Latest Updates
-
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ!
ಪರಿವರ್ತಿನಿ ಏಕಾದಶಿ 2021: ಇದು ತುಂಬಾ ಮಹತ್ವವಾದ ಏಕಾದಶಿ, ಹೇಗೆ? ಪೂಜೆಗೆ ಶುಭ ಮುಹೂರ್ತ ಯಾವಾಗ?
ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪರಿವರ್ತಿನಿ ಏಕಾದಶಿ ಅಥವಾ ಪದ್ಮ ಏಕಾದಶಿ ಎಂದು ಕರೆಯಲಾಗುವುದು. ವಿಷ್ಣುವಿನ ವಾಮನ ಅವತಾರವನ್ನು ಈ ದಿನ ಪೂಜಿಸಲಾಗುತ್ತದೆ.
ಈ ವರ್ಷ ಪರಿವರ್ತಿನಿ ಏಕಾದಶಿ ಸೆಪ್ಟೆಂಬರ್ 17, ಶುಕ್ರವಾರದಂದು ಆಚರಿಸಲಾಗುವುದು. ಧಾರ್ಮಿಕ ನಂಬಿಕೆಗಳ ಪ್ರಕಾರ ಪರಿವರ್ತಿನಿ ಏಕಾದಶಿ ಮಾಡುವುದರಿಂದ ವಿಷ್ಣುವಿನ ಹಾಗೂ ಲಕ್ಷ್ಮಿಯ ಆಶೀರ್ವಾದಿಂದ ಜೀವನದಲ್ಲಿ ಯಾವುದಕ್ಕೂ ಕೊರತೆ ಉಂಟಾಗುವುದಿಲ್ಲ.

ಹಿಂದೂ ಪುರಾಣದ ಪ್ರಕಾರ ಭಗವಾನ್ ವಿಷ್ಣು ದೇವಶಯನ ಏಕಾದಶಿಯಿಂದ ಯೋಗ ನಿದ್ರೆಗೆ ಹೋಗುತ್ತಾನೆ ಮತ್ತು ವರಿವರ್ತಿ ಏಕಾದಶಿಯ ದಿನ ಬದಿಗೆ ಬದಲಾಗುತ್ತಾನೆ. ಬದಿಯನ್ನು ಬದಲಾಯಿಸುವುದು ವಿಷ್ಣುವಿನ ಸ್ಥಾನವನ್ನು ಬದಲಾಯಿಸುತ್ತದೆ.
ಅದಕ್ಕಾಗಿಯೇ ಇದನ್ನು ಪರಿವರ್ತಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಮಾಡುವ ಉಪವಾಸ ಮತ್ತು ಪೂಜೆಗೆ ವಿಶೇಷ ಮಹತ್ವವಿದೆ. ಈ ಏಕಾದಶಿಯಂದು ಉಪವಾಸವಿದ್ದು ಆಚರಿಸಿದರೆ ಎಲ್ಲಾ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.
ಈ ಏಕಾದಶಿಯ ಶುಭ ಮುಹೂರ್ತ ಯಾವುದು? ಇದರ ಮಹತ್ವವೇನು ಎಂಬುವುದರ ಬಗ್ಗೆ ತಿಳಿಯೋಣ:

ಪರಿವರ್ತನಿ ಏಕಾದಶಿ ಶುಭ ಸಮಯ:
ಏಕಾದಶಿ ಶುಭ ಸಮಯ-
ಏಕಾದಶಿ ತಿಥಿ ಸೆಪ್ಟೆಂಬರ್ 16 ಗುರುವಾರ ಬೆಳಿಗ್ಗೆ 09:39 ರಿಂದ ಆರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 17 ರ ಬೆಳಗ್ಗೆ 08:08 ರವರೆಗೆ ಮುಂದುವರಿಯುತ್ತದೆ. ಇದರ ನಂತರ, ದ್ವಾದಶಿ. .ಸೆಪ್ಟೆಂಬರ್ 16 ರ ಏಕಾದಶಿ ತಿಥಿಯು ಇಡೀ ದಿನ ಇರುತ್ತದೆ. ಉದಯ ತಿಥಿಯ ಉಪವಾಸದ ನಂಬಿಕೆಯ ಪ್ರಕಾರ, ಸೆಪ್ಟೆಂಬರ್ 17 ರ ಶುಕ್ರವಾರದಂದು ಪರಿವರ್ತಿನಿ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ.
ಪರಿವರ್ತಿನಿ ಏಕಾದಶಿ ಪಾರಣ ಸಮಯ : ಸೆಪ್ಟೆಂಬರ್ 18 ಬೆಳಗ್ಗೆ 06:07 ರಿಂದ 06:54
ದ್ವಾದಶಿ ಪಾರಣಾ ತಿಥಿಯ ಅಂತ್ಯದ ಸಮಯ - ಬೆಳಗ್ಗೆ 06:54

ಧಾರ್ಮಿಕ ಮಹತ್ವ
ಧಾರ್ಮಿಕ ನಂಬಿಕೆಯ ಪ್ರಕಾರ ವಿಷ್ಣುವು ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನಾಂಕದಂದು ಮಲಗುವ ಸ್ಥಿತಿಯನ್ನು ಬದಲಾಯಿಸುತ್ತಾನೆ. ಇದರಿಂದ ಅನೇಕ ಬದಲಾವಣೆಗಳಾಗುತ್ತವೆ ಎಂದು ಹೇಳಲಾಗುವುದು. ಆದ್ದರಿಂದ ಇದನ್ನು ಪರಿವರ್ತಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಕಟ್ಟು ನಿಟ್ಟಿನ ಉಪವಾಸವಿದ್ದು ವಿಷ್ಣುವಿನ ವಿಶೇಷ ಪೂಜೆಯನ್ನು ಮಾಡಲಾಗುವುದು. ಪ್ರಸ್ತುತ ಚಾತುರ್ಮಾಸ ನಡೆಯುತ್ತಿದೆ. ಈ ದಿನ, ಚಾತುರ್ಮಾಸದ ಅವಧಿಯಲ್ಲಿ, ಯೋಗನಿದ್ರೆಯಲ್ಲಿ ಮಲಗಿರುವ ವಿಷ್ಣು ತಿರುವುಗಳನ್ನು ಪಡೆಯುತ್ತಾನೆ ಮತ್ತು ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ ಎಂದು ನಂಬಲಾಗಿದೆ. ಇದರ ಜೊತೆಯಲ್ಲಿಈ ದಿನಾಂಕದಂದು ವಿಷ್ಣುವಿನ ವಾಮನ ರೂಪವನ್ನು ಪೂಜಿಸುವುದು. ಈ ಸಮಯದಲ್ಲಿ ವಿಷ್ಣು ವಾಮನ ರೂಪದಲ್ಲಿ ಪಾತಾಳ ಲೋಕದಲ್ಲಿ ನೆಲೆಸಿರುತ್ತಾನೆ ಎಂದು ನಂಬಲಾಗಿದೆ.

ಪರಿವರ್ತಿನಿ ಏಕಾದಶಿ ಆಚರಿಸಿದರೆ ದೊರೆಯುವ ಪ್ರಯೋಜನಗಳು
ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಬರುವ ಈ ಏಕಾದಶಿ ತುಂಬಾ ಮಹತ್ವವನ್ನು ಹೊಂದಿದೆ. ಈ ಏಕಾದಶಿ ಆಚರಿಸಿದರೆ ವಾಜಪೇಯಿ ಯಜ್ಞ ಮಾಡಿದಷ್ಟು ಫಲ ಸಿಗುವುದು ಎಂದು ಹೇಳಲಾಗುವುದು. ಈ ಏಕಾದಶಿ ಆಚರಿಸುವುದರಿಂದ ಜೀವನದಲ್ಲಿ ಯಾವುದೇ ಕೊರತೆಯಾಗುವುದಿಲ್ಲ. ಐಶ್ವರ್ಯ, ಆರೋಗ್ಯ ತುಂಬಿರುತ್ತದೆ.

ಪೂಜೆ ಫಲಕ್ಕಾಗಿ ಕಟ್ಟುನಿಟ್ಟಿನ ಉಪವಾಸ ಮಾಡಬೇಕು
ಏಕಾದಶಿ ಉಪವಾಸವನ್ನು ಅತ್ಯಂತ ಕಷ್ಟಕರವಾದ ಉಪವಾಸವೆಂದು ಪರಿಗಣಿಸಲಾಗಿದೆ. ಏಕಾದಶಿ ತಿಥಿಯ ಆರಂಭದಿಂದಲೇ ಈ ಉಪವಾಸದ ಸಿದ್ಧತೆ ಆರಂಭವಾಗುತ್ತದೆ. ಉದಯದ ದಿನದಂದು ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಉಪವಾಸವನ್ನು ಮುಂದಿನ ದಿನಾಂಕದಂದು ಅಂದರೆ ದ್ವಾದಶಿಯ ದಿನದಂದು ಮುರಿಯಲಾಗುವುದು. ಏಕಾದಶಿ ಉಪವಾಸದ ವಿವರಣೆಯು ಮಹಾಭಾರತದ ಕಥೆಯಲ್ಲೂ ಕಂಡುಬರುತ್ತದೆ.



Click it and Unblock the Notifications