Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಆರೋಗ್ಯ ಚೆನ್ನಾಗಿರಬೇಕಂದ್ರೆ ಅಪ್ಪಿ-ತಪ್ಪಿಯೂ ಈ ವಾಸ್ತು ದೋಷಗಳು ಆಗ್ಬಾದ್ರು!
ಆರೋಗ್ಯವೇ ಭಾಗ್ಯ ಅಂತಾರೆ ಮನುಷ್ಯನಿಗೆ ಆರೋಗ್ಯ ತುಂಬಾನೇ ಮುಖ್ಯ. ನಮ್ಮಲ್ಲಿ ಆರೋಗ್ಯದ ಹೊರತಾಗಿ ಎಷ್ಟೇ ಹಣ, ಆಸ್ತಿ, ಸಂಪತ್ತು ಇದ್ರೂ ಕೂಡ ಅದು ವ್ಯರ್ಥವೇ ಸರಿ. ಕೋಟ್ಯಾಂತರ ರೂಪಾಯಿ ದುಡ್ಡಿದ್ದರೂ ಕೂಡ ಅದರಿಂದ ಆರೋಗ್ಯವನ್ನು ಕೊಂಡುಕೊಳ್ಳೋದಕ್ಕೆ ಖಂಡಿತ ಸಾಧ್ಯವಿಲ್ಲ.

ಆದರೆ ಕೆಲವೊಂದು ಸಾರಿ ನಾವು ಎಷ್ಟೇ ಹುಷಾರಾಗಿದ್ದರೂ ಕೂಡ ಪದೇ ಪದೇ ನಮ್ಮ ಆರೋಗ್ಯ ಕೈ ಕೊಡುತ್ತಲೇ ಇರುತ್ತದೆ. ಅಷ್ಟೇ ಅಲ್ಲದೇ ಕುಟುಂಬಸ್ಥರ ಆರೋಗ್ಯದಲ್ಲೂ ಆಗಾಗ್ಗೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಇದಕ್ಕೆಲ್ಲಾ ವಾಸ್ತುವು ಕೂಡ ಒಂದು ರೀತಿಯಲ್ಲಿ ಕಾರಣ ಅಂದ್ರೆ ತಪ್ಪಾಗೋದಿಲ್ಲ.
ಕೆಲವೊಂದು ಸಾರಿ ನಮ್ಮ ಮನೆಯಲ್ಲಿ ವಾಸ್ತು ಸಮಸ್ಯೆಗಳಾದಾಗ ಈ ರೀತಿ ಮನೆಯಲ್ಲಿ ಯಾರದ್ದಾದರೂ ಆರೋಗ್ಯ ಕೈ ಕೊಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆಗ ವಾಸ್ತು ದೋಷಕ್ಕೆ ಪರಿಹಾರ ಮಾಡಿದ್ರೆ ಎಲ್ಲವೂ ಸರಿಯಾಗುತ್ತದೆ. ಅಷ್ಟಕ್ಕೂ ಆರೋಗ್ಯಕ್ಕೆ ಸಂಬಂಧಿಸಿದಂತೆ ವಾಸ್ತುವಿನಲ್ಲಿರುವ ಪರಿಹಾರಗಳು ಯಾವುದು ಅನ್ನೋದನ್ನು ತಿಳಿಯೋಣ.
ವಾಸ್ತು ಶಾಸ್ತ್ರದ ಪ್ರಕಾರ ಇದು ತುಂಬಾನೇ ಮುಖ್ಯ!
ನಿಮ್ಮ ಮನೆಯ ಮುಖ್ಯ ಬಾಗಿಲು ಮುರಿದಿದ್ದರೆ ಅಥವಾ ಇನ್ನಾವುದೇ ರೀತಿಯ ದೋಷ ಕಂಡುಬಂದರೆ ಅದನ್ನು ಆದಷ್ಟು ಬೇಗ ಸರಿಪಡಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಹೊರಗಿರುವ ಲಕ್ಷ್ಮಿ ಮತ್ತೆ ಬರುತ್ತಾಳೆ ಎಂಬ ನಂಬಿಕೆಯಿದೆ. ವಾಸ್ತು ಶಾಸ್ತ್ರದಲ್ಲಿ ಅಂತಹ ದೋಷಗಳು ಮನೆಯ ಕುಟುಂಬ ಸದಸ್ಯರೊಂದಿಗೆ ಸಂಬಂಧ ಹೊಂದಿರುತ್ತೆ ಅಂತ ಹೇಳಲಾಗುತ್ತದೆ.
ವಾಸ್ತು ಪ್ರಕಾರ ಮುಖ್ಯ ದ್ವಾರದಲ್ಲಿ ಯಾವುದೇ ರೀತಿಯ ದೋಷ ಕಂಡುಬಂದರೆ ಕುಟುಂಬದ ಸದಸ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ, ಮನೆಯಲ್ಲಿ ಜಗಳದ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ.
ಮನೆಯ ಮಧ್ಯಭಾಗದಲ್ಲಿ ಈ ವಸ್ತುಗಳನ್ನು ಇಡಬೇಡಿ!
ಆರೋಗ್ಯ ಜ್ಯೋತಿಷ್ಯದ ಪ್ರಕಾರ ಭಾರವಾದ ವಸ್ತುಗಳನ್ನು ಮನೆಯ ಮಧ್ಯದಲ್ಲಿ ಇಡಬಾರದು. ಏಕೆಂದರೆ ಮನೆಯ ಮಧ್ಯಭಾಗವನ್ನು ಬ್ರಹ್ಮನ ಸ್ಥಾನವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ ಮನೆಯ ಮಧ್ಯಭಾಗ ಯಾವಾಗಲೂ ಖಾಲಿ ಇರಬೇಕು. ಅಷ್ಟೇ ಅಲ್ಲದೇ ಅಲ್ಲಿ ಸ್ವಚ್ಛತೆಯನ್ನೂ ಕಾಪಾಡಬೇಕು. ಮನೆಯ ಮಧ್ಯಭಾಗದಲ್ಲಿ ಯಾವುದೇ ವಸ್ತುವನ್ನು ಇಡುವುದರಿಂದ ಮನೆಯ ಸದಸ್ಯರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಮನೆಯಲ್ಲಿ ಒಡೆದ ವಸ್ತುಗಳನ್ನು ಇಡಬೇಡಿ!
ವಾಸ್ತು ಶಾಸ್ತ್ರದ ಪ್ರಕಾರ ಮನಯಲ್ಲಿ ಒಡೆದ ಗಾಜು, ಒಡೆದ ವಸ್ತುಗಳು, ನಿಂತು ಹೋದ ಗಡಿಯಾರ ಇತ್ಯಾದಿಗಳನ್ನು ಎಂದಿಗೂ ಮನೆಯಲ್ಲಿ ಇಡಬಾರದು. ಈ ರೀತಿ ಮಾಡುವುದರಿಂದ ಮನೆಯ ಸದಸ್ಯರ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಅಂತ ಹೇಳಲಾಗುತ್ತದೆ. ಅಷ್ಟೇ ಅಲ್ಲದೇ, ಆರ್ಥಿಕ ಮುಗ್ಗಟ್ಟು ಕೂಡ ಎದುರಿಸಬೇಕಾಗುತ್ತದೆ.
ನೀವೇನಾದರೂ ನಿಮ್ಮ ಕುಟುಂಬದವರ ಆರೋಗ್ಯದ ಕಾಳಜಿ ಮಾಡಲು ಬಯಸಿದರೆ ಎಂದಿಗೂ ಮನೆಯಲ್ಲಿ ಅನುಪಯುಕ್ತ ವಸ್ತುಗಳನ್ನು ಅಥವಾ ಅನಗತ್ಯ ವಸ್ತುಗಳನ್ನು ಇಡಬೇಡಿ ಎಂದು ವಾಸ್ತು ಹೇಳುತ್ತದೆ. ಮನೆಯಲ್ಲಿ ಸಂಜೆಯ ಹೊತ್ತಿಗೆ ಕರ್ಪೂರವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತಂತೆ.
ಆರೋಗ್ಯವಾಗಿರಲು ಈ ವಾಸ್ತು ಟಿಪ್ಸ್ ಫಾಲೋ ಮಾಡಿ!
* ನಿಮ್ಮ ಆರೋಗ್ಯಕ್ಕಾಗಿ ನೀವು ಯಾವಾಗಲೂ ಮನೆಯ ಈಶಾನ್ಯ ಮೂಲೆಯಲ್ಲಿ ದೀಪ ಅಥವಾ ಮೇಣದಬತ್ತಿಯನ್ನು ಬೆಳಗಿಸಿ ಇಡಬೇಕು.
* ನಿಮ್ಮ ಮಾನಸಿಕ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಲು ಅಧ್ಯಯನ ಮಾಡುವಾಗ ನಿಮ್ಮ ಮುಖವನ್ನು ಉತ್ತರ ಅಥವಾ ಪೂರ್ವಕ್ಕೆ ಇರಿಸಿ.
* ಮನೆಯ ಸುತ್ತ-ಮುತ್ತ ಸಸ್ಯಗಳನ್ನು ನೆಡಿ. ಇದರಿಂದ ಮನೆಯಲ್ಲಿ ಶಾಂತ ಮತ್ತು ಶುದ್ಧ ವಾತಾವರಣವಿರುತ್ತದೆ. ಇದರಿಂದಾಗಿ ನೀವು ಆರೋಗ್ಯಕರ ಮತ್ತು ಚಿಂತೆ-ಮುಕ್ತ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
* ಉತ್ತಮ ನಿದ್ರೆಗಾಗಿ ನಿಮ್ಮ ಮಲಗುವ ಕೋಣೆಯಲ್ಲಿ ಲ್ಯಾವೆಂಡರ್ ಸಸ್ಯವನ್ನು ಸಹ ಇರಿಸಬಹುದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.
* ನೀವು ಮನೆ ಕಟ್ಟುವುದಾದರೆ ನೈಋತ್ಯ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸಲು ಮರೆಯದಿರಿ. ಇದು ಸಾಧ್ಯವಾಗದಿದ್ದರೆ ಅಗ್ನಿ ದೇವನನ್ನು ಮೆಚ್ಚಿಸಲು ಒಲೆಯನ್ನು ಪೂರ್ವ ದಿಕ್ಕಿನಲ್ಲಿ ಇರಿಸಿ.
* ನಿಮ್ಮ ತಲೆಯು ದಕ್ಷಿಣ ದಿಕ್ಕಿಗೆ ಇರುವಂತೆ ಮಲಗಿ ಏಕೆಂದರೆ ಅದು ನಿಮಗೆ ಉತ್ತಮ ನಿದ್ರೆಯನ್ನು ನೀಡುತ್ತದೆ.
ನಿಮ್ಮ ಆರೋಗ್ಯ ಉತ್ತಮವಾಗಿ ಇರಬೇಕಂದ್ರೆ ಈ ಎಲ್ಲಾ ವಾಸ್ತು ಟಿಪ್ಸ್ ಗಳನ್ನು ತಪ್ಪದೇ ಫಾಲೋ ಮಾಡಿ.



Click it and Unblock the Notifications
