Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸೀತಾ ನವಮಿ ಯಾವಾಗ? ಇದು ಮುತ್ತೈದೆಯರಿಗೆ ಮಹತ್ವವಾದ ದಿನವಾಗಿದೆ
ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಸೀತಾ ನವಮಿಯನ್ನು ಆಚರಿಸಲಾಗುತ್ತದೆ. ಇದನ್ನು ರಾಮ ನವಮಿಯ ಒಂದು ತಿಂಗಳ ನಂತರ ಆಚರಿಸಲಾಗುತ್ತದೆ. ಈ ದಿನ ಸೀತಾ ದೇವಿಯನ್ನು ಕ್ರಮಬದ್ಧವಾಗಿ ಪೂಜಿಸಲಾಗುತ್ತದೆ. ಸೀತಾ ನವಮಿಯ ಮಹತ್ವವೇನು? ಪೂಜೆಗೆ ಶುಭ ಮುಹೂರ್ತ ಯಾವಾಗ ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ:

ಸೀತಾ ನವಮಿ 2022
ಪಂಚಾಂಗದ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷದ ನವಮಿ ಸೀತಾ ನವಮಿ ಆಚರಿಸಲಾಗುವುದು. ಈ ವರ್ಷ ಮೇ 10ರಂದು ಆಚರಿಸಲಾಗುವುದು. ತಿಥಿಯು ಮೇ 09 ಸೋಮವಾರದಂದು ಸಂಜೆ 06.32 ಕ್ಕೆ ಪ್ರಾರಂಭವಾಗುತ್ತದೆ. ಮೇ 10 ಮಂಗಳವಾರ ಸಂಜೆ 07:24 ಕ್ಕೆ ಸೀತಾ ನವಮಿ ತಿಥಿಯು ಕೊನೆಗೊಳ್ಳುತ್ತದೆ. ಹುಟ್ಟಿದ ದಿನಾಂಕವನ್ನು ಆಧರಿಸಿ ಮೇ 10 ರಂದು ಸೀತಾ ನವಮಿ ಅಥವಾ ಜಾನಕಿ ಜಯಂತಿಯನ್ನು ಆಚರಿಸಲಾಗುತ್ತದೆ.

ಸೀತಾ ನವಮಿ 2022 ಶುಭ ಸಮಯ
ಮೇ 10 ಬೆಳಗ್ಗೆ 10.57 ರಿಂದ ಮಧ್ಯಾಹ್ನ 01.39 ರವರೆಗೆ ಇರುತ್ತದೆ. ಮಧ್ಯಾಹ್ನ, ಸೀತಾ ನವಮಿಯ ಮುಹೂರ್ತವು 12:18 ಕ್ಕೆ. ಸೀತಾ ಜಯಂತಿ ಪೂಜೆಗೆ ಶುಭ ಮುಹೂರ್ತವು ಒಟ್ಟು 02 ಗಂಟೆ 42 ನಿಮಿಷಗಳು.

ಸೀತಾ ಜಯಂತಿಯ ಮಹತ್ವ
ಜಾನಕಿ ಜಯಂತಿ ಅಥವಾ ಸೀತಾ ನವಮಿಯ ದಿನದಂದು, ವಿವಾಹಿತ ಮಹಿಳೆಯರು ಉಪವಾಸವಿದ್ದು ತಾಯಿ ಸೀತೆಯನ್ನು ಪೂಜಿಸುತ್ತಾರೆ. ಅಖಂಡ ಸೌಭಾಗ್ಯ ಪತಿಗೆ ದೀರ್ಘಾಯುಷ್ಯ ಪ್ರಾಪ್ತಿಗಾಗಿ ಸೀತಾ ಜಯಂತಿ ಆಚರಿಸಲಾಗುವುದು.

ಸೀತಾ ದೇವಿಯ ಜನನ
ದಂತಕಥೆಗಳ ಪ್ರಕಾರ ಮಿಥಿಲಾದ ರಾಜ ಜನಕ ಭೂಮಿಯನ್ನು ಉಳುಮೆ ಮಾಡುವಾಗ ಸಿಕ್ಕ ಮಗುವೇ ಸೀತೆ. ನಂತರ ಸೀತೆ ಶ್ರೀರಾಮನ ಮಡದಿಯಾಗುತ್ತಾಳೆ. ಲವ-ಕುಶರಿಗೆ ತಾಯಿಯಾಗುತ್ತಾಳೆ.

ಪತಿಧರ್ಮ ಪರಿಪಾಲನೆ
ಸೀತೆ ಪತಿಧರ್ಮ ಪಾಲನೆ ಮಾಡುತ್ತಾಳೆ. ರಾಣಿಯಾಗಿದ್ದರೂ ಶ್ರೀರಾಮ ಕಾಡಿಗೆ ಹೋದಾಗ ಆತನ ಜೊತೆ ತಾನೂ ಹೋಗುತ್ತಾಳೆ,ಅಲ್ಲಿ ತುಂಬಾ ಕಷ್ಟ ಅನುಭವಿಸಬೇಕಾಗುತ್ತೆ. ರಾಣ ಅವಳನ್ನು ಅಪಹರಿಸುತ್ತಾನೆ. ಲಂಕೆಯಲ್ಲಿ 435 ದಿನ ಕಳೆಯಬೇಕಾಗುತ್ತದೆ, ಆದರೆ ಅಚ್ಚರಿಯ ವಿಷಯವೆಂದರೆ ಲಂಕಾದಲ್ಲಿ ಸೀತೆಯ ನೈಜ ರೂಪವಿರಲಿಲ್ಲ, ಅವಳ ನಿಜವಾದ ರೂಪ ಅಗ್ನಿ ದೇವನೊಂದಿಗೆ ಇದ್ದಿತ್ತು ಎಂಬ ಉಲ್ಲೇಖವಿದೆ.ಲಂಕೆಯಲ್ಲಿ ಸೀತಾ ಮಾತೆ ಇದ್ದಾಗ ದೇವತೆಗಳ ರಾಜ ಇಂದ್ರ ಆಕೆಗೆ ವಿಶೇಷ ಖೀರ್ ನೀಡುತ್ತಾನೆ, ಆದ್ದರಿಂದ ಲಂಕೆಯ ಸೆರೆಮನೆಯಲ್ಲಿ ಇದ್ದ ಅಷ್ಟೂ ದಿನ ಸೀತೆಗೆ ಹಸಿವು ಆಗಿರಲಿಲ್ಲ ಈ ರೀತಿ ಸೀತೆ ಬಗ್ಗೆ ಅನೇಕ ಅಚ್ಚರಿಯ ಸಂಗತಿಗಳನ್ನುರಾಮಾಯಣದಲ್ಲಿ ಹೇಳಲಾಗಿದೆ.



Click it and Unblock the Notifications
