Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನ್ಯೂ ಫ್ಯಾಷನ್ ಧಿರಿಸು - ಲೆಹಂಗಾ ಸ್ಯಾರಿ
ಫ್ಯಾಷನ್ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಇರುತ್ತದೆ. ಫ್ಯಾಷನ್ ಗೆ ತಕ್ಕಂತೆ ನಾವು ಕೂಡ ನಮ್ಮ ಉಡುಗೆ ತೊಡುಗೆಗಳನ್ನು ಬದಲಾಯಿಸಿಕೊಳ್ಳುತ್ತೇವೆ ಅಲ್ಲವೇ? ಅದರಲ್ಲೂ ನಟ-ನಟಿಯರ ಉಡುಗೆ ತೊಡುಗೆಗಳ ಸ್ಟೈಲ್ ಅನ್ನು ಚಾಲ್ತಿಗೆ ಬರುತ್ತವೆ. ಅದರಲ್ಲೂ ಪಾರ್ಟಿ ಹಾಗೂ ಮದುವೆ ಸಮಾರಂಭಗಳಿಲ್ಲಿ ಹೆಚ್ಚಿನವರು ಟ್ರೆಂಡ್ ಆಗಿರುವ ಡ್ರೆಸ್ ಗಳನ್ನೇ ಧರಿಸಿರುತ್ತಾರೆ.
ಒಂದು ಕಾಲದಲ್ಲಿ ಘಾಗ್ರ ತುಂಬಾ ಪ್ರಸಿದ್ಧಿಯನ್ನು ಪಡೆದಿತ್ತು. ಈಗ ಅದೇ ರೀತಿಯ ಸ್ಯಾರಿ ಈಗೀನ ಫ್ಯಾಷನ್ ಆಗಿದೆ. ಈ ಸ್ಯಾರಿ ಸ್ಟೈಲ್ ತಿಂಗಳ ಹಿಂದೆಯೇ ಬಂದಿದೆ. ಅದರಲ್ಲೂ ನಟಿ ಮಣಿಯರು ಈ ರೀತಿಯ ಸೀರೆಯನ್ನು ಉಟ್ಟು ಸಾಮಾನ್ಯ ಹೆಂಗಳೆಯರ ಮನವನ್ನು ಆ ಉಡುಗೆಯತ್ತ ಸೆಳೆಯುತ್ತಿದ್ದಾರೆ.
ಈ ಲೇಖನದಲ್ಲಿ ಲೆಹಂಗಾ ಸ್ಟೈಲ್ ನ ಸೀರೆಯಲ್ಲಿ ಗಮನ ಸೆಳೆದ ಕೆಲ ನಟಿಯರ ಬಗ್ಗೆ ಹೇಳಲಾಗಿದೆ ನೋಡಿ:

ಗೋಲ್ಡನ್ ಬಣ್ಣದ ಲೆಹಂಗಾ ಸೀರೆಯಲ್ಲಿ ಕತ್ರಿನಾ:
ಜಬ್ ತಕ್ ಹೇ ಜಾನ್ ಪ್ರೀಮಿಯರ್ ನಲ್ಲಿ ಕತ್ರಿನಾ ಲೆಹಂಗಾ ಸ್ಟೈಲ್ ನ ಸೀರೆಯಲ್ಲಿ ಮಿಂಚಿದರು. ಸ್ವಲ್ಪ ಮಾಡರ್ನ್ ಇಷ್ಟ ಪಡುವವರು ಕತ್ರಿನಾ ಡ್ರೆಸ್ ಮಾಡಿದಂತೆ ಮಾಡಬಹುದು.

ಮತ್ಸ್ಯ ಕನ್ಯೆ:
ಈ ಲೆಹಂಗಾ ಸೀರೆಯಲ್ಲಿ ಪ್ರೀತಿ ಜಿಂಟಾ ಮತ್ಸ್ಯ ಕನ್ಯೆಯಂತೆ ಕಂಗೊಳಿಸುತ್ತಾಳೆ. ಈ ರೀತಿಯಲ್ಲಿ ಫಂಕ್ಷನ್ ಗೆ ಹೋಗುವಾಗ ಧರಿಸಿದರೆ ಆಕರ್ಷಕವಾಗಿ ಕಾಣುವಿರಿ.

ಕೆಂಪು ಸೀರೆಯ ಚೆಲುವೆ :
ಗೋಲ್ಡನ್ ಬಣ್ಣದ ಸೆರಗು ಹೊಂದಿರುವ ಕೆಂಪು ಸೀರೆಯಲ್ಲಿ ಮಂದಿರಾ ಬೇಡಿ ತುಂಬಾ ಆಕರ್ಷಕವಾಗಿ ಕಾಣುತ್ತಾಳೆ. ಚೆಲುವಿಯ ಸೌಂದರ್ಯದ ಮೆರುಗನ್ನು ಹೆಚ್ಚಿಸುವಂತೆ ಈ ಸೀರೆಯನ್ನು ವಿನ್ಯಾಸಗೊಳಿಸಲಾಗಿದೆ.

ಮುಮ್ತಾಜ್ ಸ್ಟೈಲ್ ನಲ್ಲಿ ಲೆಹಂಗಾ ಸೀರೆ:
ನೀಲಿ ಬಣ್ಣದ ಲೆಹಂಗಾ ಸೀರೆಯನ್ನು ಗೌರಿಖಾನ್ 70ರ ಸ್ಟೈಲ್ ನಲ್ಲಿ ಉಡುತ್ತಿದ್ದ ಮುಮ್ತಾಜ್ ಸ್ಟೈಲ್ ನಲ್ಲಿ ಧರಿಸಿ ಗಮನ ಸೆಳೆದರು.

ಬ್ಲ್ಯಾಕ್ ಬ್ಯೂಟಿ:
ಬಿಪಾಶ ಬಸು ಕಪ್ಪು ಬಣ್ಣದ ಈ ಲೆಹಂಗಾ ಸೀರೆಯನ್ನು ನೋಡಿ. ನೋಡಲು ಲಂಗ ದಾವಣಿಯಂತೆ ತೋರುವ ಈ ಲೆಹಂಗಾ ಸೀರೆಯನ್ನು ಧರಿಸಿದರೆ ಮೈಮಾಟ ತುಂಬಾ ಆಕರ್ಷಕವಾಗಿ ಕಾಣುವುದು.

ನೆಟ್ ಸ್ಯಾರಿ:
ಈ ಲೆಹಂಗಾ ಸ್ಯಾರಿಯನ್ನು ನೆಟ್ ಸ್ಯಾರಿಯಂತೆ ವಿನ್ಯಾಸಗೊಳಿಸಲಾಗಿದೆ. ಈ ರೀತಿಯ ಸೀರೆಯನ್ನು ಧರಿಸಿದರೆ ಸೆಕ್ಸಿ ಲುಕ್ ನಿಂದ ಆಕರ್ಷಕವಾಗಿ ಕಾಣುವಿರಿ.

ಕ್ರೀಮ್ ಬಣ್ಣದ ಲೆಹಂಗಾ ಸ್ಯಾರಿ:
ಮಾಡರ್ನ್ ಡ್ರೆಸ್ ಮಾಡಬಯಸುವವರು ಲೆಹಂಗಾ ಸ್ಯಾರಿಯನ್ನು ಜರೀನಾ ಖಾನ್ ಧರಿಸಿರುವಂತೆ ಧರಸಬಹುದು. ಈ ರೀತಿಯಲ್ಲಿ ಸ್ಯಾರಿಯನ್ನು ಪಾರ್ಟಿಗಳಿಗೆ ಹೋಗುವಾಗ ಧರಿಸಬಹುದು.

ಆಕಾಶ ನೀಲಿ ಬಣ್ಣದ ಲೆಹಂಗಾ ಸೀರೆ:
ರಿಯಾಸೇನ್ ಧರಿಸಿರುವ ಈ ಧಿರಿಸನ್ನು ನೋಡಿ. ಮದುವೆ ಸಮಾರಂಭಗಳಿಗೆ ಹೋಗುವಾಗ ಈ ರೀತಿ ಡ್ರೆಸ್ ಮಾಡಿಕೊಂಡರೆ ಆಕರ್ಷಕವಾಗಿ ಕಾಣುವುದು.



Click it and Unblock the Notifications
