Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಮಕರ ಸಂಕ್ರಾಂತಿ ಆಚರಣೆಯ ಹಿಂದಿನ ಕಾರಣಗಳೇನು ಗೊತ್ತೇ?
ಮಕರ ಸಂಕ್ರಾಂತಿ ಹಿಂದೂಗಳಿಗೆ ತುಂಬಾ ಮಹತ್ವವಾದ ದಿನವಾಗಿದೆ. ಮಕರ ಸಂಕ್ರಾಂತಿಯನ್ನು ಭಾರತದ ಎಲ್ಲೆಡೆ ಆಚರಿಸಲಾಗುವುದು. ಭಕ್ತರು ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಮಾಡುತ್ತಾರೆ.
ಮಕರ ಸಂಕ್ರಾಂತಿಯನ್ನು ಒಂದೊಂದು ಕಡೆ ಒಂದೊಂದು ಹೆಸರಿನಲ್ಲಿ ಆಚರಣೆ ಮಾಡಲಾಗುವುದು. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ, ಆಂಧ್ರಪ್ರದೇಶ ತಮಿಳುನಾಡಿನಲ್ಲಿ ಪೊಂಗಲ್, ಪಂಜಾಬ್, ಹರಿಯಾಣದಲ್ಲಿ ಲೋಹರಿ (ಇದನ್ನು ಮಕರ ಸಂಕ್ರಾಂತಿ ಹಿಂದಿನ ದಿನ ಅಂದ್ರೆ ಜನವರಿ 13ಕ್ಕೆ ಆಚರಿಸಲಾಗುವುದು), ಅಸ್ಸಾಂನಲ್ಲಿ ಮಘಾ ಬಿಹು ಬಿಹಾರದಲ್ಲಿ ಕಿಚಡಿ ಎಂದು ಆಚರಿಸಲಾಗುವುದು.
ಮನೆಮಂದಿಯೆಲ್ಲಾ ಒಟ್ಟಾಗಿ ಎಳ್ಳು-ಬೆಲ್ಲ ಮಾಡಿ ಸವಿಯುತ್ತಾರೆ, ಪೊಂಗಲ್, ಕಿಚಡಿ ಇಮಥವುಗಳನ್ನು ಮಾಡಿ ಸವಿಯಲಾಗುವುದು. ಗುಜರಾತ್ ಮುಂತಾದ ಕಡೆ ಗಾಳಿಪಟವನ್ನು ಹಾರಿಸಿ ಸಂಭ್ರಮಿಸಲಾಗುವುದು.
ಒಂದೊಂದು ಹಬ್ಬದ ಆಚರಣೆಯ ಹಿಂದೆ ಒಂದೊಂದು ಕಾರಣವಿರುತ್ತದೆ, ಹಾಗೆಯೇ ಮಕರ ಸಂಕ್ರಾಂತಿ ಆಚರಣೆಯ ಹಿಂದಿರುವ ಕಾರಣಗಳನ್ನು ನೋಡುವುದಾದರೆ:

1. ಹಿಂದುಗಳಿಗೆ ಪ್ರಮುಖ ಹಬ್ಬ
ಮಕರ ಸಂಕ್ರಾಂತಿ ಕೊಯ್ಲು ಸಮಯದಲ್ಲಿ ಆಚರಿಸುವ ಹಬ್ಬವಾಗಿದೆ. ಇದನ್ನು ತುಂಬಾ ಅದ್ಧೂರಿಯಾಗಿ ಆಚರಿಸಲಾಗುವುದು. ಈ ಹಬ್ಬದ ವಿಶೇಷತೆಯೆಂದರೆ ಬೇರೆಯೆಲ್ಲಾ ಹಬ್ಬಗಳನ್ನು ಚಾಂದ್ರಮಾನ ಕ್ಯಾಲೆಂಡರ್ ನೋಡಿ ಆಚರಿಸಲಾಗುವುದು. ಈ ಹಬ್ಬವನ್ನು ಸೌರಮಾನ ಕ್ಯಾಲೆಂಡರ್ ನೋಡಿ ಆಚರಿಸಲಾಗುವುದು. ಈ ದಿನ ಎಳ್ಳು-ಬೆಲ್ಲ ಮಾಡಿ ಹಂಚಲಾಗುವುದು. ಎಳ್ಳು-ಬೆಲ್ಲ ತಿನ್ನುವುದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಚಳಿಗಾಲದಲ್ಲಿ ತ್ವಚೆ ಒಣಗಿರುತ್ತದೆ, ತ್ವಚೆಯನ್ನು ರಕ್ಷಣೆ ಮಾಡುವಲ್ಲಿ ಎಳ್ಳು ಸಹಕಾರಿ ಅಲ್ಲದೆ ಬೆಲ್ಲ ದೇಹವನ್ನು ಬೆಚ್ಚಗಿಡುವುದು.

2. ಸೂರ್ಯ ಸಂಕ್ರಮಣ
ಜ್ಯೋತಿಷ್ಯದ ಪ್ರಕಾರ ಮಕರ ಸಂಕ್ರಾಂತಿಯಂದು ಸೂರ್ಯ ಸಂಕ್ರಮಣವಾಗುವುದು. ಅಂದರೆ ಜನವರಿ 14ಕ್ಕೆ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಮಕರರಾಶಿಯ ಅಧಿಪತಿ ಶನಿ. ಶನಿ ಸೂರ್ಯದೇವನ ಪುತ್ರ. ಇದೀಗ ಸೂರ್ಯ ಮಕರ ರಾಶಿ ಪ್ರವೇಶಿಸುವುದರಿಂದ ಸೂರ್ಯನು ಪುತ್ರನ ಜೊತೆ ಮಕರ ರಾಶಿಯಲ್ಲಿ ಇರಲಿದ್ದಾನೆ. ಇದರಿಂದ ಒಳಿತಾಗುವುದು ಎಂಬ ನಂಬಿಕೆ.

3. ರೈತರಿಗೆ ಸುಗ್ಗಿಯ ಕಾಲ
ರೈತರು ಬೆಳೆದ ಬೆಳೆ ಕಟಾವಿಗೆ ಬಂದಿರುತ್ತದೆ. ಇದು ಸುಗ್ಗಿಯ ಸಮಯ. ರೈತರು ಸುಗ್ಗಿಯ ಸಂಭ್ರಮವನ್ನು ಮಕರ ಸಂಕ್ರಾಂತಿ ಆಚರಣೆ ಮೂಲಕ ಆಚರಿಸುತ್ತಾರೆ. ಇಷ್ಟು ದಿನ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಸಮಯ, ಬೆಳೆ ಕೊಯ್ಲು ಆದ ಮೇಲೆ ಸ್ವಲ್ಪ ವಿಶ್ರಾಂತಿ ಸಿಗುವುದು.

4. ಮಹಿಳೆಯರು ಮುತ್ತೈದೆ ಭಾಗ್ಯ ನೀಡುವಂತೆ ದೇವರನ್ನು ಪ್ರಾರ್ಥಿಸುತ್ತಾರೆ
ಉತ್ತರ ಭಾರತದ ಕಡೆ ಮಕರ ಸಂಕ್ರಾಂತಿಯಂದು ಮಹಿಳೆಯರು ಪುಣ್ಯ ನದಿಯಲ್ಲಿ ಮುಳುಗಿ ಗಂಡನಿಗೆ ದೀರ್ಘಾಯುಸ್ಸು ನೀಡುವಂತೆ ಪ್ರಾರ್ಥಿಸುತ್ತಾರೆ. ನಂತರ ಗಂಡನ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾರೆ. ಅಲ್ಲದೆ ಈ ದಿನದಿಂದ ಕುಂಭಮೇಳ ಶುರುವಾಗುವುದು.

5. ಉತ್ತಾರಾಯಣ ಪ್ರಾರಂಭ
ಮಕರ ಸಂಕ್ರಾಂತಿಯಿಂದ ಉತ್ತಾರಾಯಣ ಪ್ರಾರಂಭ. ಮಕರ ಸಂಕ್ರಾಂತಿ ಪ್ರಾರಂಭವಾದಾಗಿನಿಂದ 6 ತಿಂಗಳು ಉತ್ತಾರಾಯಣ ಸಮಯ. ಈ ಸಮಯದಲ್ಲಿ ಮರಣವೊಂದಿದವರು ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇದೆ. ಮಹಾಭಾರತ ಕತೆಯಲ್ಲಿ ಭೀಷ್ಮ ಉತ್ತರಾಯಣ ಕಾಲದವರೆಗೆ ಕಾದು ನಂತರ ದೇಹ ತ್ಯಾಗ ಮಾಡಿದರು ಎಂಬ ಉಲ್ಲೇಖವಿದೆ.
ಹೀಗೆ ಈ ಎಲ್ಲಾ ಕಾರಣಗಳಿಂದಾಗಿ ಮಕರ ಸಂಕ್ರಾಂತಿ ತುಂಬಾ ಶುಭ ದಿನನವಾಗಿದೆ. ಅಲ್ಲದ ವರ್ಷದ ಮೊದಲ ಹಬ್ಬ ಇದಾಗಿರುವುದರಿಂದ ತುಂಬಾ ಸಡಗರ-ಸಂಭ್ರಮದಿಂದ ಆಚರಿಸಲಾಗುವುದು.



Click it and Unblock the Notifications