Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪಬ್ಲಿಕ್ ನಲ್ಲಿ ಮಹಿಳೆಯರು ಹೀಗೂ ವರ್ತಿಸಬಹುದೇ?
ಸಾರ್ವಜನಿಕ ಸ್ಥಳಗಳಲ್ಲಿ ನಮಗೆ ಇಷ್ಟ ಬಂದಂತೆ ವರ್ತಿಸಲು ಸಾಧ್ಯವಿಲ್ಲ. ಹೇಗೆ ವರ್ತಿಸಬೇಕೆಂಬ ಮ್ಯಾನರ್ಸ್ ಇರುತ್ತದೆ. ಈ ಮ್ಯಾನರ್ಸ್ ಮುರಿದು ವರ್ತಿಸಿದಾಗ ಜನರ ದೃಷ್ಟಿಯಲ್ಲಿ ನಾವು ವಿಚಿತ್ರವಾಗಿ ಕಾಣುತ್ತೇವೆ, ನಮ್ಮ ವರ್ತನೆಯಿಂದ ಅವರಿಗೂ ಮುಜುಗರ ಉಂಟಾಗುವುದು. ಆದರೆ ಕೆಲ ಮಹಿಳೆಯರಲ್ಲಿ ಕೆಲವೊಂದು ನಡುವಳಿಕೆಗಳಿರುತ್ತವೆ.
ಅವರಿಗೆ ಮಾತ್ರ ತಮ್ಮ ನಡುವಳಿಕೆ ಇತರರಿಗೆ ಮುಜುಗರ ತರುತ್ತದೆ ಎಂದು ಗಮನಕ್ಕೆ ಬರುವುದೇ ಇಲ್ಲ, ಆದರೆ ಅದನ್ನು ನೋಡುಗರಿಗೆ ಮಾತ್ರ ಇರಿಸು ಮುರಿಸು ಉಂಟಾಗುತ್ತದೆ. ಮಹಿಳೆಯರ ಆ ನಡುವಳಿಕೆಗಳು ಯಾವುವು ಎಂದು ನೋಡೋಣ ಬನ್ನಿ:

ಎಲ್ಲಾ ಗ್ಲಾಸ್ ಅನ್ನು ಕನ್ನಡಿಯಂತೆ ಬಳಸುವುದು
ಗಾಡಿ ಗ್ಲಾಸ್ ನಲ್ಲಿ ತಮ್ಮ ಅಂದವನ್ನು ನೋಡಿಕೊಳ್ಳುವುದು, ಶಾಪ್ ಗೆ ಹೋದರೆ ಅಲ್ಲಿ ಗ್ಲಾಸ್ ಇದ್ದರೆ ಅದರಲ್ಲಿ ಮುಖ ನೋಡಿಕೊಳ್ಳುವುದು ಈ ರೀತಿ ಹೆಚ್ಚಿನ ಮಹಿಳೆಯರು ಮಾಡುತ್ತಾರೆ. ಈ ರೀತಿ ಮಾಡಿದಾಗ ಅದನ್ನು ನೋಡುಗರಿಗೆ ವಿಚಿತ್ರ ಅನಿಸುವುದು.
ಬ್ರಾ ಸರಿ ಪಡಿಸುವುದು
ಕೆಲವು ಮಹಿಳೆಯರು ಬ್ರಾ ಸ್ವಲ್ಪ ಸಡಿಲವಾದರೆ ಸಾರ್ಜನಿಕ ಸ್ಥಳಗಳಲ್ಲಿಯೇ ಸರಿಪಡಿಸುತ್ತಾರೆ. ಇನ್ನು ಕೆಲವರು ದುಡ್ಡನ್ನು ಕೂಡ ಅಲ್ಲಿಯೇ ಇಟ್ಟು ಕೊಳ್ಳುತ್ತಾರೆ. ಈ ರೀತಿ ವರ್ತಿಸುವವರನ್ನು ನೋಡಿದರೆ ಅದನ್ನು ನೋಡಿದ ಇತರ ಮಹಿಳೆಯರಿಗೆ ಮುಜುಗರ ಉಂಟಾಗುವುದು.
ಎಲ್ಲಿಂದರಲ್ಲಿ ಮೇಕಪ್ ಮಾಡುವುದು
ಪಾರ್ಕ್ ಗೆ ಹೋದಾಗ, ಹೋಟೆಲ್ ಹೋದಾಗ, ಫ್ರೆಂಡ್ಸ್ ಜೊತೆ ಸೇರಿ ಮಾತನಾಡುತ್ತಿರುವಾಗ ಲಿಪ್ ಸ್ಟಿಕ್ ತೆಗೆದು ತುಟಿಗೆ ಹಚ್ಚಿಕೊಂಡರೆ ನೋಡುಗರಿಗೆ ತುಂಬಾ ವಿಚುತ್ರವಾಗಿ ಕಾಣುವಿರಿ. ಮೇಕಪ್ ಅನ್ನು ಸಾರ್ವಜನಿಕವಾಗಿ ಮಾಡುವ ಬದಲು ರೂಂನಲ್ಲಿ ಮಾಡುವುದು ಒಳ್ಳೆಯದು.
ಸಾರ್ಜನಿಕ ಸ್ಥಳದಲ್ಲಿ ಎದೆ ಹಾಲು ಕುಡಿಸುವುದು
ಇದನ್ನು ಹೆಚ್ಚಿನವರು ಮಾಡುತ್ತಾರೆ. ಮಗುವಿಗೆ ಹಾಲು ಕುಡಿಸುವುದಾದರೆ ಮಹಿಳೆಯರಿಗೆ ವಿಶ್ರಾಂತಿ ತಾಣಗಳಿರುತ್ತದೆ ಅಲ್ಲಿ ಹೋಗಿ ಕುಡಿಸಿ. ಒಂದು ವೇಳೆ ಅಲ್ಲಿಗೆ ಹೋಗುವುದು ಕಷ್ಟವಾದರೆ ಬಟ್ಟೆಯನ್ನು ಸರಿಯಾಗಿ ಮುಚ್ಚಿ ನಂತರ ಕುಡಿಸಿ. ಇನ್ನೂ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಮಾಡುವುದಾದರೆ 6 ತಿಂಗಳಿಗಿಂತ ದೊಡ್ಡ ಮಗುವಿಗೆ ಬಾಟಲಿ ಹಾಲನ್ನು ಕುಡಿಸುವುದು ಒಳ್ಳೆಯದು, ತುಂಬಾ ಚಿಕ್ಕ ಮಗುವಾಗಿದ್ದರೆ ದೊಡ್ಡ ಶಾಲ್ ಅನ್ನು ಭುಜದಲ್ಲಿ ಹಾಕಿ ಮಗುವನ್ನು ಸಂಪೂರ್ಣ ಮುಚ್ಚಿ, ನಂತರ ಕೊಡಿ.
ತುಂಡು ಲಂಗ ಹಾಕಿ ಕಾಲು ಮಡಚಿ ಕೂರುವುದು
ತುಂಡು ಲಂಗ ಹಾಕಿ ಕಾಲನ್ನು ಮಡಚಿ ಕೂತರೆ ಅಥವಾ ಕಾಲು ಮೇಲೆ ಕಾಲು ಹಾಕಿ ತುಂಬಾ ಕೆಟ್ಟದಾಗಿ ಕಾಣುವುದು. ಆದ್ದರಿಂದ ತುಂಡು ಲಂಗ ಹಾಕಿದಾಗ ತುಂಬಾ ಎಚ್ಚರವಾಗಿರಬೇಕು.
ಲಿಫ್ಟ್ ಕೇಳುವ ವಿಧಾನ
ಲಿಫ್ಟ್ ಕೇಳಲು ಒಂದು ಕಾಲನ್ನು ರಸ್ತೆ ಮೇಲೆ ಇಟ್ಟು ನಿಲ್ಲಬಾರದು. ಈ ರೀತಿ ನಿಂತರೆ ನೋಡುಗರಿಗೆ ತಪ್ಪಾದ ಅರ್ಥ ಕಾಣುತ್ತದೆ. ಲಿಫ್ಟ್ ಕೊಡುವವರು ತಪ್ಪಾದ ಉದ್ದೇಶದಿಂದ ಕೊಡುತ್ತಾರೆ, ಇದರಿಂದ ಸಮಸ್ಯೆ ಉಂಟಾಗುವುದು. ಯಾವತ್ತೂ ಬಾಡಿ ಲ್ಯಾಂಗ್ವೇಜ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ತಲೆಬಾಚುವುದು
ಸಾರ್ವ ಜನಿಕ ಸ್ಥಳಗಳಲ್ಲಿ ತಲೆಬಾಚುವುದು ಒಳ್ಳೆಯ ಅಭ್ಯಾಸವಿಲ್ಲ. ಅದರಲ್ಲೂ ಹೋಟೆಲ್, ರೆಸ್ಟೋರೆಂಟ್ ಗೆ ಹೋದಾಗ ತಲೆ ಬಿಚ್ಚಿ ಕಟ್ಟುವುದು ಮಾಡಬಾರದು. ಇಲ್ಲಿ ಹೇಳಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?



Click it and Unblock the Notifications
