Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ಫೆ.1 ಮೌನಿ ಅಮಾವಾಸ್ಯೆ: ಚಂದ್ರದೋಷ ನಿವಾರಣೆಗೆ ಹೀಗೆ ಮಾಡಿ
ಹಿಂದೂ ಧರ್ಮದಲ್ಲಿ ಅಮವಾಸ್ಯೆ ಮತ್ತು ಹುಣ್ಣಮೆ ತಿಥಿಗೆ ವಿಶೇಷ ಮಹತ್ವವಿದೆ. ಈ ಎರಡೂ ದಿನಾಂಕಗಳು ಚಂದ್ರನ ನಿರ್ದಿಷ್ಟ ಸ್ಥಾನಗಳನ್ನು ಆಧರಿಸಿದ್ದು, ಈ ದಿನಗಳಂದು ಚಂದ್ರನನ್ನು ಪೂಜಿಸುವುದು ಫಲಪ್ರದವಾಗಿದೆ.
ಆದರೆ, ಎಲ್ಲಾ ಅಮವಾಸ್ಯೆ ತಿಥಿಗಳಲ್ಲಿ ಮೌನಿ ಅಮಾವಾಸ್ಯೆಗೆ ವಿಶೇಷ ಸ್ಥಾನವಿದ್ದು, ಇದನ್ನು ಪುರಾಣಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ದಿನವು ಮಾನಸಿಕ ಸಮಸ್ಯೆಗಳಿರುವ ಅಥವಾ ಜಾತಕದಲ್ಲಿ ಚಂದ್ರನ ದೋಷಗಳನ್ನು ಹೊಂದಿರುವ ಜನರಿಗೆ ಬಹಳ ಮಂಗಳಕರ ಸಮಯವಾಗಿದೆ. ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಗಂಗಾ ಸ್ನಾನವನ್ನು ಮಾಡುವುದರಿಂದ ಪಾಪಗಳೆಲ್ಲವೂ ಕಳೆದು, ಮೋಕ್ಷ ದೊರಕುವುದು ಎಂಬ ನಂಬಿಕೆಯಿದೆ. ಇಂತಹ ಅಮಾವಾಸ್ಯೆ ಈ ವರ್ಷ ಫೆಬ್ರವರಿ 1ರಂದು ಅಂದರೆ, ಇಂದು ಬಂದಿದೆ.

ಮೌನಿ ಅಮವಾಸ್ಯೆ 2022 : ದಿನಾಂಕ ಮತ್ತು ತಿಥಿ
ಹಿಂದೆ ಮಾಡಿದ ದುಷ್ಕೃತ್ಯಗಳನ್ನು ನಿವಾರಿಸಲು ಭಕ್ತರು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುತ್ತಾರೆ. ಜೊತೆಗೆ ದಿನವಿಡೀ ಉಪವಾಸವನ್ನು ಆಚರಿಸುತ್ತಾರೆ. ಕೆಲವರು ದಿನವಿಡೀ ಒಂದು ಮಾತನ್ನೂ ಆಡದೇ 'ಮೌನ ವ್ರತ'ವನ್ನು ಸಹ ಆಚರಿಸುತ್ತಾರೆ.
ದಿನಾಂಕ: ಫೆಬ್ರವರಿ 1 (ಮಂಗಳವಾರ)
ಅಮವಾಸ್ಯೆ ತಿಥಿ ಪ್ರಾರಂಭ - ಜನವರಿ 31, 2022 ರಂದು ಮಧ್ಯಾಹ್ನ 02:18 ಕ್ಕೆ
ಅಮವಾಸ್ಯೆಯ ತಿಥಿ ಅಂತ್ಯ - ಫೆಬ್ರವರಿ 1, 2022 ರಂದು 11:15ಕ್ಕೆ

ಮೌನಿ ಅಮವಾಸ್ಯೆ ಮಹತ್ವ:
ಹಿಂದೂ ನಂಬಿಕೆಯಂತೆ ಎರಡು ದಿನಗಳ ಕಾಲ ಅಮವಾಸ್ಯೆಯನ್ನು ಆಚರಿಸುವಾಗ ಮೊದಲ ದಿನ ಶ್ರಾದ್ಧ ಅಮವಾಸ್ಯೆ ಮತ್ತು ಮೌನಿ ಅಮವಾಸ್ಯೆ ಎಂದು ಗುರುತಿಸಲಾಗುತ್ತದೆ. ಎರಡನೇ ದಿನ ಪವಿತ್ರ ನೀರಿನಲ್ಲಿ ಸ್ನಾನ ಮಾಡುತ್ತಾರೆ, ದಾನ ಮಾಡುತ್ತಾರೆ. ಈ ದಿನವನ್ನು ಅಮೃತ ಯೋಗದ ದಿನ ಮತ್ತು ಕುಂಭಪರ್ವದ ದಿನ ಎಂದು ಕರೆಯಲಾಗುತ್ತದೆ. ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಗಂಗಾ ಸ್ನಾನವನ್ನು ಮಾಡುವುದರಿಂದ ಪಾಪಗಳೆಲ್ಲವೂ ಕಳೆದು, ಮೋಕ್ಷ ದೊರಕುವುದು ಎಂಬ ನಂಬಿಕೆಯಿದೆ.

ಮೌನಿ ಅಮವಾಸ್ಯೆ ಪೂಜಾ ವಿಧಿ:
ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು.
ಸ್ನಾನ ಇತ್ಯಾದಿಗಳಿಂದ ನಿವೃತ್ತರಾದ ನಂತರ ಚಂದ್ರ ಕವಚವನ್ನು ಪಠಿಸಬೇಕು.
ದಿನವಿಡೀ ಹಣ್ಣುಹಂಪಲು ಸೇವಿಸಿ ಉಪವಾಸ ಮಾಡಿ, ರಾತ್ರಿ ಚಂದ್ರನಿಗೆ ಹಾಲಿನೊಂದಿಗೆ ಅರ್ಘ್ಯವನ್ನು ನೀರು ಬೆರೆಸಿ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ ಚಾಲ್ತಿಯಲ್ಲಿರುವ ಚಂದ್ರದೋಷದಿಂದ ಮುಕ್ತಿ ಸಿಗುತ್ತದೆ.



Click it and Unblock the Notifications