Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಝೆನ್ ಕಥೆ : ಎಲ್ಲಕ್ಕಿಂತ ಪ್ರಬಲವಾದ ವಸ್ತು ಯಾವುದು?

ಅಚ್ಚರಿ ಎಂಬಂತೆ ಆ ವ್ಯಕ್ತಿ ಹಠಾತ್ತನೆ ವ್ಯಾಪಾರಿಯಾದನು. ಮತ್ತು ಅವನು ಕಲ್ಪಿಸಿಕೊಂಡಂತೆ ಅತ್ಯಂತ ವಿಲಾಸೀ ಜೀವನವನ್ನು ಆನಂದಿಸಲು ಆರಂಭಿಸಿದನು. ಆದರೆ ತಾನು ಕಡಿಮೆ ಸಿರಿವಂತ ಎಂದು ಸ್ವತಃ ತನಗೇ ಅನಿಸಿ, ಸಿರಿತನದ ಬಗ್ಗೆ ಅಸೂಯೆ ಮತ್ತು ದ್ವೇಷ ಮೂಡಲಾರಂಭಿಸಿತು. ಆಗ ಒಬ್ಬ ಉನ್ನತ ಅಧಿಕಾರಿಯು ಒಂದು ಪಲ್ಲಕ್ಕಿಯಲ್ಲಿ ಹಾದು ಹೋದನು. ಸೈನಿಕರ ಪಡೆಯು ಜಾಗಟೆಯನ್ನು ಬಾರಿಸುತ್ತಾ ಆ ಅಧಿಕಾರಿಯನ್ನು ಹಿಂಬಾಲಿಸುತ್ತಿದ್ದರು. ಎಷ್ಟೇ ಶ್ರೀಮಂತನಾಗಿದ್ದರೂ ಮೊದಲು ಹೊರಡುವುದು ಮೆರವಣಿಗೆಯೇ. ಹೀಗಾಗಿ ಆ ಉನ್ನತ ಅಧಿಕಾರಿಯ ಪಟ್ಟ ಎಷ್ಟು ಪ್ರಬಲವಾಗಿದೆ? ಎಂದು ಈ ಕಲ್ಲು ಒಡೆಯುವವನು ಭಾವಿಸಿದನು ಮತ್ತು ಉನ್ನತ ಅಧಿಕಾರಿಯಾಗಬೇಕು ಎಂದು ಬಯಸಿದನು.
ನಂತರ ಅವನು ಉನ್ನತ ಅಧಿಕಾರಿಯಾದನು. ಎಲ್ಲೇ ಹೋದರು ಪಲ್ಲಕ್ಕಿಯಲ್ಲಿ ಮಾಡಿದ ಕುರ್ಚಿಯಲ್ಲಿ ಇವನನ್ನು ಹೊತ್ತುಕೊಂಡು ಹೋಗುತ್ತಿದ್ದರು. ಇವನಿಗೆ ಆತಂಕವಾಯಿತು ಮತ್ತು ಸುತ್ತಲಿನ ಜನರಿಂದ ದ್ವೇಷಕ್ಕೆ ಒಳಗಾದನು. ಅಷ್ಟೇ ಅಲ್ಲದೇ ಬೇಸಿಗೆಯ ಸಮಯದಲ್ಲಿ ಇದು ತುಂಬಾ ಬಿಸಿಯಾಗುತ್ತಿತ್ತು. ಹೀಗಾಗಿ ಈ ಪಲ್ಲಕ್ಕಿಯ ಕುರ್ಚಿಯಲ್ಲಿ ಕೂರಲು ಉನ್ನತ ಅಧಿಕಾರಿಗೆ ಅನನುಕೂಲವಾಗುತ್ತಿತ್ತು. ನಂತರ ಮೇಲೆ ಇರುವಂಥ ಸೂರ್ಯನನ್ನು ನೋಡಿದನು. ಸೂರ್ಯನು ಆಕಾಶದಲ್ಲಿ ಹೆಮ್ಮೆಯಿಂದ ಪ್ರಜ್ವಲಿಸುತ್ತಿದ್ದನು. ಆದ್ರೆ ಅವನ ಉಪಸ್ಥಿತಿಯು ಯಾರನ್ನೂ ಬಾಧಿಸುವುದಿಲ್ಲ. ಹೀಗಾಗಿ ಸೂರ್ಯ ಎಷ್ಟು ಪ್ರಬಲವಾಗಿದ್ದಾನೆ? ಎಂದು ಭಾವಿಸಿದನು ಮತ್ತು ಸೂರ್ಯನಾಗಬೇಕು ಎಂದು ಬಯಸಿದನು.
ನಂತರ ಆ ವ್ಯಕ್ತಿಯು ಸೂರ್ಯನಾದನು. ತನ್ನ ತೀಕ್ಷ್ಣವಾದ ಕಿರಣಗಳಿಂದ ಎಲ್ಲರ ಮೇಲೆಯೂ ಹೊಳೆಯಲಾರಂಭಿಸಿದನು. ಭೂಮಿಯೆಲ್ಲಾ ಸುಡಲಾರಂಭಿಸಿತು. ಕಾರ್ಮಿಕರು ಮತ್ತು ರೈತರು ಶಾಪ ಹಾಕುತ್ತಿದ್ದರು. ಆದರೆ ದೊಡ್ಡ ದೊಡ್ಡ ಕಪ್ಪು ಮೋಡಗಳು ತನ್ನ (ಸೂರ್ಯ) ಮತ್ತು ಭೂಮಿಯ ಮಧ್ಯೆ ಓಡಾಡಲು ಆರಂಭಿಸಿದವು. ಹೀಗಾಗಿ ಎಲ್ಲಾ ಕಡೆ ಸೂರ್ಯನ ಬೆಳಕು ಹೆಚ್ಚು ದೀರ್ಘವಾಗಿ ಉಳಿಯಲು ಸಾಧ್ಯವಾಗಲಿಲ್ಲ. ಆ ಕರಿ ಮೋಡಗಳು ಎಷ್ಟೊಂದು ಪ್ರಬಲವಾಗಿವೆ? ಎಂದುಕೊಂಡನು ಮತ್ತು ತಾನೂ ಮೋಡವಾಗಲು ಬಯಸಿದನು.
ನಂತರ ಅವನು ಮೋಡವಾದನು. ಹಳ್ಳಿಗಳು ಮತ್ತು ಇತರೆ ಪ್ರದೇಶಗಳಲ್ಲಿ ಪ್ರವಾಹ ಆರಂಭವಾಯಿತು. ಎಲ್ಲರೂ ಕಿರುಚಾಡಲು ಶುರು ಮಾಡಿದರು. ಆದರೆ ತಕ್ಷಣವೇ ಒಂದು ದೊಡ್ಡ ಶಕ್ತಿಯು ಅವನನ್ನು ಅಂದ್ರೆ ಮೋಡವನ್ನು ತಳ್ಳಿದಂತೆ ಭಾಸವಾಯಿತು. ನಂತರ ಅದು ಗಾಳಿ ಎಂದು ಅರ್ಥವಾಯಿತು. ಗಾಳಿ ಎಷ್ಟೊಂದು ಪ್ರಬಲವಾಗಿದೆ? ಎಂದು ಭಾವಿಸಿದನು. ಮತ್ತು ತಾನೂ ಗಾಳಿ ಆಗಬೇಕು ಎಂದು ಬಯಸಿದನು.
ನಂತರ ಅವನು ಗಾಳಿಯಾದನು. ಬಿರುಗಾಳಿಯಿಂದ ಹೆಂಚುಗಳು, ಮನೆಯ ಮೇಲ್ಛಾವಣಿಗಳು ಹಾರಿ ಹೋದವು ಮತ್ತು ಮರಗಳು ಬುಡ ಸಮೇತ ಧರೆಗೆ ಉರುಳಿದವು. ಎಲ್ಲರೂ ಭಯಭೀತರಾದರು ಮತ್ತು ದ್ವೇಷಿಸಲು ಶುರು ಮಾಡಿದರು. ಆದ್ರೆ ಇದೆಲ್ಲ ಆದ ನಂತರ ಇವನು ಒಂದು ದೊಡ್ಡ ಕಲ್ಲಿಗೆ ಎದುರಾಗಿ ಜೋರಾಗಿ ಬಿರುಗಾಳಿಯಾಗಿ ನುಗ್ಗಿದನು. ಆದರೆ ಅದು ಸರಿದಾಡಲಿಲ್ಲ. ಎಷ್ಟೇ ಜೋರಾಗಿ ಗಾಳಿ ಬೀಸಿದರೂ ಅದು ಅಲುಗಾಡಲೇ ಇಲ್ಲ. ಅದು ಅತಿ ದೊಡ್ಡದಾದ ಮತ್ತು ಎತ್ತರವಾದ ಕಲ್ಲಾಗಿತ್ತು. ಕಲ್ಲು ಎಷ್ಟೊಂದು ಪ್ರಬಲವಾಗಿದೆ? ಎಂದು ಭಾವಿಸಿದನು. ತಾನೂ ಆ ಕಲ್ಲಿನಂತೆ ಆಗಲು ಬಯಸಿದನು.
ನಂತರ ಅವನು ಕಲ್ಲಾದನು. ಈ ಭೂಮಿಯ ಮೇಲೆ ಕಲ್ಲಿಗಿಂತಲೂ ಬಲಿಷ್ಠವಾದ ಶಕ್ತಿ ಬೇರಾವುದಕ್ಕೂ ಇಲ್ಲ. ಆದರೆ ಅಲ್ಲಿ ನಿಂತಿದ್ದ ಅವನಿಗೆ ಒಂದು ಶಬ್ಧ ಕೇಳಿಸುತ್ತಿತ್ತು. ಕಠಿಣವಾದ ತನ್ನ (ಕಲ್ಲು) ಮೇಲ್ಮೈ ಮೇಲೆ ಉಳಿಯನ್ನು ಇಟ್ಟು ಸುತ್ತಿಗೆಯಿಂದ ಹೊಡೆಯುತ್ತಿದ್ದ ಶಬ್ದ ಅದು. ಇದನ್ನು ಕೇಳಿದ ನಂತರ ಅವನು ಸ್ವತಃ ಬದಲಾದನು. ನನಗಿಂತಲೂ ಪ್ರಬಲವಾಗಿದೆಯಾ ಈ ಕಲ್ಲು? ಖಂಡಿತ ಇಲ್ಲ.



Click it and Unblock the Notifications
