Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಜೀವನದಲ್ಲಿ ಸುಖ-ಸಮೃದ್ಧಿಗಾಗಿ ರಾಮನವಮಿಯಂದು ಈ ರೀತಿ ಮಾಡಿ
ಚೈತ್ರ ಮಾಸದ ನವರಾತ್ರಿಯ ನವಮಿ ದಿನದಂದು ಶ್ರೀರಾಮನು ಜನಿಸಿದನೆಂದು ಹೇಳಲಾಗುತ್ತದೆ. ಆದ್ದರಿಂದ ಚೈತ್ರ ನವರಾತ್ರಿಯ ಕೊನೆಯ ದಿನವನ್ನು ರಾಮ ನವಮಿ ಎಂದು ಆಚರಿಸಲಾಗುತ್ತದೆ. ಈ ವರ್ಷ ರಾಮ ನವಮಿಯು ಏಪ್ರಿಲ್ 10 ರಂದು ಬರುತ್ತಿದೆ.
ಧರ್ಮಗ್ರಂಥಗಳ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನ ಮತ್ತು ಪುಷ್ಯ ನಕ್ಷತ್ರದ ಅದೇ ದಿನದಂದು ಶ್ರೀರಾಮನು ಭೂಮಿಯ ಮೇಲೆ ಅವತರಿಸಿದನಂತೆ. ಶ್ರೀರಾಮ ವಿಷ್ಣುವಿನ ಅವತಾರ ಎಂದು ಭಕ್ತರು ನಂಬುತ್ತಾರೆ. ಇದು ವಿಶೇಷ ದಿನವಾಗಿರುವುದರಿಂದ, ರಾಮ ನವಮಿಯಂದು ಆಶೀರ್ವಾದ ಮತ್ತು ಸಕಾರಾತ್ಮಕತೆಯನ್ನು ಪಡೆಯಲು ಮಾಡಬಹುದಾದ ಮಂಗಳಕರ ಸಂಗತಿಗಳನ್ನು ಹಾಗೂ ಮಾಡಬಾರದ ಕೆಲವು ಕೆಲಸಗಳನ್ನು ತಿಳಿಸಲಿದ್ದೇವೆ.

ರಾಮನ ಕೃಪೆಗೆ ಪಾತ್ರರಾಗಲು ನೀವು ಮಾಡಬೇಕಾದ ಕೆಲಸಗಳು ಹೀಗಿವೆ:
- ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತರ ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು. ಈ ದಿನದಂದು ಅಯೋಧ್ಯೆಯ ಪವಿತ್ರ ಸರಯೂ ನದಿಯಲ್ಲಿ ಸ್ನಾನ ಮಾಡುವುದು ಧಾರ್ಮಿಕ ಮಹತ್ವವನ್ನು ಹೊಂದಿದೆ.
- ರಾಮಚರಿತ ಮಾನಸದ ಜೊತೆಗೆ, ಶ್ರೀ ರಾಮ ಚಾಲೀಸಾ, ಶ್ರೀ ರಾಮ ರಕ್ಷಾ ಸ್ತೋತ್ರ ಇತ್ಯಾದಿಗಳನ್ನು ಸಹ ಪಠಿಸಬೇಕು.
- ಈ ದಿನ ಹನುಮಾನ್ ಚಾಲೀಸಾವನ್ನು ಪಠಿಸಬೇಕು.
- ಈ ದಿನದಂದು ಶ್ರೀರಾಮನನ್ನು ಪೂರ್ಣ ಭಕ್ತಿಯಿಂದ ಆರಾಧಿಸಿ.
- ಅನೇಕ ಸ್ಥಳಗಳಲ್ಲಿ, ಭಗವಾನ್ ಶ್ರೀರಾಮನ ವಿಗ್ರಹವನ್ನು ಸಹ ಉಯ್ಯಾಲೆಯಲ್ಲಿಟ್ಟು ತೂಗಲಾಗುವುದು.
- ರಾಮ ನವಮಿಯಂದು ಉಪವಾಸವನ್ನು ಆಚರಿಸಲಾಗುವುದು, ಏಕೆಂದರೆ ಉಪವಾಸವು ಸಂತೋಷ, ಸಮೃದ್ಧಿಯನ್ನು ನೀಡುತ್ತದೆ ಮತ್ತು ಪಾಪಗಳನ್ನು ನಾಶಪಡಿಸುತ್ತದೆ ಎಂದು ನಂಬಲಾಗಿದೆ.
- ಈ ದಿನದಂದು ದಾನ ಮಾಡುವುದು ಧಾರ್ಮಿಕ ಮಹತ್ವವನ್ನು ಹೊಂದಿದೆ.
- ಭಗವಾನ್ ರಾಮನು ಮಧ್ಯಾಹ್ನದ ಸಮಯದಲ್ಲಿ ಜನಿಸಿದನೆಂದು ನಂಬಲಾಗಿದೆ ಮತ್ತು ಆದ್ದರಿಂದ ರಾಮನವಮಿ ಪೂಜೆಯನ್ನು ಮಾಡಲು ಇದು ಅತ್ಯಂತ ಮಂಗಳಕರ ಸಮಯವಾಗಿದೆ. ಈ ಸಮಯದಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಮತ್ತು ಯಾಗಗಳನ್ನು ನಡೆಸಲಾಗುತ್ತದೆ. ಜೊತೆಗೆ ಶ್ರೀರಾಮನ ಹೆಸರು ಮತ್ತು ಮಂತ್ರಗಳು ಮತ್ತು ಸ್ತೋತ್ರಗಳ ಪಠಣವನ್ನು ಮಾಡಲಾಗುತ್ತದೆ.

ರಾಮನವಮಿಯಂದು ಮಾಡಬಾರದ ಕೆಲಸಗಳು ಹೀಗಿವೆ:
ಇತರರನ್ನು ನೋಯಿಸಬೇಡಿ:
ಶ್ರೀರಾಮ ನವಮಿಯಂದು ನಾವು ಮಾಡಬಾರದ ಕೆಲವು ಕೆಲಸಗಳಿವೆ. ಮುಖ್ಯ ವಿಷಯವೆಂದರೆ ಇತರರನ್ನು ನೋಯಿಸಬಾರದು. ಇದರ ಜೊತೆಗೆ ಶ್ರೀರಾಮನ ನಾಮವನ್ನು ಜಪಿಸುವಾಗ ತಪ್ಪಾಗದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಇದು ನಿಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಕೆಟ್ಟ ಅಭ್ಯಾಸಗಳಿಂದ ದೂರವಿರಿ:
ಶ್ರೀರಾಮನ ಜನ್ಮ ದಿನದಂದು ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು. ಏಕೆಂದರೆ ಅದು ನಿಮ್ಮಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದರೆ, ಮದ್ಯಪಾನ ಮಾಡದಂತೆ ಮತ್ತು ಮಾಂಸಾಹಾರ ಸೇವಿಸದಂತೆ ಎಚ್ಚರಿಕೆ ವಹಿಸಿ. ಜೊತೆಗೆ, ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನಬಾರದು. ಈ ಎರಡು ಪದಾರ್ಥಗಳಿಲ್ಲದೆ ಒಗ್ಗರಣೆ ಮಾಡಲು ಪ್ರಯತ್ನಿಸಿ.

ಇವುಗಳನ್ನು ಮಾಡಬೇಡಿ:
ನವಮಿ ಆಚರಣೆಯ ಸಮಯದಲ್ಲಿ ನಿಮ್ಮ ಕೂದಲನ್ನು ಕತ್ತರಿಸಬೇಡಿ ಅಥವಾ ಕ್ಷೌರ ಮಾಡಬೇಡಿ. ಜೊತೆಗೆ, ಇತರರ ಬಗ್ಗೆ ದೂಷಣೆ, ಟೀಕೆ ಅಥವಾ ಗಾಸಿಪ್ ಮಾಡದಂತೆ ಎಚ್ಚರಿಕೆ ವಹಿಸಿ. ಅಲ್ಲದೆ ಸ್ನಾನ ಮಾಡದೆ ಊಟ ಮಾಡಬೇಡಿ. ಒಂಬತ್ತನೆಯ ದಿನ ರಾಮನನ್ನು ಮಗುವಿನ ರೂಪದಲ್ಲಿ ಪೂಜಿಸಲಾಗುತ್ತದೆ. ಭಕ್ತರು ಈ ದಿನವನ್ನು ವಿಶೇಷ ಉಪವಾಸ ಮತ್ತು ನಾಮಕರಣ ಸಮಾರಂಭದೊಂದಿಗೆ ಆಚರಿಸುತ್ತಾರೆ.



Click it and Unblock the Notifications











