ಅಷ್ಟಕ್ಕೂ ಮಹಿಳೆಯರು ಸಾಷ್ಟಾಂಗ ನಮಸ್ಕಾರ ಮಾಡಬಾರದೇ?

Posted By: Deepu
Subscribe to Boldsky

ನಮಸ್ಕಾರಗಳಲ್ಲಿ ಸಾಷ್ಟಾಂಗ ನಮಸ್ಕಾರ ಕೂಡ ಒಂದಾಗಿದ್ದು, ಈ ಸಮಯದಲ್ಲಿ ದೇಹದ ಎಲ್ಲಾ ಅಂಗಗಳು ಭೂಮಿಯನ್ನು ಸ್ಪರ್ಶಿಸುತ್ತವೆ. ಇದನ್ನು "ದಂಡಾಕಾರ ನಮಸ್ಕಾರ" ಮತ್ತು "ಉದ್ಧಂಡ ನಮಸ್ಕಾರ" ಎಂದೂ ಕರೆಯಲಾಗುತ್ತದೆ. ಇದರ ಸಂಪೂರ್ಣ ಅರ್ಥವೆಂದರೆ ದಂಡ ಎಂದರೆ ಕೋಲನ್ನು ಸೂಚಿಸುತ್ತಿದ್ದು ಉದ್ಧಂಡ ನಮಸ್ಕಾರ ಮಾಡುವುದೆಂದರೆ ನಿಮ್ಮ ದೇಹವನ್ನು ಕೋಲಿನಂತೆ ದೃಢಗೊಳಿಸಿ ದೇವರಿಗೆ ನಮಸ್ಕರಿಸುವುದು ಎಂದಾಗಿದೆ.

ನನ್ನ ಸಂಪೂರ್ಣವನ್ನೂ ನಿನಗೆ ಒಪ್ಪಿಸುತ್ತಿದ್ದೇನೆ ಇಲ್ಲವೇ ದೇವರೇ ನಿನಗೆ ನಾನು ಶರಣಾಗತಿಯಾಗುತ್ತಿದ್ದೇನೆ ಎಂಬುದು ಈ ಸಾಷ್ಟಾಂಗ ನಮಸ್ಕಾರದ ಅರ್ಥವಾಗಿದೆ. ಇನ್ನು ಕೆಲವೊಂದು ಸಂದರ್ಭಗಳಲ್ಲಿ ಈ ರೀತಿಯ ನಮಸ್ಕಾರವನ್ನು ನಮ್ಮ ಅಹಂಕಾರವನ್ನು ದೇವರಿಗೆ ಒಪ್ಪಿಸಿಕೊಂಡು ಸರ್ವವೇ ನೀವೇ ಎಂಬ ಶರಣಾಗತಿಯ ಭಾವವಾಗಿದೆ. ನಾವು ನಿಂತುಕೊಂಡು ನಮಸ್ಕರಿಸುವಾಗ ಇಲ್ಲವೇ ಕುಳಿತು ನಮಸ್ಕರಿಸುವಾಗ ದೇಹಕ್ಕೆ ಗಾಯ ಇಲ್ಲವೇ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ ಸಾಷ್ಟಾಂಗ ನಮಸ್ಕಾರವನ್ನು ಮಾಡುವಾಗ ಯಾವುದೇ ಗಾಯಗಳು ದೇಹಕ್ಕೆ ಉಂಟಾಗುವ ಸಂಭವ ತುಂಬಾ ಕಡಿಮೆ ಇರುತ್ತದೆ.

ಸಾಷ್ಟಾಂಗ ನಮಸ್ಕಾರದಲ್ಲಿ ನಮ್ಮ ಅಹಂಕಾರ ಹಿರಿತನವನ್ನು ಬದಿಗಿಟ್ಟು ಮಾನವೀಯತೆಯನ್ನು ಬೆಳೆಸಿಕೊಳ್ಳುವ ಸ್ಥಿತಿ ಏರ್ಪಡುತ್ತದೆ. ಇತರರು ನಮ್ಮ ತಲೆಯನ್ನು ಕೆಳಕ್ಕೆ ಬಾಗುವಂತೆ ಮಾಡಿದರೆ ಅದು ಅಪಕೀರ್ತಿಯಾಗುತ್ತದೆ ಆದರೆ ಸ್ವತಃ ನಾವೇ ನಮ್ಮ ತಲೆಯನ್ನು ತಗ್ಗಿಸಿದರೆ ಇದು ಪುರಸ್ಕಾರ ಮತ್ತು ಗೌರವದ ಸಂಕೇತವಾಗಿದೆ. ನೀವು ಗುರು ಹಿರಿಯರಿಗೆ ಈ ರೀತಿಯ ನಮಸ್ಕಾರವನ್ನು ಮಾಡುವುದು ಎಂದರೆ ನೀವು ದೇವರಿಗೆ ನಮಸ್ಕಾರವನ್ನು ಮಾಡಿದಂತೆ. ನಿಮ್ಮ ಸಂಕಷ್ಟವನ್ನು ಅಪರ್ಣೆಯನ್ನು ಅವರುಗಳ ಮೂಲಕ ನೀವು ದೇವರಿಗೆ ಮಾಡುತ್ತಿದ್ದೀರಿ ಎಂದರ್ಥವಾಗಿದೆ...

ಸಾಷ್ಟಾಂಗ ನಮಸ್ಕಾರ ಮಹತ್ವ

ಸಾಷ್ಟಾಂಗ ನಮಸ್ಕಾರ ಮಹತ್ವ

ದೇವರ ಮುಂದೆ ನಮ್ಮ ಅಹಂಕಾರವನ್ನು ತ್ಯಜಿಸುವುದು ಇದರರ್ಥ ಕೂಡ. ತಲೆಯನ್ನು ಬೇರೆಯವರು ತಗ್ಗಿಸುವಂತೆ ಮಾಡಿದರೆ ಅದು ಅಗೌರವ. ಆದರೆ ನಾವಾಗಿಯೇ ತಲೆಯನ್ನು ತಗ್ಗಿಸಿದರೆ ಅದು ಗೌರವ ಎನ್ನುವುದು ನಮಸ್ಕಾರದ ಅರ್ಥವಾಗಿದೆ. ಸನ್ಯಾಸಿಗಳು, ಗುರುಗಳು ಹಾಗೂ ಹಿರಿಯರ ಮುಂದೆ ಇಂತಹ ನಮಸ್ಕಾರ ಮಾಡಿದಾಗ ನಿಮ್ಮ ಪ್ರಾರ್ಥನೆಯು ಅವರ ಮೂಲಕ ದೇವರಿಗೆ ತಲುಪಲಿದೆ ಎನ್ನುವ ನಂಬಿಕೆಯಿದೆ. ನಮಸ್ಕಾರವನ್ನು ಸ್ವೀಕರಿಸುವಾತ ಇದು ತನಗೆ ಮಾಡಿದಂತಹ ನಮಸ್ಕಾರವಲ್ಲ, ಇದನ್ನು ದೇವರಿಗೆ ಮುಟ್ಟಿಸಿ ನಮಸ್ಕಾರ ಮಾಡಿದಾತನಿಗೆ ಅದರ ಶ್ರೇಯಸ್ಸನ್ನು ತಲುಪಿಸಬೇಕಾಗಿದೆ ಎಂದು ಭಾವಿಸಬೇಕು.

ಹಾಗಿದ್ದರೆ, ಈ ನಮಸ್ಕಾರವನ್ನು ಹೇಗೆ ಮಾಡಲಾಗುತ್ತದೆ?

ಹಾಗಿದ್ದರೆ, ಈ ನಮಸ್ಕಾರವನ್ನು ಹೇಗೆ ಮಾಡಲಾಗುತ್ತದೆ?

ಈ ನಮಸ್ಕಾರವನ್ನು ಪುರುಷರು ಮಾಡುವಾಗ ಕೈಗಳು, ಹೊಟ್ಟೆ, ಮಂಡಿ, ಕಾಲುಗಳನ್ನು ಮಡಚಿಕೊಂಡು ಭೂಮಿಗೆ ಸ್ಪರ್ಶವಾಗುವಂತೆ ನಮಸ್ಕಾರ ಮಾಡುವುದಾಗಿದೆ. ಇನ್ನು ಸ್ತ್ರೀಯರು ಕೈ ಮತ್ತು ಮಂಡಿಯನ್ನು ಮಡಿಚಿಕೊಂಡು ಭೂಮಿಗೆ ಸ್ಪರ್ಶವಾಗುವಂತೆ ನಮಸ್ಕರಿಸುತ್ತಾರೆ.

ಮಹಿಳೆಯರು ಸಾಷ್ಟಾಂಗ ನಮಸ್ಕಾರ ಮಾಡಬಹುದೇ?

ಮಹಿಳೆಯರು ಸಾಷ್ಟಾಂಗ ನಮಸ್ಕಾರ ಮಾಡಬಹುದೇ?

ವೇದಗಳಲ್ಲಿ ಹೇಳಿರುವಂತೆ, ಮಹಿಳೆಯರು ಸಾಷ್ಟಾಂಗ ನಮಸ್ಕಾರ ಮಾಡಬಾರದು ಎಂದಾಗಿದೆ. ಏಕೆಂದರೆ ಮಹಿಳೆಯ ಎದೆಯ ಭಾಗ ಮತ್ತು ಕಿಬ್ಬೊಟ್ಟೆಯ ಭಾಗ ಭೂಮಿಯನ್ನು ಸ್ಪರ್ಶಿಸಬಾರದು ಎಂದಾಗಿದೆ.

ಮಹಿಳೆಯರು ಸಾಷ್ಟಾಂಗ ನಮಸ್ಕಾರವನ್ನು ಏಕೆ ಮಾಡಬಾರದು?

ಮಹಿಳೆಯರು ಸಾಷ್ಟಾಂಗ ನಮಸ್ಕಾರವನ್ನು ಏಕೆ ಮಾಡಬಾರದು?

ಮಹಿಳೆಯರು ಪಂಚಾಂಗ ನಮಸ್ಕಾರವನ್ನು ಮಾಡಬೇಕು ಸಾಷ್ಟಾಂಗ ನಮಸ್ಕಾರವನ್ನು ಮಾಡಬಾರದು. ಪಂಚಾಗ ನಮಸ್ಕಾರದಲ್ಲಿ ಮಹಿಳೆಯು ಮಂಡಿಯೂರಿ ನಮಸ್ಕಾರವನ್ನು ಮಾಡುತ್ತಾರೆ. ಮಹಿಳೆಯ ಸ್ತನದ ಭಾಗವು ಮಗುವಿನ ಪೋಷಣೆಯನ್ನು ಮಾಡುತ್ತದೆ ಅಂತೆಯೇ ಆಕೆಯ ಹೊಟ್ಟೆಯ ಭಾಗವು ಮಗುವನ್ನು ಹೊರುವ ಕಾರ್ಯವನ್ನು ಮಾಡುವುದರಿಂದ ಈ ಭಾಗಗಗಳು ಭೂಮಿಯನ್ನು ಸ್ಪರ್ಶಿಸುವುದು ನಿಷಿದ್ಧವಾಗಿದೆ.

English summary

Meaning and Significance of sashtanga-namaskaram

A sashtanga namaskar is one of the many types of namaskar, where is which all the body parts or angas touch the ground. This type of namaskara is also commonly known as the "dandakara namaskaram" and "uddanda namaskara". According to the theory, the word "danda" means "stick". Therefore, the dandakara namaskaram is where the person doing the namaskara lies on the ground just like a fallen stick.