Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ದ್ರೌಪದಿಯ ಕಠಿಣ ಶಪಥದ ಹಿಂದಿದೆ ರೋಚಕ ಕಹಾನಿ
ಭಾರತದ ಎರಡು ಬೃಹತ್ ಗ್ರಂಥಗಳೆಂದರೆ ರಾಮಾಯಣ ಮತ್ತು ಮಹಾಭಾರತ. ಅದರಲ್ಲೂ ನೀತಿ, ಸನ್ನಡತೆ, ಉತ್ತಮ ಮತ್ತು ಕೆಟ್ಟ ಗುಣಗಳ ನಡುವೆ ಆಯ್ಕೆ, ಸತ್ಕರ್ಮ ಮತ್ತು ಅದರ ಫಲ ಮೊದಲಾದವುಗಳನ್ನು ಮಹಾಭಾರತದಲ್ಲಿ ಅತ್ಯಂತ ಸಮರ್ಪಕ ರೀತಿಯಲ್ಲಿ ವಿವರಿಸಲಾಗಿದೆ. ಇಲ್ಲಿ ಮೂಡಿ ಬಂದಿರುವ ಒ೦ದೊ೦ದು ಪಾತ್ರದ ಸುತ್ತಲೂ ಒ೦ದೊ೦ದು ಕಥಾಹ೦ದರವು ತಳುಕು ಹಾಕಿಕೊ೦ಡಿರುವುದರಿ೦ದ, ಮಹಾಭಾರತವು ಅ೦ತಹ ಅಸ೦ಖ್ಯಾತ ಸ್ವಾರಸ್ಯಕರ ಹಾಗೂ ರೋಚಕ ಕಥಾನಕಗಳ ಅಕ್ಷಯ ಭ೦ಡಾರವೇ ಆಗಿದ್ದು, ಇದರಲ್ಲಿ ಎರಡು ಮಾತಿಲ್ಲ .
ಸಾಮಾನ್ಯವಾಗಿ, ಕೌರವ ಮತ್ತು ಪಾಂಡವರು ಎಂಬ ಮುಖ್ಯ ಪಾತ್ರಗಳ ಸುತ್ತ ಸುತ್ತುವ ಮಹಾಭಾರತದ ಕಥೆಯು, ಹಲವಾರು ಪುರುಷ ಪಾತ್ರಗಳು ಮತ್ತು ಅವರ ಶೌರ್ಯ, ಸಾಹಸಗಳನ್ನು ವಿವರಿಸುತ್ತ ಸಾಗುವುದರ ಜೊತೆಗೆ ಮಹಾಭಾರತದ ಅತಿದೊಡ್ಡ ಯುದ್ಧದ ಪರಾಕಷ್ಠೆಯನ್ನು ತಲುಪುತ್ತದೆ. ಅವರು ಉಳಿದರೆ ಅಥವಾ ಸತ್ತರೆ ಎಂಬುದು ಇದರ ಕೊನೆಯ ಘಟ್ಟವಾಗಿದೆ. ಆದರೆ ಅದೇ ಸಮಯದಲ್ಲಿ ಈ ಮಹಾಕಾವ್ಯವು ಈ ವಿನಾಶಕಾರಿ ಮಹಾಯುದ್ಧಕ್ಕೆ ಕಾರಣವಾದ ಮಹಿಳೆಯ ಬಗ್ಗೆ ಸಹ ಮಾತನಾಡುತ್ತದೆ. ಹೌದು, ನಾವು ಮಾತನಾಡುತ್ತಿರುವುದು ಸಹ ಅದೇ ಮಹಿಳೆಯ ಬಗ್ಗೆ, ಆಕೆಯೇ ದ್ರೌಪದಿ.

ಹೌದು ದ್ರೌಪದಿ ಮಹಾಭಾರತದಲ್ಲಿ ಪ್ರಮುಖ ಪಾತ್ರ. ಆಕೆ ಪಾಂಚಾಳ ರಾಜ್ಯದ ರಾಜಕುಮಾರಿ, ಪಾಂಡವರ ಪತ್ನಿ ಮತ್ತು ತನ್ನ ಪತಿಯರ ಕಡೆಗೆ ಭಕ್ತಿಯಿಂದ ಕೂಡಿರುವ ಮಹಾನ್ ಜ್ಞಾನಿ ಮತ್ತು ನಿಗೂಢ ಮಹಿಳೆ. ಅಲ್ಲದೆ, ದ್ರೌಪದಿಯನ್ನು ಆ ಸಮಯದ ಅತ್ಯಂತ ಸುಂದರಿಯೆಂದು ಮಹಾಭಾರತದಲ್ಲಿ ಬಣ್ಣಿಸಲಾಗಿದೆ. ಬನ್ನಿ ಆಕೆಯೆ ಕಠಿಣ ಶಪಥ ಕೌರವ ಸೇನೆಯನ್ನು ನಾಶ ಮಾಡಿದ ಬಗ್ಗೆ ತಿಳಿದುಕೊಳ್ಳೋಣ... ಯಜ್ಞಕುಂಡದಿಂದ ಆವಿರ್ಭವಿಸಿದ ದ್ರೌಪದಿಯ ಜನ್ಮ ರಹಸ್ಯ
ಪಗಡೆಯಾಟ
ಪಾಂಡವರು ಹಾಗೂ ಕೌರವರ ನಡುವೆ ನಡೆದ ಪಗಡೆಯಾಟ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಪಗಡೆಯಾಟದಲ್ಲಿ ಪಾಂಡವರನ್ನು ಸೋಲಿಸಲು ನಮ್ಮಿಂದಾಗದು ಎಂಬುದನ್ನು ಮೊದಲೇ ತಿಳಿದಿದ್ದ ಕೌರವರು ಇದರಲ್ಲಿ ಮೋಸ ಮಾಡಿದ್ದರಿಂದ ಧರ್ಮರಾಯ ಪ್ರತಿಯೊಂದನ್ನು ಕಳೆದುಕೊಳ್ಳುತ್ತಾನೆ. ತನ್ನ ಎಲ್ಲಾ ಸೋದರರನ್ನು ಪಣಕ್ಕಿಟ್ಟು ಅವರನ್ನು ಕಳಕೊಳ್ಳುತ್ತಾನೆ. ಅಂತಿಮವಾಗಿ ತನ್ನನ್ನು ಪಣಕ್ಕಿಟ್ಟು ಕೌರವರ ದಾಸನಾಗುತ್ತಾನೆ. ಕಳೆದುಕೊಂಡಿದ್ದ ಪ್ರತಿಯೊಂದನ್ನು ಮರಳಿ ಪಡೆಯುವ ಉದ್ದೇಶ ಮತ್ತು ಕೌರವರ ಕುಮ್ಮಕ್ಕಿನಿಂದ ಆತ ಅಂತಿಮವಾಗಿ ತನ್ನ ಪತ್ನಿ ದ್ರೌಪದಿಯನ್ನು ಪಣಕ್ಕಿಡುತ್ತಾನೆ. ಆಕೆಯನ್ನೂ ಆತ ಕಳಕೊಳ್ಳುತ್ತಾನೆ.
ದುಶ್ಯಾಸನ ಅಟ್ಟಹಾಸ
ದ್ರೌಪದಿಯನ್ನು ಪಗಡೆಯಾಟದಲ್ಲಿ ಕಳಕೊಂಡ ಬಳಿಕ ನಡೆದದ್ದು ಸಂಪೂರ್ಣ ಮಾನವ ಕುಲವೇ ನಾಚಿಗೆಪಡುವಂತಹ ವಿಷಯ. ರಾಣಿಯರ ವಿಶ್ರಾಂತಿ ಕೊಠಡಿಯಿಂದ ದ್ರೌಪದಿಯನ್ನು ಎಳೆದು ತರುವಂತೆ ಮತ್ತು ಆಸ್ಥಾನದಲ್ಲಿರುವವರ ಎಲ್ಲರ ಮುಂದೆ ಆಕೆಯ ವಸ್ತ್ರಾಪರಣ ನಡೆಸುವಂತೆ ದುಶ್ಯಾಸನನಿಗೆ ದುರ್ಯೋಧನ ಆದೇಶ ನೀಡುತ್ತಾನೆ. ಆದೇಶವನ್ನು ಪಾಲಿಸಿದ ದುಶ್ಯಾಸನ ವಿಶ್ರಾಂತಿ ಕೊಠಡಿಯಿಂದ ದ್ರೌಪದಿಯನ್ನು ತಲೆಕೂದಲಿನಲ್ಲಿ ಹಿಡಿದುಕೊಂಡು ಎಳೆದುತರುತ್ತಾನೆ. ಆಕೆಯನ್ನು ಹೀಯಾಳಿಸುತ್ತಾ ಕೂದಲಿನಲ್ಲಿ ಎಳೆದುಕೊಂಡು ಆಸ್ಥಾನಕ್ಕೆ ಬರುತ್ತಾನೆ. ಮಹಾಭಾರತವೆ೦ಬ ಮಹಾಕಾವ್ಯದ ಹಿಂದಿನ ಸತ್ಯಾಸತ್ಯತೆ
ದ್ರೌಪದಿಯ ವಸ್ತ್ರಾಪರಣ
ದುಶ್ಯಾಸನ ಆಕೆಯನ್ನು ಎಳೆದು ತಂದ ಬಳಿಕ ಎಲ್ಲಾ ಎಲ್ಲೆಗಳನ್ನು ಮೀರಿ ಆಕೆಯ ವಸ್ತ್ರಾಪರಣ ಮಾಡಲು ತಯಾರಾಗುತ್ತಾನೆ. ಆದರೆ ಈ ಕೃತ್ಯದಲ್ಲಿ ಆತ ಸೋಲುತ್ತಾನೆ, ದ್ರೌಪದಿಯನ್ನು ಶ್ರೀಕೃಷ್ಣ ರಕ್ಷಿಸುತ್ತಾನೆ. ತುಂಬಿದ ಸಭೆಯಲ್ಲಿ ತನ್ನ ವಸ್ತ್ರಾಪರಣದ ಘಟನೆಯ ಆಕೆಗೆ ಸಹಿಸಲಾಗಷ್ಟು ನೋವನ್ನು ತಂದೊಡ್ಡುತ್ತದೆ ಅಲ್ಲದೆ ಇಷ್ಟೆಲ್ಲಾ ಆದರೂ, ತನ್ನ ನೆರವಿಗೆ ಯಾರು ಬರಲಿಲ್ಲವೆಂಬ ಅಸಹಾಯಕ ಭಾವನೆಯಿಂದ ಕೂಡ ಆಕೆ ಬಳಲುತ್ತಿರುತ್ತಾಳೆ. ಇವೆಲ್ಲಾ ಫಟನೆಯಿಂದ, ಅವಮಾನದಿಂದ ಕ್ರೋಧಿತಳಾದ ದ್ರೌಪದಿ, ದುಶ್ಯಾಸನನ ರಕ್ತದಿಂದ ತನ್ನ ಕೂದಲನ್ನು ತೊಳೆಯುವ ತನಕ ನಾನು ಕೂದಲು ಬಾಚಿ ಕಟ್ಟಿಕೊಳ್ಳುವುದಿಲ್ಲ ಮತ್ತು ಎಣ್ಣೆ ಹಾಕುವುದಿಲ್ಲ ಎಂದು ಶಪಥ ಮಾಡುತ್ತಾಳೆ.
ದ್ರೌಪದಿಯ ಕಠಿಣ ಶಪಥ
ದ್ರೌಪದಿಯ ಶಪಥವು ಅಲ್ಲಿ ನೆರೆದಿದ್ದವರಿಗೆ ಆಘಾತ ನೀಡುತ್ತದೆ. ಇದರ ಬಳಿಕ ಧೃತರಾಷ್ಟ್ರನು ದ್ರೌಪದಿಗೆ ಸಮಾಧಾನವಾಗುವಂತೆ ಹೇಳಿ ಪಾಂಡವರನ್ನು ಬಂಧನದಿಂದ ಮುಕ್ತಗೊಳಿಸುತ್ತಾನೆ. ಆದರೂ ದ್ರೌಪದಿ ಈ ಅವಮಾನಕಾರಿ ಘಟನೆ ಬಳಿಕ ತನ್ನ ಕೂದಲನ್ನು ಕಟ್ಟಿಕೊಳ್ಳಲಿಲ್ಲ ಮತ್ತು ಇದು ಯಾವಾಗಲೂ ಪಾಂಡವರಿಗೆ ಆಕೆಯ ಶಪಥವನ್ನು ನೆನಪಿಸುತ್ತಿತ್ತು. ಮಹಾಸಂಗ್ರಾಮದಲ್ಲಿ ಭೀಮನು ದುಶ್ಯಾಸನನ್ನು ಕೊಂದು ಬಳಿಕ ಆತನ ರಕ್ತವನ್ನು ದ್ರೌಪದಿಗೆ ನೀಡುತ್ತಾನೆ. ಆಕೆ ದುಶ್ಯಾಸನನ ರಕ್ತದಲ್ಲಿ ತನ್ನ ಕೂದಲನ್ನು ತೊಳೆದ ಬಳಿಕ ಮತ್ತೆ ಕೂದಲನ್ನು ಬಾಚಿ ಕಟ್ಟಿಕೊಳ್ಳುತ್ತಾಳೆ.



Click it and Unblock the Notifications












