Latest Updates
-
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು?
Makar Sankranti 2023: ಮಕರ ಸಂಕ್ರಾಂತಿ ದಿನ ಈ ವಸ್ತುಗಳನ್ನು ದಾನ ಮಾಡಿದರೆ ಶನಿ ದೋಷ ನಿವಾರಣೆಯಾಗುತ್ತದೆ
ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ, ಈ ದಿನದಂದು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಶುಭ ಫಲ ಸಿಗುತ್ತದೆ.

ಹಿಂದೂ ಪಂಚಾಂಗದ ಪ್ರಕಾರ, ಸೂರ್ಯನು ಜನವರಿ 14, 2023 ರಂದು ರಾತ್ರಿ 8.20ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯ ಬಹಳ ಮಹತ್ವದ್ದಾಗಿದ್ದು, ಸೂರ್ಯನ ಸಂಕ್ರಮಣದ ಈ ಶುಭ ಸಮಯವನ್ನು ಮಕರ ಸಂಕ್ರಾಂತಿ ಎನ್ನಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಈ ದಿನಕ್ಕೆ ಬಹಳ ಮಹತ್ವವಿದೆ.
ಸಂಕ್ರಮಣದ ಮುಹೂರ್ತ
ಸಂಕ್ರಮಣದ ಶುಭ ಮುಹೂರ್ತವು ಜನವರಿ 15, 2023 ರಂದು ಬೆಳಿಗ್ಗೆ 6.48ರ ಸುಮಾರಿಗೆ ಪ್ರಾರಂಭವಾಗುತ್ತದೆ, ಅದೇ ದಿನ ಸಂಜೆ 5.41 ರವರೆಗೆ ಇರುತ್ತದೆ. ಈ ದಿನ ಶನಿ ದೋಷ ಇದ್ದವರಿಗೆ ಬಹಳ ಮುಖ್ಯವಾದ ದಿನವಾಗಲಿದೆ. ಅಂದರೆ ಮಕರ ಸಂಕ್ರಾಂತಿಯ ದಿನ ಶನಿ ದೋಷ ಇದ್ದವರು ಈ ವಸ್ತುಗಳನ್ನು ದಾನ ಮಾಡಿದರೆ ದೋಷ ನಿವಾರಣೆಯಾಗುತ್ತದೆ, ಶುಭ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.
ಶನಿ ಗ್ರಹ
ಜ್ಯೋತಿಷ್ಯದ ಪ್ರಕಾರ ಶನಿ, ಅತ್ಯಂತ ದುರುದ್ದೇಶ ಪೂರಿತ, ಬಹಳ ಪರಿಣಾಮಕಾರಿ ಹಾಗೂ ಶಕ್ತಿಯುತ ಗ್ರಹವಾಗಿದ್ದು , ಇದು ಮನಸ್ಸನ್ನು ಪ್ರತಿನಿಧಿಸುತ್ತದೆ. ಶನಿಯು ಯಾವಾಗಲೂ ನಮ್ಮ ಜೀವನದ ತಡವಾಗಿ ಫಲಿತಾಂಶ ನೀಡುವ, ನಮ್ಮ ಸ್ವಂತ ಪ್ರಯತ್ನಗಳಿಂದ ವಿಷಯಗಳನ್ನು ವಿಳಂಬಗೊಳಿಸುವ ಗ್ರಹವಾಗಿದೆ. ಶನಿಯು ತನ್ನ ಋಣಾತ್ಮಕ ಪರಿಣಾಮವನ್ನು ಬೀರುತ್ತಾನೆ ಏಕೆಂದರೆ ಅದು ಪ್ರಸ್ತುತ ಅಥವಾ ಹಿಂದಿನ ಜನ್ಮದಲ್ಲಿ ವ್ಯಕ್ತಿಯ ಕರ್ಮದ ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದೆ.
ಉದ್ದಿನ ಬೇಳೆ
ಉದ್ದಿನ ಬೇಳೆಯು ಶನಿ ದೇವನಿಗೆ ಸಂಬಂಧಿಸಿದೆ. ಶನಿ ದೋಷ ಇದ್ದವರು ಮಕರ ಸಂಕ್ರಾಂತಿಯ ಸಮಯದಲ್ಲಿ ಉದ್ದಿನ ಬೇಳೆಯನ್ನು ದಾನ ಮಾಡಬೇಕು. ಈ ದಿನ ಉದ್ದಿನ ಬೇಳೆ ಅಥವಾ ಇದರಿಂದ ತಯಾರಿಸಿದ ಆಹಾರವನ್ನು ದಾನ ಮಾಡಿದರೆ ಜಾತಕದಲ್ಲಿರುವ ಶನಿ ದೋಷ ನಿವಾರಣೆಯಾಗುತ್ತದೆ.
ಮಕರ ಸಂಕಾತ್ರಿಯ ದಿನ ಏನನ್ನು ದಾನ ಮಾಡಬೇಕು?
ಎಳ್ಳು
ಎಳ್ಳು ಶನಿ ದೇವನ ದೋಷ ನಿವಾರಣೆಗೆ ಬಳಸುವ ಪ್ರಮುಖ ಆಹಾರ ಪದಾರ್ಥ. ಮಕರ ಸಂಕ್ರಾಂತಿಯ ದಿನದಂದು ಎಳ್ಳನ್ನು ದಾನ ಮಾಡುವುದರಿಂದ ಶನಿ ದೋಷ ದೂರವಾಗುತ್ತದೆ.
ಕಂಬಳಿ
ಮಕರ ಸಂಕ್ರಾಂತಿಯ ದಿನದಂದು ಕಂಬಳಿಗಳನ್ನು ದಾನ ಮಾಡುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ. ಈ ದಿನ ಕಂಬಳಿಯನ್ನು ದಾನ ಮಾಡಿದರೆ ರಾಹುದೋಷ ಸಹ ನಿವಾರಣೆಯಾಗುತ್ತದೆ. ಆದ್ದರಿಂದ ಈ ದಿನ ಅಗತ್ಯವಿರುವ ಬಡವರು, ನಿರ್ಗತಿಕರಿಗೆ ಕಂಬಳಿ ದಾನ ಮಾಡಿ.



Click it and Unblock the Notifications


