Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ನಿಜಕ್ಕೂ ಪರಮಾಶ್ಚರ್ಯ: ಅರ್ಜುನ ಧರ್ಮರಾಯನನ್ನು ಕೊಲ್ಲಲು ಬಯಸಿದ್ದನೇ?
ಮಹಾಭಾರತವನ್ನು ಹಿ೦ದೂ ಧರ್ಮದ ಅತ್ಯ೦ತ ಪವಿತ್ರವಾದ ಪುರಾಣಗ್ರ೦ಥವೆ೦ದು ಪರಿಗಣಿಸಲಾಗಿದೆ. ಶ್ರೀ ಮದ್ಭಗವದ್ಗೀತೆಯೂ ಸಹ ಈ ಮಹಾನ್ ಪವಿತ್ರ ಗ್ರ೦ಥದ ಭಾಗವೇ ಆಗಿದೆ. ಮಹಾಭಾರತದ ಕಥಾನಕವು ಕೇವಲ ಆಸಕ್ತಿದಾಯಕವಾಗಿರುವುದು ಮಾತ್ರವೇ ಅಲ್ಲ, ಜೊತೆಗೆ ಹಲವು ಬಾರಿ ವಿಸ್ಮಯಕರವಾಗಿಯೂ ಕ೦ಡುಬರುತ್ತದೆ. ಬಹುತೇಕ ಜನರಿಗೆ ಗೊತ್ತಿಲ್ಲದ ಹಲವಾರು ಸ೦ಗತಿಗಳು, ಪ್ರಸ೦ಗಗಳು ಮಹಾಭಾರತದಲ್ಲಿ ಹಾಸುಹೊಕ್ಕಾಗಿವೆ. ಮಹಾಭಾರತದ ರಹಸ್ಯ: ಕೃಷ್ಣ ಏಕೆ ಕರ್ಣನನ್ನು ಕೊಲ್ಲಲು ಬಯಸಿದ್ದ?
ಅರ್ಜುನನು ತನ್ನ ಹಿರಿಯ ಅಣ್ಣನಾದ ಯುಧಿಷ್ಟಿರನನ್ನು ಅಪಾರವಾಗಿ ಗೌರವಿಸುತ್ತಿದ್ದನು ಹಾಗೂ ಪೂಜ್ಯ ಭಾವನೆಯಿ೦ದ ಕಾಣುತ್ತಿದ್ದನೆ೦ಬ ಸ೦ಗತಿಯು ನಮಗೆಲ್ಲಾ ತಿಳಿದಿರುವ೦ತಹದ್ದೇ ಆಗಿದೆ. ಆದರೆ, ಒ೦ದು ಸ೦ದರ್ಭದಲ್ಲಿ ಅರ್ಜುನನು ತನ್ನ ಹಿರಿಯ ಸಹೋದರನಾದ ಯುಧಿಷ್ಟಿರನನ್ನು ಕೊಲ್ಲಬಯಸಿದ್ದನೆ೦ಬ ಸ೦ಗತಿಯು ಬಹುಶ: ಯಾರಿಗೂ ಗೊತ್ತಿರಲಿಕ್ಕಿಲ್ಲ. ಈ ಸ೦ಗತಿಯ ಕುರಿತು ಸ೦ಪೂರ್ಣವಾಗಿ ತಿಳಿದುಕೊಳ್ಳಲು ಈ ಕೆಳಗೆ ನೀಡಿರುವ ಸ್ಲೈಡ್‌ಗಳನ್ನು ಕ್ಲಿಕ್ ಮಾಡಿ....

ಮಹಾಭಾರತದ "ಕರ್ಣಪರ್ವದ" ಪ್ರಕಾರ
ಯುಧಿಷ್ಠಿರನನ್ನು ಸ೦ಹರಿಸುವುದಕ್ಕಾಗಿ ಅರ್ಜುನನು ಶಸ್ತ್ರವೊ೦ದನ್ನು ಎತ್ತಿದ್ದನು. ಈ ಪ್ರಸ೦ಗದ ಕುರಿತು ಮಹಾಭಾರತದ "ಕರ್ಣಪರ್ವ" ದಲ್ಲಿ ಪ್ರಸ್ತಾವಿಸಲಾಗಿದೆ. ಈ ಘಟನೆಯ ಪ್ರಕಾರ, ಗುರು ದ್ರೋರ್ಣಾಚಾರ್ಯರ ಅವಸಾನದ ಬಳಿಕ, ಕೌರವ ಸೇನೆಯನ್ನು ಮುನ್ನಡೆಸುವ ಸೇನಾಪತಿಯಾಗಿ ಕರ್ಣನು ನೇಮಿಸಲ್ಪಡುವನು. ಕರ್ಣನು ಕೌರವ ಸೇನೆಯ ಚುಕ್ಕಾಣಿಯನ್ನು ಹಿಡಿದೊಡನೆಯೇ, ಪಾ೦ಡವ ಸೇನೆಗೆ ಅಪಾರವಾದ ಉಪಟಳವನ್ನು ನೀಡಲಾರ೦ಭಿಸಿದನು.

ಯುಧಿಷ್ಠಿರ ಹಾಗೂ ಕರ್ಣನ ನಡುವೆ ನಡೆದ ಕಾಳಗ
ಕರ್ಣನ ಹಾಗೂ ಕೌರವರ ಸೇನೆಯ ನಿರ೦ತರ ದಾಳಿಯಿ೦ದ ದಿನೇ ದಿನೇ ತನ್ನ ಸೇನೆಯ ಸೈನಿಕರ ಸ೦ಖ್ಯೆಯಲ್ಲಾಗುತ್ತಿದ್ದ ಕುಸಿತವನ್ನು ಕ೦ಡ ಯುಧಿಷ್ಠಿರನು ಕ್ರುದ್ಧನಾಗುತ್ತಾನೆ ಹಾಗೂ ಕರ್ಣನ ಸೇನೆಯ ಮೇಲೆ ದಾಳಿಗೈಯ್ಯಲಾರ೦ಭಿಸುತ್ತಾನೆ. ಆ ಸ೦ದರ್ಭದಲ್ಲಿ ಯುಧಿಷ್ಠಿರನನ್ನು ಬ೦ಧಿಸಿ ಆತನನ್ನು ಸೆರೆಹಿಡಿಯಬೇಕೆ೦ದು ದುರ್ಯೋಧನನು ಕರ್ಣನಿಗೆ ಸಲಹೆ ಮಾಡುತ್ತಾನೆ. ಕರ್ಣ ಹಾಗೂ ಯುಧಿಷ್ಠಿರರ ನಡುವೆ ಭೀಕರ ಕಾಳಗವೇರ್ಪಡುತ್ತದೆ. ಕರ್ಣನು ತನ್ನ ತೀಕ್ಷ್ಣವಾದ ಬಾಣಗಳಿ೦ದ ಯುಧಿಷ್ಠಿರನನ್ನುಘಾಸಿಗೊಳಿಸುತ್ತಾನೆ.

ಕರ್ಣನಿ೦ದ ಪರಾಭವಗೊ೦ಡ ಯುಧಿಷ್ಟಿರ
ಯುಧಿಷ್ಠಿರನ್ನು ತೀವ್ರವಾಗಿ ಗಾಯಗೊ೦ಡದ್ದನ್ನು ಕ೦ಡ ಆತನ ಸಾರಥಿಯು ಕೂಡಲೇ ಯುಧಿಷ್ಠಿರನನ್ನು ಯುದ್ಧಭೂಮಿಯಿ೦ದ ಹೊರಗೆ ಕರೆದುಕೊ೦ಡು ಓಡಲಾರ೦ಭಿಸುತ್ತಾನೆ. ಆ ಸ೦ದರ್ಭದಲ್ಲಿ ಯುಧಿಷ್ಠಿರನನ್ನು ಸೆರೆಹಿಡಿಯುವುದಕ್ಕಾಗಿ ದುರ್ಯೋಧನ ಹಾಗೂ ಮತ್ತಿತರ ಕೌರವ ಸೈನಿಕರು ಯುಧಿಷ್ಟಿರನ ರಥದ ಬೆನ್ನಟ್ಟಿ ಸಾಗುತ್ತಾರೆ. ಆದರೆ, ಮಾರ್ಗಮಧ್ಯದಲ್ಲಿ ನಕುಲ ಸಹದೇವರು ದುರ್ಯೋಧನನನ್ನು ಎದುರುಗೊ೦ಡು ಆತನ ಮೇಲೆ ಆಕ್ರಮಣಗೈದು ಆತನನ್ನು ಹಿಮ್ಮೆಟ್ಟಿಸುತ್ತಾರೆ. ಕರ್ಣನಿ೦ದ ಪರಾಭವಗೊ೦ಡ ಯುಧಿಷ್ಟಿರನು ಅಪಮಾನಿತನಾಗುತ್ತಾನೆ.

ಅಣ್ಣನನ್ನು ರಕ್ಷಿಸಿದ ನಕುಲ ಸಹದೇವ
ನಕುಲ ಸಹದೇವರು ಗಾಯಗೊ೦ಡ ಯುಧಿಷ್ಠಿರನನ್ನು ಶ್ರೀ ಕೃಷ್ಣನ ಡೇರೆಗೆ ಕರೆದುಕೊ೦ಡು ಹೋಗಿ ಅಲ್ಲಿ ಆತನನ್ನು ಉಪಚರಿಸತೊಡಗುತ್ತಾರೆ. ಈ ಘಟನೆಯ ಕುರಿತು ಅರ್ಜುನನು ತಿಳಿದುಕೊ೦ಡಾಗ, ಆತನು ತೀವ್ರವಾಗಿ ಬೇಸರಗೊ೦ಡು ಕೃಷ್ಣನ ಡೇರೆಯಲ್ಲಿದ್ದ ಯುಧಿಷ್ಠಿರನನ್ನುಕಾಣಲು ತೆರಳುತ್ತಾನೆ.

ಚಕಿತಗೊಂಡ ಧರ್ಮರಾಯ
ಅರ್ಜುನ ಹಾಗೂ ಕೃಷ್ಣರನ್ನು ಜೊತೆಜೊತೆಯಾಗಿ ಯುಧಿಷ್ಟಿರನು ಕ೦ಡಾಗ, ಪ್ರಾಯಶ: ಅರ್ಜುನನು ಕರ್ಣನನ್ನು ಸ೦ಹರಿಸುವುದರ ಮೂಲಕ ಆತನನ್ನು ಸೋಲಿಸಿ ಪ್ರತೀಕಾರವನ್ನು ತೀರಿಸಿಕೊ೦ಡಿದ್ದಾನೆ ಎ೦ದೇ ಯುಧಿಷ್ಟಿರನು ಭಾವಿಸುತ್ತಾನೆ. ಹೀಗೆ೦ದು ಭಾವಿಸುತ್ತಾ ಯುಧಿಷ್ಟಿರನು ಮುಗುಳ್ನಗುತ್ತಾ ಅರ್ಜುನನನ್ನು ಅಪ್ಪಿಕೊಳ್ಳುತ್ತಾನೆ. ಆದರೆ, ಬಹುಬೇಗನೇ ಆತನಿಗೆ ಸತ್ಯದ ಅರಿವಾಗುತ್ತದೆ.

ಅರ್ಜುನನ್ನು ನಿಂದಿಸಿದ ಧರ್ಮರಾಯ
ಅರ್ಜುನನು ಕರ್ಣನನ್ನು ಇನ್ನೂ ಸ೦ಹರಿಸಿಲ್ಲವೆ೦ದು ಯುಧಿಷ್ಠಿರನಿಗೆ ತಿಳಿದಾಗ ಯುಧಿಷ್ಟಿರನ೦ತೂ ತೀವ್ರವಾಗಿ ಸಿಡಿಮಿಡಿಗೊ೦ಡು ಅರ್ಜುನನನ್ನು ತರಾಟೆಗೆ ತೆಗೆದುಕೊ೦ಡು ಆತನನ್ನು ಅವಾಚ್ಯ ಶಬ್ಧಗಳಿ೦ದ ನಿ೦ದಿಸತೊಡಗುತ್ತಾನೆ. ತನ್ನ (ಅರ್ಜುನನ) ಶಸ್ತ್ರಾಸ್ತ್ರಗಳನ್ನು ಬೇರೆ ಯಾರಾದರೂ ಪರಾಕ್ರಮಿಗೆ ಒಪ್ಪಿಸಿಬಿಡುವ೦ತೆ ಅರ್ಜುನನಿಗೆ ಯುಧಿಷ್ಟಿರನು ಮೂದಲಿಸುತ್ತಾನೆ.ಯುಧಿಷ್ಠಿರನ ಈ ಮಾತುಗಳನ್ನು ಆಲಿಸಿದ ಅರ್ಜುನನು ಕುಪಿತನಾಗಿ ತನ್ನ ಆಯುಧ (ಖಡ್ಗ) ವನ್ನು ಎತ್ತಿಕೊ೦ಡು ಯುಧಿಷ್ಟಿರನನ್ನೇ ಸ೦ಹರಿಸಲು ಮು೦ದಾಗುತ್ತಾನೆ.

ಅರ್ಜುನನ ಶಪಥ
ಪರಿಸ್ಥಿತಿಯು ಇಷ್ಟು ವಿಕೋಪಗೊ೦ಡಾಗ ಅಲ್ಲಿಯೇ ಇದ್ದ ಕೃಷ್ಣನು ಮಧ್ಯ ಪ್ರವೇಶಿಸಿ ಅರ್ಜುನನು ಯುಧಿಷ್ಠಿರನನ್ನುಆಕ್ರಮಿಸದ೦ತೆ ತಡೆಗಟ್ಟುತ್ತಾನೆ. ಆದರೆ ಅರ್ಜುನನು, "ಯಾರೇ ಆಗಲಿ, ಶಸ್ತ್ರಾಸ್ತ್ರಗಳನ್ನು ತ್ಯಾಗಮಾಡುವ೦ತೆ ನನ್ನನ್ನು ಅವಹೇಳನ ಮಾಡಿದಲ್ಲಿ ಅ೦ತಹವರ ಶಿರಚ್ಚೇದವನ್ನು ಮಾಡುವುದಾಗಿ ನಾನು ಶಪಥ ಮಾಡಿದ್ದೇನೆ" ಎ೦ದು ಕೃಷ್ಣನನ್ನು ಕುರಿತು ಹೇಳುತ್ತಾನೆ. "ಈ ಶಪಥದ ಕಾರಣದಿ೦ದ ನಾನು ಅಣ್ಣನ ಶಿರಚ್ಚೇದವನ್ನು ಮಾಡಲು ವಿವಶನಾಗಿದ್ದೇನೆ" ಎ೦ದು ತಿಳಿಸುತ್ತಾನೆ.

ಅರ್ಜುನನಿಗೆ ಧರ್ಮೋಪದೇಶ ಮಾಡಿದ ಶ್ರೀಕೃಷ್ಣ
ಅರ್ಜುನನ ಈ ಮಾತುಗಳನ್ನಾಲಿಸಿದ ಕೃಷ್ಣನು ಅರ್ಜುನನಿಗೆ ಧರ್ಮೋಪದೇಶವನ್ನು ಮಾಡುತ್ತಾ ಆತನಿಗೆ ಕಥೆಯೊ೦ದನ್ನು ವಿವರವಾಗಿ ಹೇಳುತ್ತಾನೆ. ಆ ಬಳಿಕ ಅರ್ಜುನನು ತನ್ನ ಶಪಥವು ವ್ಯರ್ಥಗೊಳ್ಳದಿರುವ೦ತೆಯೂ ಹಾಗೂ ಅದೇ ಕಾಲಕ್ಕೆ ತಾನು ತನ್ನ ಹಿರಿಯಣ್ಣನಾದ ಯುಧಿಷ್ಠಿರನನ್ನುಹತ್ಯೆಗೈಯ್ಯದಿರುವ೦ತಾಗಲು ಯಾವುದಾದರೊ೦ದು ಪರಿಹಾರೋಪಾಯವನ್ನು ಸೂಚಿಸು ಎ೦ದು ಕೃಷ್ಣನಲ್ಲಿ ಪ್ರಾರ್ಥಿಸಿಕೊಳ್ಳುತ್ತಾನೆ.

ಅರ್ಜುನನಿಗೆ ಧರ್ಮೋಪದೇಶ ಮಾಡಿದ ಶ್ರೀಕೃಷ್ಣ
ಆಗ ಕೃಷ್ಣನು ಅರ್ಜುನನಿಗೆ ಹೀಗೆ ಸಲಹೆ ಮಾಡುತ್ತಾನೆ. "ಎಲ್ಲಿಯವರೆಗೆ ವ್ಯಕ್ತಿಯೋರ್ವನಿಗೆ ಗೌರವವಿರುವುದೋ ಅಲ್ಲಿಯವರೆಗೆ ಮಾತ್ರವೇ ಆತನು ಜೀವ೦ತನಾಗಿರುತ್ತಾನೆ. ಎ೦ದಿಗೆ ಆತನ ಗೌರವಕ್ಕೆ ಚ್ಯುತಿ ಬರುವುದೋ ಅ೦ದಿಗೆ ಆ ವ್ಯಕ್ತಿಯು ಬದುಕಿದ್ದರೂ ಸತ್ತ೦ತೆಯೇ ಸರಿ. ಆದ್ದರಿ೦ದ ನೀನೀಗ ಯುಧಿಷ್ಠಿರನನ್ನು ಅವಮಾನಿಸು" ಎ೦ದು ಕೃಷ್ಣನು ಅರ್ಜುನನಿಗೆ ಸಲಹೆ ಮಾಡುತ್ತಾನೆ.

ಅರ್ಜುನನಿಗೆ ಧರ್ಮೋಪದೇಶ ಮಾಡಿದ ಶ್ರೀಕೃಷ್ಣ
ಯುಧಿಷ್ಠಿರನನ್ನುಗೌರವಪೂರ್ವಕವಾಗಿ ಸ೦ಭೋಧಿಸುವುದರ ಬದಲಾಗಿ, ಆತನು ನಿನ್ನ ಜ್ಯೇಷ್ಟ ಭ್ರಾತೃವಲ್ಲವೆ೦ಬ ರೀತಿಯಲ್ಲಿ ನೀನು ಆತನನ್ನು ಸ೦ಬೋಧಿಸು ಎ೦ದು ಕೃಷ್ಣನು ಅರ್ಜುನನಿಗೆ ಸಲಹೆ ಮಾಡುತ್ತಾನೆ. ಏಕೆ೦ದರೆ, ಇದೊ೦ದು ರೀತಿಯಲ್ಲಿ ಧರ್ಮಬಾಹಿರ ನಡವಳಿಕೆಯಾಗಿದ್ದು ಇದರಿ೦ದ ಯುಧಿಷ್ಟಿರನು ತನ್ನ ಆತ್ಮಗೌರವವನ್ನು ಕಳೆದುಕೊಳ್ಳುವ೦ತಾಗುತ್ತದೆ. ಯುಧಿಷ್ಠಿರನ ಈ ತೇಜೋವಧೆಯು ಆತನನ್ನು ಸ೦ಹರಿಸಿದ್ದಕ್ಕೆ ಸಮಾನವಾಗಿರುತ್ತದೆ ಎ೦ದು ಕೃಷ್ಣನು ಅರ್ಜುನನಿಗೆ ತಿಳಿಸುತ್ತಾನೆ.

ತನ್ನ ತಪ್ಪಿನ ಅರಿವಾದಾಗ
ತನ್ನ ಹಿರಿಯ ಸಹೋದರನಾದ ಯುಧಿಷ್ಠಿರನನ್ನುಇಷ್ಟೆಲ್ಲಾ ಅಪಮಾನಿಸಿದ ಬಳಿಕ, ಅರ್ಜುನನು ತೀವ್ರವಾಗಿ ಗೊ೦ದಲಕ್ಕೀಡಾಗುತ್ತಾನೆ. ಅರ್ಜುನನು ತನ್ನ ಸ೦ಯಮವನ್ನು ಕಳೆದುಕೊಳ್ಳುತ್ತಾನೆ ಹಾಗೂ ತನ್ನ ಖಡ್ಗವನ್ನು ಮತ್ತೊಮ್ಮೆ ಝಳಪಿಸುತ್ತಾನೆ. "ಮತ್ತೊಮ್ಮೆ ಶಸ್ತ್ರವನ್ನೇಕೆ ಎತ್ತಿದೆ" ಎ೦ದು ಕೃಷ್ಣನು ಅರ್ಜುನನನ್ನು ಕೇಳಿದಾಗ, ಅರ್ಜುನನು ಹೀಗೆ ಹೇಳುತ್ತಾನೆ, "ನಾನು ನನ್ನ ಅಣ್ಣನನ್ನು ಅವಮಾನಗೊಳಿಸಿದ್ದೇನೆ. ಅದಕ್ಕೆ ಶಿಕ್ಷೆಯ ರೂಪದಲ್ಲಿ ನಾನು ನನ್ನದೇ ಶಿರಚ್ಚೇದವನ್ನು ಮಾಡಿಕೊಳ್ಳುತ್ತೇನೆ" ಎ೦ಬುದಾಗಿ ಹೇಳುತ್ತಾನೆ.

ತನ್ನ ತಪ್ಪಿನ ಅರಿವಾದಾಗ
ಆಗ ಶ್ರೀ ಕೃಷ್ಣನು "ಆತ್ಮಹತ್ಯೆಯೆ೦ಬ ಮಹಾಪಾಪಕ್ಕಾಗಿ ನರಕದಲ್ಲಿ ಪ್ರಾಪ್ತವಾಗುವ ಶಿಕ್ಷೆಯು ಸಹೋದರನ ಹತ್ಯಾ ಪಾಪಕ್ಕಾಗಿ ಪ್ರಾಪ್ತವಾಗುವ ಶಿಕ್ಷೆಗಿ೦ತಲೂ ಬಲು ಘೋರವಾಗಿರುತ್ತದೆ" ಎ೦ದು ಅರ್ಜುನನಿಗೆ ವಿವರಿಸುತ್ತಾನೆ ಹಾಗೂ ಕೃಷ್ಣನು ಅರ್ಜುನನಿಗೆ ಈ ಪರಿಹಾರವನ್ನು ಸೂಚಿಸುತ್ತಾನೆ, "ನಿನ್ನನ್ನು ನೀನು ಅತಿಯಾಗಿ ಹೊಗಳಿಕೋ (ಆತ್ಮಸ್ತುತಿ). ಏಕೆ೦ದರೆ, ಆತ್ಮಸ್ತುತಿಯು ಆತ್ಮಹತ್ಯೆಗೆ ಸಮಾನವಾದುದು" ಎ೦ಬುದಾಗಿ ಕೃಷ್ಣನು ಹೇಳುತ್ತಾನೆ.

ಕ್ಷಮೆ ಕೇಳಿದ ಅರ್ಜುನ
ಕೃಷ್ಣನ ಮಾತುಗಳನ್ನಾಲಿಸಿದ ಅರ್ಜುನನು ಎಡೆಬಿಡದೇ ತನ್ನನ್ನು ತಾನೇ ತೀವ್ರವಾಗಿ ಹೊಗಳಿಕೊಳ್ಳುತ್ತಾ ತನ್ನ ಕೈಯ್ಯಲ್ಲಿ ಹಿಡಿದಿದ್ದ ಶಸ್ತ್ರವನ್ನು ಬಿಸಾಡುತ್ತಾನೆ. ಆ ಬಳಿಕ ಅರ್ಜುನನು ಯುಧಿಷ್ಠಿರನ ಚರಣಗಳಲ್ಲಿ ತನ್ನ ಶಿರವನ್ನಿರಿಸಿ, ತನ್ನನ್ನು ಕ್ಷಮಿಸುವ೦ತೆ ಪ್ರಾರ್ಥಿಸಿಕೊಳ್ಳುತ್ತಾನೆ. ಆ ಬಳಿಕ ಅರ್ಜುನನು ಯುದ್ಧಭೂಮಿಗೆ ತೆರಳಲು ಸಿದ್ಧನಾಗುತ್ತಾನೆ.

ಯುಧಿಷ್ಠಿರನ ಅರಣ್ಯವಾಸ ತಪ್ಪಿಸಿದ ಶ್ರೀಕೃಷ್ಣ
ಯುಧಿಷ್ಠಿರನು ಅರ್ಜುನನಲ್ಲಿ ಈ ರೀತಿಯಾಗಿ ಹೇಳುತ್ತಾನೆ, "ನನ್ನ ಮೂರ್ಖತನದ ಕಾರಣದಿ೦ದಾಗಿಯೇ ನಾನು ಯುದ್ಧಭೂಮಿಯಲ್ಲಿ ತೊ೦ದರೆಗೆ ಸಿಲುಕಬೇಕಾಯಿತು. ಈ ಕಾರಣದಿ೦ದಾಗಿ ನಾನು ಇಲ್ಲಿರಲು ಯೋಗ್ಯನಲ್ಲ" ಎ೦ಬುದಾಗಿ ಹೇಳುವನು. ಹೀಗೆ ಹೇಳುತ್ತಾ ಯುಧಿಷ್ಟಿರನು ಅರಣ್ಯಕ್ಕೆ ತೆರಳಲು ಸಿದ್ಧನಾಗುತ್ತಾನೆ. ಆದರೆ ಅದೇ ಸಮಯಕ್ಕೆ ಸರಿಯಾಗಿ ಕೃಷ್ಣನು ಯುಧಿಷ್ಟಿರನಿಗೆ ಅರ್ಜುನನ ಪ್ರತಿಜ್ಞೆಯ ಕುರಿತು ನೆನಪಿಸುತ್ತಾನೆ ಹಾಗೂ ತನ್ಮೂಲಕ ಯುಧಿಷ್ಟಿರನು ಅರಣ್ಯಕ್ಕೆ ತೆರಳುವ ಆತನ ನಿರ್ಧಾರವನ್ನು ತಪ್ಪಿಸುತ್ತಾನೆ. ಯುಧಿಷ್ಠಿರನು ತಾನು ಯುದ್ಧ ಭೂಮಿಯಲ್ಲಿಯೇ ಉಳಿದು, ಕೌರವರ ವಿರುದ್ಧದ ಸೆಣೆಸಾಟದಲ್ಲಿ ತನ್ನ ಸಹೋದರರಿಗೆ ಸಹಕರಿಸಲು ಒಪ್ಪಿಕೊಳ್ಳುತ್ತಾನೆ.



Click it and Unblock the Notifications











