Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನಮ್ಮ ದೇಶದ ಟಾಪ್ 5 ಶ್ರೀಮಂತ ದೇಗುಲಗಳು
ಭಾರತದಲ್ಲಿ ಸಹಸ್ರಾರು ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ಕೆಲವೊಂದು ದೇವಾಲಯಗಳು ತುಂಬಾ ಐಶ್ವರ್ಯವನ್ನು ಹೊಂದಿದ್ದು, ನಮ್ಮ ರಕ್ಷಣೆಗೆ ನಾವು ದೇವರನ್ನು ಮೊರೆಯಿಟ್ಟರೆ, ಈ ದೇವಸ್ಥಾನಗಳಲ್ಲಿರುವ ಐಶ್ವರ್ಯದ ರಕ್ಷಣೆ ಮಾತ್ರ ಸರಕಾರದ ಮೇಲಿದೆ! ಭಾರತವನ್ನು ಬಡ ರಾಷ್ಟ್ರ ಎಂದು ಗುರುತಿಸಲಾಗಿದೆ, ಆದರೆ ಇಲ್ಲಿರುವ ದೇವಸ್ಥಾನಗಳಲ್ಲಿನ ಸಂಪತ್ತುಗಳನ್ನು ನೋಡುವಾಗ ಭಾರತವನ್ನು ಬಡ ರಾಷ್ಟ್ರ ಎಂದು ಕರೆಯುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಜನಸಾಮಾನ್ಯರ ಮನಸ್ಸಿನಲ್ಲಿ ಬರುವುದು ಸಹಜ.

ಭಾರತದ ಪ್ರತಿಯೊಂದು ದೇಗುಲಕ್ಕೆ ಭಕ್ತಾದಿಗಳ ಮುಖಾಂತರ ಹಣದ ರಾಶಿಯೇ ಬಂದು ಬೀಳುತ್ತದೆ, ಅದರಲ್ಲೂ ಈ ದೇಶದ ಅತ್ಯಂತ ಶ್ರೀಮಂತ ದೇಗುಲಗಳೆಂಬ ಕೀರ್ತಿ ಈ ಕೆಳಗಿನ ದೇವಾಲಯಗಳಿಗೆ ಲಭಿಸಿದೆ.
1. ಶ್ರೀ ಪದ್ಮನಾಭ ಸ್ವಾಮಿ: ತಿರುವನಂತಪುರದಲ್ಲಿರುವ ಈ ದೇವಾಲಯದಲ್ಲಿರುವ ಸಂಪತ್ತಿನ ರಾಶಿ ಹೊರ ಜಗತ್ತಿಗೆ ಗೊತ್ತಾಗುವವರೆಗೆ ಇದು ಅಷ್ಟೇನು ಹೆಸರು ಗಳಿಸಿರಲಿಲ್ಲ. ಯಾವಾಗ ಈ ದೇವಾಲಯದಲ್ಲಿ ಐಶ್ವರ್ಯಗಳ ಅಪಾರ ರಾಶಿಯನ್ನೇ ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ ಎಂದು ತಿಳಿಯಿತೊ, ತಿರುಪತಿ ತಿಮ್ಮಪ್ಪನ ಹಿಂದಿಕ್ಕಿ, ಈ ದೇವಾಲಯ ಅತ್ಯಂತ ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ಮೊದಲನೆ ಸ್ಥಾನವನ್ನು ಗಳಿಸಿತು. ಈ ದೇವಾಲಯವು ಸುಮಾರು 1,00,000 ಕೋಟಿಗಿಂತ ಅಧಿಕ ಬೆಲೆ ಬಾಳುವ ವಜ್ರ, ವೈಢೂರ್ಯಗಳನ್ನು ಹೊಂದಿದೆ.
2. ತಿರುಪತಿ ದೇವಾಲಯ: ತಿರುಪತಿ ತಿಮ್ಮಪ್ಪ ದೇವಾಲಯಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಭಕ್ತರು ಬೇಡಿದ ವರವನ್ನು ತಿರುಪತಿ ತಿಮ್ಮಪ್ಪ ನೀಡುತ್ತಾರೆ ಎಂಬ ಅಚಲ ನಂಬಿಕೆ ಭಕ್ತರಲ್ಲಿದೆ. ಪ್ರಪಂಚದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾದ ಅನಿಲ್ ಅಂಬಾನಿ, ಕರೋಡ್ ಪತಿ ಅಮಿತಾಬ್ ಬಚ್ಚನ್ ಹೀಗೆ ಅನೇಕ ಗಣ್ಯ ವ್ಯಕ್ತಿಗಳು ಈ ತಿರುಪತಿ ತಿಮ್ಮಪ್ಪನ ಭಕ್ತರುಗಳಲ್ಲಿ ಒಬ್ಬರಾಗಿದ್ದಾರೆ.
3. ಶಿರಡಿಸಾಯಿ ಬಾಬಾ: ಈ ದೇವಾಲಯವನ್ನು ಭಾರತದ ಅತೀ ಶ್ರೀಮಂತ ದೇವಾಲಯಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಫಕೀರ ಎಂದು ಜನಪ್ರಿಯ ಗಳಿಸಿದ್ದ ಶಿರಡಿ ಸಾಯಿಬಾಬಾರವರನ್ನು ಜನರು ತುಂಬ ಭಯ ಭಕ್ತಿಯಿಂದ ಪೂಜಿಸುತ್ತಾರೆ. ಈ ದೇವಾಲಯಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತಾದಿಗಳು ಬಂದು ಹೋಗುತ್ತಿರುತ್ತಾರೆ.
4. ಸಿದ್ಧಿ ವಿನಾಯಕ ದೇವಾಲಯ: ಮುಂಬಲಿಯಲ್ಲಿರುವ ಈ ದೇವಾಲಯಕ್ಕೆ ಖ್ಯಾತ ಬಾಲಿವುಡ್ ನಟ-ನಟಿಯರು, ಕ್ರಿಕೆಟ್ ತಾರೆಯರು ಭೇಟಿ ನೀಡುತ್ತಾ ಇರುತ್ತಾರೆ. ಇಲ್ಲಿ ಎಷ್ಟು ಸಂಪತ್ತು ಇದೆ ಎಂದು ಅಧಿಕೃತವಾಗಿ ಘೋಷಿಸಿಲ್ಲವಾದರೂ ಈ ದೇವಾಲಯ ಭಾರತದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿದೆ.
5. ಗೋಲ್ಡನ್ ಟೆಂಪಲ್: ಇದರ ಐಶ್ವರ್ಯ ಎಷ್ಟಿದೆ ಅನ್ನುವುದನ್ನು ಇದರ ಹೆಸರೇ ಸೂಚಿಸುತ್ತದೆ. ಪಂಜಾಬ್ ನಲ್ಲಿರುವ ಈ ದೇವಾಲಯವನ್ನು ಹರ್ಮಿಂದರ್ ಸಾಹಿಬ್ ಗುರುದ್ವಾರ ಎಂದು ಕರೆಯಲಾಗುತ್ತದೆ. ಈ ದೇವಾಲಯ ನೋಡುಗರನ್ನು ಬೆರಗುಗೊಳಿಸುವಷ್ಟು ಸೌಂದರ್ಯದಿಂದ ಕೂಡಿದೆ.



Click it and Unblock the Notifications
