Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹಿಂದೂ ಧರ್ಮದಲ್ಲಿ ಅಚ್ಚರಿ ಮೂಡಿಸುವ ರೋಚಕ ಜನ್ಮ ರಹಸ್ಯ
ಭಾರತವೆಂದರೆ ಪುರಾಣ, ಧರ್ಮಗ್ರಂಥಗಳ ಅಗಾರ. ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ಧರ್ಮಗ್ರಂಥಗಳಿವೆ. ಅದರಲ್ಲೂ ಹಿಂದೂ ಧರ್ಮವೆಂದರೆ ಮುಕ್ಕೋಟಿ ದೇವರನ್ನು ನಂಬುವ ಧರ್ಮ. ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ದೇವರ ಹುಟ್ಟು ಮತ್ತು ಅವರ ಅವತಾರಗಳು ತುಂಬಾ ವಿಶೇಷವಾಗಿರುವಂತಹದ್ದಾಗಿದೆ.
ಹಿಂದೂ ಪುರಾಣಗಳಲ್ಲಿ ದೇವರುಗಳ ಹುಟ್ಟು ಮತ್ತು ಅವರಿಗೆ ಇರುವ ಮಹತ್ವವನ್ನು ತಿಳಿಸಲಾಗಿದೆ. ಯಾವುದೇ ದೇವ, ದೇವತೆಗಳು ನೈಸರ್ಗಿಕ ವಿಧಾನದಿಂದ ಜನ್ಮ ತಾಳಿಲ್ಲ. ದೇವರುಗಳ ಸಾಮಾನ್ಯ ಜನ್ಮವನ್ನು ತಿಳಿದುಕೊಳ್ಳುವುದು ತುಂಬಾ ಕಷ್ಟ. ಪವಾಡ ರೀತಿಯಲ್ಲಿ ಜನ್ಮ ತಳೆದಿರುವ ಕೆಲವೊಂದು ಹಿಂದೂ ದೇವರುಗಳು ಮತ್ತು ಪಾತ್ರಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.
ಸೀತೆ

ಸೀತೆಗೆ ಇರುವ ಮತ್ತೊಂದು ಹೆಸರೆಂದರೆ ಜನಕನ ಪುತ್ರಿ ಮತ್ತು ರಾಮ(ವಿಷ್ಣುವಿನ ಅವತಾರ) ದೇವರ ಪತ್ನಿ. ಆಕೆಯ ಜಾನಕಿ. ಆಕೆಯ ಜನ್ಮದ ಬಗ್ಗೆ ಇರುವ ಪುರಾಣ ಕಥೆಯೆಂದರೆ ಆಕೆ ಭೂಮಿತಾಯಿಯ ಮಗಳು. ಭೂಮಿ ಬಾಯ್ಬಿಟ್ಟಾಗ ಆಕೆ ಭೂಮಿಯಿಂದ ಜನ್ಮ ತಾಳಿದವಳು. ಭೂತಾಯಿಯ ಗರ್ಭದಿಂದ ಸೀತಾ ಮಾತೆ ಜನ್ಮ ತಾಳಿದ್ದಾಳೆ. ಆಕೆಯ ಸಾವು ಕೂಡ ಪವಾಡವೇ ಸರಿ. ಭೂಯಿಯು ಬಾಯ್ಬಿಟ್ಟು ಆಕೆಯನ್ನು ನುಂಗಿ ಮುಂದೆ ಆಗುವ ಅವಮಾನದಿಂದ ಕಾಪಾಡುತ್ತದೆ ಎನ್ನುವ ಪುರಾಣ ಕಥೆಯಿದೆ.
ನೂರು ಕೌರವರು
ಮಹಾಭಾರತದ ಕಥೆಯಲ್ಲಿ ಬರುವಂತೆ ಹಸ್ತಿನಾಪುರದ ರಾಣಿ ಗಾಂಧಾರಿಗೆ ಮಕ್ಕಳಾಗುವುದಿಲ್ಲ. ಋಷಿಗಳು ನೀಡಿದ ಆಶೀರ್ವಾದದಂತೆ ಆಕೆ ಮಣ್ಣಿನ ಮಡಕೆಯಲ್ಲಿ ಮಕ್ಕಳನ್ನು ಪಡೆಯಬಹುದು ಎಂದು ತಿಳಿಸಿದರು. 101 ಮಡಕೆಗಳನ್ನು ಭ್ರೂಣಗಳನ್ನು ಇಡಲಾಯಿತು. ಒಂದು ದಿನ ಈ 101 ಮಡಕೆಗಳು ಒಡೆದು ನೂರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಜನಿಸಿದಳು. ಇದು ಹಿಂದೂ ಪುರಾಣದಲ್ಲಿರುವ ಅತ್ಯಂತ ಪವಾಡದ ಜನನ ಮಾತ್ರವಲ್ಲದೆ, ಇಂದು ನಡೆಯುತ್ತಿರುವ ಪ್ರಣಾಳ ಶಿಶುವಿನ ಪ್ರಯೋಗಕ್ಕೂ ಇದು ಪ್ರೇರಣೆಯಾಗಿದೆ.
ಬಲರಾಮ
ಕೃಷ್ಣನ ಹಿರಿಯ ಸೋದರ ಬಲರಾಮ ದೇವಕಿ ಮತ್ತು ವಸುದೇವನ ಏಳನೇ ಪುತ್ರನಾಗಿ ಜೈಲಿನಲ್ಲಿ ಜನ್ಮ ತಾಳಿದ್ದ. ದೇವಕಿಯ ಎಂಟನೇ ಪುತ್ರನಿಂದ ತನಗೆ ಸಾವು ಎಂದು ತಿಳಿದಿದ್ದ ಆಕೆಯ ಸೋದರ ಕಂಸ ಪ್ರತಿಯೊಂದು ಮಗುವನ್ನು ಕೊಲ್ಲಲು ನಿರ್ಧರಿಸಿದ್ದ. ಬಲರಾಮನೂ ಕಂಸನ ಕೈಯಲ್ಲಿ ಸಾವನ್ನು ಕಾಣಬೇಕಿತ್ತು. ಆದರೆ ವಸುದೇವನ ಇನ್ನೊಬ್ಬಳು ಪತ್ನಿ ರೋಹಿಣಿಯ ಗರ್ಭಕ್ಕೆ ಮಗುವನ್ನು ವರ್ಗಾಯಿಸಲಾಗಿತ್ತು. ಆಕೆ ಬಲರಾಮನಿಗೆ ಜನ್ಮ ನೀಡಿದಳು.
ದ್ರೌಪದಿ
ಸೀತೆ ಭೂಮಿಯಿಂದ ಜನ್ಮ ತಳೆದಿದ್ದರೆ, ದ್ರೌಪದಿಯು ಅಗ್ನಿಯಿಂದ ಜನ್ಮ ಪಡೆದವಳು. ದ್ರೌಪದಿ ಮತ್ತು ದೃಷ್ಟದ್ಯುಮ್ನ ಯಜ್ನದಿಂದ ಜನ್ಮ ಪಡೆದವರು. ರಾಜ ದ್ರುಪದ ಮಾಡಿದ ಯಜ್ಞಕ್ಕೆ ಫಲವಾಗಿ ಇವರಿಬ್ಬರ ಜನನವಾಯಿತು.
ಅಯ್ಯಪ್ಪ ದೇವರ ಜನ್ಮ
ಮಹಿಷಿ ಎನ್ನುವ ರಾಕ್ಷಸಿ ಘೋರ ತಪಸ್ಸನ್ನು ಮಾಡಿ ಬ್ರಹ್ಮ ದೇವರನ್ನು ಒಲಿಸಿಕೊಳ್ಳುತ್ತಾಳೆ. ಆಕೆ ಅಮರವಾಗಿರಬೇಕೆಂದು ವರ ಕೇಳುತ್ತಾಳೆ. ಆದರೆ ಬ್ರಹ್ಮ ದೇವರು ಇದನ್ನು ನಿರಾಕರಿಸುತ್ತಾರೆ. ಮಹಿಳೆಯಿಂದ ಜನಿಸಿದ ಯಾವ ಪುರುಷನಿಂದಲೂ ತನಗೆ ಸಾವು ಬರಬಾರದು ಎಂದು ಆಕೆ ವರ ಕೇಳುತ್ತಾಳೆ. ಬ್ರಹ್ಮ ದೇವರು ಇದಕ್ಕೆ ತಥಾಸ್ತು ಎನ್ನುತ್ತಾರೆ. ಪ್ರತಿಯೊಬ್ಬರು ಮಹಿಳೆಯಿಂದಲೇ ಜನ್ಮ ತಳೆಯಬೇಕಾಗುತ್ತದೆ ಎನ್ನುವುದನ್ನು ತಿಳಿದಿದ್ದ ಮಹಿಷಿ ಅತೀವ ಸಂತೋಷಗೊಂಡು ಮೂರು ಲೋಕದಲ್ಲಿ ದುರಂಕಾರದಿಂದ ಮೆರೆಯುತ್ತಾಳೆ.
ಮಹಿಷಿಯನ್ನು ತಡೆಯಲು ವಿಷ್ಣು ಮೋಹಿನಿಯ ಅವತಾರ ತಾಳುತ್ತಾನೆ ಮತ್ತು ಶಿವನೊಂದಿಗೆ ಸಮಾಗಮವಾಗುತ್ತದೆ. ಆಗ ಜನಿಸುವ ಮಗುವೇ ಅಯ್ಯಪ್ಪ ದೇವರು. ಆತ ಮಹಿಳೆಯ ಹೊಟ್ಟೆಯಲ್ಲಿ ಹುಟ್ಟಿದ ಮಗುವಲ್ಲ. ಇವೆಲ್ಲವೂ ದೇವರು ಮತ್ತು ಅವರ ಅವತಾರಗಳ ಬಗ್ಗೆ ಇರುವ ಕೆಲವೊಂದು ಪುರಾಣ ಕಥೆಗಳು.



Click it and Unblock the Notifications

