Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ಹಣದ ಸಮಸ್ಯೆಯಿಂದ ದೂರಾಗಲು ಮಂಗಳವಾರ ಆಂಜನೇಯನಿಗೆ ಇವುಗಳನ್ನು ಅರ್ಪಿಸಿ
ಪ್ರತಿಯೊಂದು ದಿನ ಒಂದೊಂದು ದೇವರಿಗೆ ಮೀಸಲಾಗಿದೆ. ಹಾಗೆಯೇ ನಾವು ಆ ದೇವರಿಗೆ ಪ್ರೀತಿಪಾತ್ರವಾದ ರೀತಿ ಪೂಜೆ ಸಲ್ಲಿಸಿದರೆ ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ. ಅದರಂತೆಯೇ ಮಂಗಳವಾರ ರಾಮನ ಬಂಟ ಆಂಜನೇಯನಿಗೆ ಮೀಸಲಾದ ದಿನ.
ಆಂಜನೇಯನ ಆಶೀರ್ವಾದವನ್ನು ಪಡೆಯಲು ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವವರಿಗೆ ಇದರಿಂದ ಮುಕ್ತಿ ಸಿಗಲು ಹನುಮಂತನನ್ನು ಮಂಗಳವಾರದ ದಿನ ಹೀಗೆ ಪ್ರಾರ್ಥಿಸಬೇಕಂತೆ. ಇದರಿಂದ ಹಣಕ್ಕೆ ಸಂಬಂಧಿಸಿದ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ಅರಳಿ ಮರದ ಎಲೆ
ಮಂಗಳವಾರ ಸ್ನಾನದ ನಂತರ 11 ಅರಳಿ ಮರದ ಎಲೆಗಳನ್ನು ಕಿತ್ತುಕೊಳ್ಳಿ. ಈ ಎಲೆಗಳನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿದ ನಂತರ ಕುಂಕುಮ ಅಥವಾ ಶ್ರೀಗಂಧದಿಂದ ಶ್ರೀರಾಮ ಎಂದು ಬರೆಯಿರಿ. ಈ ಎಲೆಗಳ ಮಾಲೆಯನ್ನು ಮಾಡಿ ಹನುಮಂತನಿಗೆ ಅರ್ಪಿಸಿ. ಇದು ಶೀಘ್ರದಲ್ಲೇ ಹಣಕಾಸಿನ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ನಂಬಲಾಗಿದೆ.

ಗ್ರಹ ಶಾಂತಿ
ಮಂಗಳವಾರ ಸಂಜೆ, ಹನುಮಾನ್ ದೇವಸ್ಥಾನದಲ್ಲಿ ಲಡ್ಡುಗಳಲ್ಲಿ ತುಳಸಿ ಎಲೆಗಳನ್ನು ಹಾಕಿ ಅರ್ಪಿಸಿ. ಭಜರಂಗಬಲಿ ಲಡ್ಡುಗಳನ್ನು ತುಂಬಾ ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತದೆ. ಈ ಪರಿಹಾರವು ಗ್ರಹಗಳ ಶಾಂತಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ವೀಳ್ಯದೆಲೆ
ಯಾವುದೇ ಕೆಲಸವು ದೀರ್ಘಕಾಲದವರೆಗೆ ಆಗದಿದ್ದರೆ ಅಥವಾ ಯಾವುದೇ ನಿರ್ದಿಷ್ಟ ಕೆಲಸಕ್ಕೆ ಹೋಗುವ ಮೊದಲು ಮಂಗಳವಾರದಂದು ಹನುಮಂತನಿಗೆ ವೀಳ್ಯದೆಲೆಯನ್ನು ಅರ್ಪಿಸಿ. ಇದರಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎನ್ನುತ್ತಾರೆ.

ಮಲ್ಲಿಗೆ ಹೂವಿನ ಎಣ್ಣೆ
ಪ್ರತಿ ಮಂಗಳವಾರ ಮಲ್ಲಿಗೆ ಎಣ್ಣೆಯ ದೀಪವನ್ನು ಬೆಳಗಿಸಿ ಹನುಮಂತನಿಗೆ ಮಲ್ಲಿಗೆ ಎಣ್ಣೆ ಮತ್ತು ಹೂವುಗಳನ್ನು ಅರ್ಪಿಸಿದರೆ ಹನುಮಾನ್ ಸಂತಸಪಡುತ್ತಾನೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ.



Click it and Unblock the Notifications
