Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ವರ್ಷಶ್ರಾವಣ ಮಾಸ ಎರಡು ತಿಂಗಳು ಬಂದಿರುವುದೇಕೆ? ಅಧಿಕ ಮಾಸ ಶುಭವಲ್ಲವೇ?
ಕನ್ನಡ ಪಂಚಾಂಗದ ಪ್ರಕಾರ ಶ್ರಾವಣ ಮಾಸ ಜುಲೈ 18ರಿಂದ ಶುರುವಾಗಿದೆ, ಸೆಪ್ಟೆಂರ್ 15ರವರೆಗೆ ಈ ವರ್ಷ ಶ್ರಾವಣ ಮಾಸ. ಸುಮಾರು 19 ವರ್ಷಗಳ ಬಳಿಕ ಅಧಿಕ ಶ್ರಾವಣ ಮಾಸ ಬಂದಿದೆ . ಅಧಿಕಮಾಸದಿಂದಾಗಿ ಚಾತುರ್ಮಾಸವು 4 ತಿಂಗಳ ಬದಲು ಈ ವರ್ಷ 5 ತಿಂಗಳು ಇರಲಿದೆ. ಹಿಂದೂ ಕ್ಯಾಲೆಂಡರ್‌ನಲ್ಲಿ ಸುಮಾರು ಮೂರು ವರ್ಷಗಳ ನಂತರ ಪ್ರತಿ ಬಾರಿ ಅಧಿಕಮಾಸ ಬರುತ್ತದೆ. ಈ ವರ್ಷ ಶ್ರಾವಣ ಮಾಸದಲ್ಲಿ ಅಧಿಕ ಮಾಸ ರಚನೆಯಾಗಿದೆ.
ಶ್ರಾವಣ ಮಾಸ ಶಿವ ಭಕ್ತರು ಕಾಯುವಂಥ ಮಾಸ
ಶಿವ ಭಕ್ತರು ಶ್ರಾವಣ ಮಾಸವನ್ನು ಖುಷಿಯಿಂದ ಬರಮಾಡಿಕೊಳ್ಳುತ್ತಾರೆ. ಶ್ರಾವಣ ಮಾಸದಲ್ಲಿ ಶ್ರಾವಣ ಸೋಮವಾರಂತೂ ಶಿವನ ಆರಾಧನೆಗೆ ತುಂಬಾನೇ ಶ್ರೇಷ್ಠವಾದ ದಿನವಾಗಿದೆ. ಈ ದಿನ ಉಪವಾಸವಿದ್ದು ಶಿವ ಭಕ್ತರು ಶಿವನ ಆರಾಧನೆಯಲ್ಲಿ ಮಗ್ನರಾಗಿರುತ್ತಾರೆ. ಈ ಬಾರಿ 8 ಶ್ರಾವಣ ಸೋಮವಾರ, 9 ಮಂಗಳಗೌರಿ ವ್ರತ ಬಂದಿದೆ.

ಈ ವರ್ಷ ಶ್ರಾವಣ ಮಾಸದಲ್ಲಿ ಅಧಿಕ ಮಾಸ ಏಕೆ ಉಂಟಾಗಿದೆ? ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದು ಏಕೆ ಕರೆಯಲಾಗಿದೆ? ಈ ಸಮಯದಲ್ಲಿ ಶುಭ ಕಾರ್ಯ ಮಾಡಬಾರದು ಎಂದು ಏಕೆ ಹೇಳುತ್ತಾರೆ ಎಂದು ನೋಡೋಣ ಬನ್ನಿ:
ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಾಂತಿ ಇಲ್ಲ
ಈ ವರ್ಷ ಶ್ರಾವಣ ಮಾಸ ಜುಲೈ 18ರಿಂದ ಆಗಸ್ಟ್ 17ರವರೆಗೆ ಇರಲಿದೆ, ಆಗಸ್ಟ್ 17ಕ್ಕೆ ಸೂರ್ಯ ಕರ್ಕ ರಾಶಿಯನ್ನು ಬಿಟ್ಟು ಸಿಂಹ ರಾಶಿಗೆ ಸಂಚರಿಸುತ್ತದೆ. ಆವಾಗ ಅಧಿಕ ಮಾಸ ಪ್ರಾರಂಭ, ಸೆಪ್ಟೆಂಬರ್ 15ರವರೆಗೆ ಶ್ರಾವಣ ಅಧಿಕ ಮಾಸ. ಈ ಮಾಸವನ್ನು ಪುರುಷೋತ್ತಮ ಮಾಸ ಎಂದು ಕರೆಯಲಾಗುವುದು.
ಪುರುಷೋತ್ತಮ ಮಾಸ ಎಂದು ಏಕೆ ಕರೆಯಲಾಗುವುದು?
ದಂತಕಥೆಯ ಪ್ರಕಾರ ಅಧಿಕ ಮಾಸವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ, ಆದ್ದರಿಂದ ಅಧಿಕ ಮಾಸದ ಒಡೆಯನಾಗಲು ಯಾವ ದೇವರೂ ಒಪ್ಪಿಕೊಳ್ಳುವುದಿಲ್ಲ, ಆವಾಗ ಅಧಿಕಮರು ಶ್ರೀವಿಷ್ಣುವನ್ನು ಪ್ರಾರ್ಥಿಸಿ ಈ ತಿಂಗಳ ಒಡೆಯನಾಗುವಂತೆ ಕೇಳಿಕೊಳ್ಳುತ್ತಾರೆ. ಅಧಿಕಮಾಗಳ ಪ್ರಾರ್ಥನೆಯನ್ನು ಕೇಳಿದ ವಿಷ್ಣು ಜೀ ಈ ತಿಂಗಳಿಗೆ ಪುರುಷೋತ್ತಮ ಎಂಬ ಅತ್ಯುತ್ತಮ ಹೆಸರನ್ನು ನೀಡಿದರು. ಅಂದಿನಿಂದ ಈ ಮಾಸಕ್ಕೆ ಪುರುಷೋತ್ತಮ ಮಾಸ ಎಂದು ಹೆಸರಾಯಿತು.
ಅಧಿಕ ಮಾಸದ ಮಹತ್ವ
ಈ ಮಾಸದಲ್ಲಿ ಭಕ್ತಿಯಿಂದ ಪೂಜೆ ಮಾಡುವುದರಿಂದ ಹರ-ಹರಿ ಇಬ್ಬರ ಕೃಪೆಗೆ ಪಾತ್ರರಾಗುತ್ತೀರಿ. ಈ ತಿಂಗಳಿನಲ್ಲಿ ಭಗವದ್ಗೀತೆ ಓದುವುದು, ಮಂತ್ರಗಳನ್ನು ಪಠಿಸುವುದು, ಪೂಜೆ ಮಾಡುವುದು, ದಾನ ಮಾಡುವುದು ಶ್ರೇಷ್ಠ ಎಂದು ಪರಿಗಣಿಸಲಾಗುವುದು. ಈ ತಿಂಗಳಿನಲ್ಲಿ ಭಕ್ತಿಯಿಂದ ದೇವರ ಕಾರ್ಯ ಮಾಡಿದರೆ ಹರ-ಹರಿಯ ಕೃಪೆಗೆ ಪಾತ್ರರಾಗುವಿರಿ.
8 ಅಧಿಕ ಮಾಸದಲ್ಲಿ ಶುಭ ಕಾರ್ಯ ಮಾಡುವುದಿಲ್ಲ
ಅಧಿಕ ಮಾಸವನ್ನು ಶುಭ ಎಂದು ಪರಿಗಣಿಸುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಮದುವೆ, ನಾಮಕರಣ ಈ ರೀತಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ.



Click it and Unblock the Notifications
