Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಶ್ರಾವಣ ಸೋಮವಾರ ಈ ಮಂತ್ರಗಳನ್ನು ಪಠಿಸಿ
ಶ್ರಾವಣದಲ್ಲಿ ಸೃಷ್ಟಿಯ ಜವಾಬ್ದಾರಿಯನ್ನು ಈ ಅವಧಿಯಲ್ಲಿ ಶಿವನು ತೆಗೆದುಕೊಂಡಿರುತ್ತಾನೆ. ಈ ಸಮಯದಲ್ಲಿ ಶಿವನ ಆರಾಧನೆ ಮಾಡುವುದರಿಂದ ಹೆಚ್ಚಿನ ಕೃಪೆ ದೊರೆಯಲಾಗುವುದು. ಆದ್ದರಿಂದ ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.
ಪಾರ್ವತಿ ದೇವಿ ಶಿವನನ್ನು ವರಿಸಲು ಶ್ರಾವಣ ಮಾಸದಲ್ಲಿ ಕಠಿಣ ಉಪವಾಸ ಮಾಡಿದಳು. ಶಿವ ಪಾರ್ವತಿಯ ತಪಸ್ಸನ್ನು ಮೆಚ್ಚಿ ಪಾರ್ವತಿಯನ್ನು ಮದುವೆಯಾದ ಎಂಬ ಪೌರಾಣಿಕ ಕತೆಯಿದೆ. ಈ ಅವಧಿಯಲ್ಲಿ ಉಪವಾಸ ಹಾಗೂ ವ್ರತ ನಿಯಮಗಳನ್ನು ಪಾಲಿಸಿ ಶಿವನನ್ನು ಪ್ರಾರ್ಥಿಸಿದರೆ ಇಷ್ಟಾರ್ಥ ನೆರವೇರುವುದು ಎಂಬ ನಂಬಿಕೆ ಇದೆ. ಈ ವರ್ಷ ಶಿವ ಭಕ್ತರಿಗೆ ತುಂಬಾನೇ ವಿಶೇಷವಾಗಿದೆ, ಸುಮಾರು 19 ವರ್ಷಗಳ ಬಳಿಕ ಈ ವರ್ಷದ ಶ್ರಾವಣ ಮಾಸ ವಿಶೇಷವಾಗಿದೆ. ಈ ವರ್ಷ ಶ್ರಾವಣ ಮಾಸ ಏಕೆ ವಿಶೇಷವಾಗಿದೆ ಎಂದು ನೋಡೋಣ ಬನ್ನಿ:

2023ರಲ್ಲಿ ಶ್ರಾವಣ ಮಾಸ ಎರಡು ತಿಂಗಳು ಇದೆ
ಈ ವರ್ಷ ಶ್ರಾವಣ ಮಾಸ ಜುಲೈ 18ಕ್ಕೆ ಶುರುವಾಗಿದೆ, ಸೆಪ್ಟೆಂಬರ್ 15ಕ್ಕೆ ಮುಕ್ತಾಯ. ಈ ವರ್ಷ ಅಧಿಕ ಮಾಸ ಇರುವುದರಿಂದ ಶ್ರಾವಣ ಮಾಸ ದೀರ್ಘವಾಗಿದ್ದು 8 ಶ್ರಾವಣ ಸೋಮವಾರ ಸಿಗಲಿದೆ.
ಶ್ರಾವಣ ಸೋಮವಾರದ ದಿನಾಂಕಗಳು
ಜುಲೈ 24
ಜುಲೈ 31
ಆಗಸ್ಟ್ 7
ಆಗಸ್ಟ್ 14
ಆಗಸ್ಟ್ 21
ಆಗಸ್ಟ್ 28
ಸೆಪ್ಟೆಂಬರ್ 4
ಸೆಪ್ಟೆಂಬರ್ 11
ಶ್ರಾವಣ ಮಾಸದಲ್ಲಿ ಶಿವ ಭಕ್ತರು ಪಾಲಿಸುವ ವ್ರತ ನಿಯಯಮಗಳು
- ಮಾಂಸಾಹಾರ ಸೇವನೆ ಮಾಡವುದಿಲ್ಲ
- ಪ್ರತಿ ಶ್ರಾವಣ ಸೋಮವಾರದಂದು ಉಪವಾಸವಿದ್ದು ಶಿವನಿಗೆ ಅಭಿಷೇಕ ಮಾಡಿಸುತ್ತಾರೆ.
- ಜೇನುತುಪ್ಪ, ಹಾಲು, ತುಪ್ಪ, ಸಕ್ಕರೆ, ಮೊಸರಿನಿಂದ ಅಭಿಷೇಕ ಮಾಡಲಾಗುವುದು
- ಭಕ್ತರು ಬಿಲ್ವಪತ್ರೆ ಎಲೆಗಳನ್ನು ಶಿವನಿಗೆ ಅರ್ಪಿಸುತ್ತಾರೆ
- ಶಿವನ ಮಂತ್ರಗಳ ಪಠಣೆ ಮಾಡುತ್ತಾರೆ.
ಶಿವ ಮಂತ್ರಗಳು
1.ಪಂಚಾಕ್ಷರಿ ಮಂತ್ರ
ಓಂ ನಮಃ ಶಿವಾಯಃ
2. ಮಹಾ ಮೃತ್ಯುಂಜಯ ಮಂತ್ರ
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಂವಾ ಬಂಧನಾ ಮೃತ್ಯೋರ್-ಮುಕ್ಷೀಯ ಮಾಮೃತಾತ್||
3. ರುದ್ರ ಮಂತ್ರ
ಓಂ ನಮೋ ಭಗವತೇ ರುದ್ರಾಯ
4. ಶಿವ ಗಾಯತ್ರಿ
ಮಂತ್ರ ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಯೇ ಧೀಮಹಿ ತನ್ನಃ ಶಿವಃ ಪ್ರಚೋದಯಾತ್ ।
ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು
ಶ್ರಾವಣ ಮಾಸದಲ್ಲಿ ನಾಗ ಪಂಚಮಿ, ವರಲಕ್ಷ್ಮಿ ವ್ರತ, ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಟಮಿ ಮುಂತಾದ ಪ್ರಮುಖ ಹಬ್ಬಗಳನ್ನು ಆಚರಿಸಲಾಗುವುದು



Click it and Unblock the Notifications
