Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಶಿವರಾತ್ರಿಗೆ ಉಪವಾಸ ಮಾಡುವವರು ಪಾಲಿಸಲೇಬೇಕಾದ ವ್ರತದ ನಿಯಮಗಳಿವು
ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿಯನ್ನು ಫೆಬ್ರವರಿ 18ರಂದು ಆಚರಿಸಲಾಗುವುದು. ಶಿವ ರಾತ್ರಿಯಲ್ಲಿ ಜಾಗರಣೆ ಹಾಗೂ ಉಪವಾಸ ವ್ರತಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ಶಿವ ಭಕ್ತರು ಕೆಲವೊಂದು ನಿಯಮಗಳನ್ನು ಪಾಲಿಸಿ ಉಪವಾಸವಿದ್ದು ಶಿವರಾತ್ರಿ ಆಚರಿಸಿದರೆ ಅದರ ಫಲ ಅವರಿಗೆ ಸಿಗಲಿದೆ.
ಶಿವ ರಾತ್ರಿ ವ್ರತವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಅದರಿಂದ ಅಶ್ವಮೇಧ ಯಾಗ ಮಾಡುವುದಕ್ಕಿಂತ ಹೆಚ್ಚು ಪುಣ್ಯ ಬರುತ್ತದೆ.
ಶಿವರಾತ್ರಿಯಂದು ಭಕ್ತರು ಮುಂಜಾನೆ ಎದ್ದು ನದಿಯಲ್ಲಿ ಪುಣ್ಯ ಸ್ನಾನ ಮಾಡಬೇಕು, ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದವರು ಮನೆಯಲ್ಲಿ ಸ್ನಾನ ಮಾಡುವ ನೀರಿಗೆ ಸ್ವಲ್ಪ ಎಳ್ಳು ಹಾಕು ಕುದಿಸಿ, ಆ ನೀರಿನಲ್ಲಿ ಸ್ನಾನ ಮಾಡಿ. ನಂತರ ಮಡಿ ವಸ್ತ್ರ ಧರಿಸಿ ಶಿವನ ದೇವಾಲಯಕ್ಕೆ ಭೇಟಿ ನೀಡಬೇಕು.

ಶಿವ ಪೂಜೆ
ಶಿವನಿಗೆ ಹಾಲು-ಜೇನಿನ ಅಭಿಷೇಕ ಮಾಡಿಸಿ, ಹೂ, ಹಣ್ಣುಗಳನ್ನು ಅರ್ಪಿಸಿ, ಶಿವನ ಮಂತ್ರಗಳನ್ನು ಪಠಿಸಿ, ಇದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು.

ಶಿವರಾತ್ರಿ ಉಪವಾಸ ವ್ರತ ಮಾಡುವವರು ಪಾಲಿಸಬೇಕಾದ ನಿಯಮಗಳು
ಉಪವಾಸ ಯಾವಾಗ ಪ್ರಾರಂಭ ಮಾಡಬೇಕು, ಯಾವಾಗ ಮುಕ್ತಾಯ?
ಉಪವಾಸ ಬೆಳಗ್ಗೆಯಿಂದ ಪ್ರಾರಂಭ ಮಾಡಬೇಕು. ಇಡೀ ದಿನ ಉಪವಾಸ ಇರಬೇಕು. ಈ ಉಪವಾಸವನ್ನು ಮಾರನೇಯ ದಿನ ಪಾರಣ ಸಮಯದಲ್ಲಿ ಮುರಿಯಬೇಕು.

ಉಪವಾಸದ ಜೊತೆ ಜಾಗರಣೆ ಮಾಡಬೇಕು
ನೀವು ಉಪವಾಸ ಮಾಡದರೆ ಅದರ ಸಂಪೂರ್ಣ ಫಲ ಪಡೆಯಲು ಆ ರಾತ್ರಿ ಜಾಗರಣೆ ಮಾಡಬೇಕು. ಮನೆಯಲ್ಲಿ ಅಥವಾ ದೇವಾಲಯದಲ್ಲಿ ಈ ದಿನ ಶಿವನ ಜಪ ಮಾಡುತ್ತಾ ಜಾಗರಣೆ ಮಾಡಬೇಕು.

ಉಪವಾಸ ಹೇಗಿರಬೇಕು?
ಕಟ್ಟುನಿಟ್ಟಿನ ಉಪವಾಸ ಮಾಡುವುದಾದರೆ ಯಾವ ಆಹಾರ ಮುಟ್ಟುವಂತಿಲ್ಲ, ನೀರು ಕೂಡ ಮುಟ್ಟುವಂತಿಲ್ಲ. ಇನ್ನು ಈ ರೀತಿಯ ಕಟ್ಟು ನಿಟ್ಟಿನ ವ್ರತ ಮಾಡಲು ಸಾಧ್ಯವಾಗದಿದ್ದರೆ ಹಾಲು, ನೀರು, ಹಣ್ಣು ಅಷ್ಟೇ ಸೇವಿಸಬೇಕು.

ಉಪವಾಸದ ಮುಖ್ಯ ಉದ್ದೇಶ
ಕೆಟ್ಟ ಆಲೋಚನೆ, ಕೆಟ್ಟ ಸಂಗ, ಕೆಟ್ಟ ಪದಗಳು ಎಲ್ಲವೂ ನಮ್ಮಿಂದ ದೂರವಾಗಲಿ ಎಂದು ಉಪವಾಸ ವ್ರತ ಮಾಡಲಾಗುವುದು. ಎಲ್ಲಾ ಕೆಡಕು ದೂರವಾಗುವಂತೆ ಮಾಡು ಎಂದು ಶಿವನಲ್ಲಿ ಪ್ರಾರ್ಥಿಸಲಾಗುವುದು.
'ವಿವಾಹಿತ ಮಹಿಳೆ ತನ್ನ ಗಂಡ, ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಈ ವ್ರತ ಮಾಡಲಾಗುವುದು. ಇನ್ನು ಅವಾಹಿತ ಹೆಣ್ಣು ಮಕ್ಕಳು ಶಿವನಂಥ ಗಂಡ ಸಿಗಲಿ ಎಂದು ಬಯಸಿ ಉಪವಾಸವಿದ್ದು ಶಿವನ ಆರಾಧಿಸಲಾಗುವುದು.

ಉಪವಾಸ ವ್ರತ ಕೈಗೊಳ್ಳುವುದರಿಂದ ದೊರೆಯುವ ಪ್ರಯೋಜನಗಳು
* ಈ ರೀತಿಯ ವ್ರತ ಪಾಲಿಸುವುದರಿಂದ ದಿನ ನಿತ್ಯದ ಬದುಕಿನಿಂದ ಒಂದು ಬದಲಾವಣೆ ಉಂಟಾಗುತ್ತದೆ.
* ಉಪವಾಸ ಮಾಡುವುದರಿಂದ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಬಹುದು. ಅಲ್ಲದೆ ಉಪವಾಸ ಮಾಡುವ ಮೂಲಕ ತಾಮಸ ಗುಣ ನಿಯಂತ್ರಿಸಬಹುದು.
* ನಮ್ಮನ್ನು ನಾವು ನಿಯಂತ್ರಿಸುವ ಸಾಮರ್ಥ್ಯ ಬೆಳೆಯುವುದು.
* ಒಳ್ಳೆಯ ಆಲೋಚನೆ ಮೂಡುವುದು, ಮನಸ್ಸಿನಲ್ಲಿ ನೆಮ್ಮದಿ, ಶಾಂತಿ ಇರುತ್ತದೆ.



Click it and Unblock the Notifications