Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಹಾಶಿವರಾತ್ರಿ 2023: ಶಿವನಿಗೆ ಅಪ್ಪಿತಪ್ಪಿಯೂ ಇವುಗಳನ್ನು ಅರ್ಪಿಸಬೇಡಿ, ಅವನ ಕೆಂಗಣ್ಣಿಗೆ ಗುರಿಯಾಗಬಹುದು!
ಹಿಂದೂ ಧರ್ಮದಲ್ಲಿ ಮಹಾಶಿವರಾತ್ರಿಗೆ ವಿಶೇಷ ಮಹತ್ವವಿದ್ದು, ಈ ವರ್ಷ ಮಹಾಶಿವರಾತ್ರಿಯನ್ನು ಫೆಬ್ರವರಿ 18 ರಂದು ಶನಿವಾರ ಆಚರಿಸಲಾಗುತ್ತದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಶಿವ ಹಾಗೂ ಪಾರ್ವತಿಯ ವಿವಾಹವಾದ ದಿನವೇ ಮಹಾಶಿವರಾತ್ರಿ. ಈ ದಿನ ಉಪವಾಸವನ್ನು ಆಚರಿಸಿ, ಶಿವ- ಪಾರ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ಜೊತೆಗೆ ಈ ದಿನದಂದು ರುದ್ರಾಭಿಷೇಕ ಮಾಡುವುದರಿಂದ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ.
ಮಹಾಶಿವರಾತ್ರಿಯ ದಿನ, ಶಿವನನ್ನು ಮೆಚ್ಚಿಸಲು ಹಾಲು, ಶ್ರೀಗಂಧ, ಭಸ್ಮ ಮುಂತಾದ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಆದರೆ ಕೆಲವೊಮ್ಮೆ ತಿಳಿದೋ ತಿಳಿಯದೆಯೋ ಶಿವನಿಗೆ ಪ್ರಿಯವಲ್ಲದ ವಸ್ತುಗಳನ್ನು ಅರ್ಪಿಸಿ ಬಿಡುತ್ತೇವೆ. ಇದರಿಂದ ಶಿವನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಹಾಗಾದರೆ, ಶಿವಲಿಂಗಕ್ಕೆ ಯಾವ ವಸ್ತುಗಳನ್ನು ಅರ್ಪಿಸಬಾರದು ಎಂದು ಶಿವಪುರಾಣದಲ್ಲಿ ಹೇಳಲಾಗಿದೆ ಎಂಬುದನ್ನು ನೋಡೋಣ.
ಶಿವಪುರಾಣದ ಪ್ರಕಾರ, ಶಿವಲಿಂಗಕ್ಕೆ ಯಾವ ವಸ್ತುಗಳನ್ನು ಅರ್ಪಿಸಬಾರದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಅರಿಶಿನ:
ಅರಿಶಿನವನ್ನು ಶಿವನಿಗೆ ಅರ್ಪಿಸುವುದಿಲ್ಲ. ಧರ್ಮಗ್ರಂಥಗಳ ಪ್ರಕಾರ, ಶಿವಲಿಂಗವು ಪುರುಷ ಅಂಶದ ಸಂಕೇತವಾಗಿದೆ. ಆದರೆಮ ಅರಿಶಿನವು ಮಹಿಳೆಯರಿಗೆ ಸಂಬಂಧಿಸಿದೆ. ಈ ಕಾರಣಕ್ಕಾಗಿ, ಶಿವಲಿಂಗಕ್ಕೆ ಅರಿಶಿನವನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ.

ಕುಂಕುಮ:
ಶಿವನನ್ನು ಹೊರತುಪಡಿಸಿ ಎಲ್ಲಾ ದೇವರು ಮತ್ತು ದೇವತೆಗಳಿಗೆ ಕುಂಕುಮ ಪ್ರಿಯವಾಗಿದೆ. ಹಿಂದೂ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದ, ಶಿವನಿಗೆ ಕುಂಕುಮವನ್ನು ಅರ್ಪಿಸಲಾಗುವುದಿಲ್ಲ. ಏಕೆಂದರೆ, ಇಲ್ಲಿ ಶಿವನು ವಿನಾಶಕ. ಆದ್ದರಿಂದ, ಶಿವನಿಗೆ ಕುಂಕುಮವನ್ನು ಅರ್ಪಿಸುವ ಬದಲು, ಶ್ರೀಗಂಧದೊಂದಿಗೆ ತಿಲಕವನ್ನು ಹಚ್ಚುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಶಂಖದಿಂದ ನೀರು:
ಶಾಸ್ತ್ರಗಳ ಪ್ರಕಾರ, ಶಿವನು ಶಂಖಚೂಡ ಎಂಬ ರಾಕ್ಷಸನನ್ನು ಕೊಂದನು. ಆದ್ದರಿಂದ ಶಿವನಿಗೆ ಶಂಖದಿಂದ ನೀರನ್ನು ಅರ್ಪಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಶಂಖವನ್ನು ವಿಷ್ಣುವಿನ ಭಕ್ತನಾಗಿದ್ದ ಅಸುರನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ವಿಷ್ಣುವನ್ನು ಶಂಖದಿಂದ ಪೂಜಿಸಲಾಗುತ್ತದೆ.

ತುಳಸಿ:
ತುಳಸಿಯನ್ನು ಸಹ ಶಿವನಿಗೆ ಅರ್ಪಿಸುವುದಿಲ್ಲ. ಶಿವ ಪುರಾಣದ ಪ್ರಕಾರ, ಜಲಂಧರ ಎಂಬ ರಾಕ್ಷಸನು ಶಿವನಿಂದ ಕೊಲ್ಲಲ್ಪಟ್ಟನು. ತನ್ನ ಪತ್ನಿಯ ಪರಿಶುದ್ಧತೆಯಿಂದ ಜಲಂಧರ ಯಾರಿಂದಲೂ ಸೋಲಲಾರದ ವರವನ್ನು ಪಡೆದಿದ್ದರು. ಆದರೆ ಜಲಂಧರನು ಸಾಯಲು, ವಿಷ್ಣುವು ಜಲಂಧರನ ಹೆಂಡತಿ ತುಳಸಿಯ ಶುದ್ಧತೆಯನ್ನು ಭಂಗಗೊಳಿಸಬೇಕಾಯಿತು. ತನ್ನ ಗಂಡನ ಸಾವಿನಿಂದ ಕೋಪಗೊಂಡ ತುಳಸಿ ಶಿವನನ್ನು ಬಹಿಷ್ಕರಿಸಿದಳು. ಆದುದರಿಂದ ಶಿವನ ಪೂಜೆಯಲ್ಲಿ ತುಳಸಿಯನ್ನು ಬಳಸುವುದಿಲ್ಲ.

ಕೇದಿಗೆ ಹೂ:
ಶಾಸ್ತ್ರಗಳ ಪ್ರಕಾರ, ಶಿವನಿಗೆ ಕೇದಿಗೆ ಹೂವನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ. ಇದರ ಹಿಂದೆ ಒಂದು ಕಥೆಯಿದೆ, ಅದರ ಪ್ರಕಾರ, ಒಮ್ಮೆ ಬ್ರಹ್ಮ ಮತ್ತು ವಿಷ್ಣು ನಡುವೆ ಇಬ್ಬರಲ್ಲಿ ಯಾರು ಉತ್ತಮ ಎಂದು ವಿವಾದವಾಯಿತಂತೆ. ಬ್ರಹ್ಮ ಬ್ರಹ್ಮಾಂಡದ ಸೃಷ್ಟಿಕರ್ತನಾಗಿ ಶ್ರೇಷ್ಠನೆಂದು ಹೇಳಿಕೊಳ್ಳುತ್ತಿದ್ದನು ಮತ್ತು ಭಗವಾನ್ ವಿಷ್ಣುವು ಇಡೀ ಸೃಷ್ಟಿಯನ್ನು ನಿರ್ವಹಿಸುವವನಾಗಿ ತನ್ನನ್ನು ತಾನು ಶ್ರೇಷ್ಠನೆಂದು ಕರೆದುಕೊಂಡನು. ಆಗ ಅಲ್ಲಿ ವಿರಾಟ ಲಿಂಗ ಕಾಣಿಸಿತು. ಈ ಲಿಂಗದ ಅಂತ್ಯವನ್ನು ಮೊದಲು ಕಂಡುಕೊಳ್ಳುವವನನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುವುದು ಎಂದು ಎರಡೂ ದೇವರುಗಳ ಒಪ್ಪಿಗೆಯಿಂದ ನಿರ್ಧರಿಸಿದರು. ಆದ್ದರಿಂದ ಇಬ್ಬರೂ ಶಿವಲಿಂಗದ ತುದಿಗಳನ್ನು ಹುಡುಕಲು ವಿರುದ್ಧ ದಿಕ್ಕಿನಲ್ಲಿ ಹೋದರು. ಲಿಂಗದ ಕೊನೆ ಸಿಗದೇ, ವಿಷ್ಣು ಹಿಂತಿರುಗಿದನು. ಬ್ರಹ್ಮ ಕೂಡ ಯಶಸ್ವಿಯಾಗಲಿಲ್ಲ ಆದರೆ, ಅವನು ಬಂದು ವಿಷ್ಣುವಿಗೆ ತಾನು ಅಂತ್ಯವನ್ನು ತಲುಪಿದ್ದೇನೆ ಎಂದು ಹೇಳಿದನು. ಇದಕ್ಕೆ ಕೇದಿಗೆ ಹೂ ಸಾಕ್ಷಿ ಹೇಳಿತು. ಬ್ರಹ್ಮ ಸುಳ್ಳು ಹೇಳಿದ್ದರಿಂದ, ಸ್ವತಃ ಶಿವನು ಅಲ್ಲಿ ಕಾಣಿಸಿಕೊಂಡು, ಬ್ರಹ್ಮನ ಒಂದು ತಲೆಯನ್ನು ಕತ್ತರಿಸಿ ಕೇದಿಗೆ ಹೂವನ್ನು ಶಿವನ ಪೂಜೆಯಲ್ಲಿ ಎಂದಿಗೂ ಬಳಸುವುದಿಲ್ಲ ಎಂದು ಶಪಿಸಿದನು. ಅಂದಿನಿಂದ ಶಿವನ ಆರಾಧನೆಯಿಂದ ಕೇದಿಗೆ ಹೂ ಹೊರಗಿದೆ ಎಂದು ಪುರಾಣಗಳು ಹೇಳುತ್ತವೆ.



Click it and Unblock the Notifications
