Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆತನ ಸಾವು ದೇಗುಲದ ಪ್ರಶಾಂತತೆ ಕದಡಿತ್ತು

ಶಿಯೋಚಿ ವಿಶಿಷ್ಟ ರೀತಿಯಲ್ಲಿ ತನ್ನ ಶಿಷ್ಯರಿಗೆ ಬೋಧನೆ ಮಾಡುತ್ತಿದ್ದ. ಪಾಠಗಳಿಲ್ಲ, ಪ್ರವಚನಗಳಿಲ್ಲ. ಮೌನದ ಮುಖಾಂತರವೇ ಅತ್ಯಂತ ಪ್ರಭಾವಶಾಲಿಯಾಗಿ ಬೋಧನೆ ಮಾಡಲಾಗುತ್ತಿತ್ತು. ಮೌನದ ಮುಖಾಂತರವೇ ಬೋಧನೆ ಮಾಡುತ್ತಿದ್ದರಿಂದ ಇಡೀ ದೇಗುಲ ರಾತ್ರಿ, ಹಗಲೂ ಶಾಂತವಾಗಿ ಇರುತ್ತಿತ್ತು. ಸುತ್ತಲಿನ ಜನರು ಕೂಡ ಗುರು ಶಿಯೋಚಿಯನ್ನು ಮತ್ತು ಈ ರೀತಿಯ ಬೋಧನೆ ಶ್ಲಾಘಿಸುತ್ತಿದ್ದರು.
ಶಿಷ್ಯಂದಿರಿಗೆ ಧ್ಯಾನದ ಹೊರತಾಗಿ ದೇಗುಲದಲ್ಲಿ ಇನ್ನೇನೂ ಮಾಡುವುದಕ್ಕೆ ಇರುತ್ತಿರಲಿಲ್ಲ. ಶಿಯೋಚಿಯು ಸೂತ್ರಗಳನ್ನು ಪಠಿಸುತ್ತಿರಲಿಲ್ಲ ಬದಲಾಗಿ ಧ್ಯಾನವನ್ನು ಮಾತ್ರ ಮಾಡುತ್ತಿದ್ದ. ಶಿಷ್ಯರು ಕೂಡ ಶಿಯೋಚಿಯ ಬೋಧನೆಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಕಲಿಯುತ್ತಿದ್ದರು.
ಇದು ಹಲವಾರು ತಿಂಗಳುಗಳ ಕಾಲ ನಡೆದುಕೊಂಡು ಬಂದಿತು. ದೇಗುಲದ ದಿವ್ಯ ಪ್ರಶಾಂತತೆ ಒಂದು ದಿನ ಕದಡಿ ಹೋಯಿತು. ಅತ್ಯಂತ ಶಾಂತವಾಗಿದ್ದ ದೇಗುಲದಲ್ಲಿ ಗಂಟೆ ಜಾಗಟೆಗಳು ಮೊಳಗಲು ಪ್ರಾರಂಭಿಸಿದವು. ಮೌನದ ಮುಖಾಂತರ ನಡೆಯುತ್ತಿದ್ದ ಬೋಧನೆಗಳು, ಪಾಠ, ಪ್ರವಚನಗಳು ಎಂಟು ದಿಕ್ಕಿಗೆ ಹರಡುವಂತೆ ಕೇಳಲು ಪ್ರಾರಂಭಿಸಿದವು.
ಆ ದೇವಸ್ಥಾನದ ಪಕ್ಕದಲ್ಲಿಯೇ ಒಬ್ಬ ಹಿರಿಯ ನಾಗರಿಕರ ಹೆಂಗಸು ವಾಸವಾಗಿದ್ದರು. ಅವರಿಗೆ ಈ ಬದಲಾವಣೆ ವಿಚಿತ್ರವಾಗಿ ಕಂಡಿತು. ಆದರೆ, ಅವರಿಗೆ ಸತ್ಯ ಕಂಡುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಅದೇನೆಂದರೆ, ಶಿಯೋಚಿಯು ಮರಣ ಹೊಂದಿದ್ದ.



Click it and Unblock the Notifications
