Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ವಿಜಯ ದಿವಸ 2022: ಇಂಡೋ-ಪಾಕ್ ಯುದ್ಧದಲ್ಲಿ ಸೋತು ಶರಣಾಗಿದ್ದರು ಪಾಕ್‌ನ 93,000 ಸೈನಿಕರು!
ಡಿಸೆಂಬರ್ 16ರಂದು 52ನೇ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತಿದೆ. 1971ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಭಾರತ ವಂಚಕ ಪಾಕಿಸ್ತಾನವನ್ನು ಹುಟ್ಟಡಗಿಸಿ ಅಭೂತಪೂರ್ವ ಜಯ ಸಾಧಿಸದ ದಿನವನ್ನು ವಿಜಯ ದಿವಸ ಎಂದು ಆಚರಿಸಲಾಗುತ್ತಿದೆ . ಹೀಗಾಗಿ ಈ ಜಯದ ನೆಪಪಿಗಾಗಿ ಈ ದಿನವನ್ನು ಭಾರತೀಯರಾದ ನಾವು ಸಂಭ್ರಮದಿಂದ ಆಚರಣೆ ಮಾಡುತ್ತೇವೆ. ಈ ಗೆಲುವಿನ ಸಂಕೇತವಾಗಿ ಡಿ.16ನ್ನು ವಿಜಯ ದಿವಸ ಎಂದು ಪ್ರತೀ ವರ್ಷ ಆಚರಿಸಲಾಗುತ್ತದೆ.

ಈ ದಿನ ಇಂಡೋ-ಪಕ್ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಭಾರತೀಯ ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸಲಾಗುವುದು. 1971ರ ಇಂಡೋ-ಪಾಕ್ ಯುದ್ಧವು 13 ದಿನಗಳ ಕಾಲ ನಡೆಯಿತು, ಈ ಯುದ್ಧವು ಡಿಸೆಂಬರ್ 16ರಂದು ಕೊನೆಗೊಂಡಿತು. ಈ ಯುದ್ಧದಲ್ಲಿ ಪಾಕಿಸ್ತಾನ ಸೋತು ಸುಣ್ಣವಾಗಿತ್ತು.
ಈ ಯುದ್ಧದ ಬಳಿಕ ಬಾಂಗ್ಲಾದೇಶ ಉದಯವಾಯಿತು. ಈಗೀನ ಬಾಂಗ್ಲಾದೇಶ ಆಗ ಪೂರ್ವ ಪಾಕಿಸ್ತಾನವಾಗಿತ್ತು. ಈ ಪ್ರದೇಶದ ಮೇಲೆ ಪಾಕ್ ಸೈನಿಕರಿಂದ ನಿರಂತರವಾಗಿ ದಾಳಿಯಾಗುತ್ತಿತ್ತು. ಇಲ್ಲಿಯ ಜನರ ಮೇಲೆ ಪಾಕ್ ಸೈನಿಕರು ದೌರ್ಜನ್ಯ ಎಸಗುತ್ತಿದ್ದರು, ಅತ್ಯಾಚಾರ, ಕೊಲೆ, ಸುಲಿಗೆಯಿಂದಾಗಿ ಇಲ್ಲಿಯ ಜನರು ನೆಮ್ಮದಿಯನ್ನು ಕಳೆದುಕೊಂಡಿದ್ದರು. ಪಾಕಿಸ್ತಾನ ಸೈನಿಕರು ನೀಡುತ್ತಿರುವ ಹಿಂಸೆಯಿಂದ ರೋಸಿ ಹೋದ ಅಲ್ಲಿಯ ಸುಮಾರು 9 ಲಕ್ಷ ನಿರಾಶ್ರಿತರು ಭಾರತದೊಳಕ್ಕೆ ನುಸುಳಿ ಬಂದು ಭಾರತದ ಸರ್ಕಾರದ ಮುಂದೆ ನಮ್ಮನ್ನು ರಕ್ಷಿಸುವಂತೆ ಬೇಡಿಕೊಂಡಿತ್ತು.
ಪಾಕಿಸ್ತಾನದ ಕೃತ್ಯವನ್ನು ವಿರೋಧಿಸಿ ಭಾರತ ಬಾಂಗ್ಲಾದೇಶ ಬಾಂಗ್ಲಾ ದೇಶಕ್ಕೆ ನೆರವು ನೀಡಲು ಮುಂದಾಯಿತು. 1971ರ ಡಿಸೆಂಬರ್ 3ರಂದು ಪಾಕಿಸ್ತಾನ ಸೇನೆಯ ವಿರುದ್ಧ ಸಮರ ಸಾರಲಾಯಿತು. ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಪಾಕಿಸ್ತಾನ ಕೇವಲ 13 ದಿನಗಳಲ್ಲಿ ಭಾರತೀಯ ಯೋಧರ ಮುಂದೆ ಸೋತು ಮಂಡಿಯೂರಿತು. ಪಾಕಿಸ್ತಾನದ 93 ಸಾವಿರಕ್ಕೂ ಅಧಿಕ ಸೈನಿಕರು ಭಾರತೀಯ ಸೈನಿಕರ ಎದುರು ತಮ್ಮ ಸೊಲನ್ನು ಒಪ್ಪಿಕೊಂಡರು. ಜಗತ್ತಿನಲ್ಲಿ ಇದುವರೆಗೆ ನಡಡದ ಯುದ್ಧದಲ್ಲಿ ಇಷ್ಟೊಂದು ಸೈನಿಕರು ಶರಣಾಗತಿಯಾದದ್ದು ಇದೇ ಮೊದಲಾಗಿತ್ತು.
ಭಾರತ ದೊಡ್ಡ ಮನಸ್ಸು ಮಾಡಿ ಒಪ್ಪಂದದ ಮೂಲಕ ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಿತು. ಈ ಯುದ್ಧ ನಡೆದ ಬಳಿಕ ಬಾಂಗ್ಲಾದೇಶ ಹುಟ್ಟಿಕೊಂಡಿತು. ಬಾಂಗ್ಲಾ ದೇಶ ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ. ನಮ್ಮ ಭಾರತೀಯ ಸೈನಿಕರ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ ಯುದ್ಧ ಇದಾಗಿದೆ. ಈ ಯುದ್ಧ ಮುಕ್ತಾಯವಾದ ದಿನವನ್ನು ವಿಜಯ್ ದಿವಸ್ ಎಂದು ಆಚರಿಸಿ ಹುತಾತ್ಮರನ್ನು ಸ್ಮರಿಸಲಾಗುವುದು.



Click it and Unblock the Notifications
