Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಈ ವರ್ಷ ಆಷಾಢ ಶುರು ಯಾವಾಗ? ಈ ಮಾಸದಲ್ಲಿ ಬರುವ 3 ಪ್ರಮುಖ ಆಚರಣೆಗಳಿವು
ಜೂನ್-ಜುಲೈ ತಿಂಗಳ ನಡುವೆ ಆಷಾಢ ಬರುತ್ತದೆ, ಆಷಾಢ ಮಾಸ ಹಲವು ವಿಶೇಷತೆಗಳಿಂದಾಗಿ ತುಂಬಾನೇ ವಿಶೇಷ ಮಾಸವಾಗಿದೆ. ಈ ತಿಂಗಳಿನಲ್ಲಿ ಆಹಾರ ಪದ್ಧಯಿಯಲ್ಲಿ ಬದಲಾವಣೆ ಮಾಡುತ್ತೇವೆ,
ಈ ತಿಂಗಳಿನಲ್ಲಿ ಹಲವಾರು ಆಚರಣೆಗಳಿವೆ, ಶುಭ ಕಾರ್ಯಗಳನ್ನು ಮಾಡುವುದಿಲ್ಲ, ಬಾಡಿಗೆಗೆ ಮನೆ ಸಿಗುವುದಿಲ್ಲ, ಗೃಹ ಪ್ರವೇಶ ಮಾಡುವುದಿಲ್ಲ ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಆಷಾಢ ಮಾಸ ಯಾವಾಗ ಶುರು, ಯಾವಾಗ ಮುಗಿಯುತ್ತದೆ ಎಂದು ಜನರು ತಿಳಿಯ ಬಯಸುತ್ತಾರೆ.
ಈ ವರ್ಷ ಆಷಾಢ ಯಾವಾಗ? ಆಷಾಢ ಮಾಸದಲ್ಲಿ ಇದೆ ಗುರು ಪೂರ್ಣಿಮಾ, ಆಷಾಢ ಅಮವಾಸ್ಯೆ ಯಾವ ದಿನ ಬರಲಿದೆ ಎಂಬೆಲ್ಲಾ ಮಾಹಿತಿ ನೋಡೋಣ ಬನ್ನಿ:

ಆಷಾಢ ಮಾಸ ಪ್ರಾರಂಭ ಮತ್ತು ಮುಕ್ತಾಯ
ಆಷಾಢ ಅಮವಾಸ್ಯೆ ಜುಲೈ 6ರಿಂದ ಪ್ರಾರಂಭ ಆಗಸ್ಟ್ 4ರವರೆಗೆ ಇರಲಿದೆ.
ಆಷಾಢ ಮಾಸದಲ್ಲಿ ಬರುವ ವಿಶೇಷ ದಿನಗಳಿವು
ಆಷಾಢ ಅಮವಾಸ್ಯೆ: ಜುಲೈ 6, 2024
ಆಷಾಢ ಅಮವಾಸ್ಯೆ ಪಿತೃದೋಷ ನಿವಾರಣೆಗೆ ಅತ್ಯಂತ ಮಹತ್ವವಾದ ದಿನವಾಗಿದೆ. ಈ ದಿನದಂದು ತೀರಿಹೋದ ಪೂರ್ವಜರಿಗೆ ಪಿತೃತರ್ಪಣ ನೀಡಲಾಗುವುದು. ಈ ದಿನ ಪಿತೃತರ್ಪಣ ನೀಡುವುದರಿಂದ ತೀರಿ ಹೋದವರಿಗೆ ಮೋಕ್ಷ ಸಿಗುವುದು. ಅವರು ಸಂತುಷ್ಟರಾದರೆ ನಮನ್ನು ಹರಿಸುತ್ತಾರೆ, ಇದರಿಂದ ನಮ್ಮ ಕುಟುಂಬದಲ್ಲಿ ನೆಮ್ಮದಿ ನೆಲೆಸುವುದು ಸಂತಾನ ಭಾಗ್ಯ ದೊರೆಯುವುದು ಹಾಗಾಗಿ ಈ ದಿನದಂದು ಪಿತೃತರ್ಪಣ ನೀಡಲಾಗುವುದು.
ಗುರು ಪೂರ್ಣಿಮಾ
ಜುಲೈ 21, 2024
ಮಹತ್ವ: ಗುರು ಪೂರ್ಣಿಮಾ ತುಂಬಾನೇ ಮಹತ್ವದ ದಿನ, ನಮ್ಮೆಲ್ಲರ ಬದುಕಿನಲ್ಲಿ ಗುರು ಇದ್ದೇ ಇರುತ್ತಾರೆ, ಯಾರು ನಮ್ಮ ಬದುಕಿನಲ್ಲಿ ನಮ್ಮನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಹೇಳಿ ನಮಗೆ ಮಾರ್ಗದರ್ಶನ ನೀಡುತ್ತಾರೇ ಅವರೇ ನಮ್ಮ, ಅಂಥ ಗುರುವನ್ನು ಸಭಂಭ್ರಮಿಸುವ ದಿನ.
ನಾಗ ಪಂಚಮಿ
ಎಲ್ಲಾ ಹಬ್ಬಗಳಿಗೆ ಮುನ್ನುಡಿಯಾಗಿ ಬರುವ ಹಬ್ಬವೇ ನಾಗ ಪಂಚಮಿ. ವರ್ಷ ನಾಗರ ಪಂಚಮಿ ಅಥವಾ ನಾಗ ಪಂಚಮಿಯನ್ನು ಆಗಸ್ಟ್ 5ರಂದು ಆಚರಿಸಲಾಗುವುದು. ಈ ದಿನದಂದು ನಾಗ ದೇವತೆಗೆ ಪೂಜೆ ಸಲ್ಲಿಸಲಾಗುವುದು. ಕಲ್ಲಿನ ಪೂರ್ತಿಗಳಿಗೆ ಹಾಲನ್ನು ಹಾಕಿ ನಮ್ಮನ್ನು ರಕ್ಷಣೆ ಮಾಡು ಎಂದು ಪ್ರಾರ್ಥಿಸಲಾಗುವುದು.
ಆಷಾಢ ಮಾಸದಲ್ಲಿ ಈ ನಿಯಮಗಳನ್ನು ಆಚರಿಸಲಾಗುವುದು:
ಈ ಮಾಸದಲ್ಲಿ ಶುಭ ಕಾರ್ಯ ಮಾಡುವುದಿಲ್ಲ. ಆಷಾಢ ಮಾಸದಲ್ಲಿ ಶುಭ ಕಾರ್ಯ ಮಾಡಿದರೆ ಅದರಿಂದ ಒಳ್ಳೆಯ ಫಲ ದೊರೆಯುವುದಿಲ್ಲ ಎಂಬ ನಂಬಿಕೆ, ಹೀಗಾಗಿ ಆಷಾಢ ಮಾಸದಲ್ಲಿ ಮದುವೆ, ನಾಮಕರಣ, ಗೃಹ ಪ್ರವೇಶ ಹೀಗೆ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ.
ದೇವರ ಕಾರ್ಯಕ್ಕೆ ಶುಭ
ಆಷಾಢ ಮಾಸ ಪೂಜೆ ಕಾರ್ಯಕ್ಕೆ ಶುಭ ಎಂದು ಹೇಳಲಾಗುವುದು. ಈ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡುವುದು ಒಳ್ಳೆಯದು, ಅದರಲ್ಲಿಯೂ ಕಾಳಿಯ ದೇವಾಲಯಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸುವುದು ಒಳ್ಳೆಯದು.
ದೇವರ ಮಂತ್ರಗಳನ್ನು ಪಠಿಸಬೇಕು
ವಿಷ್ಣು ಸಹಸ್ರನಾಮ, ಲಲಿತ ಸಹಸ್ರನಾಮ, ದೇವರ ಮಂತ್ರಗಳನ್ನು ಪಠಣೆ ಮಾಡುವುದು ಒಳ್ಳೆಯದು.
ಆಷಾಢ ಶುಕ್ರವಾರದ ವಿಶೇಷತೆ: ಆಷಾಢ ಶುಕ್ರವಾರ ಲಕ್ಷ್ಮಿಯನ್ನು ಆರಾಧನೆ ಮಾಡುವುದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು, ಇದರಿಂದ ಕಷ್ಟಗಳು ದೂರಾಗುವುದು, ಆರ್ಥಿಕವಾಗಿ ಸಮೃದ್ಧಿ ಕಾಣವಿರಿ.
ಸಂಪ್ರದಾಯ
ಈ ಸಮಯದಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು-ಗಂಡು ಜೊತೆಯಲ್ಲಿ ಇರಬಾರದು ಎಂದು ಈ ಸಮಯದಲ್ಲಿ ನವ ವಿವಾಹಿತೆಯನ್ನು ತವರು ಮನೆಗೆ ಕರೆದು ತರಲಾಗುವುದು. ಇನ್ನು ಕೆಲವು ಕಡೆ ಅತ್ತೆ-ಸೊಸೆ ಈ ಮಾಸದಲ್ಲಿ ಜೊತೆಯಲ್ಲಿ ಇರಬಾರದು ಎಂದು ಮದುವೆ ಮಾಡಿಕೊಟ್ಟ ಹೆಣ್ಮಕ್ಕಳನ್ನು ತವರಿಗೆ ತರಲಾಗುವುದು.



Click it and Unblock the Notifications