Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ವಿಶ್ವದಲ್ಲಿಯೇ ಅತ್ಯಂತ ದುಬಾರಿಯಾದ ಬೀರ್ ಗಳಿವು!
ಬೀರ್ ಅನ್ನು ದುಬಾರಿ ಮದ್ಯದ ಪಟ್ಟಿಯಲ್ಲಿ ಸೇರಿಸಬಹುದೇ? ಎಂದು ಕೇಳಿದರೆ ಛೇ.. ಛೇ ಬೀರ್ ವೈನ್, ಶಾಂಪೇನ್, ವಿಸ್ಕಿಯಷ್ಟು ದುಬಾರಿಯಾಗಿರಲು ಸಾಧ್ಯವೇ? ಎಂಬ ಮರುಪ್ರಶ್ನೆ ಬರುವುದು ಖಂಡಿತ.
ಮದ್ಯಗಳಲ್ಲಿ ಬೀರ್ ಉತ್ಪಾದಿಸುವ ಕ್ರಮ ಸರಳವಾಗಿದ್ದು ಅದರ ಬೆಲೆ ಜನಸಾಮಾನ್ಯನಿಗೆ ಕೈಗೆಟುಕುವ ದರದಲ್ಲಿಯೇ ಇರುತ್ತದೆ. ಆದರೆ ಕೆಲವೊಂದು ಬೀರ್ ಗಳಿವೆ. ಇವು ಇತರ ಮದ್ಯಗಳಿಗಿಂತಲೂ ದುಬಾರಿಯಾದ ಮದ್ಯವಾಗಿದೆ! ಅಧಿಕ ಬೆಲೆಯ ಈ ಬೀರ್ ಗಳೆಲ್ಲಾ ತುಂಬಾ ಹಿಂದೆ ತಯಾರಿಸಿದ್ದು. ಬನ್ನಿ ಪ್ರಪಂಚದಲ್ಲಿರುವ ಅತ್ಯಂತ ಬೆಲೆ ಬಾಳುವ ಬೀರ್ ಗಳಾವುವು ಎಂದು ನೋಡೋಣ ಬನ್ನಿ:

Sapporo's Space Barley: $110
ಈ ಬೀರ್ ಅನ್ನು ಬಾರ್ಲಿಯಿಮದ ತಯಾರಿಸಲಾಗಿದೆ. ಇವುಗಳ ದುಬಾರಿ ಬೆಲೆ ಮತ್ತು ರುಚಿಯಿಂದ ಿತರ ಮದ್ಯಗಳಿಗೆ ಸರಿಯಾದ ಪೈಪೋಟಿ ನೀಡುತ್ತಿದೆ.

Crown Ambassador Reserve: $90
ಈ ಬೀರ್ ರುಚಿಯನ್ನು ವೈನ್ ರೀತಿಯಲ್ಲಿದ್ದು, ಈ ದುಬಾರಿ ಬೀರ್ ದೊರೆಯುವುದು ತುಂಬಾ ವಿರಳ.

Tutankhamun Ale: $75 for 500ml
ಈಜಿಪ್ಟ್ ನ ರಾಣಿ ನೆಫರ್ಟೀಸ್ ಟೋಂಬ್ ಈ ಮದ್ಯ ತಯಾರಿಸುವ ರೆಸಿಪಿ ನೀಡಿದಳು ಎಂದು ಹೇಳಲಾಗುತ್ತದೆ. ಇದನ್ನು ಸ್ಕಾಟಿಷ್ ನವರು ಮಾಡಿದ್ದರು ಹೆಸರು ಈಜಿಪ್ಟ್ ಮೂಲದ್ದು ಆಗಿದೆ.

Brewdog's Sink The Bismarck: $80
ಬೀರ್ ಕುಡಿಯುವುದರಲ್ಲಿ ಜರ್ಮನಿ ವಿಶ್ವದಲ್ಲಿ ಮೊದಲನೇಯ ಸ್ಥಾನದಲ್ಲಿದೆ. ಈ ಬೀರ್ ವಿಶ್ವದಲ್ಲಿರುವ ಬೀರ್ ಗಳಲ್ಲಿ ಅತ್ಯಂತ ಸ್ಟ್ರಾಂಗ್ ಬೀರ್ ಆಗಿದೆ.

Samuel Adams Utopia: $150
ಯುಟೋಪಿಯಾದ ಈ ಬೆಲೆ ಬಾಳುವ ಬೀರ್ ಅನ್ನು ಅಮೇರಿಕದಲ್ಲಿ ತಯಾರಿಸಲಾಗಿದೆ. ಇದರಲ್ಲಿ ಆಲ್ಕೋಹಾಲ್ ಪ್ರಮಾಣ ಇತರ ಬೀರ್ ಗಳಲ್ಲಿರುವುದಕ್ಕಿಂತ ಅಧಿಕವಾಗಿದೆ.

Schorschbrua's Schorschbock: $250
ಜರ್ಮನ್ ನ ಈ ಬೀರ್ ಅತ್ಯಂತ ಸ್ಟ್ರಾಂಗ್ ಬೀರ್ ಆಗಿದ್ದು 57 % ಆಲ್ಕೋಹಾಲ್ ಇದೆ.

Carlsberg Jacobsen Vintage: $400 (6 packs)
ಈ ಬೀರ್ ವೆನಿಲ್ಲಾ ಮತ್ತು ಚಾಕಲೇಟ್ ಮಿಶ್ರಿತ ರುಚಿಯನ್ನು ಹೊಂದಿದ್ದು, ಇದರ ಬ್ರಾಂಡ್ ವಿಶ್ವದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ.

Caulier Ville Bon Secours: $750
ಈ ಬೀರ್ ದೊರೆಯುವುದು ಅಪರೂಪವಾದ್ದರಿಂದ ಇದು ದುಬಾರಿ ಬೀರ್ ಆಗಿದೆ. ಲಂಡನ್ ನಲ್ಲಿರುವ Belgo Bierodrome ಈ ರೀತಿಯ ದೊಡ್ಡ ಬಾರ್ ಗಳಲ್ಲಿ ಮಾತ್ರ ಇದು ದೊರೆಯಲು ಸಾಧ್ಯ.

Brewdog's End Of History: $765
ಸ್ಟ್ರಾಂಗ್ ಬೀರ್ ಗಳಲ್ಲಿ 3ನೇ ಸ್ಥಾನವನ್ನು ಈ ಬೀರ್ ಗೆ ಕೊಡಬಹುದು. ಇದು ವಿಶ್ವದ ದುಬಾರಿ ಬೀರ್ ಗಳಲ್ಲಿ ಎರಡನೇಯ ಸ್ಥಾನದಲ್ಲಿದೆ. ಕೇವಲ 12 ಬಾಟಲಿ ಬೀರ್ ಮಾತ್ರ ಲಭ್ಯವಿದೆ.

Nail Brewing's Antarctic Nail Ale: $815
ಇದು ಕೂಡ ಅತ್ಯಂತ ದುಬಾರಿಯಾಗಿದ್ದು ಇದುವವರೆಗೆ 30 ಬೀರ್ ಮಾತ್ರ ತಯಾರಿಸಲಾಗಿದೆ.



Click it and Unblock the Notifications