Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಇಷ್ಟಪಡದೆ ಕೆಲಸ ಮಾಡಿದರೆ ಸಾಧನೆ ಸಾಧ್ಯವಿಲ್ಲ!

ಕೆಲಸ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಕೆಲಸ ಮಾಡುತ್ತಿರುತ್ತಾರೆ. ಆದರೆ ಇಷ್ಟಪಟ್ಟ ಕೆಲಸ ಸಿಗಲಿಲ್ಲ ಎಂಬ ಕೊರಗು ಮಾತ್ರ ಇದ್ದೆ ಇರುತ್ತದೆ. ಆದರೆ ಹಾಗೆ ಕೊರಗುವುದರಿಂದ ಏನೂ ಪ್ರಯೋಜನವಿಲ್ಲ. ಸಿಕ್ಕಿದ ಕೆಲಸವನ್ನು ಇಷ್ಟಪಡುವುದು ಜಾಣರ ಲಕ್ಷಣ. ಇಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಏನಾದರು ಸಾಧಿಸಲು ಸಾಧ್ಯ.
ಈ ಕೆಳಗೆ ಹೇಳಿರುವ ಅಂಶಗಳನ್ನು ಓದಿ ಅದರ ಬಗ್ಗೆ ಕೆಲ ನಿಮಿಷ ಯೋಚಿಸಿ, ಇಷ್ಟವಿಲ್ಲದ ಕೆಲಸವನ್ನು ಮುಂದೆ ಇಷ್ಟಪಟ್ಟು ಮಾಡಲಾರಂಭಿಸುವಿರಿ.
ಕೆಲಸದ ಅವಶ್ಯಕತೆ: ನಿಮ್ಮ ಕಷ್ಟಕಾಲದಲ್ಲಿ ನೆರವಿಗೆ ಬಂದಿರುವುದು ಈ ಇಷ್ಟವಿಲ್ಲದ ಕೆಲಸ ಹೊರತು ಇಷ್ಟ ಪಟ್ಟ ಕೆಲಸವಲ್ಲ. ಯಾವುದೇ ಕೆಲಸವಾಗಿರಲಿ ಅದರ ಬಗ್ಗೆ ಗೌರವಿದ್ದರೆ ಮಾತ್ರ ಆ ಕೆಲಸದಲ್ಲಿ ಯಶಸ್ವು ಕಾಣಬಹುದು.
ಭವಿಷ್ಯದ ಬಗ್ಗೆ: ಭವಿಷ್ಯದ ಬಗ್ಗೆ ಭದ್ರತೆ ಬೇಕೆಂದರೆ ಈಗ ಇರುವ ಕೆಲಸವನ್ನು ಇಷ್ಟಪಡಲು ಪ್ರಾರಂಭಿಸಬೇಕು. ಆದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಇರುವ ಕೆಲಸದಲ್ಲಿ ಹಂತ ಹಂತವಾಗಿ ಮೇಲೆ ಬರಲು ಪ್ರಯತ್ನಿಸಬೇಕು.
ಅಡಚಣೆ: ಕೆಲಸ ಜಾಗದಲ್ಲಿ ಸಹೋದ್ಯೋಗಿಗಳು ನಿಮ್ಮೊಡನೆ ಸರಿಯಿಲ್ಲದದ್ದರೆ, ಹೊಟ್ಟೆಕಿಚ್ಚು ಸ್ವಭಾವದವರಾದರೆ ಅಂತಹವರನ್ನು ದೂರವಿಡುವುದು ಒಳ್ಳೆಯದು. ಏಕೆಂದರೆ ಇಂತಹವರಿಂದ ನಾವು ಮಾಡುವ ಕೆಲಸಕ್ಕೆ ಅಡಚಣೆ ಉಂಟಾಗುವುದು. ಅಂತಹವರ ಜೊತೆ ನೇರವಾಗಿ ಹೇಳದೆ ಎಷ್ಟು ಬೇಕೊ ಅಷ್ಟು ಮಾತ್ರ ಮಾತನಾಡಿದರೆ ಒಳ್ಳೆಯದು.
ಹಣ: ಯಾವುದೇ ಕೆಲಸವಾಗಿರಲಿ, ಎಲ್ಲರು ದುಡಿಯುವುದು ಹಣಕ್ಕಾಗಿ. ಇಷ್ಟ ಪಟ್ಟಿದ್ದ ಕೆಲಸದಿಂದ ಸಿಗುವುದು ಹಣ, ಇದರಿಂದ ಸಿಗುತ್ತಿರುವುದು ಹಣ ಎಂದು ಯೋಚಿಸಿ ಮನಸ್ಸಿಗೆ ಸಮಧಾನ ತಂದುಕೊಳ್ಳಬೇಕು.
ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು: ಎಲ್ಲರೊಡನೆ ಬೆರೆಯುವ ಸ್ವಭಾವ ಬೆಳೆಸಿಕೊಳ್ಳಬೇಕು. ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸಿದರೆ ಅದರಿಂದ ಸಿಗುವ ಪ್ರತಿಫಲ ಕೂಡ ಉತ್ತಮವಾಗಿರುತ್ತದೆ.



Click it and Unblock the Notifications
