Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
ಆಗಸ್ಟ್ 18ಕ್ಕೆ ಕೃಷ್ಣ ಜನ್ಮಾಷ್ಟಮಿ ಹಬ್ಬದ ಸಡಗರ. ದೇಶದೆಲ್ಲಡೆ ಈ ಹಬ್ಬನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುವುದು. ಈ ಹಬ್ಬದಲ್ಲಿ ಕೃಷ್ಣನಿಗೆ ಪೂಜೆಯ ಜೊತೆಗೆ ಮುದ್ದು ಮಕ್ಕಳಿಗೆ ಕೃಷ್ಣ-ರಾಧೆ ವೇಷವನ್ನು ಹಾಕಿ ಕಣ್ತುಂಬಿಕೊಳ್ಳುವುದೇ ಸಂಭ್ರಮ.

ಕೃಷ್ಣನು ಶ್ರೀ ವಿಷ್ಣುವಿನ ಎಂಟನೇ ಅವತಾರ ಎಂದು ಹೇಳಲಾಗುವುದು, ಹಿಂದೂ ಪಂಚಾಂಗದ ಪ್ರಕಾರ ಶ್ರೀಕೃಷ್ಣನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಎಂಟನೇ ಅಷ್ಟಮಿಯಂದು ಜನಿಸಿದ. ಈ ವರ್ಷ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 18ಕ್ಕೆ ಬಂದಿದೆ.
ಶ್ರೀಕೃಷ್ಣನನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿ ಬದುಕಿನಲ್ಲಿ ನೆಮ್ಮದಿ, ಪ್ರೀತಿಯನ್ನು ಕರುಣಿಸುತ್ತಾನೆ, ಎಂಥದ್ದೇ ಕಷ್ಟಕರ ಸಂದರ್ಭದಲ್ಲಿಯೂ ನಮ್ಮನ್ನು ರಕ್ಷಣೆ ಮಾಡುತ್ತಾನೆ ಎಂಬವುದು ಅವನ ಭಕ್ತರ ಅಚಲ ನಂಬಿಕೆ.
ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ಮಾಡಿದರೆ ತುಂಬಾ ಒಳ್ಳೆಯದು, ವರ್ಷದಲ್ಲಿ ಮಾಡುವ ಉಪವಾಸದ ಫಲ ಈ ದಿನ ಮಾಡುವ ಉಪವಾಸದಿಂದ ಸಿಗುತ್ತದೆ. ಆದ್ದರಿಂದ ಕೃಷ್ಣ ಜನ್ಮಾಷ್ಟಮಿಗೆ ಮಾಡುವ ಉಪವಾಕ್ಕೆ ವ್ರತರಾಜ್ ಸ್ಥಾನಮಾನ ನೀಡಲಾಗಿದೆ. ಇದರಿಂದ ಕಷ್ಟಗಳು ದೂರಾಗುವುದು, ಸಂತೋಷ, ಸಮೃದ್ಧಿ ಹೆಚ್ಚುವುದು.
ಅಲ್ಲದೆ ಈ ದಿನ ಉಪವಾಸ ವ್ರತ ಮಾಡಿ ಶ್ರೀಕೃಷ್ಣನಿಗೆ ಪೂಜೆ ಮಾಡಿದರೆ ಶನಿದೋಷಕ್ಕೆ ಕೂಡ ಪರಿಹಾರ ಮಾಡಿದಂತಾಗುವುದು.
ಹೆಚ್ಚಿನ ಪರಿಹಾರಕ್ಕೆ ಕೃಷ್ಣ ಜನ್ಮಾಷ್ಟಮಿಯಂದು ಏನೆಲ್ಲಾ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಕೃಷ್ಣ ಜನ್ಮಾಷ್ಟಮಿ ದಿನಾಂಕ ಹಾಗೂ ಮುಹೂರ್ತ
ದಿನಾಂಕ: ಆಗಸ್ಟ್ 18 ಮತ್ತು 19, 2022
ಪೂಜೆಗೆ ಮುಹೂರ್ತ: ಆಗಸ್ಟ್ 18 ಮಧ್ಯರಾತ್ರಿ 12:03ರಿಂದ 12: 47 (ಇಂಗ್ಲಿಷ್ ಟೈಮಿಂಗ್ (12:03 am to 12:47 am)
ಪೂಜೆಗೆ ಸಮಯ: 44 ನಿಮಿಷ
ಅಷ್ಟಮಿ ಪ್ರಾರಂಭ: ಆಗಸ್ಟ್ 18 ರಾತ್ರಿ 9:20ಕ್ಕೆ
ಅಷ್ಟಮಿ ಮುಕ್ತಾಯ: ಆಗಸ್ಟ್ 19 ರಾತ್ರಿ 10:59ಕ್ಕೆ

ಶನಿದೋಷ ನಿವಾರಣೆಗೆ ಜನ್ಮಾಷ್ಟಮಿ ಪೂಜೆ
ಶನಿದೋಷ ಇರುವವರು ಶನಿಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ಜನ್ಮಾಷ್ಟಮಿ ಪೂಜೆ ಮಾಡಿದರೆ ಒಳ್ಳೆಯದು. ಜ್ಯೋತಿಷ್ಯ ಪ್ರಕಾರ ಶನಿ ದೇವನಿಗೂ ಸಂಖ್ಯೆ 8ಕ್ಕೂ ಸಂಬಂಧವಿದೆ. ಶ್ರೀವಿಷ್ಣುವಿನ 8ನೇ ಅವತಾರವಾಗಿರುವ ಶ್ರೀಕೃಷ್ಣ ಜನಿಸಿರುವುದು ಕೂಡ ಅಷ್ಟಮಿಯಂದು, ಅಲ್ಲದೆ ದೇವಕ್ಕಿಯ 8ನೇ ಮಗು.
ಅಲ್ಲದೆ ಶನಿ ದೇವ ಶ್ರೀಕೃಷ್ಣ ಭಕ್ತ. ಆದ್ದರಿಂದ ಶ್ರೀಕೃಷ್ಣನನ್ನು ಪೂಜಿಸಿದರೆ ಶನಿದೇವ ಖುಷಿಯಾಗಿ ತನ್ನ ಕೆಟ್ಟ ದೃಷ್ಟಿ ಬೀರುವುದನ್ನು ನಿಲ್ಲಿಸುತ್ತಾನೆ. ಆದ್ದರಿಂದ ಶನಿದೋಷ ಅಥವಾ ಶನಿ ಸಾಡೇಸಾತಿ ಇದ್ದರೆ ಕೃಷ್ಣ ಜನ್ಮಾಷ್ಟಮಿಯಂದು ಉಪವಾಸವಿದ್ದು ಶ್ರೀ ಕೃಷ್ಣನನ್ನು ಪೂಜಿಸಿ.

ಜನ್ಮಾಷ್ಟಮಿಯಂದು ಈ ಪರಿಹಾರಗಳನ್ನು ಮಾಡಿ
* ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿಸಲು ಶ್ರೀ ಕೃಷ್ಣನಿಗೆ ಸಿಹಿ ಕಡುಬು ನೈವೇದ್ಯವಾಗಿ ಇಡಿ.
* ಶ್ರೀ ಕೃಷ್ಣನಿಗೆ 8 ಬಗೆಯೆ ಹೂಗಳನ್ನು ಅರ್ಪಿಸುವುದರಿಂದ ಸಂತೋಷ, ಸಮೃದ್ಧಿ ಹೆಚ್ಚುವುದು.
* ದೇವಾಲಯಕ್ಕೆ ಬೆಳ್ಳಿಯ ಕೊಳಲು ನೀಡಿದರೆ ಒಳಿತಾಗುವುದು
* ಈ ದಿನ ಶ್ರೀಕೃಷ್ಣ ಹಾಗೂ ರಾಧೆಯ ಮಂತ್ರಗಳನ್ನು ಪಠಿಸಿ.



Click it and Unblock the Notifications
