Latest Updates
-
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ!
ಭಗವಾನ್ ವಿಷ್ಣು, ನಾರದ ಮುನಿ ಹಾಗೂ ಶ್ರೀಮಂತ ವ್ಯಾಪಾರಿ ನಡುವಿನ ರೋಚಕ ಕಥೆ
ನಾರದ ಮುನಿಗಳು ಬ್ರಹ್ಮದೇವರ ಪುತ್ರ. ನಾರದ ಮುನಿಗಳಿಗೆ ವಿಷ್ಣು ದೇವರ ಬಗ್ಗೆ ಇರುವಂತಹ ಭಕ್ತಿಯು ಪ್ರತಿಯೊಬ್ಬ ಹಿಂದೂಗಳಿಗೆ ತಿಳಿದೇ ಇದೆ. ಈ ಬಗ್ಗೆ ಎಲ್ಲಾ ಪುರಾಣಗಳು ಮತ್ತು ಇತರ ಕಡೆಗಳಲ್ಲಿ ಉಲ್ಲೇಖವಿದೆ. ಬ್ರಹ್ಮ ದೇವರು ವೇದಗಳ ಲೇಖಕರು ಎಂದು ನಂಬಲಾಗಿದೆ. ಅದೇ ನಾರದ ಮುನಿಗಳು ವೇದಗಳಲ್ಲಿ ಇರುವಂತಹ ಸಂದೇಶವನ್ನು ಇಡೀ ವಿಶ್ವಕ್ಕೆ ಪಸರಿಸಿದ್ದಾರೆ.
ನಾರದ ಮುನಿಗಳು ತ್ರಿಲೋಕ ಸಂಚಾರಿ ಮತ್ತು ಸನ್ಯಾಸಿಗಳು ಯಾವಾಗಲೂ ದ್ವೇಷ, ಅಸೂಯೆ, ದುರಾಸೆ ಹಾಗೂ ಅಧಿಕಾರ ಇತ್ಯಾದಿಗಳಿಂದ ದೂರವಿರಬೇಕು ಎಂದು ಹೇಳಲಾಗುತ್ತದೆ. ಅದಾಗ್ಯೂ, ಹಿಂದೂ ಪುರಾಣಗಳಲ್ಲಿ ಹಲವಾರು ಕಥೆಗಳು ಇವೆ ಮತ್ತು ಸನ್ಯಾಸಿಗಳು ಕೂಡ ಕೆಲವು ಆಕರ್ಷಣೆಗೆ ಒಳಗಾಗಿ ಅಂತಿಮವಾಗಿ ದೇವರು ಮಧ್ಯ ಪ್ರವೇಶ ಮಾಡಿದ ಬಳಿಕ ತಮ್ಮ ತಪ್ಪನ್ನು ಮನವರಿಕೆ ಮಾಡಿಕೊಂಡಿರುವರು.

ನಾರದ ಮುನಿಗಳು ತ್ರಿಲೋಕ ಸಂಚಾರಿ
ನಾರದ ಮುನಿಗಳ ಬಗ್ಗೆ ಇಂತಹ ಒಂದು ಘಟನೆಯಿದೆ. ಇಲ್ಲಿ ಶ್ರೇಷ್ಠ ಸನ್ಯಾಸಿಯೊಬ್ಬರು ಹೆಮ್ಮೆಗೆ ಸಿಲುಕುವುದು ಕೂಡ ಕಂಡುಬಂದಿದೆ. ಈ ಪ್ರತಿಷ್ಠೆಯು ಅವರನ್ನು ಯಾವ ಮಟ್ಟಕ್ಕೆ ತಲುಪಿಸಿತು ಮತ್ತು ಅವರು ಇದರಿಂದ ಹೇಗೆ ಮುಕ್ತಿ ಪಡೆದು ಎಂದು ತಿಳಿಯುವ. ನಾರಾಯಣ ನಾರಾಯಣ ಎಂದು ಹೇಳುತ್ತಾ ವಿಷ್ಣುವಿನ ಗುಣಗಾನ ಮಾಡುತ್ತಾ ನಾರದ ಮುನಿಗಳು ತ್ರಿಲೋಕ ಸಂಚಾರ ಮಾಡುತ್ತಲಿದ್ದರು. ಒಂದು ಸಲ ಅವರು ಒಬ್ಬ ಬಡ ವ್ಯಕ್ತಿಯು ತುಂಬಾ ಬೇಸರದಲ್ಲಿರುವುದು ಮತ್ತು ಒತ್ತಡದಿಂದ ಇರುವುದು ಕಂಡುಬಂತು. ಆತನಿಗೆ ನೆರವು ಬೇಕಿದೆ ಎಂದು ನಾರದ ಮುನಿಗಳಿಗೆ ತಿಳಿಯಿರಿ. ನಾರದ ಮುನಿಗಳು ಆತನ ಬಳಿಗೆ ತೆರಳಿದರು ಮತ್ತು ಆತನ ಚಿಂತೆಗೆ ಕಾರಣವೇನು ಎಂದು ಕೇಳಿದರು.

ಶ್ರೀಮಂತ ವ್ಯಾಪಾರಿ ಆಶೀರ್ವಾದ ಕೇಳಿದ
ಆ ವ್ಯಕ್ತಿಯು ತುಂಬಾ ಶ್ರೀಮಂತ ವ್ಯಾಪಾರಿಯಾಗಿದ್ದ. ಆದರೆ ಆತನಿಗೆ ಸಂತಾನವಿಲ್ಲದೆ ಇದ್ದ ಕಾರಣದಿಂದಾಗಿ ತನ್ನ ಸಂಪತ್ತು ಯಾವುದಕ್ಕೂ ಉಪಯೋಗವಿಲ್ಲವೆಂದು ಆತ ಹೇಳುತ್ತಲಿದ್ದ. ಗಂಡು ಮಗು ಆಗಲೆಂದು ಆಶೀರ್ವದಿಸುವಂತೆ ಆತ ನಾರದ ಮುನಿಗಳಲ್ಲಿ ಕೇಳಿಕೊಂಡ. ಆತ ಇದೆಲ್ಲವನ್ನೂ ಹೇಳುತ್ತಿದ್ದಂತೆ ಆತನ ಕಣ್ಣುಗಳಲ್ಲಿ ಆಶಯ ಮತ್ತು ನೋವು ಕಂಡುಬಂತು. ಇದಕ್ಕೆ ಉತ್ತರಿಸಿದ ನಾರದ ಮುನಿಗಳು, ವಿಷ್ಣು ದೇವರಿಂದ ನಾನು ಕೂಡ ಎಲ್ಲಾ ಆಶೀರ್ವಾದ ಪಡೆಯುತ್ತೇನೆ ಎಂದು ಹೇಳುವರು. ಹೀಗಾಗಿ ವಿಷ್ಣು ದೇವರಲ್ಲಿ ಸಂತಾನ ಭಾಗ್ಯ ನೀಡುವಂತಹ ವರ ಕೇಳಿ ಎಂದು ವ್ಯಾಪಾರಿಗೆ ನಾರದ ಮುನಿಗಳು ಹೇಳುವರು.

ವಿಷ್ಣು ದೇವರ ಬಳಿಗೆ ನಾರದ ಮುನಿಗಳು ಪ್ರಸ್ತಾವ ಕೊಂಡು ಹೋದರು
ವ್ಯಾಪಾರಿಯ ಮಾತು ನಾರದ ಮುನಿಗಳ ತಲೆಯಲ್ಲಿ ಇರುವಂತೆ ಅವರು ನೇರವಾಗಿ ವಿಷ್ಣು ದೇವರ ಬಳಿಗೆ ಹೋಗುವರು. ಈ ವೇಳೆ ವಿಷ್ಣು ದೇವರು ವೈಕುಂಠದಲ್ಲಿ ಧ್ಯಾನಾಸ್ತಕರಾಗಿದ್ದರು. ನಾರಾಯಣ, ನಾರಾಯಣ ಎನ್ನುವ ಪದ ಕೇಳುತ್ತಾ ಇರುವಂತೆ ವಿಷ್ಣು ದೇವರಿಗೆ ನಾರದ ಮುನಿಗಳು ಬಂದಿರುವುದು ಸ್ಪಷ್ಟವಾಯಿತು. ಪ್ರೀತಿಯ ದೇವರೇ, ಒಬ್ಬ ಭಕ್ತನಿಗೆ ನಿಮ್ಮ ಅಗತ್ಯವಿದೆ ಎಂದು ನಾರದ ಮುನಿಗಳು ಹೇಳುವರು. ವಿಷ್ಣು ದೇವರು ಇದನ್ನು ಕೇಳುತ್ತಿದ್ದಂತೆ ಅವರು ತನ್ನ ಕಣ್ಣು ತೆರೆಯುವರು ಮತ್ತು ನನ್ನ ಅಗತ್ಯ ಯಾರಿಗೆ ಮತ್ತು ಯಾಕೆ ಇದೆ ಇದೆ ಎಂದು ಕೇಳುವರು.

ಮನವಿಗೆ ವಿಷ್ಣು ದೇವರು ಸ್ಪಂದನೆ ನೀಡಿದರು
ನಾರದ ಮುನಿಗಳು ವ್ಯಾಪಾರಿಯ ಕಥೆಯನ್ನು ವಿವರಿಸುವರು ಮತ್ತು ಆ ವ್ಯಾಪಾರಿಗೆ ಸಂತಾನವಾಗುವಂತೆ ವಿಷ್ಣು ದೇವರು ಅವರಿಗೆ ವರ ನೀಡಬೇಕು ಎಂದು ಕೇಳಿಕೊಳ್ಳುವರು. ತಂದೆಯಾಗುವಂತಹ ಭಾಗ್ಯವು ವ್ಯಾಪಾರಿಯ ಹಣೆಬರಹದಲ್ಲಿ ಬರೆದಿಲ್ಲವೆಂದು ವಿಷ್ಣು ದೇವರು ಹೇಳುವರು. ವ್ಯಕ್ತಿಯ ಹಣೆಬರಹವನ್ನು ಬದಲಾಯಿಸಲು ಸಾಧ್ಯವಿಲ್ಲ ಮತ್ತು ಹಾಗೆ ಮಾಡಿದರೆ ಅದು ಎಲ್ಲಾ ಯೋಜನೆ ಮತ್ತು ಪ್ರಕೃತಿಗೆ ವಿರುದ್ಧವಾಗಿರುವುದು ಎಂದು ಹೇಳುವರು. ವಿಷ್ಣು ಹೇಳಿರುವ ಮಾತನ್ನು ಅರ್ಥ ಮಾಡಿಕೊಂಡ ನಾರದ ಮುನಿಗಳು ಇದನ್ನು ಗೌರವಿಸಿ, ಅಲ್ಲಿಂದ ತೆರಳುವರು.

ಕೆಲವು ವರ್ಷಗಳ ಬಳಿಕ
ಕೆಲವು ವರ್ಷಗಳ ಬಳಿಕ ನಾರದ ಮುನಿಗಳಿಗೆ ಮತ್ತೆ ಆ ಸಂತಾನವಿಲ್ಲದ ವ್ಯಾಪಾರಿಯ ನೆನಪಾಯಿತು ಮತ್ತು ಆತನನ್ನು ಭೇಟಿಯಾಗಬೇಕು ಎಂದು ಅವರಿಗೆ ಅನಿಸಿತು. ವ್ಯಾಪಾರಿಯ ಮನೆಗೆ ನಾರದ ಮುನಿಗಳು ತೆರಳುವರು. ಅದಾಗ್ಯೂ, ವ್ಯಾಪಾರಿಯು ನಾಲ್ಕು ಮಕ್ಕಳೊಂದಿಗೆ ಕುಳಿತುಕೊಂಡಿರುವುದನ್ನು ನೋಡಿ ನಾರದ ಮುನಿಗಳಿಗೆ ಅಚ್ಚರಿ ಆಯಿತು. ವ್ಯಾಪಾರಿ ಬಳಿ ತೆರಳಿದ ನಾರದ ಮುನಿಗಳು, ಈ ನಾಲ್ಕು ಮಕ್ಕಳು ಯಾರು ಎಂದು ಕೇಳುವರು. ಈ ವೇಳೆ ವ್ಯಾಪಾರಿಯು ತುಂಬಾ ಸಂತೋಷದಿಂದ, ಆ ದೇವರಿಗೆ ತುಂಬಾ ಧನ್ಯವಾದ, ನಿಮ್ಮ ಆಶೀರ್ವಾದದಿಂದಾಗಿ ನನಗೆ ದೇವರು ವರ ನೀಡಿದರು ಮತ್ತು ನನಗೆ ನಾಲ್ಕು ಮಕ್ಕಳನ್ನು ಕರುಣಿಸಿದರು. ಗೊಂದಲಕ್ಕೆ ಒಳಗಾದ ನಾರದ ಮುನಿಗಳು ಅಲ್ಲಿಂದ ತೆರಳುವರು ಮತ್ತು ವಿಷ್ಣುವಿನ ಬಳಿಗೆ ಹೋಗುವರು.

ಅಚ್ಚರಿಗೊಳಗಾದ ನಾರದ ಮುನಿಗಳು ಮತ್ತೆ ವಿಷ್ಣುವಿನ ಬಳಿಗೆ ಬರುವರು
ನಾರಾಯಣ, ನಾರಾಯಣ, ಪ್ರೀತಿಯ ದೇವರೇ, ನೀವು ಯಾವಾಗ ಮತ್ತು ಹೇಗೆ ಆ ವ್ಯಾಪಾರಿಯ ಹಣೆ ಬರಹವನ್ನು ಬದಲಾಯಿಸಿದ್ದೀರಿ? ಇದಕ್ಕೆ ವಿಷ್ಣು ದೇವರು ನಗುತ್ತಾ, ಹೀಗೆ ಹೇಳುವರು, ಕೆಲವೊಂದು ಸಮಯದಲ್ಲಿ ನಾನು ಭಕ್ತರ ಭಕ್ತಿಯನ್ನು ಪರೀಕ್ಷೆ ಮಾಡುತ್ತೇನೆ. ಒಂದು ಸಲ ಶ್ರೇಷ್ಠ ಸನ್ಯಾಸಿಯೊಬ್ಬರು ವೈಕುಂಠಗೆ ನನ್ನನ್ನು ಭೇಟಿಯಾಗಲು ಬರುವರು. ಆ ವೇಳೆ ನನ್ನ ಹೊಟ್ಟೆಯಲ್ಲಿ ನೋವು ಇತ್ತು ಮತ್ತು ನಾನು ನೋವು ತಡೆಯಲಾರದೆ ಅಳುತ್ತಿದ್ದೆ. ಇದನ್ನು ನೋಡಿದ ಸನ್ಯಾಸಿ, ನನಗೆ ಹೇಗೆ ನೆರವು ನೀಡಬಹುದು ಎಂದು ಕೇಳಿದರು. ಭೂಮಿ ಮೇಲೆ ಇರುವಂತಹ ಮನುಷ್ಯನ ಹೃದಯದ ರಕ್ತದಿಂದ ಮಾತ್ರ ಈ ನೋವು ನಿವಾರಣೆ ಮಾಡಲು ಇರುವ ಒಂದೇ ಮಾರ್ಗ ಎಂದು ನಾನು ಅವರಿಗೆ ಹೇಳಿದೆ.

ಸಂತೋಷಗೊಂಡ ವಿಷ್ಣು, ವ್ಯಾಪಾರಿಗೆ ಆಶೀರ್ವಾದ ನೀಡಿದರು
ವಿಷ್ಣು ದೇವರು ಇದನ್ನು ಮುಂದುವರಿಸುತ್ತಾ, ಸನ್ಯಾಸಿಯು ಈಗ ಮನುಷ್ಯನಾಗಿ ಇರದಿರುವ ಕಾರಣ ಮತ್ತು ಅವರು ದೈವಿಶಕ್ತಿ ಪಡೆದಿರುವುದರಿಂದ ಅವರ ರಕ್ತವು ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಅದಾಗ್ಯೂ, ಮನುಷ್ಯನ ರಕ್ತಕ್ಕಾಗಿ ಆತ ಭೂಲೋಕದಲ್ಲಿ ಸಂಚಾರ ಮಾಡಲು ಆರಂಭಿಸಿದರು. ದೇವರಿಗೆ ರಕ್ತ ಬೇಕೆಂದು ಅವರು ಪ್ರತಿಯೊಬ್ಬರಿಗೂ ಹೇಳಿದರು. ಆದರೆ ಜನರು ಸನ್ಯಾಸಿಯನ್ನು ನಂಬಲಿಲ್ಲ. ನೀವು ಕಥೆ ಹೇಳಿರುವಂತಹ ವ್ಯಾಪಾರಿಯ ಮನೆಗೆ ಸನ್ಯಾಸಿಯು ತೆರಳುವರು. ವ್ಯಾಪಾರಿಯು ಸನ್ಯಾಸಿಯನ್ನು ನೋಡಿ, ಅವರು ದೈವಿ ಶಕ್ತಿ ಹೊಂದಿರುವವರು ಎಂದು ತಿಳಿದರು ಮತ್ತು ಅವರ ಮೇಲೆ ನಂಬಿಕೆಯನ್ನಿಟ್ಟರು. ವ್ಯಾಪಾರಿಯು ತನ್ನ ಎದೆಯನ್ನು ಚಾಕೂವಿನಿಂದ ಇರಿದು, ನಾಲ್ಕು ಹನಿ ರಕ್ತ ನೀಡುವನು.

ಸಂತೋಷಗೊಂಡ ವಿಷ್ಣು, ವ್ಯಾಪಾರಿಗೆ ಆಶೀರ್ವಾದ ನೀಡಿದರು
ಆತನ ಪ್ರೀತಿ ಮತ್ತು ದೇವರು ಹಾಗೂ ಸಾಮಾನ್ಯರನ್ನು ಗುರುತಿಸುವ ಜ್ಞಾನದಿಂದ ಸಂತೋಷಗೊಂಡೆ ಮತ್ತು ಸನ್ಯಾಸಿಯು ನನಗೋಸ್ಕರ ನೋವು ನಿವಾರಣೆಗಾಗಿ ರಕ್ತ ಪಡೆಯಲು ಭೂಲೋಕದಲ್ಲಿ ಸುತ್ತಾಡಿದರು. ಇದರಿಂದಾಗಿ ನಾನು ವ್ಯಾಪಾರಿಗೆ ವರ ನೀಡಿದೆ ಎಂದು ವಿಷ್ಣು ದೇವರು ನಡೆದ ಘಟನೆಯನ್ನು ವಿವರಿಸುತ್ತಾರೆ. ಇದರಿಂದ ನಾರದ ಮುನಿಗಳು ಮತ್ತಷ್ಟು ಸಂತುಷ್ಟರಾಗಿ ವಿಷ್ಣುವಿನ ಗುಣಗಾನದಲ್ಲಿ ತೊಡಗುವರು.



Click it and Unblock the Notifications