Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ನವರಾತ್ರಿಯಲ್ಲಿ ಪಾಲಿಸುವ ಕೆಲ ಪದ್ಧತಿಗಳು
ನವರಾತ್ರಿ, ಒಂಬತ್ತು ದಿನಗಳ ಸಡಗರ ಸಂಭ್ರಮದ ಹಬ್ಬ. ಈ ಹಬ್ಬದಲ್ಲಿ ಪ್ರತಿಯೊಂದು ದಿನವೂ ವಿಶೇಷವೇ. ಶಕ್ತಿ ಮಾತೆಯೆ ಒಂಬತ್ತು ಅವತಾರಗಳನ್ನು ಪೂಜಿಸಲಾಗುವುದು. ಈ ಒಂಬತ್ತು ದಿನ ಭಕ್ತರು ಉಪವಾಸ ಮಾಡುತ್ತಾರೆ. ನಾನ್ ವೆಜ್ ತಿನ್ನುವವರು ನಾನ್ ವೆಜ್ ಆಹಾರಗಳಿಂದ ದೂರವಿರುತ್ತಾರೆ, ಈ ಹಬ್ಬದಲ್ಲಿ ಕೆಲವೊಂದು ಪದ್ಧತಿಯನ್ನು ಭಕ್ತರು ತಪ್ಪದೇ ಅನುಸರಿಸುತ್ತಾರೆ. ಈ ಪದ್ಧತಿಯನ್ನು ತಲತಲಾಂತರಗಳಿಂದ ಆಚರಿಸಿಕೊಂಡು ಬಂದಿದೆ.
ಬನ್ನಿ ಈ ಪದ್ಧತಿಗಳೇನು ಮತ್ತು ಅದರ ವಿಶೇಷಗಳೇನು ಎಂದು ನೋಡೋಣ ಬನ್ನಿ:

ದೀಪ ಉರಿಸುವುದು
9 ದಿನಗಳ ಕಾಲ ನಿರಂತರವಾಗಿ ದೀಪವನ್ನು ಉರಿಸಲಾಗುವುದು. ದೀಪ ನಮ್ಮ ಸುತ್ತ ಇರುವ ದುಷ್ಟಶಕ್ತಿಯನ್ನು ನಾಶ ಪಡಿಸುತ್ತದೆ, ದೇವಿ ನಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ.

ಉಪವಾಸ
ನವರಾತ್ರಿಯಲ್ಲಿ ಉಪವಾಸ ಮಾಡುವ ಪದ್ಧತಿ ಕೂಡ ನಮ್ಮಲ್ಲಿ ಇದೆ. ಕೆಲವರು 9 ದಿನ ಉಪವಾಸ ಮಾಡಿದರೆ ಮತ್ತೆ ಕೆಲವರು ನವರಾತ್ರಿಯ ಮೊದಲ ಮತ್ತು ಕೊನೆಯ ದಿನದಲ್ಲಿ ಮಾತ್ರ ಉಪವಾಸಮಾಡುತ್ತಾರೆ. ಉಪವಾಸವೆಂದರೆ ಸಂಪೂರ್ಣ ಖಾಲಿ ಹೊಟ್ಟೆಯಲ್ಲಿ ಇರುವುದಲ್ಲ, ಕೆಲವು ಆಹಾರಗಳನ್ನು ತಿನ್ನದೇ ಇರುವುದು, ಹಣ್ಣುಗಳನ್ನು ಉಪವಾಸ ಮಾಡುವ ಸಮಯದಲ್ಲಿ ತಿನ್ನಬಹುದು.

ಜಾಗರಣೆ ಇರುವುದು
ಉತ್ತರ ಭಾರತದ ಕಡೆ 9 ದಿನಗಳ ಕಾಲ ಜಾಗರಣೆ ಮಾಡುತ್ತಾರೆ. ರಾತ್ರಿಯಲ್ಲಿ ಪುರಾಣ ಕಥೆಗಳನ್ನು ಹೇಳುವುದು, ನಾಟಕ, ಹಾಡು, ನೃತ್ಯ ಹೀಗೆ ನಿದ್ದೆ ಮಾಡದೆ ದೇವಿಯ ಸ್ಮರಣೆಯಲ್ಲಿರುತ್ತಾರೆ. ಹಗಲಿನಲ್ಲಿ ನಿದ್ದೆ ಮಾಡಬಹುದು.

ಹೆಣ್ಣುಮಕ್ಕಳನ್ನು ಪೂಜೆ ಮಾಡುವುದು
ಉತ್ತರಭಾರತದ ಕಡೆ ನವರಾತ್ರಿಯನ್ನು ದುರ್ಗಾಪೂಜೆಯೆಂದು ಆಚರಿಸಲಾಗುವುದು. ಈ ಹಬ್ಬದ ಸಮಯದಲ್ಲಿ ಚಿಕ್ಕ ಹೆಣ್ಣು ಮಕ್ಕಳಿಗೆ ದೇವಿಯ ರೀತಿಯಲ್ಲಿ ಅಲಂಕಾರ ಮಾಡಿ ಪೂಜಿಸಲಾಗುವುದು.

ಜಾನಪದ ನೃತ್ಯ
ಗುಜರಾತ್ ನಲ್ಲಿ ರಾಸ್ ಗರ್ಬ ಎಂಬ ಜಾನಪದ ನೃತ್ಯ ಮಾಡುತ್ತಾರೆ. ದೇವರ ಗೀತೆಗಳನ್ನು ಆಡುತ್ತಾ ಚಪ್ಪಳೆ ತಟ್ಟುತ್ತಾ ಈ ನೃತ್ಯ ಮಾಡಲಾಗುವುದು.



Click it and Unblock the Notifications