Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಝೆನ್ ಕಥೆ: ಭಿಕ್ಷುಕನ ಮೌನವೃತ ಆಚರಣೆ

ಅಲ್ಲಿ ಹತ್ತು ವರ್ಷಗಳನ್ನು ಕಳೆದ ಒರ್ವ ಬೌದ್ಧ ಭಿಕ್ಷು ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಹತ್ತು ವರ್ಷಗಳಾಯಿತು. ನೀನು ಯಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು.
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಹಾಸಿಗೆ ....ಗಟ್ಟಿ....."
ಗುರುಗಳು, " ಹೌದೇ...?" ಎಂದಷ್ಟೇ ಹೇಳಿದರು.
ಮತ್ತೆ ಹತ್ತು ವರ್ಷಗಳು ಕಳೆಯಿತು. ಆ ಬೌದ್ಧ ಭಿಕ್ಷು ಮತ್ತೆ ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಮತ್ತೆ ಹತ್ತು ವರ್ಷಗಳಾಯಿತು. ನೀನು ಮತ್ತೆ ಯಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಊಟ ....ದುರ್ವಾಸನೆ....."
ಗುರುಗಳು, " ಹೌದೇ...?" ಎಂದಷ್ಟೇ ಹೇಳಿದರು.
ಮತ್ತೂ ಹತ್ತು ವರ್ಷಗಳು ಕಳೆಯಿತು. ಮತ್ತೆ ಬೌದ್ಧ ಭಿಕ್ಷು ತನ್ನ ಗುರುಗಳ ಬಳಿ ಹೋದನು.
ಗುರುಗಳು, "ನೀನು ಇಲ್ಲಿಗೆ ಬಂದು ಮತ್ತೂ ಹತ್ತು ವರ್ಷಗಳಾಯಿತು. ನೀನು ಇನ್ನಾವ ಎರಡು ಪದಗಳನ್ನು ಮಾತನಾಡಲು ಇಷ್ಟ ಪಡುವೆ? " ಎಂದರು
ಅದಕ್ಕೆ ಬೌದ್ಧ ಭಿಕ್ಷು ಹೇಳಿದ " .....ಇಲ್ಲಿಂದ ....ಹೋಗಬೇಕು....."
ಗುರುಗಳು, "ಹೌದು, ನೀನು ಇಲ್ಲಿಂದೆ ಏಕೆ ಹೋಗಬೇಕು ಅಂತ ಅಂದುಕೊಳ್ಳುತ್ತಾ ಇದ್ದೀಯಾ ನನಗೆ ಗೊತ್ತು. ಏಕೆಂದ್ರೆ ನೀನು ಇಲ್ಲಿಗೆ ಬಂದಾಗಿನಿಂದ ನೀನು ಮಾಡ್ತಾ ಇರೋದು ಒಂದೇ ಕೆಲಸ..ದೂರು ಹೇಳುವುದು, ಗೊಣಗುವುದು ಮಾತ್ರ!" ಎಂದರು.



Click it and Unblock the Notifications
