Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಹಾಶಿವರಾತ್ರಿ: ಈ ದಿನ ಮರೆತು ಕೂಡ ಈ ಕೆಲಸಗಳನ್ನು ಮಾಡದಿರಿ
ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ವಿಶೇಷ ಮಹತ್ವವಿದ್ದು, ಈ ದಿನದಂದು, ಮಹಾದೇವನನ್ನು ಮೆಚ್ಚಿಸಲು ಭಕ್ತರು ಬಹಳಷ್ಟು ಆಚರಣೆಗಳೊಂದಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಶಿವನನ್ನು ಮೆಚ್ಚಿಸುವುದು ತುಂಬಾ ಸುಲಭ ಎನ್ನಲಾಗುತ್ತದೆ. ಮನಸ್ಸಿನಲ್ಲಿ ನಿಜವಾದ ನಂಬಿಕೆಯಿಂದ ಹೂವು, ಹಣ್ಣು ಅರ್ಪಿಸಿದರೆ ಸಾಕು, ಆತ ಸಂತೋಷಗೊಂಡು ಭಕ್ತರ ಪ್ರತಿಯೊಂದು ದುಃಖವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ. ಆದರೆ ಅವನನ್ನು ಮೆಚ್ಚಿಸುವುದು ಎಷ್ಟು ಸುಲಭವೋ, ಪೂಜೆಯಲ್ಲಿ ನೀವು ಮಾಡುವ ಸಣ್ಣ ತಪ್ಪಿನಿಂದ ಶಿವ ಅಷ್ಟೇ ಬೇಗ ಕೋಪಗೊಳ್ಳಬಹುದು. ಹಾಗಾದರೆ ಶಿವರಾತ್ರಿಯಂದು ಆತನಿಗೆ ಕೋಪ ತರಿಸುವ ವಿಚಾರಗಳನ್ನು ಯಾವುವು ನೋಡೋಣ.
ಈ ಮಹಾಶಿವರಾತ್ರಿಯಂದು ಮರೆತೂ ಈ ಕೆಲಸ ಮಾಡಬೇಡಿ, ಇದರಿಂದ ಶಿವನ ಕೃಪೆಗೆ ಬದಲಾಗಿ ಕೋಪಕ್ಕೆ ಗುರಿಯಾಗಬೇಕಾಗಬಹುದು:

1. ತುಳಸಿಯನ್ನು ಬಳಸಬೇಡಿ:
ತುಳಸಿಯನ್ನು ಧರ್ಮಗ್ರಂಥಗಳಲ್ಲಿ ಪವಿತ್ರ ಮತ್ತು ದೇವತೆಯಂತೆ ಪರಿಗಣಿಸಲಾಗುತ್ತದೆ. ಜೊತೆಗೆ ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದು ಕೂಡ ಮಂಗಳಕರ. ಆದರೆ ಶಿವನ ಪೂಜೆಯಲ್ಲಿ ತುಳಸಿಯನ್ನು ಬಳಸಬಾರದು ಎಂಬುದನ್ನು ನೆನಪಿನಲ್ಲಿಡಿ. ಶಾಸ್ತ್ರಗಳ ಪ್ರಕಾರ, ತುಳಸಿ, ವಿಷ್ಣುವಿನ ಪ್ರಿಯವಾದ ವಸ್ತು. ಆದ್ದರಿಂದ ಅದನ್ನು ಶಿವಲಿಂಗದ ಮೇಲೆ ತುಳಸಿಯನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ.

2. ಈ ಸಮಯದಲ್ಲಿ ಪೂಜೆ ಬೇಡ:
ವಿದ್ವಾಂಸರ ಪ್ರಕಾರ, ಪೂಜೆಗೆ ಸರಿಯಾದ ಸಮಯವನ್ನು ಮುಖ್ಯವಾಗಿ ಬೆಳಿಗ್ಗೆ ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ಕೆಲಸದ ವಿಚಾರದಲ್ಲಿ ಸ್ವಲ್ಪ ತಡವಾಗಬಹುದು. ಆದರೆ ಮುಂಜಾನೆ ಬೇಗ ಎದ್ದು ಸ್ನಾನ ಇತ್ಯಾದಿಗಳ ನಂತರ ಭೋಲೇನಾಥನನ್ನು ಪೂಜಿಸಬೇಕೆಂಬುದನ್ನು ನೆನಪಿನಲ್ಲಿಡಿ. ಮುಂಜಾನೆಯೇ ಪೂಜೆ ಮಾಡುವುದರಿಂದ ಶಿವನು ಪ್ರಸನ್ನನಾಗುತ್ತಾನೆ. ಆ ನಂತರದ ಸಮಯದಲ್ಲಿ ಅಂದರೆ ಮಧ್ಯಾಹ್ನದ ವೇಳೆ ಶಿವ ಪೂಜೆ ಒಳ್ಳೆಯದಲ್ಲ.

3. ಈ ಪಾತ್ರಗಳಿಂದ ಅಭಿಷೇಕ ಮಾಡಬೇಡಿ:
ಶಿವಪೂಜೆಯಲ್ಲಿ ಅಭಿಷೇಕಕ್ಕೆ ವಿಶೇಷ ಮಹತ್ವವಿದೆ. ಆದರೆ ಆದಿಯೋಗಿಯ ಭಕ್ತರು ಶಿವರಾತ್ರಿಯ ದಿನ ಅಥವಾ ಶಿವಪೂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಗಳನ್ನು ಅಭಿಷೇಕಕ್ಕೆ ಬಳಸಬೇಡಿ. ನೀವು ಶಿವಲಿಂಗವನ್ನು ಬೆಳ್ಳಿ, ಚಿನ್ನ ಅಥವಾ ಕಂಚಿನ ಪಾತ್ರೆಯಿಂದ ಮಾತ್ರ ಅಭಿಷೇಕಿಸಬೇಕು ಎಂಬುದನ್ನು ನೆನಪಿಡಿ, ಇದರಿಂದ ಭೋಲೇನಾಥನ ವಿಶೇಷ ಆಶೀರ್ವಾದವು ನಿಮ್ಮ ಮೇಲೆ ಇರುವುದು.

4. ಈ ಹೂವು ಪೂಜೆಗೆ ನಿಷಿಧ್ಧ:
ಬಿಳಿ ಹೂವುಗಳು ಶಿವನಿಗೆ ತುಂಬಾ ಪ್ರಿಯವಾಗಿವೆ, ಆದರೆ ಬಿಳಿಯಾಗಿದ್ದರೂ ಸಹ, ಶಿವಾರಾಧನೆಯಲ್ಲಿ ಕೇದಿಗೆ ಹೂವನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಶಿವರಾತ್ರಿಯ ದಿನದಂದು, ನೀವು ಬಯಸಿದ ಫಲಿತಾಂಶವನ್ನು ಪಡೆಯಲು ಬಯಸಿದರೆ, ಶಿವಲಿಂಗದ ಮೇಲೆ ಕೇದಿಗೆ ಹೂವನ್ನು ಅರ್ಪಿಸಬೇಡಿ. ಇಲ್ಲದಿದ್ದರೆ ಶಿವ ಕೋಪಗೊಳ್ಳಬಹುದು.



Click it and Unblock the Notifications
