Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೆಟ್ಟ ಮೇಕಪ್ ನಿಂದಾಗಿ ಡಲ್ಲಾಗಿ ಕಂಡ ವಿದ್ಯಾ
ಸೆಲೆಬ್ರಿಟಿಗಳ ನಟನೆಯಷ್ಟೇ ಅವರ ಮೇಕಪ್ ಮತ್ತು ಡ್ರೆಸ್ಸಿಂಗ್ ಗಮನ ಸೆಳೆಯುತ್ತದೆ. ಸೆಲೆಬ್ರಿಟಿಗಳು ಯಾವುದಾದರೂ ಫಂಕ್ಷನ್ ಗೆ ಬರುವಾಗ ತಮ್ಮ ಡ್ರೆಸ್ಸಿಂಗ್ ಮತ್ತು ಮೇಕಪ್ ಬಗ್ಗೆ ತುಸು ಅಧಿಕವೇ ಕೇರ್ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಫ್ಯಾಷನ್ ಲೋಕದ ಗಮನವನ್ನು ಸೆಳೆಯಲು ಸಾಧ್ಯವಾಗುವುದಿಲ್ಲ. ಇಲ್ಲಿ ನಾವು ಹೇಳ ಹೊರಟಿರುವುದು ವಿದ್ಯಾ ಬಾಲನ್ ಬಗ್ಗೆ. ತನ್ನ ಆಕರ್ಷಕವಾದ ಸರಳ ಮೇಕಪ್ ನಿಂದ ಗಮನ ಸೆಳೆಯುತ್ತಿದ್ದ ವಿದ್ಯಾ ಈ ಬಾರಿ ಸ್ವಲ್ಪ ಭಿನ್ನವಾದ ಓವರ್ ಮೇಕಪ್ ಮಾಡಿ, ಆಕರ್ಷಕವಾಗಿ ಕಾಣುವ ಬದಲು ಡಲ್ಲಾಗಿ ಕಂಡರು.
ಇಲ್ಲಿ ವಿದ್ಯಾಳ ಡ್ರೆಸ್ಸಿಂಗ್ ಬಗ್ಗೆ ಎರಡು ಮಾತಿಲ್ಲ, ತುಂಬಾ ಅದ್ಭುತವಾಗಿದೆ. ಆದರೆ ಅವರು ಮಾಡಿದ ಮೇಕಪ್ ಅವರ ಲುಕ್ ಹಾಳು ಮಾಡಿದೆ. ಆದ್ದರಿಂದ ಆಕರ್ಷವಾಗಿ ಕಾಣಲು ಡ್ರೆಸ್ಸಿಂಗ್ ನಷ್ಟೇ ಮುಖ್ಯ ಮೇಕಪ್ ಕೂಡ. ಬನ್ನಿ ವಿದ್ಯಾಳ ಆಕರ್ಷಕವಾದ ಡ್ರೆಸ್ಸಿಂಗ್, ನೀರಸವಾದ ಮೇಕಪ್ ನತ್ತ ಕಣ್ಣಾಡಿಸೋಣ:

ಅನುಪಮಾ ಸ್ಯಾರಿ
ಕೆಂಡ ಮತ್ತು ಮಸಿ ಕಾಂಬಿನೇಷನ್ ಇರುವ ಈ ಅನುಪಮಾ ಸ್ಯಾರಿ ಡಿಸೈನ್ ನಲ್ಲಿ ಆಕರ್ಷಕವಾಗಿದ್ದು, ಇದು ವಿದ್ಯಾಳ ಮೈ ಬಣ್ಣಕ್ಕೆ ಚೆನ್ನಾಗಿ ಕಾಣುತ್ತಿದೆ. ಮೊಣಕೈ ಬ್ಲೌಸ್, ಸೆರಗನ್ನು ಸಿಂಗಲ್ ಪಿನ್ ಮಾಡಿರುವ ರೀತಿ ಇವುಗಳಿಂದ ಡ್ರೆಸ್ಸಿಂಗ್ ತುಂಬಾ ಚೆನ್ನಾಗಿದೆ.

ಡಲ್ಲಾದ ಮುಖ
ಈ ಸ್ಯಾರಿಯಲ್ಲಿ ವಿದ್ಯಾ ಡಲ್ಲಾಗಿ ಕಾಣುತ್ತಿರಲು ಕಾರಣ ಅವರು ಮಾಡಿದ ಮೇಕಪ್.

ಬೋಳು- ಬೋಳಾದ ಲುಕ್
ಆಭರಣವೇ ಹೆಣ್ಣಿಗೆ ಅಂದ ಎನ್ನುತ್ತಾರೆ. ಇಲ್ಲಿ ವಿದ್ಯಾ ಆಭರಣ ಹಾಕಿದ್ದಾರೆ, ಆದರೆ ತನಗೆ ಹೊಂದುವಂತಹ ಆಭರಣವನ್ನು ಧರಿಸುವಲ್ಲಿ ಎಡವಿದ್ದಾರೆ.

ಉಂಗುರ
ವಿದ್ಯಾ ಸ್ಯಾರಿಗೆ ಕೈಯಲ್ಲಿ ಬಳೆ ಹಾಕಿರದಿದ್ದರೂ, ಉಗುರಿನಲ್ಲಿದ್ದ ದೊಡ್ಡ ಗಾತ್ರದ ಉಂಗುರ ಫ್ಯಾಷನಬಲ್ ಆಗಿತ್ತು.

ಕಿವಿಯೋಲೆ
ವಿದ್ಯಾಳ ಮುಖ ಡಲ್ಲಾಗಿ ಕಾಣಲು ಪ್ರಮುಖ ಕಾರಣ ಈ ಕಿವಿಯೋಲೆ. ಈ ಕಿವಿಯೋಲೆ ವಿದ್ಯಾಳ ಮುಖಕ್ಕೆ ಸ್ವಲ್ಪವೂ ಆಕರ್ಷಕವಾಗಿ ಕಾಣುತ್ತಿಲ್ಲ.

ಕಾಡಿಗೆ
ವಿಂಗ್ಡ್ ಲುಕ್ ನ ಕಾಡಿಗೆ ವಿದ್ಯಾಳಿಗೆ ಹಾಟ್ ಲುಕ್ ನೀಡುವ ಬದಲು ಡಲ್ ಲುಕ್ ನೀಡಿದೆ. ಕುತ್ತಿಗೆ ಕೂಡ ಬೋಳಾಗಿರುವುದರಿಂದ ವಿದ್ಯಾ ತುಂಬಾ ಡಲ್ಲಾಗಿ ಕಾಣುತ್ತಿದ್ದಾರೆ.

ವಿದ್ಯಾ
ಫ್ಯಾಷನ್ ಅನ್ನುವುದು ಒಂದು ಕಲೆ. ಆದ್ದರಿಂದ ಫ್ಯಾಷನ್ ಪ್ರಿಯರು ಡ್ರೆಸ್ಸಿಂಗ್ ಬಗ್ಗೆ ಮಾತ್ರವಲ್ಲ, ಮೇಕಪ್ ಕಡೆಯೂ ಗಮನ ಕೊಟ್ಟರೆ ಮಾತ್ರ ಆಕರ್ಷಕವಾಗಿ ಕಾಣಲು ಸಾಧ್ಯ.



Click it and Unblock the Notifications
