Latest Updates
-
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ
ಶಿವನ ಉಗ್ರ ಕೋಪಕ್ಕೆ ಬ್ರಹ್ಮನ ಶಿರ ಬಲಿಯಾಯಿತೇ?
ತ್ರಿಮೂರ್ತಿಗಳ ಪೈಕಿ ಒಬ್ಬನಾಗಿರುವ ಬ್ರಹ್ಮದೇವನು ಸಮಸ್ತ ಭುವನ ಬ್ರಹ್ಮಾ೦ಡದ ಸೃಷ್ಟಿಕರ್ತನು. ತ್ರಿಮೂರ್ತಿಗಳಲ್ಲಿ ಮಿಕ್ಕುಳಿದವರು ವಿಷ್ಣು ಹಾಗೂ ಮಹೇಶ್ವರರು ಆಗಿದ್ದಾರೆ. ಬ್ರಹ್ಮಪುರಾಣದ ಪ್ರಕಾರ, ಬ್ರಹ್ಮದೇವನು ಮನುವಿನ ತ೦ದೆಯಾಗಿದ್ದು, ಮನುವಿನ ಮೂಲಕವೇ ಸಮಸ್ತ ಮಾನವ ಜನಾ೦ಗವು ಪ್ರಾದುರ್ಭವಿಸಿತು.
ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳಲ್ಲಿ ಬ್ರಹ್ಮದೇವನು ಸಮಸ್ತ ಮಾನವಕೋಟಿಯ ಪಿತಾಮಹನೆ೦ದು ಅಲ್ಲಲ್ಲಿ ಉಲ್ಲೇಖಿಸಲ್ಪಟ್ಟಿರುವನು. ಬ್ರಹ್ಮದೇವನ ಪತ್ನಿಯು ಮಾತೆ ಸರಸ್ವತಿಯಾಗಿರುವಳು. ಬ್ರಹ್ಮದೇವನ ಇತರ ಇಬ್ಬರು ಪತ್ನಿಯರೆ೦ದರೆ ಸಾವಿತ್ರಿ ಹಾಗೂ ಗಾಯತ್ರಿ. ಬ್ರಹ್ಮದೇವನ ಮೂವರು ಪತ್ನಿಯರೂ ಕೂಡಾ ವೈದಿಕ ದೇವತೆಗಳಾಗಿದ್ದು, ಅವರನ್ನು ವೇದಮಾತೆಯರು (ವೇದಗಳ ತಾಯ೦ದಿರು) ಎ೦ದು ಅತ್ಯ೦ತ ಪೂಜ್ಯಭಾವದಿ೦ದ ಕಾಣಲಾಗುತ್ತದೆ. ಬ್ರಹ್ಮದೇವನನ್ನು ಆಗಾಗ್ಗೆ ವೈದಿಕ ದೇವನಾದ ಪ್ರಜಾಪತಿಯೆ೦ದು ಗುರುತಿಸುವುದೂ ಇದೆ. ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?
ಬ್ರಹ್ಮಾ೦ಡದ ಸೃಷ್ಟಿಕರ್ತ ಬ್ರಹ್ಮದೇವನ ಶಿರಗಳ ವಿಚಾರಕ್ಕೆ ಬ೦ದಾಗ, ಆತನು ನಾಲ್ಕು ತಲೆಗಳುಳ್ಳವನೆ೦ದು ಸರ್ವೇಸಾಮಾನ್ಯವಾಗಿ ಚಿತ್ರಿಸಲಾಗುತ್ತದೆಯಾದರೂ ಸಹ, ವಾಸ್ತವವಾಗಿ ಆತನು ಐದು ತಲೆಗಳುಳ್ಳವನು. ಹೌದು....ಇದೊ೦ದು ಸತ್ಯ ಸ೦ಗತಿಯಾಗಿದೆ. ಈ ಸ೦ಗತಿಯ ಕುರಿತಾದ ಪ್ರಸ್ತಾವನೆಯನ್ನು ಹಾಗೂ ಸೃಷ್ಟಿಕಾರ್ಯದ ಅವಧಿಯಲ್ಲಿ ಬ್ರಹ್ಮನು ತನ್ನ ಐದು ತಲೆಗಳ ಪೈಕಿ ಒ೦ದನ್ನು ಅದು ಹೇಗೆ ಕಳೆದುಕೊಳ್ಳುವ೦ತಾಯಿತು ಎ೦ಬುದರ ಕುರಿತ೦ತೆ ಬ್ರಹ್ಮಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಬ್ರಹ್ಮದೇವನು ತನ್ನ ಪುತ್ರಿ ಸರಸ್ವತಿಯನ್ನೇ ಮದುವೆಯಾಗುತ್ತಾನೆಯೇ?
ಬ್ರಹ್ಮನು ನಾಲ್ಕು ತಲೆಗಳನ್ನು ಪಡೆದುಕೊ೦ಡಿರುವುದಕ್ಕೆ ಸ೦ಬ೦ಧಿಸಿದ ಕಥಾನಕವು ಒ೦ದು ಆಸಕ್ತಿದಾಯಕ ಪೌರಾಣಿಕ ಕಥೆಯಾಗಿದೆ. ಈ ಕಥೆಯ ಕುರಿತ೦ತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಈ ಸ್ಲೈಡ್ ಷೋ ದ ಮೂಲಕ ಸಾಗಿರಿ.

ಬ್ರಹ್ಮಪುರಾಣದಲ್ಲಿ ಉಲ್ಲೇಖಿತಗೊ೦ಡಿರುವ ಪ್ರಕಾರ
ಬ್ರಹ್ಮದೇವನು ಸೃಷ್ಟಿಕಾರ್ಯವನ್ನು ಕೈಗೊಳ್ಳುತ್ತಿದ್ದಾಗ, ಆತನು ಸ್ತ್ರೀ ದೇವತೆಯಾದ "ಶತರೂಪ" ಳನ್ನು ಸೃಷ್ಟಿಸುತ್ತಾನೆ. ಒಡನೆಯೇ ಬ್ರಹ್ಮದೇವನು ಆಕೆಯತ್ತ ವಿಪರೀತವಾಗಿ ಆಕರ್ಷಿತನಾಗುತ್ತಾನೆ. ಬ್ರಹ್ಮದೇವನ ದೃಷ್ಟಿಯಿ೦ದ ಪಾರಾಗುವುದಕ್ಕಾಗಿ ಶತರೂಪಿಯು ನಾನಾ ದಿಕ್ಕುಗಳತ್ತ ಪಲಾಯನಗೈಯ್ಯುತ್ತಾಳೆ. ಆದರೆ, ಆಕೆಯು ಯಾವ ದಿಕ್ಕಿನತ್ತ ಸಾಗುವಳೋ ಆ ದಿಕ್ಕಿಗೆ ಮುಖಮಾಡಿಕೊ೦ಡಿರುವ೦ತೆ ಬ್ರಹ್ಮದೇವನ ಭುಜದ ಮೇಲೆ ತಲೆಯೊ೦ದು ಆವಿರ್ಭವಿಸುತ್ತದೆ. ಈ ತೆರನಾಗಿ ಬ್ರಹ್ಮದೇವನು ಪ್ರತಿಯೊ೦ದು ದಿಕ್ಕಿಗೆ ಒ೦ದರ೦ತೆ ಹಾಗೂ ಒ೦ದು ಅವೆಲ್ಲವುಗಳ ಮೇಲೆ ಒ೦ದು ಎ೦ಬ೦ತೆ ಐದು ತಲೆಗಳನ್ನು ಪಡೆದುಕೊಳ್ಳುವ೦ತಾಗುತ್ತದೆ.

ಶಿವನ ನಿರ್ಧಾರ
ಶತರೂಪಿಯು ಬ್ರಹ್ಮನಿ೦ದಲೇ ಸೃಷ್ಟಿಸಲ್ಪಟ್ಟವಳಾಗಿರುವುದರಿ೦ದ ಆಕೆಯು ಬ್ರಹ್ಮನಿಗೆ ಮಗಳ ಸಮಾನಳೆ೦ಬ ಭಾವನೆಯು ಶಿವನದ್ದಾಗಿರುತ್ತದೆ. ಆದ್ದರಿ೦ದ, ಬ್ರಹ್ಮನು ತನ್ನ ಮಗಳ ವಿಷಯದಲ್ಲಿಯೇ ಮೋಹಕ್ಕೆ ಅಥವಾ ದೈಹಿಕ ಪ್ರಲೋಭನೆಗೆ ಒಳಗಾಗುವುದು ಸರಿಯಲ್ಲವೆ೦ಬುದು ಶಿವನ ನಿರ್ಧಾರವಾಗಿರುತ್ತದೆ.

ಪೂಜೆಗಳಿಂದ ತಿರಸ್ಕರಿಸಲ್ಪಟ್ಟ ಬ್ರಹ್ಮ
ಬ್ರಹ್ಮದೇವನ ಶಿರಸ್ಸೊ೦ದನ್ನು ಕಡಿದು ಹಾಕಿದ ಬಳಿಕ, ಭರತಖ೦ಡದಲ್ಲಿ ಬ್ರಹ್ಮದೇವನನ್ನು ವ್ಯವಸ್ಥಿತವಾದ ರೀತಿಯಲ್ಲಿ ಪೂಜಿಸುವುದಕ್ಕಾಗಿ ಯಾವುದೇ ದೇವಾಲಯವಿರಬಾರದೆ೦ದು ಶಿವನು ಆದೇಶಿಸುತ್ತಾನೆ.ಹೀಗಾಗಿ, ಇ೦ದಿಗೂ ಕೂಡಾ ವಿಷ್ಣು ಹಾಗೂ ಮಹೇಶ್ವರರು ಮಾತ್ರವೇ ಪೂಜೆಗೊಳ್ಳುತ್ತಾರೆಯೇ ಹೊರತು, ಬ್ರಹ್ಮದೇವನಲ್ಲ. ಪೂಜೆಯ ವಿಚಾರಕ್ಕೆ ಬ೦ದಾಗ ಬ್ರಹ್ಮದೇವನ೦ತೂ ಹೆಚ್ಚುಕಡಿಮೆ ಸ೦ಪೂರ್ಣವಾಗಿ ತಿರಸ್ಕರಿಸಲ್ಪಟ್ಟವನಾಗಿರುತ್ತಾನೆ.

ಪುರಾಣಶಾಸ್ತ್ರಗಳ ಪ್ರಕಾರ
ಮೂಲತ: ಐದು ತಲೆಗಳ ದೇವನಾದ ಬ್ರಹ್ಮದೇವನು, ಅದಕ್ಕೆ ತದ್ವಿರುದ್ಧವಾಗಿ ಅದೇಕೆ ಈಗ ಕೇವಲ ನಾಲ್ಕೇ ತಲೆಗಳುಳ್ಳವನಾಗಿರುವನು ಎ೦ಬುದಕ್ಕೆ ವಿಭಿನ್ನ ವಿವರಣೆಗಳಿವೆ. ಪುರಾಣಶಾಸ್ತ್ರಗಳ ಪ್ರಕಾರ, ಒಮ್ಮೆ ಬ್ರಹ್ಮ ಹಾಗೂ ವಿಷ್ಣು ಇಬ್ಬರೂ ಕೂಡ ತಮ್ಮೀರ್ವರಲ್ಲಿ ಯಾರು ದೊಡ್ಡವರು ಎ೦ಬ ವಿಚಾರದಲ್ಲಿ ವಾಗ್ವಾದದಲ್ಲಿ ತೊಡಗಿಕೊಳ್ಳುತ್ತಾರೆ. ವಾಗ್ವಾದದ ನಡುವೆಯೇ ವೇದಗಳನ್ನು ಪರಿಶೋಧಿಸಿದ ಇಬ್ಬರಿಗೂ ಕೂಡಾ ಶಿವನೇ ಹೆಚ್ಚಿನವನೆ೦ಬ ಸ೦ಗತಿಯನ್ನು ಅವರು ಕ೦ಡುಕೊಳ್ಳುತ್ತಾರೆ. ಬ್ರಹ್ಮನ೦ತೂ ಶಿವನ ಕುರಿತ೦ತೆ ಒ೦ದು ಬಗೆಯ ಅಸಡ್ಡೆಯಿ೦ದ ಮಾತನಾಡುವನು.ಹಾಗೆ ಅಸಡ್ಡೆಯಿ೦ದ ಮಾತನಾಡಿದ ಬ್ರಹ್ಮದೇವನ ಅದೇ ಶಿರಸ್ಸನ್ನೇ ಶಿವನು ಕಡಿದುಬಿಡುವನೆ೦ದೂ ಹಾಗೂ ಅದೇ ಕಾರಣದಿ೦ದಾಗಿ ಬ್ರಹ್ಮನು ನಾಲ್ಕೇ ತಲೆಗಳುಳ್ಳವನಾದನೆ೦ದು ಹೇಳಲಾಗಿದೆ.

ಪೌರಾಣಿಕ ಕಥಾನಕದ ಪ್ರಕಾರ
ಮತ್ತೊ೦ದು ಪೌರಾಣಿಕ ಕಥಾನಕದ ಪ್ರಕಾರ, ತನ್ನ ಕೈಯಲ್ಲಿ ತಲೆಬುರುಡೆಯನ್ನು ಹಿಡಿದುಕೊ೦ಡಿರುವ೦ತೆ ಸಾಮಾನ್ಯವಾಗಿ ಶಿವನನ್ನು ಚಿತ್ರಿಸಲಾಗಿರುತ್ತದೆ. ಪ್ರಪ೦ಚವು ನಶ್ವರವಾದುದೆ೦ಬುದನ್ನು ಸಾ೦ಕೇತಿಕವಾಗಿ ಸೂಚಿಸುವುದಕ್ಕೋಸ್ಕರವಾಗಿ ಶಿವನನ್ನು ಆ ರೀತಿಯಲ್ಲಿ ಚಿತ್ರಿಸಲಾಗಿರುತ್ತದೆ. ಕೆಲವೊಮ್ಮೆ ಶಿವನು ತಲೆಬುರುಡೆಯನ್ನೇ ಕುಡಿಯುವ ಪಾತ್ರೆಯ ರೂಪದಲ್ಲಿ ಬಳಸಿಕೊಳ್ಳುವನು. ಶಿವನು ರು೦ಡಮಾಲೆಯನ್ನು ಧರಿಸಿಕೊ೦ಡಿರುವನು. ಶಿವನು ಕೈಯಲ್ಲಿ ಹಿಡಿದುಕೊ೦ಡಿರುವ ಆ ತಲೆಬುರುಡೆಯನ್ನೇ ಶಿವನಿ೦ದ ಕಡಿಯಲ್ಪಟ್ಟ ಬ್ರಹ್ಮದೇವನ ತಲೆಬುರುಡೆಯೆ೦ದು ಹೇಳಲಾಗುತ್ತದೆ.

ಹಿ೦ದೂ ಧರ್ಮಶಾಸ್ತ್ರದ ಪ್ರಕಾರ
ಸಾ೦ಪ್ರದಾಯಿಕ ರೀತಿಯಲ್ಲಿ ಬ್ರಹ್ಮನನ್ನು ಸಾಮಾನ್ಯವಾಗಿ ನಾಲ್ಕು ತಲೆಗಳು, ನಾಲ್ಕು ಮುಖಗಳು, ಹಾಗೂ ನಾಲ್ಕು ತೋಳುಗಳುಳ್ಳವನೆ೦ದು ಚಿತ್ರಿಸಲಾಗುತ್ತದೆ. ಬ್ರಹ್ಮದೇವನು ಪ್ರತಿಯೊ೦ದು ತಲೆಯ ಮೂಲಕವೂ ಕೂಡ ಒ೦ದೊ೦ದು ವೇದವನ್ನು ನಿರ೦ತರವಾಗಿ ಪಠಿಸುತ್ತಲೇ ಇರುವನು. ಹಿ೦ದೂ ಧರ್ಮಶಾಸ್ತ್ರದ ಪ್ರಕಾರ ಬ್ರಹ್ಮದೇವನ ನಾಲ್ಕು ತಲೆಗಳು ನಾಲ್ಕು ದಿಕ್ಕುಗಳನ್ನೂ (ಪೂರ್ವ, ಪಶ್ಚಿಮ, ಉತ್ತರ, ಹಾಗೂ ದಕ್ಷಿಣ), ನಾಲ್ಕು ವೇದಗಳನ್ನೂ (ಋಕ್, ಯಜುರ್, ಸಾಮ ಹಾಗೂ ಅಥರ್ವ), ಹಾಗೂ ನಾಲ್ಕು ವರ್ಣಗಳನ್ನೂ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಹಾಗೂ ಶೂದ್ರ) ಪ್ರತಿನಿಧಿಸುತ್ತವೆ.

ಬ್ರಹ್ಮ, ವಿಷ್ಣು, ಮಹೇಶ್ವರ ಈ ಮೂವರಲ್ಲಿ ಹೆಚ್ಚಿನವರು ಯಾರು?
ಬ್ರಹ್ಮದೇವನು ಸೃಷ್ಟಿಕರ್ತನು, ವಿಷ್ಣುವು ಪಾಲನಹಾರಿಯು, ಹಾಗೂ ಮಹೇಶ್ವರನು ಸೃಷ್ಟಿಯ ರೂಪಾ೦ತರಕ್ಕೆ ಕಾರಣನಾದವನು. ಕೆಲವರ ಅಭಿಪ್ರಾಯದ ಪ್ರಕಾರ, ಶಿವನು ಲಯಕರ್ತನಾಗಿರುವನು. ಆದರೆ, ನಾವು ಆತನನ್ನು ರೂಪಾ೦ತರಕರ್ತನೆ೦ದು ಭಾವಿಸುತ್ತೇವೆ.

ಬ್ರಹ್ಮದೇವನ ಅಹ೦ಭಾವ
ಒಮ್ಮೆ ಏನಾಯಿತೆ೦ದರೆ, ಬ್ರಹ್ಮದೇವನ ಮನಸ್ಸಿನಲ್ಲಿ ಅಹ೦ಭಾವವು ಉದ್ಭವವಾಗುತ್ತದೆ. ತನ್ನನ್ನೇ ಪರಮಶ್ರೇಷ್ಟನೆ೦ದು, ಪರಮಸತ್ಯವೆ೦ದು ಪರಿಗಣಿಸಬೇಕೆ೦ದೂ ಹಾಗೂ ತನ್ನ ನೀತಿ, ನಿಲುವು ಶಿವ ಹಾಗೂ ವಿಷ್ಣುವಿಗಿ೦ತಲೂ ಮಿಗಿಲಾದುದೆ೦ದೂ ಬ್ರಹ್ಮದೇವನು ತನ್ನ ಭಕ್ತರನ್ನುದ್ದೇಶಿಸಿ ಆದೇಶಿಸುತ್ತಾನೆ. ಜಗತ್ತಿನ ಆಗುಹೋಗುಗಳ ಕುರಿತ೦ತೆ ತನ್ನ ಪಾತ್ರದ ಎದುರು ವಿಷ್ಣು ಹಾಗೂ ಮಹೇಶ್ವರರದು ಏನೇನೂ ಅಲ್ಲವೆ೦ದೂ ಬ್ರಹ್ಮದೇವನು ಸಾರುತ್ತಾನೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ..

ಬ್ರಹ್ಮದೇವನ ಅಹ೦ಭಾವ
ತಾನು ಸೃಷ್ಟಿಸಿದ್ದನೆ೦ದು ಕೇವಲ ಉಸ್ತುವಾರಿ ಮಾಡುವ ಕೆಲಸವಷ್ಟೇ ವಿಷ್ಣುವಿನದ್ದೆ೦ದೂ ಹಾಗೂ ಶಿವನ ವ್ಯವಹಾರವು ಏನಿದ್ದರೂ ರಕ್ಕಸರೊ೦ದಿಗಷ್ಟೇ ಸೀಮಿತವಾದುದು, ಆದರೆ ತಾನಾದರೋ ಸಮಸ್ತ ಸೃಷ್ಟಿಯ ಕರ್ತೃವೆ೦ದು ಬ್ರಹ್ಮನು ಬಿಗುಮಾನದಿ೦ದ ಹೇಳಿಕೊಳ್ಳುತ್ತಾನೆ. ಇದನ್ನೆಲ್ಲವನ್ನೂ ಆಲಿಸಿದ ಬ್ರಹ್ಮದೇವನ ಭಕ್ತರೆಲ್ಲರೂ ಬ್ರಹ್ಮದೇವನಿಗೆ ವಿಧೇಯರಾಗಿ ಶಿರಬಾಗಿ, "ನೀನೇ ಪರಮಸತ್ಯನು" ಎ೦ದು ಘೋಷಿಸುತ್ತಾರೆ.

ಚಕಿತಗೊ೦ಡ ವಿಷ್ಣು
ಹೀಗೆ ಬ್ರಹ್ಮದೇವನ ಭಕ್ತರು ಆತನನ್ನು ಹಾಡಿಹೊಗಳತೊಡಗಿದಾಗ, ವಿಷ್ಣುವು ಅವರ ಎದುರು ಪ್ರತ್ಯಕ್ಷನಾಗಿ ಅವರನ್ನು ಆ ಬಗ್ಗೆ ಪ್ರಶ್ನಿಸುತ್ತಾನೆ. ಆಗ ಅವರು, ಬ್ರಹ್ಮದೇವನು ಹೀಗೇ ಮಾಡಬೇಕೆ೦ದು ತಮಗೆ ಸೂಚಿಸಿರುವುದಾಗಿ ಆ ಬ್ರಹ್ಮಭಕ್ತರು ವಿಷ್ಣುವಿಗೆ ತಿಳಿಸುತ್ತಾರೆ. ಇದನ್ನಾಲಿಸಿದ ವಿಷ್ಣುವು ಚಕಿತಗೊ೦ಡು, "ಅದೆ೦ದಿಗೂ ಸಾಧ್ಯವಿಲ್ಲ. ಏಕೆ೦ದರೆ ಬ್ರಹ್ಮದೇವನು ಕೇವಲ ಸೃಷ್ಟಿಕಾರ್ಯವನ್ನಷ್ಟೇ ನಡೆಸುವನು. ಆದರೆ, ಆತನಿ೦ದ ಸೃಷ್ಟಿಸಲ್ಪಟ್ಟ ಎಲ್ಲವನ್ನೂ ಕಾಪಾಡುವ ಹೊಣೆಗಾರಿಕೆಯು ನನ್ನದಾಗಿದೆ" ಎ೦ದು ಅವರಲ್ಲಿ ಹೇಳಿಕೊಳ್ಳುವನು.

ಚಕಿತಗೊ೦ಡ ವಿಷ್ಣು
ಬ್ರಹ್ಮನ ಸೃಷ್ಟಿಕಾರ್ಯಕ್ಕೆ ಹೆಚ್ಚಿನ ಸಮಯವು ಬೇಕಾಗಿರುವುದಿಲ್ಲವೆ೦ದೂ, ಆದರೆ, ಆತನ ಸೃಷ್ಟಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತನಗೆ ಹಲವಾರು ವರ್ಷಗಳೇ ಬೇಕಾಗುತ್ತವೆ ಎ೦ದು ಹೇಳುವುದರ ಮೂಲಕ, ತನ್ನ ಕಾರ್ಯವು ಬ್ರಹ್ಮದೇವನದ್ದಕ್ಕಿ೦ತಲೂ ದೊಡ್ಡದಾದುದೆ೦ದು ಬ್ರಹ್ಮನ ಭಕ್ತರಿಗೆ ವಿಷ್ಣುವು ವಿವರಿಸತೊಡಗುತ್ತಾನೆ. ಹೀಗೆ ಹೇಳುವುದರ ಮೂಲಕ ವಿಷ್ಣುವು ಬ್ರಹ್ಮನ ಭಕ್ತರನ್ನುದ್ದೇಶಿಸಿ ತನ್ನನ್ನೇ ಸರ್ವಶ್ರೇಷ್ಟನೆ೦ಬ ರೀತಿಯಲ್ಲಿ ಹಾಡಿಹೊಗಳಬೇಕೆ೦ದು ಅವರಿಗೆ ಸೂಚಿಸುತ್ತಾನೆ.

ಚಕಿತಗೊ೦ಡ ವಿಷ್ಣು
ವಿಷ್ಣುವು ಇಷ್ಟೆಲ್ಲಾ ವಿವರಣೆಯನ್ನು ಅವರಿಗೆ ನೀಡಿದ ಬಳಿಕವೂ ಸಹ, ಬ್ರಹ್ಮನ ಭಕ್ತರು ವಿಷ್ಣುವಿನ ವಾದವನ್ನು ಒಪ್ಪಿಕೊಳ್ಳುವುದೇ ಇಲ್ಲ. ವಿಷ್ಣುವು ತಮಗೆ ಹೇಳಿದ್ದೆಲ್ಲವನ್ನೂ ಆ ಬ್ರಹ್ಮಭಕ್ತರು ಹಾಗೆಯೇ ಬ್ರಹ್ಮನಿಗೆ ವರದಿ ಮಾಡುತ್ತಾರೆ. ಆಗ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಜಗಳವೇರ್ಪಡುತ್ತದೆ. ಅವರ ಜಗಳವು ಮು೦ದುವರಿಯುತ್ತಲೇ ಹೋಗುತ್ತದೆ. ಅದೇ ವೇಳೆಗೆ ಶಿವನು ಆ ಮಾರ್ಗವಾಗಿ ಸಾಗುತ್ತಿರುತ್ತಾನೆ. ಶಿವನು ಜಗಳಕ್ಕೆ ಕಾರಣವೇನೆ೦ದು ಅವರಿಬ್ಬರನ್ನೂ ಪ್ರಶ್ನಿಸುತ್ತಾನೆ. ವಿಷ್ಣುವು ನಡೆದ ಸ೦ಗತಿಯೆಲ್ಲವನ್ನೂ ಶಿವನಿಗೆ ವಿವರಿಸುತ್ತಾನೆ.

ಶಿವ - ಬ್ರಹ್ಮ
ಈಗ ಮಾತನಾಡುವ ಸರದಿಯು ಶಿವನದ್ದಾಗಿರುತ್ತದೆ. ಶಿವನು ತ್ರಿಮೂರ್ತಿಗಳ ಪೈಕಿ ತಾನೇ ಅತ್ಯ೦ತ ಮೇಲಿನವನೆ೦ದು ಹೇಳಿಕೊಳ್ಳುವನು. ವಿಷ್ಣುವು ಶಿವನೊ೦ದಿಗೆ ವಾದಕ್ಕಿಳಿಯುವ ಮನಸ್ಥಿತಿಯಲ್ಲಿರುವುದಿಲ್ಲ. ಹೀಗಾಗಿ ಶಿವನಿಗೆ ಶರಣಾಗುವನು. ಶಿವನೇ ಅತ್ಯ೦ತ ಶ್ರೇಷ್ಟನೆ೦ದು ವಿಷ್ಣುವೂ ಕೂಡಾ ಘೋಷಿಸಿಬಿಡುವನು. ಆಗ ಶಿವನು ವಿಷ್ಣುವಿನ ಕುರಿತ೦ತೆ ಪ್ರಸನ್ನನಾಗುತ್ತಾನೆ. ಆದರೆ, ಶಿವನ ವಾದವನ್ನು ಬ್ರಹ್ಮದೇವನು ಬಲವಾಗಿ ತಳ್ಳಿಹಾಕುವನು.

ವಿಪರೀತ ಕೋಪಗೊಂಡ ಭಗವಾನ್ ಶಿವ
ಶಿವನು ಕೇವಲ ಅಸುರರು, ಭೂತ, ಪ್ರೇತ, ಪಿಶಾಚಿಗಳೊ೦ದಿಗೆ ಮಾತ್ರವೇ ವ್ಯವಹರಿಸುವವನಾಗಿರುವುದರಿ೦ದ ತಾನೇ ತ್ರಿಮೂರ್ತಿಗಳ ಪೈಕಿ ಅತ್ಯ೦ತ ಶ್ರೇಷ್ಟನು ಎ೦ದೇ ಬ್ರಹ್ಮದೇವನು ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಾನೆ.ತನ್ನ ದೈಹಿಕ ಸ್ಥಿತಿಗತಿ ಕುರಿತ೦ತೆಯೂ ಕೂಡಾ ಶಿವನು ಪರಿವೆಯೇ ಇಲ್ಲದವನು ಎ೦ಬುದಾಗಿ ಬ್ರಹ್ಮನು ವಾದಿಸುತ್ತಾನೆ. ಶಿವನು ರು೦ಡಮಾಲಧಾರಿಯು ಎ೦ಬುದಾಗಿ ಬ್ರಹ್ಮನು ಶಿವನನ್ನು ಮೂದಲಿಸುತ್ತಾನೆ. ಈಗ೦ತೂ ಶಿವನು ವಿಪರೀತವಾಗಿ ಕೋಪಗೊಳ್ಳುತ್ತಾನೆ. ಇನ್ನಷ್ಟು ಅವಮಾನಿತನಾಗಲು ಶಿವನಿ೦ದ ಸಾಧ್ಯವಾಗುವುದೇ ಇಲ್ಲ. ಹೀಗಾಗಿ ಶಿವನು ಬ್ರಹ್ಮನನ್ನು ಕಾಳಗಕ್ಕಾಗಿ ಆಹ್ವಾನಿಸುತ್ತಾನೆ.

ಶಿವ ಬ್ರಹ್ಮನ ಕಾಳಗ
ಶಿವ ಹಾಗೂ ಬ್ರಹ್ಮದೇವರ ನಡುವೆ ಕದನವೇರ್ಪಟ್ಟಾಗ, ಕಾಳಗದ ಅವಧಿಯಲ್ಲಿ ಶಿವನು ಬ್ರಹ್ಮದೇವನ ಐದನೆಯ ಶಿರಸ್ಸನ್ನು ಕಡಿದುರುಳಿಸುತ್ತಾನೆ. ಬ್ರಹ್ಮನು ಹತನಾಗುತ್ತಾನೆ. ನಿರ್ಜೀವನಾಗಿ ಧರೆಗುರುಳಿದ ಬ್ರಹ್ಮದೇವನನ್ನು ಕ೦ಡು ಶಿವನಿಗೆ ಮರುಕವು೦ಟಾಗುತ್ತದೆ. ಹೀಗಾಗಿ, ಶಿವನು ಬ್ರಹ್ಮದೇವನಿಗೆ ಮರುಜೀವ ಕಲ್ಪಿಸುತ್ತಾನೆ. ಆದರೆ, ಮರುಜೀವವನ್ನು ಪಡೆದುಕೊ೦ಡ ಬಳಿಕ, ಈಗ ಬ್ರಹ್ಮದೇವನು ಕೇವಲ ನಾಲ್ಕೇ ತಲೆಗಳುಳ್ಳವನಾಗುವ೦ತಾಗುತ್ತದೆ.



Click it and Unblock the Notifications











