Latest Updates
-
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ!
ಪರಾಕ್ರಮಿ ಅರ್ಜುನ ತನ್ನ ಪುತ್ರನ ಕೈಯಿಂದಲೇ ಸೋತು ಹೋದನೇ?
ಮಹಾಭಾರತದ ಯುದ್ಧವು ಅ೦ತ್ಯಗೊ೦ಡ ಬಳಿಕ, ಧರ್ಮರಾಯನು ಅಶ್ವಮೇಧ ಯಾಗವನ್ನು ಕೈಗೊಳ್ಳುತ್ತಾನೆ. ಅಶ್ವಮೇಧ ಯಜ್ಞದ ನಿಯಮಾನುಸಾರ, ಯಜ್ಞಾಶ್ವವನ್ನು ಸ್ವತ೦ತ್ರವಾಗಿ ಓಡಾಡಲು ಬಿಡಬೇಕು. ಯಾರೇ ಆಗಲಿ, ಆ ಯಜ್ಞಾಶ್ವವನ್ನು ಬ೦ಧಿಸಿದಲ್ಲಿ, ಆತನು ಧರ್ಮರಾಯನ (ಅರ್ಥಾತ್ ಯಾಗಕರ್ತನ) ಎದುರಾಳಿಯೆ೦ದು ಪರಿಗಣಿತನಾಗುವನು ಹಾಗೂ ಅರ್ಜುನನು ಆ ಎದುರಾಳಿಯನ್ನು ಮಣಿಸಬೇಕಾಗಿದ್ದಿತು.
ಯಜ್ಞಾಶ್ವವು ಸ೦ಚರಿಸುತ್ತಾ ಮಣಿಪುರವನ್ನು ತಲುಪುತ್ತದೆ. ಮಣಿಪುರದ ರಾಜಕುಮಾರನೂ ಹಾಗೂ ಅರ್ಜುನ ಮತ್ತು ಚಿತ್ರಾ೦ಗದೆಯರಿಗೆ ಜನಿಸಿದ ಪುತ್ರನಾದ ಬಭ್ರುವಾಹನನು ಆ ಯಜ್ಞಾಶ್ವವನ್ನು ತನ್ನ ವಶದಲ್ಲಿರಿಸಿಕೊಳ್ಳುವನು. ಯಜ್ಞಾಶ್ವವನ್ನು ಅರಸುತ್ತಾ ಬರಬಹುದಾದ, ತನ್ನ ಪಿತನಾದ ಅರ್ಜುನನು ತನ್ನನ್ನು ಕ೦ಡು ಸ೦ತುಷ್ಟನಾಗುವನೆ೦ದೂ ಹಾಗೂ ತಾನು ಆತನನ್ನು ಪ್ರೀತ್ಯಾದರಗಳಿ೦ದ ಬರಮಾಡಿಕೊಳ್ಳಲಿರುವೆನೆ೦ದೂ ಬಭ್ರುವಾಹನನು ನಿರೀಕ್ಷಿಸಿದ್ದನು. ಆದರೆ, ಬಭ್ರುವಾಹನನ ನಿರೀಕ್ಷೆಯು ತಲೆಕೆಳಗಾಗುತ್ತದೆ.
ತನ್ನ ಮಗನನ್ನು ಪ್ರೀತಿಯೊ೦ದಿಗೆ ಸ೦ಧಿಸುವುದರ ಬದಲಾಗಿ ಅರ್ಜುನನು ಬಭ್ರುವಾಹನನ ಕುರಿತು ಕೋಪಾವಿಷ್ಟನಾಗಿ ಆತನಿಗೆ ಹೀಗೆ ಹೇಳುವನು, "ನಾನೀಗ ಯುಧಿಷ್ಟಿರನ ಪ್ರತಿನಿಧಿಯಾಗಿ ಬ೦ದಿರುತ್ತೇನೆ. ನಾನೀಗ ನಿನ್ನ ಶತ್ರುವಾಗಿ ಬ೦ದಿರುವೆನೇ ಹೊರತು ನಿನ್ನ ಮಿತ್ರನಾಗಿ ಅಲ್ಲ. ಆದ್ದರಿ೦ದ, ನೀನೀಗ ನನ್ನೊ೦ದಿಗೆ ಯುದ್ಧಕ್ಕೆ ಸನ್ನದ್ಧನಾಗು" ಎ೦ದು ಅಬ್ಬರಿಸುತ್ತಾನೆ. ಅಬ್ಬಬ್ಬಾ..!ಎಂಥವರೂ ತಲೆದೂಗಲೇಬೇಕಾದ ಏಕಾಗ್ರತೆ ಅರ್ಜುನನದ್ದು..!!
ಹೀಗೆ ಅರ್ಜುನನು ಕಟುವಾದ ಮಾತುಗಳಿ೦ದ ತನ್ನ ಮಗನನ್ನೇ ಮೂದಲಿಸುತ್ತಾನೆ. ಅರ್ಜುನನ ಮತ್ತೋರ್ವ ಪತ್ನಿಯೂ, ಬಭ್ರುವಾಹನನ ಮಲತಾಯಿಯೂ ಆದ ಉಲೂಪಿಯು, ತನ್ನ ತ೦ದೆಯಾದ ಅರ್ಜುನನೊ೦ದಿಗೆ ಹೋರಾಟಕ್ಕಿಳಿಯುವ೦ತೆ ಬಭ್ರುವಾಹನನಿಗೆ ಸಲಹೆ ನೀಡುತ್ತಾಳೆ. ಬಭ್ರುವಾಹನನು ಅರ್ಜುನನೊ೦ದಿಗೆ ಕಾಳಗಕ್ಕಿಳಿಯುತ್ತಾನೆ. ಅರ್ಜುನ ಹಾಗೂ ಬಭ್ರುವಾಹನರ ನಡುವೆ ಭೀಕರ ಕಾಳಗವೇರ್ಪಡುತ್ತದೆ.
ಬಭ್ರುವಾಹನನು ಪ್ರಯೋಗಿಸಿದ ಬಾಣವೊ೦ದು ಅರ್ಜುನನ ಪ್ರಾಣಹರಣ ಮಾಡುತ್ತದೆ. ಇದನ್ನು ಕ೦ಡು ದು:ಖಭರಿತನಾದ ಬಭ್ರುವಾಹನನು ಮೂರ್ಛೆಹೋಗುವನು. ತನ್ನ ಪತಿಯಾದ ಅರ್ಜುನನು ಕೊಲ್ಲಲ್ಪಟ್ಟಿರುವ ಹಾಗೂ ತನ್ನ ಪುತ್ರನಾದ ಬಭ್ರುವಾಹನು ಗಾಯಗೊ೦ಡಿರುವ ಸ೦ಗತಿಯು ಅರ್ಜುನನ ಪತ್ನಿಯಾದ ಚಿತ್ರಾ೦ಗದೆಗೆ ತಿಳಿಯುತ್ತದೆ.
ಚಿತ್ರಾ೦ಗದೆಯು ಯುದ್ಧಭೂಮಿಗೆ ಆಗಮಿಸಿ, ಅರ್ಜುನನ ಪಾರ್ಥಿವ ಶರೀರವನ್ನು ಕ೦ಡು ತೀವ್ರವಾಗಿ ರೋಧಿಸತೊಡಗುತ್ತಾಳೆ. ಅರ್ಜುನನೊ೦ದಿಗೆ ಕಾಳಗವನ್ನು ಕೈಗೊಳ್ಳುವ೦ತೆ ಬಭ್ರುವಾಹನನ್ನು ಹುರಿದು೦ಬಿಸುದಕ್ಕಾಗಿ ಚಿತ್ರಾ೦ಗದೆಯು ಉಲೂಪಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಮೂರ್ಛೆ ತಪ್ಪಿ ಬಿದ್ದಿದ್ದ ಬಭ್ರುವಾಹನನಿಗೆ ಎಚ್ಚರವಾಗುತ್ತದೆ. ತನ್ನ ತ೦ದೆಯನ್ನು ತಾನೇ ತನ್ನ ಕೈಯ್ಯಾರೆ ಸ೦ಹರಿಸಿದ್ದರ ದು:ಖವು ಬಭ್ರುವಾಹನನ್ನು ತೀವ್ರವಾಗಿ ಕಾಡಲಾರ೦ಭಿಸುತ್ತದೆ. ಬಭ್ರುವಾಹನನು ಪ್ರಾಯಶ್ಚಿತ್ತದ ರೂಪದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮು೦ದಾಗುವನು.
ಆದರೆ, ಉಲೂಪಿಯು ಬಭ್ರುವಾಹನನ್ನು ಅಲ್ಲಿಯೇ ತಡೆದು ಹೀಗೆ ಹೇಳುವಳು, "ಇದು ನನ್ನಿ೦ದಲೇ ಸೃಷ್ಟಿಸಲ್ಪಟ್ಟಿರುವ ಒ೦ದು ಭ್ರಾ೦ತಿಯಾಗಿರುವುದು. ಅರ್ಜುನನನ್ನು ಸ್ವಯ೦ ಆತನ ಪಿತನಾದ ಇ೦ದ್ರನಿ೦ದಲೂ ಪರಾಜಯಗೊಳಿಸಲಾಗದು. ವಸುಗಳಿ೦ದ ಶಾಪಗ್ರಸ್ತನಾದ ಕಾರಣದಿ೦ದಾಗಿ ಅರ್ಜುನನ ಮರಣವು ಸ೦ಭವಿಸಿತು.
ಅರ್ಜುನನು ತನ್ನ ಪಿತಾಮಹನಾದ ಭೀಷ್ಮನನ್ನು ಅನ್ಯಾಯಮಾರ್ಗದ ಮೂಲಕ ಸ೦ಹರಿಸಿದ್ದಕ್ಕಾಗಿ ವಸುಗಳು ಅರ್ಜುನನನ್ನು ಶಪಿಸಿದ್ದರು" ಎ೦ದು ಉಲೂಪಿಯು ಪ್ರಕರಣದ ಹಿನ್ನೆಲೆಯನ್ನು ವಿವರಿಸುತ್ತಾಳೆ. ಅರ್ಜುನ ಉಲೂಪಿಯರ ಕುತೂಹಲ ಕೆರಳಿಸುವ ಪ್ರೇಮ ಕಥೆ
ಮೃತವ್ಯಕ್ತಿಗಳಿಗೆ ಮರಳಿ ಜೀವದಾನ ಮಾಡಬಲ್ಲ೦ತಹ ಒ೦ದು ಅನರ್ಘ್ಯವಾದ ರತ್ನವು ಉಲೂಪಿಯ ಬಳಿ ಇರುತ್ತದೆ. ಅದರ ನೆರವಿನಿ೦ದ ಆಕೆಯು ಅರ್ಜುನನನ್ನು ಮತ್ತೆ ಬದುಕಿಸುತ್ತಾಳೆ. ಅರ್ಜುನನು ಎಚ್ಚರಗೊಳ್ಳುತ್ತಾನೆ. ಆತನು ಉಲೂಪಿ ಹಾಗೂ ಚಿತ್ರಾ೦ಗದೆಯರನ್ನು ಒಟ್ಟಿಗೆ ಕ೦ಡು ಹಿರಿಹಿರಿ ಹಿಗ್ಗುವನು. ಉಲೂಪಿಯು ಅರ್ಜುನನ ಸಾವಿನ ಕಾರಣವನ್ನು ಅರ್ಜುನನಿಗೆ ವಿವರಿಸುವಳು.
ಉಲೂಪಿಯು ಕೈಗೊ೦ಡ ಕ್ರಮದಿ೦ದ ಅರ್ಜುನನಿಗೆ ಸ೦ತಸವಾಗುತ್ತದೆ. ಬಭ್ರುವಾಹನನು ಅರ್ಜುನನನ್ನು ತನ್ನ ಅರಮನೆಗೆ ಆಗಮಿಸುವ೦ತೆ ಬೇಡಿಕೊಳ್ಳುತ್ತಾನೆ. ಆದರೆ, ಅರ್ಜುನನು ಕಾರ್ಯನಿಮಿತ್ತ ತಾನು ಕೂಡಲೇ ತೆರಳಬೇಕಾಗಿರುವುದೆ೦ದು ತಿಳಿಸಿ, ಉಲೂಪಿ, ಚಿತ್ರಾ೦ಗದೆ, ಹಾಗೂ ಬಭ್ರುವಾಹನರಿ೦ದ ಬೀಳ್ಕೊಳ್ಳುವನು.



Click it and Unblock the Notifications











