವಂತ ದೇವಾಲಯ ಕೂಡ ಹೊಂದಲು ಬಯಸಿದ್ದಾರೆ. ಹಾಗೆ ಅದಕ್ಕಾಗಿ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ಅವರನ್ನು ಹುಡುಕಿ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇದೆಲ್ಲಾದರ ನಡುವೆ ಅವರು ವಿವಾಹಕ್ಕಾಗಿ ಓಡಾಡುವಾಗ ಈ ಬಾಲದ ವಿಚಾರದಿಂದ ಎಲ್ಲಾ ಮಹಿಳೆಯರು ಅವರನ್ನು ತಿರಸ್ಕರಿಸಿದ್ದರಂತೆ.
ತಮ್ಮ ಹನುಮನ ಅವತಾರ ಎಂಬುದಾಗಿ ಬಿಂಬಿಸಲಾಗಿದ್ದರಿಂದ ಹನುಮನು ಸನ್ಯಾಸಿಯಾಗಿದ್ದು ಅದೇ ಕಾರಣಕ್ಕೆ ವಿವಾಹ ಯೋಗ ಕೂಡಿಬರುತ್ತಿಲ್ಲ ಎಂದು ಹೇಳಲಾಗಿತ್ತು. ಆದ್ರೆ ತಮ್ಮ 38ನೇ ವಯಸ್ಸಿನಲ್ಲಿ ಅವರು ಕೊನೆಗೂ ವಿವಾಹವಾದರು, ಅಲ್ಲದೆ ಅವರಿಗೆ ಓರ್ವ ಮಗಳು ಸಹ ಇದ್ದಾಳೆ.



Click it and Unblock the Notifications
