Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ದೀಪಾವಳಿಗೆ ಸೂಪರ್ ಗಿಫ್ಟ್ ಐಡಿಯಾ
ದೀಪಾವಳಿ ಅಂದರೆ ಮನೆ ಮಂದಿಯೆಲ್ಲಾ ಜೊತೆ ಸೇರಿ, ದೀಪಗಳನ್ನು ಹಚ್ಚಿ ಆಚರಿಸುವ ಬೆಳಕಿನ ಹಬ್ಬ. ಈ ಹಬ್ಬಕ್ಕೆ ದೂರದ ಊರಿನಲ್ಲಿ ದುಡಿಯುತ್ತಿರುವ ಮಕ್ಕಳು ಮನೆಗೆ ಬರುತ್ತಾರೆ, ಮದುವೆ ಮಾಡಿ ಕೊಟ್ಟ ಹೆಣ್ಣು ಮಕ್ಕಳು ತವರಿಗೆ ಹೋಗುವ ಸಂಭ್ರಮದಲ್ಲಿ ಇರುತ್ತಾರೆ. ಇನ್ನು ನವ ದಂಪತಿಗಳಿಗೆ ಮೊದಲ ದೀಪಾವಳಿ ಅಂದರೆ ವಿಶೇಷವೇ.
ದೀಪಾವಳಿಗೆ ಪಟಾಕಿಗಳ ಶಬ್ದ ಮಾತ್ರವಲ್ಲ, ಉಡುಗೊರೆಗಳ ಕಾರುಬಾರು ಕೂಡ ಜೋರಾಗಿಯೇ ಇರುತ್ತದೆ. ಕೆಲವೊಮ್ಮೆ ಯಾರಿಗಾದರೂ ಉಡುಗೊರೆ ಕೊಡಬೇಕೆಂದೇ ಹೊಳೆಯುವುದಿಲ್ಲ. ನಾನು ಕೊಡು ಉಡುಗೊರೆ ಅವರಿಗೆ ಇಷ್ಟವಾಗದಿದ್ದರೆ? ಎಂಬ ಸಂದೇಹ ಕೂಡ ಬರುವುದು, ಆದ್ದರಿಂದ ಇಲ್ಲಿ ನಾವು ಕೆಲವು ಗಿಫ್ಡ್ ಐಡಿಯಾ ನೀಡಿದ್ದೇವೆ, ಈ ಗಿಫ್ಟ ನಿಮ್ಮಿಂದ ಪಡೆದುಕೊಂಡವರು ಖಂಡಿತ ಖುಷಿಯಾಗುತ್ತಾರೆ, ಈಗ ಯಾರಿಗೆ ಯಾವ ರೀತಿಯ ಗಿಫ್ಟ್ ಕೊಡಬಹುದೆಂದು ನೋಡೋಣವೇ?

ಸಿಹಿ ತಿಂಡಿಗಳು
ಸಿಹಿ ತಿಂಡಿಯ ಬಾಕ್ಸ್ ಅನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಗಿಫ್ಟ್ ಆಗಿ ಕೊಡಬಹುದು. ಸ್ಟೀಟ್ ಬಾಕ್ಸ್ ಅನ್ನು ಗಿಫ್ಟ್ ಪ್ಯಾಕ್ ಮಾಡಿ ಕೊಡಿ.
ಪಟಾಕಿ
ಮಕ್ಕಳಿಗೆ ಪಟಾಕಿ ಹೊಡೆಯುವುದೆಂದರೆ ಪ್ರಾಣ. ಈ ದೀಪಾವಳಿಗೆ ಪರಿಸರ ಸ್ನೇಹಿಯಾದ, ಸರಳವಾದ ಪಟಾಕಿಗಳನ್ನು ಕೊಂಡು ಮಕ್ಕಳಿಗೆ ಕೊಡಬಹುದು.
ಡ್ರೈ ಫ್ರೂಟ್ಸ್
ಸ್ನೇಹಿತರಿಗೆ ಗಿಫ್ಟ್ ಕೊಡ ಬಯಸುವುದಾದರೆ ಡ್ರೈ ಫ್ರೂಟ್ಸ್ ಕೊಡಬಹುದು. ಇದು ಕೂಡ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟ ಪಡುವ ಸ್ವೀಟ್ಸ್ ಆಗಿದೆ.
ಮೇಕಪ್
ಗರ್ಲ್ ಫ್ರೆಂಟ್, ಅಕ್ಕ, ತಂಗಿ ಇವರಿಗೆ ಗಿಫ್ಟ್ ಕೊಡ ಬಯಸುವುದಾದರೆ ಮೇಕಪ್ ಕಿಟ್ಸ್ ಕೊಡಬಹುದು. ಇದನ್ನು ಕೊಡುವ ಮುಂಚೆ ಅವರು ಯಾವ ಬ್ರ್ಯಾಂಡ್ ಪ್ರಾಡಕ್ಟ್ ಬಳಸುತ್ತಿದ್ದಾರೆ ಎಂದು ತಿಳಿದು ಅದನ್ನು ಕೊಡುವುದು ಒಳ್ಳೆಯದು.
ಬಟ್ಟೆ
ನಿಮಗಿಷ್ಟವಾದ ಬಟ್ಟೆಯನ್ನು ಕೊಡುವ ಬದಲು ಅವರಿಗೆ ಯಾವ ಬಣ್ಣದ ಬಟ್ಟೆ ಇಷ್ಟ, ಇನ್ನು ಹೆಣ್ಣು ಮಕ್ಕಳಿಗಾದರೆ ಯಾವ ಫ್ಯಾಷನ್ ನ ಡ್ರೆಸ್ ಬೇಕೆಂದು ಬಯಸುತ್ತಿದ್ದಾರೆ ಅದನ್ನು ಉಪಾಯದಿಂದ ತಿಳಿದುಕೊಂಡು ಆ ದಿನ ಕೊಡಿ, ಖಂಡಿತ ಖುಷಿಯಾಗುತ್ತಾರೆ.
ಆಭರಣ, ಮೊಬೈ,ಲ್
ಇನ್ನು ದುಬಾರಿ ಗಿಫ್ಟ್ ಕೊಡ ಬಯಸುವುದಾದರೆ ಜ್ಯೂವೆಲರಿ, ಮೊಬೈಲ್ ಇವುಗಳನ್ನು ಗಿಫ್ಟ್ ಆಗಿ ಕೊಡಬಹುದು.



Click it and Unblock the Notifications
