For Quick Alerts
ALLOW NOTIFICATIONS  
For Daily Alerts

'ಶ್ರಾವಣ' ಎಂದರೆ ನಮ್ಮೆಲ್ಲರಿಗೂ ಶುಭವ ತರುವ ಮಾಸ

By Super Admin
|

ಹಿಂದೂ ಮಾಸಗಳಲ್ಲಿ ಕೆಲವೊಂದು ಶುಭಕರವೆಂದು, ಕೆಲವೊಂದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಕೆಲವು ತಿಂಗಳುಗಳಲ್ಲಿ ಯಾವುದೇ ಶುಭ ಕಾರ್ಯವನ್ನು ಕೈಗೊಳ್ಳುವುದಿಲ್ಲ. ಇನ್ನು ಕೆಲವೊಂದು ತಿಂಗಳುಗಳನ್ನು ಶುಭವೆಂದು ಪರಿಗಣಿಸಿರಲಾಗುತ್ತದೆ.

ಅಂತಹ ತಿಂಗಳುಗಳಲ್ಲಿ ಶ್ರಾವಣವು ಒಂದು, ಆಷಾಡ ಮಾಸದ ನಂತರ ಬರುವ ಈ ಮಾಸವು ಅತ್ಯಂತ ಪವಿತ್ರ ಮಾಸವೆಂಬ ನಂಬಿಕೆ ಹಿಂದೂಗಳ ನಂಬಿಕೆಯಾಗಿದೆ. ಈ ಮಾಸದಲ್ಲಿ ಹಲವಾರು ಮದುವೆಗಳು, ಗೃಹಪ್ರವೇಶಗಳು, ಉಪನಯನಗಳು ಮತ್ತು ಇತರೆ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

Why is Shravana Masam considered a very Auspicious Month?

ಶ್ರಾವಣ ಮಾಸದದಲ್ಲಿ ಬರುವ ಪೌರ್ಣಿಮೆಯು ಮಹಾವಿಷ್ಣುವಿನ ಜನ್ಮ ನಕ್ಷತ್ರವಾದ ಶ್ರವಣ ನಕ್ಷತ್ರದ ದಿನವಾಗಿರುತ್ತದೆ. ಹೀಗಾಗಿ ಇದು ಪವಿತ್ರ ದಿನವೆಂಬ ನಂಬಿಕೆ ಇದೆ. ಇದರ ಜೊತೆಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಬರುವ ಈ ಮಾಸದಲ್ಲಿ ಹಲವಾರು ಹಬ್ಬ ಹರಿದಿನಗಳು ಇರುತ್ತವೆ. ಹಿಂದೂ ಧರ್ಮದ ಭಾವೈಕ್ಯತೆಯ ಹಬ್ಬ: ಶ್ರಾವಣ ಮಾಸ

ಈ ಮಾಸದಲ್ಲಿ ಬರುವ ನಾಲ್ಕೂ ಶುಕ್ರವಾರಗಳು ಅತ್ಯಂತ ಪವಿತ್ರವೆಂಬ ನಂಬಿಕೆ ಇದೆ. ಈ ಶುಕ್ರವಾರಗಳಂದು ಮಹಾಲಕ್ಷ್ಮಿಯ ಪೂಜೆಯನ್ನು ಮಾಡಲಾಗುತ್ತದೆ. ಈ ಮಾಸದ ಎರಡನೆ ಶುಕ್ರವಾರದಂದು ವರ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ.

ಈ ಹಬ್ಬವನ್ನು ಎಷ್ಟು ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಬಿಡಿಸಿ ಹೇಳಬೇಕೆ? ವರಗಳನ್ನು ನೀಡುವ ವರ ಮಹಾಲಕ್ಷ್ಮಿಯನ್ನು ಅಂದು ಭಕ್ತರು ಭಕ್ತಿಭಾವದಿಂದ ಪೂಜಿಸಿ ಆರಾಧಿಸುತ್ತಾರೆ. ಸಂಪತ್ತಿನ ಅಧಿದೇವತೆ 'ಮಹಾಲಕ್ಷ್ಮಿ' ಬಗ್ಗೆ ತಿಳಿಯೋಣ ಬನ್ನಿ...

ಈ ಮಾಸದಲ್ಲಿ ಬರುವ ಮಂಗಳವಾರಗಳು ಸಹ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿವೆ. ಈ ತಿಂಗಳ ಮಂಗಳವಾರಗಳಂದು ಮಹಿಳೆಯರು ಮಂಗಳ ಗೌರಿ ವ್ರತವನ್ನು ಆಚರಿಸುತ್ತಾರೆ. ತಮ್ಮ ವೈವಾಹಿಕ ಜೀವನವು ಸುಖಮಯವಾಗಿರಲಿ ಮತ್ತು ತಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಪಾರ್ವತಿ ದೇವಿಯನ್ನು ಮಂಗಳ ಗೌರಿಯ ರೂಪದಲ್ಲಿ ಪೂಜಿಸುತ್ತಾರೆ.

ಇನ್ನು ಈ ತಿಂಗಳ ಶನಿವಾರಗಳನ್ನು ಶ್ರಾವಣ ಶನಿವಾರಗಳೆಂದು ಪೂಜಿಸಲಾಗುತ್ತದೆ. ಈ ದಿನ ಮಹಾವಿಷ್ಣುವನ್ನು ವೆಂಕಟೇಶ್ವರ ಅಥವಾ ಬಾಲಾಜಿ ಎಂಬ ರೂಪದಲ್ಲಿ ಆರಾಧಿಸಲಾಗುತ್ತದೆ. ಶ್ರಾವಣ ಮಾಸವನ್ನು ಶುಭ ಕಾರ್ಯಗಳಿಗಾಗಿ ಹೆಚ್ಚಾಗಿ ಪರಿಗಣಿಸಲಾಗುತ್ತದೆ. ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ಯಾರು ಜನಿಸುತ್ತಾರೋ, ಅವರಿಗೆ ಪ್ರಪಂಚದಲ್ಲಿ ವಿಶೇಷ ಸ್ಥಾನಮಾನಗಳನ್ನು ಪಡೆಯುತ್ತಾರಂತೆ. ಈ ಮಾಸದಲ್ಲಿ ಜಗನ್ನಾಥ ಸ್ವಾಮಿ, ಕೃಷ್ಣ, ಹಯಗ್ರೀವ ಮತ್ತು ವೈಕನ್ಸ್ ಮಹರ್ಷಿಯವರನ್ನು ಸಹ ಆರಾಧಿಸಲಾಗುತ್ತದೆ.

English summary

Why is Shravana Masam considered a very Auspicious Month?

Shravana Masam is one of the most important and auspicious months for the Hindus. It is the fifth month of the Hindu calendar which comes after Ashada Masam. During this month people perform marriages, gruhaprevesams, upanayanam and other functions. The full moon day of Shravana Masam coincides with the birth star of Lord Maha Vishnu, Shravana Nakshatra.
X
Desktop Bottom Promotion