Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ
ಲಕ್ಷ್ಮೀ ದೇವಿಯ ಒಲಿಸಿಕೊಳ್ಳಲು ಶುಕ್ರವಾರ ಮಾಡಬೇಕಾದ ಸಂಗತಿಗಳು
ಹಿಂದೂ ಧರ್ಮದಲ್ಲಿ ಶುಕ್ರವಾರ ಸಂಪತ್ತನ್ನು ನೀಡುವ ಲಕ್ಷ್ಮೀ ದೇವಿಯ ದಿನವೆಂದು ಪರಿಗಣಿಸಲಾಗಿದೆ. ಹೆಚ್ಚಿನ ಜನರು ಈ ದಿನದಂದು ಉಪವಾಸ ಮಾಡಿ, ತಮ್ಮ ಇಷ್ಟಾರ್ಥಗಳು ಸಿದ್ಧಿಯಾಗಿ ಸಂತೋಷದಿಂದ ಜೀವನ ಸಾಗಿಸಬೇಕೆಂದು ಪ್ರಾರ್ಥಿಸುವರು. ಸಂಪತ್ತಿನ ದೇವತೆಯಾಗಿರುವ ಲಕ್ಷ್ಮೀ ದೇವರನ್ನು ಒಲಿಸಿಕೊಳ್ಳುವುದು ತುಂಬಾ ಸುಲಭ.
ಪ್ರತಿಯೊಬ್ಬರಿಗೂ ಹಣದ ಅಗತ್ಯತೆ ಎನ್ನುವುದು ಇದ್ದೇ ಇರುತ್ತದೆ ಮತ್ತು ಹಣ ಸಂಪಾದನೆ ಮಾಡಲು ನಾವು ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸಬೇಕು. ನೀವು ಹಣ ಸಂಪಾದನೆ ಮಾಡುತ್ತಲಿದ್ದರೆ, ಆಗ ಅದನ್ನು ತುಂಬಾ ಪ್ರಾಮಾಣಿಕ ರೀತಿಯಾಗಿ ಸಂಪಾದಿಸಿ. ಇದು ಯಾವಾಗಲೂ ನಿಮ್ಮೊಂದಿಗೆ ಇರುವುದು. ಆದರೆ ಕೆಟ್ಟ ಮಾರ್ಗದಿಂದ ಸಂಪಾದನೆ ಮಾಡಿರುವ ಹಣವು ದೀರ್ಘಕಾಲದ ತನಕ ನಮ್ಮಲ್ಲಿ ಉಳಿಯುವುದಿಲ್ಲ. ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಬೇಕಾಗಿದ್ದರೆ ಆಗ ನೀವು ಕೆಲವೊಂದು ಕ್ರಮಗಳನ್ನು ಪಾಲಿಸಬೇಕು. ಇದು ನಿಮ್ಮ ಇಚ್ಛೆಯನ್ನು ಈಡೇರಿಸುವುದು ಮತ್ತು ಈ ಕ್ರಮಗಳು ಯಾವುದು ಎಂದು ತಿಳಿಯುವ...

•ಲಕ್ಷ್ಮೀ ದೇವಿಯು ಯಾವುದೇ ಸಮಯದಲ್ಲೂ ಮನೆಗೆ ಬರಬಹುದು. ಆದರೆ ಸಂಜೆ ವೇಳೆ ಲಕ್ಷ್ಮೀ ದೇವಿಯು ಮನೆಗೆ ಬರುವುದು ಹೆಚ್ಚು. ಇದರಿಂದ ಸಂಜೆ ವೇಳೆ ಮನೆಯಲ್ಲಿ ದೀಪ ಬೆಳಗಬೇಕು ಮತ್ತು ಸಂಪೂರ್ಣ ಮನೆಯನ್ನು ಬೆಳಗಬೇಕು.
•ಮೊಗ್ರಾ ಹೂವಿನ ಸುವಾಸನೆಯನ್ನು ಲಕ್ಷ್ಮೀ ದೇವಿಯ ಫೋಟೊದ ಮುಂದಿಡಿ. ಗುಲಾಬಿಯ ಸುವಾಸನೆಯನ್ನು ಕೂಡ ರುಚಿ ಮತ್ತು ಕೆಲಸಕ್ಕೆ ನೀಡಬೇಕು. ಲಕ್ಷ್ಮೀ ದೇವಿಯ ಮುಂದೆ ಕವ್ದಾದ ಸುವಾಸನೆ ಇಡುವ ಕಾರಣದಿಂದಾಗಿ ಮಾನಸಿ ನೆಮ್ಮದಿಯು ಸಿಗುವುದು. ಶ್ರೀಗಂಧದ ಸುವಾಸನೆ ಯಿಂದಾಗಿ ಅದೃಷ್ಟವು ಹೆಚ್ಚಾಗುವುದು. ದಂಪತಿಯು ಸುಖ ಹಾಗೂ ಸಂತೋಷದ ಜೀವನ ನಡೆಸಬೇಕಾದರೆ ಆಗ ಶುಕ್ರವಾರದಂದು ಲಕ್ಷ್ಮೀ ದೇವಿಗೆ 16 ಶೃಂಗಾರದ ಸಾಧನಗಳನ್ನು ಅರ್ಪಿಸಬೇಕು. ಪ್ರತಿನಿತ್ಯವು ಮನೆಯಲ್ಲಿ ಸುಗಂಧವನ್ನು ಹರಡುವುದರಿಂದ ಕೆಲಸ ಹಾಗೂ ವ್ಯಾಪಾರದ ಸಮೃದ್ಧಿಯಾಗುವುದು.
•ಶುಕ್ರವಾರದಂದು ಬೆಳಗ್ಗಿನ ಸಮಯದಲ್ಲಿ ನೀವು ಆಡಿಗೆ ಆಹಾರ ನೀಡಬೇಕು. ಇದರಿಂದ ಲಕ್ಷ್ಮೀ ದೇವಿಯು ಸಂತೃಪ್ತರಾಗುವರು ಮತ್ತು ಆಕೆಯ ಆಶೀರ್ವಾದವು ಯಾವಾಗಲೂ ನಿಮ್ಮೊಂದಿಗೆ ಇರುವುದು.
•ಮನೆಯಲ್ಲಿ ಸ್ವಚ್ಛತೆ ಕಡೆ ಹೆಚ್ಚಿನ ಗಮನಹರಿಸಿ. ಇದರಿಂದ ಲಕ್ಷ್ಮೀ ದೇವಿಗೆ ತುಂಬಾ ಸಂತೋಷವಾಗುವುದು. ಸಂಜೆ ವೇಳೆ ಮನೆಯಲ್ಲಿ ಗುಡಿಸದೆ ಇದ್ದರೆ ಆಗ ಲಕ್ಷ್ಮೀ ದೇವಿಯು ಹೊರಗೆ ಹೋಗುವರು.
•ನವಿಲು ನರ್ತಿಸುವ ಜಾಗಕ್ಕೆ ಶುಕ್ರವಾರ ಭೇಟಿ ನೀಡಿ. ಕೆಂಪು ಬಟ್ಟೆಯಲ್ಲಿ ಮಣ್ಣು ಹಾಕಿಕೊಂಡು ಅದನ್ನು ಶುದ್ಧವಾದ ಜಾಗದಲ್ಲಿ ಇಟ್ಟು ಪ್ರತಿನಿತ್ಯ ಪೂಜೆ ಮಾಡಿ.



Click it and Unblock the Notifications

