Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಝೆನ್ ಕಥೆ: ಬುದ್ಧಿವಂತ ಭೂತ

ಆಕೆ ಸತ್ತ ಕೆಲವು ತಿಂಗಳುಗಳ ನಂತರ ಆಕೆಯ ಗಂಡ ಬೇರೆ ಹುಡುಗಿಯರಿಂದ ದೂರವಿರಲು ಆರಂಭಿಸಿದ.. ಆದ್ರೆ ಅದೊಂದು ದಿನ ಅವನು ಒಂದು ಹುಡುಗಿಯನ್ನು ಭೇಟಿ ಮಾಡಿದ. ಆ ಭೇಟಿಯು ಅವನಲ್ಲಿ ಪ್ರೀತಿ ಮೂಡುವಂತೆ ಮಾಡಿತು, ಅವನು ಪ್ರೀತಿಯಲ್ಲಿ ಬಿದ್ದು ಬಿಟ್ಟ. ಅದೊಂದು ದಿನ ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದರು.
ಆಗ ಅವನ ಮಾಜಿ ಪತ್ನಿ ಅವನಿಗೆ ಕಾಣಿಸಿಕೊಂಡಳು.. ನನಗೆ ಕೊಟ್ಟ ಭಾಷೆಯನ್ನು ನೀನು ಉಳಿಸಿಕೊಳ್ಳಲಿಲ್ಲ ಅಂತ ಅವನನ್ನು ದೂರಿದಳು.. ಪ್ರತಿ ದಿನ ರಾತ್ರಿ ಭೂತವಾಗಿ ಬಂದು ಅವನನ್ನು ಹಂಗಿಸಿ ಕಾಡೋಕೆ ಶುರುಮಾಡಿದಳು.. ಅವನು ತನ್ನ ಪ್ರಿಯತಮೆಯೊಂದಿಗೆ ಕಳೆದ ಸಮಯ ಆಡಿದ ಪ್ರತಿಯೊಂದು ಮಾತುಕತೆಗಳು, ಪ್ರತಿಯೊಂದು ಪದಗಳು ಮತ್ತು ಅವರ ನಡುವೆ ನಡೆದ ಪ್ರತಿಯೊಂದು ವಿಷಯಗಳು ನೆನಪಿಗೆ ಬರುವಂತೆ ಮಾಡಿತು ಈ ಪ್ರೇತ.
ಇದರಿಂದ ಅವನಿಗೆ ರಾತ್ರಿಯೆಲ್ಲ ನಿದ್ದೆ ಇಲ್ಲದಂತಾಯಿತು.. ಮನಸ್ಸಿಗೆ ಅಸಮಾಧಾನವಾಯಿತು.
ಇದರಿಂದ ಹತಾಶೆಗೊಂಡ ಅವನು ತನ್ನ ಹಳ್ಳಿಯ ಬಳಿಯೇ ವಾಸವಾಗಿದ್ದ ಝೆನ್ ಮಾಸ್ಟರ್ (ಝೆನ್ ಗುರುಗಳು) ಬಳಿಗೆ ಬಂದರು. ತಮಗಾದ ಎಲ್ಲಾ ಅನುಭವಗಳನ್ನು ಆ ಗುರುಗಳ ಬಳಿಯಲ್ಲಿ ನಿವೇದಿಸಿಕೊಂಡರು.. ಇದನ್ನು ಕೇಳಿದ ನಂತರ ಗುರುಗಳು " ಇದು ಸಾಮಾನ್ಯವಾದ ಭೂತವಲ್ಲ.. ಇದು ಬುದ್ಧಿವಂತ ಭೂತ ಅಂತ ಹೇಳಿಬಿಟ್ಟರು.." ಹೌದು ಗುರುಗಳೇ.. ನಾನು ಏನೇನು ಹೇಳಿದೆನೋ ಮತ್ತು ನಾನು ಏನು ಮಾಡಿದ್ದೆ ಮತ್ತು ಏನು ಮಾಡಬೇಕು ಅಂದುಕೊಂಡಿದ್ದೆ ಅಂತ ಅದೆಲ್ಲವನ್ನೂ ಮತ್ತೆ ಮತ್ತೆ ನೆನಪು ಮಾಡುವಂತೆ ಮಾಡಿತು ಆ ಭೂತ" ಅಂತ ಅವನು ಅಚ್ಚರಿಯಾಗಿ ಹೇಳಿದ. ಇದನ್ನು ಕೇಳಿದ ಗುರುಗಳು ನಗು ನಗುತ್ತಲೇ "ನೀನು ಆ ಭೂತಕ್ಕೆ ಅಚ್ಚು ಮೆಚ್ಚಿನವನಾಗಿದ್ದೀಯ.. ಅದ್ರೆ ನೀನು ಮುಂದಿನ ಸಾರಿ ಆ ಭೂತ ಕಂಡಾಗ ಏನು ಮಾಡಬೇಕು ಅಂತ ನಾನು ನಿನಗೆ ಹೇಳ್ತೀನಿ" ಅಂತ ಹೇಳಿದರು.
ಆ ರಾತ್ರಿ.. ಆ ಭೂತ ಮರಳಿ ಬಂತು... ಆ ಗುರುಗಳು ಹೇಳಿದಂತೆ ಅವನು ಪ್ರತಿಕ್ರಿಯಿಸೋದಕ್ಕೆ ಶುರು ಮಾಡಿದ.. "ನೀನು ತುಂಬಾ ಬುದ್ಧಿವಂತ.." ಹೀಗಾಗಿ ನಾನು ನಿನ್ನಿಂದ ಯಾವುದನ್ನೂ ಮುಚ್ಚಿಟ್ಟಿಲ್ಲ ಅಂತ ನಿನಗೂ ಗೊತ್ತು.. ಆದ್ರೆ ನಾನು ಈಗ ನಿನಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ ಅದಕ್ಕೆ ಉತ್ತರ ಕೊಡು.. ಆಗ ನಾನು ನನ್ನ ಮದುವೆಯನ್ನು ನಿಲ್ಲಿಸಿ.. ಜೀವನ ಪರ್ಯಂತ ಒಬ್ಬಂಟಿಯಾಗಿ ಬದುಕುತ್ತೇನೆ" ಅಂತ ಅವನು ಹೇಳಿದನು.. ಆಗ ಭೂತ "ಸರಿ ನಿನ್ನ ಪ್ರಶ್ನೆ ಏನು ಅಂತ ಕೇಳು?" ಅಂತ ಆ ಭೂತ ಹೇಳಿತು.. ಮೇಲೆ ಇರಿಸಿದ್ದ ಒಂದು ದೊಡ್ಡ ಚೀಲದಲ್ಲಿನ ಹುರುಳಿ ಕಾಳುಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು "ನನ್ನ ಕೈಯಲ್ಲಿ ಎಷ್ಟು ಹುರುಳಿ ಕಾಳುಗಳು ಇವೆ ಅಂತ ನಿಖರವಾಗಿ ಹೇಳು ಸಾಕು" ಅಂತ ಅವನು ಕೇಳಿದ..
ಆ ಕ್ಷಣದಲ್ಲಿ ತಕ್ಷಣ ಹೇಳಲಾಗದ ಭೂತವು ಕಣ್ಮರೆಯಾಗಿ ಹೋಯಿತು ಮತ್ತೆ ಎಂದೂ ಮರಳಿ ಬರಲೇ ಇಲ್ಲ!



Click it and Unblock the Notifications
