Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಝೆನ್ ಕಥೆ : ಮನಸಲ್ಲಿ ಹೊತ್ತುಕೊಂಡ ಭಾರದ ಕಲ್ಲು

ತಮ್ಮನ್ನು ಬೆಚ್ಚಗೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಬೌದ್ಧ ಭಿಕ್ಷುಗಳು ಮಾತನಾಡುತ್ತಿದ್ದುದನ್ನು ಹೋಗೆನ್ ಕೇಳಿಸಿಕೊಂಡರು. ಅವರ ಮಾತುಗಳು ಹೋಗೆನ್ ರಲ್ಲಿ ಆಸಕ್ತಿ ಕೆರಳಿಸಿದವು. ಮೈ ಬೆಚ್ಚಗಿಸಿಕೊಳ್ಳುತ್ತ ಭಿಕ್ಕುಗಳು ವಿಷಯಾತ್ಮಕತೆ ಮತ್ತು ವಾಸ್ತವಿಕತೆಯ ಬಗ್ಗೆ ಮಾತನಾಡಲು ತೊಡಗಿದರು. ಝೆನ್ ಗುರು ಹೋಗೆನ್ ಕೂಡಾ ಅವರ ಜೊತೆ ಸೇರಿಕೊಂಡರು.
ಸಹಜವಾಗಿ ಅವರೆಲ್ಲರ ಗಮನ ಝೆನ್ ಗುರು ಮೇಲೆ ತಿರುಗಿತು. ಅವರು ಏನು ಹೇಳುತ್ತಾರೋ ಎಂದು ಕುತೂಹಲದಿಂದ ಕಾಯುತ್ತಿದ್ದ ಅವರನ್ನು ಉದ್ದೇಶಿಸಿ, "ಅಲ್ಲಿ ಒಂದು ದೊಡ್ಡ ಕಲ್ಲು ಇದೆ. ಇದು ನಿಮ್ಮ ಮನಸಿನ ಒಳಗೆ ಇದೆಯೆಂದು ತಿಳಿಯುತ್ತೀರೋ ಅಥವಾ ಮನಸಿನ ಹೊರಗೆ ಇದೆ ಎಂದು ಭಾವಿಸುತ್ತೀರೋ?" ಎಂದು ಹೋಗೆನ್ ಕೇಳಿದರು.
ಒಬ್ಬ ಭಿಕ್ಕುವು ಹೇಳಿದ, "ಬುದ್ಧರ ವಿಚಾರಧಾರೆಯ ಪ್ರಕಾರ ಕಲ್ಲು ನನ್ನ ಮನಸಿನ ಒಳಗೆ ಇದೆ. ಯಾಕೆಂದರೆ ಪ್ರತಿಯೊಂದರ ದರ್ಶನ ಮತ್ತು ನೋಡುವಿಕೆ ಎರಡೂ ಕೂಡಾ ಮನಸನ್ನು ಅವಲಂಬಿಸಿ ಇರುತ್ತದೆ."
ಮಹಾನ್ ದಾರ್ಶನಿಕರಾಗಿದ್ದ ಗುರು ಹೋಗೆನ್ ಅವರು ನಂತರ ಮುಗುಳ್ನಗೆ ನಕ್ಕು, "ಅಷ್ಟು ದೊಡ್ಡ ಕಲ್ಲನ್ನು ನಿಮ್ಮ ಮನಸಲ್ಲಿ ಹೊತ್ತುಕೊಂಡಿರುವುದರಿಂದ ನಿಮ್ಮ ತಲೆ ತುಂಬ ಭಾರ ಆಗಿರಬೇಕು!"



Click it and Unblock the Notifications
