Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ರಾದ್ಧಾಂತಕ್ಕೆ ಕಾರಣವಾದ ಸೆಲೆಬ್ರಿಟಿಗಳ ಹಚ್ಚೆ!
ಟ್ಯಾಟೂ (ಹಚ್ಚೆ ಹಾಕುವುದು) ಹಾಕುವುದು ನಮ್ಮಲ್ಲಿ ಕಂಡು ಬರುವ ಸಂಪ್ರದಾಯ ಆದರೆ ಈಗೀನ ನಮ್ಮ ಯುವ ಜನತೆಗೆ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್ ಆಗಿ ಬಿಟ್ಟಿದೆ. ತನ್ನ ಪ್ರೇಮಿಯ ಹೆಸರನ್ನು ಹಾಕಿಸಿಕೊಳ್ಳುವುದು, ಚಿತ್ರ-ವಿಚಿತ್ರವಾದ ಹಚ್ಚೆಗಳನ್ನು ಹಾಕಿಸಿಕೊಳ್ಳುವುದನ್ನು ಕಾಣಬಹುದು. ಹಚ್ಚೆ ಹಾಕಿಸಿಕೊಳ್ಳುವ ಟ್ರೆಂಡ್ ಸೆಲೆಬ್ರಿಟಿಗಳಲ್ಲಿ ಜೋರಾಗಿಯೇ ಇದೆ.
ಅದರಲ್ಲೂ ಕೆಲ ಸೆಲೆಬ್ರಿಟಿಗಳು ಹಾಕಿಸಿದ ಹಚ್ಚೆಯಂತೂ ಭಾರೀ ಸುದ್ದಿಗೆ ಕಾರಣವಾಗಿತ್ತು. ಆ ಸೆಲೆಬ್ರಿಟಿಗಳು ಯಾರು? ಈ ರೀತಿ ಸುದ್ದಿಗೆ ಮಾಡಲು ಅವರು ಹಾಕಿಸಿದ ಟ್ಯಾಟೂವಿನ ವಿಶೇಷವಾದರೂ ಏನು? ಎಂದು ತಿಳಿಯಲು ಮುಂದೆ ಓದಿ.

ದೀಪಿಕಾ ಪಡುಕೋಣೆ: ರಣಬೀರ್ ಕಪೂರ್ ಮತ್ತು ದೀಪಿಕಾ ಪಡಕೋಣೆ ಇಬ್ಬರ ಲಲ್ವಿ-ಡುವ್ವಿಯ ಕುರಿತು ಸುದ್ದಿಗಳು ಕೇಳಿ ಬರುತ್ತಾ ಇದ್ದವು. ಲವ್ ಬರ್ಡ್ಸ್ ಗಂತೆ ಹಾರಾಡುತ್ತಿದ್ದ ಈ ಜೋಡಿಯ ಮಧ್ಯೆ ಯಾವ ಅಪಸ್ವರ ಎದ್ದಿತೋ ಗೊತ್ತಿಲ್ಲ, ಇವರ ಲವ್ ಮುರಿದು ಬಿತ್ತು ಎಂಬ ಸುದ್ದಿ ಕೇಳಿಬಂತು. ಆದರೆ ಇವರ ಲವ್ ಮುರಿದು ಬಿದ್ದ ಸುದ್ದಿಗಿಂತ ಹೆಚ್ಚು ಗಾಸಿಪ್ ಕೇಳಿ ಬಂದಿದ್ದು ದೀಪಿಕಾಳ ಮೈಯಲ್ಲಿದ್ದ ಹಚ್ಚೆ ಬಗ್ಗೆ. ಇದರ ವಿಶೇಷ ಏನಪ್ಪಾ ಅಂದರೆ, ರಣಬೀರ್ ಕಪೂರ್ ಜೊತೆ ಪ್ರೇಮದಲ್ಲಿದ್ದಾಗ ದೀಪಿಕಾ ಹಾಕಿಸಿದ್ದ ಹಚ್ಚೆಯನ್ನು, ಪ್ರೀತಿ ಮುರಿದು ಬಿದ್ದ ಮೇಲೂ ಪ್ರೇಮದ ನೆನಪಿಗಾಗಿ ಉಳಿಸಿಕೊಂಡಿರುವುದು! ಜಗತ್ತಿನಲ್ಲಿ ನೂರೆಂಟು ಸಮಸ್ಯೆಗಳಿವೆ, ಅವುಗಳನ್ನು ಪರಿಹರಿಸುವ ಬಗ್ಗೆ ಯೋಚಿಸದೆ ದೀಪಿಕಾ ತನ್ನ ಪ್ರೀತಿಯ ನೆನಪಿಗಾಗಿ ಉಳಿಸಿಕೊಂಡ ಆ ಹಚ್ಚೆ ಬೇರೆಯವರಿಗೆ ಚರ್ಚೆಯ ವಿಷಯವಾಗಿದೆ. ಇದನ್ನೇ ಹೇಳುವುದು ವಿಪರ್ಯಾಸ!
ಮಂದಿರಾ ಬೇಡಿ: ಅಪೂರ್ವ ಚೆಲುವಿನಿಂದ ಪಡ್ಡೆ ಹುಡುಗರ ಮನಗೆದ್ದ ಮಂದಿರಾ ಬೇಡಿ, ವರ್ಲ್ಡ್ ಕಪ್ ಕ್ರಿಕೆಟ್ ನಲ್ಲಿ ನಿರೂಪಣೆ ಮಾಡಿ ಮತ್ತಷ್ಟು ಪ್ರಸಿದ್ಧಿಯನ್ನು ಪಡೆದಳು. ಈ ನಟಿ ಹಾಕಿಸಿದ್ದ ಹಚ್ಚೆ ಮಾತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತು. ತನ್ನ ಬೆನ್ನಿನಲ್ಲಿ ಸಿಕ್ ಧರ್ಮದ ಸಂಕೇತವಾದ ಹಚ್ಚೆಯನ್ನು ಹಾಕಿಸಿಕೊಂಡು, ಸಿಖ್ ಧರ್ಮದವರ ಕೋಪಕ್ಕೆ ಗುರಿಯಾದಳು ಅಲ್ಲದೆ ಸಿಖ್ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದ ಕ್ಷಮೆ ಕೇಳಬೇಕಾಯಿತು. ನಂತರ ಟಿಬೆಟ್ ಭಾಷೆಯ ಓಂ ಅಕ್ಷರವನ್ನು ತನ್ನ ಸೊಂಟದ ಕೆಳಗ್ಗೆ ಹಾಕಿಸಿಕೊಂಡು ಮತ್ತೊಮ್ಮೆ ಜನರ ಕೋಪಕ್ಕೆ ಗುರಿಯಾದಳು.
ಸೈಫ್ ಅಲಿ ಖಾನ್: ಲವ್, ಬ್ರೇಕ್ ಅಪ್ ಅನ್ನುವುದು ನಟ, ನಟಿಯರ ಜೀವನದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಸೈಫ್ ಅಲಿಖಾನ್ ಹಾಕಿಸಿದ ಹಚ್ಚೆ ಜನರಲ್ಲಿ ಅಚ್ಚರಿ ಮತ್ತು ಗಾಸಿಪ್ ಗೆ ಕಾರಣವಾಯಿತು. ಸೈಫ್ ಅಲಿಖಾನ್ ಗೆ ಅಮೃತಾ ಸಿಂಗ್ ಜೊತೆ ಪ್ರೇಮ ವಿವಾಹವಾಗಿ. ಈ ದಂಪತಿಗಳಿವೆ ಎರಡು ಮಕ್ಕಳಿವೆ. ಆದರೆ ಶಾಹಿದ್ ಕಪೂರ್ ಜೊತೆ ಕರೀನಾಳಗಿದ್ದ ಪ್ರೇಮವು ಮುರಿದು ಬಿದ್ದ ನಂತರ ಭಗ್ನ ಪ್ರೇಮಿಯಾಗಿದ್ದ ಕರೀನಾ ಮತ್ತು ವಿವಾಹಿತನಾಗಿರುವ ಸೈಫ್ ಅಲಿಖಾನ್ ನಡುವೆ ಪ್ರೇಮ ಶುರುವಾಗಿದೆ ಎಂಬ ಗಾಸಿಪ್ ಗಳು ಕೇಳಿ ಬರಲಾರಂಭಿಸಿದೆವು. ಆದರೆ ಸೈಫ್ ಅಲಿಖಾನ್ ಹಿಂದಿ ಭಾಷೆಯಲ್ಲಿ ಕರೀನಾ ಎಂದು ಬರೆಸಿದ್ದ ಹಚ್ಚೆಯಿಂದ ಕರೀನಾ ಮತ್ತು ಸೈಫ್ ಅಲಿಖಾನ್ ಸಂಬಂಧದ ಬಗ್ಗೆ ಇದ್ದ ಗಾಸಿಪ್ ಗೆ ಮತ್ತಷ್ಟು ಪುರಾವೆ ದೊರಕಿತು.
ನಯನತಾರಾ: ನಯನತಾರ ಮತ್ತು ಪ್ರಭುದೇವ್ ನಡುವೆ ಸಂಬಂಧವಿದೆ ಎಂಬ ಗಾಸಿಪ್ ಗಳು ಕೇಳಿ ಬರುತ್ತಿದ್ದವು. ಈ ಗಾಸಿಪ್ ಗಳು ನಿಜವೆಂದು ಸಾಬೀತಾಗಿದ್ದು ನಯನತಾರಾ ತನ್ನ ಪ್ರೇಮಿಯ ಬಗ್ಗೆ ಹಚ್ಚೆ ಹಾಕಿಸಿಕೊಂಡಾಗ. ನಯನತಾರಾ ತನ್ನ ಕೈಯಲ್ಲಿ ಇಂಗ್ಲೀಷ್ ಮತ್ತು ತಮಿಳಿನಲ್ಲಿ 'ಪ್ರಭುದೇವ' ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಈಗ ಇವರಿಬ್ಬರ ಲವ್ ಬ್ರೇಕ್ ಅಪ್ ಆಗಿದೆ. ಪಡುಕೋಣೆ ತರಹ ತನ್ನ ಪ್ರೇಮ ಕುರುಹಾಗಿ ಈ ಮಚ್ಚೆಯನ್ನು ಉಳಿಸಿಕೊಳ್ಳಬಹುದೇ ಅನ್ನುವುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.



Click it and Unblock the Notifications