For Quick Alerts
ALLOW NOTIFICATIONS  
For Daily Alerts

ಸ್ವಾಮಿ ಅಯ್ಯಪ್ಪನ ಈ ಮೂಲ ಮಂತ್ರ ಪಠಿಸಿದರೆ ಶನಿ ದೋಷ ನಿವಾರಣೆ, ಆರೋಗ್ಯ ಪ್ರಾಪ್ತಿ

|

ಅಯ್ಯಪ್ಪ ಸ್ವಾಮಿ ಭಕ್ತರು ಅಯ್ಯಪ್ಪನ ಬಳಿ ಭಕ್ತಿಯಿಂದ ಬೇಡಿದ್ದನ್ನೆನ್ನಾ ನೆರವೇರಿಸುತ್ತಾನೆ, ಅವರನ್ನು ಕಷ್ಟಗಳಿಂದ ಪಾರು ಮಾಡುತ್ತಾನೆ, ತನ್ನ ಶತ್ರುಗಳನ್ನೂ ಕ್ಷಮಿಸುವ ಗುಣ ಅಯ್ಯಪ್ಪನಲ್ಲಿದೆ, ಆದ್ದರಿಂದ ಎಂಥದ್ದೇ ಕಷ್ಟದ ಸಂದರ್ಭವಾಗಲಿ ಅಯ್ಯಪ್ಪನ ಭಕ್ತಿಯಿಂದ ಪ್ರಾರ್ಥಿಸಿದರೆ ಖಂಡಿತ ನಮಗೆ ಒಳ್ಳೆಯದಾಗುತ್ತದೆ ಎಂಬುವುದು ಅಯ್ಯಪ್ಪ ಭಕ್ತರ ಅಚಲ ನಂಬಿಕೆ.

ಕಾಯಿಲೆಯಿಂದ ಬಳಲುತ್ತಿದ್ದರೆ ಅಯ್ಯಪ್ಪನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಗುಣವಾಗುವುದು, ಕಷ್ಟಗಳಿದ್ದರೆ ಅದು ದೂರಾಗುವುದು, ಶನಿ ದೋಷವಿದ್ದರೆ ಅದರ ನಿವಾರಣೆಗೆ ಅಯ್ಯಪ್ಪನ ಭಕ್ತಿಯಿಂದ ಪ್ರಾರ್ಥಿಸಿದರೆ ಅವನು ನಮ್ಮ ಬದುಕಿನಲ್ಲಿರುವ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ. ಅದರಲ್ಲೂ ಸಾಡೇಸಾತಿ ಅಂದರೆ 71/2 ವರ್ಷದ ಶನಿ ನಿಮ್ಮ ಆವರಿಸಿದ್ದರೆ ಸ್ವಾಮಿ ಅಯ್ಯಪ್ಪನ ಮೂಲ ಮಂತ್ರಗಳನ್ನು ಹೇಳುವುದರಿಂದ ಬದುಕಿನಲ್ಲಿ ಉಂಟಾಗುವ ಅನೇಕ ಕಷ್ಟಗಳಿಂದ ಪಾರಾಗಬಹುದು.

ಆರೋಗ್ಯ ಸಮಸ್ಯೆ, ಶತ್ರುಗಳ ಕಾಟ, ಕೆಟ್ಟ ದೃಷ್ಟಿ, ಆರ್ಥಿಕ ಸಮಸ್ಯೆ , ಸಂಬಂಧದಲ್ಲಿ ಸಮಸ್ಯೆ , ಶನಿ ದೋಷ ಹೀಗೆ ನಮ್ಮ ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳನ್ನು ಅತ್ತಯಪ್ಪ ಮೂಲ ಮಂತ್ರ ಪಠಿಸುವುದರಿಂದ ದೂರ ಮಾಡಬಹುದು. ಅಯ್ಯಪ್ಪ ಮೂಲ ಮಂತ್ರ ಯಾವುದು, ಯಾವ ಸಮಯಕ್ಕೆ ಪಠಿಸಬೇಕು ಎಂದು ನೋಡೋಣ ಬನ್ನಿ:

 ಅಯ್ಯಪ್ಪ ಸ್ವಾಮಿ ಮೂಲ ಮಂತ್ರ ಪಠಿಸಲು ಶುಭ ದಿನಗಳು

ಅಯ್ಯಪ್ಪ ಸ್ವಾಮಿ ಮೂಲ ಮಂತ್ರ ಪಠಿಸಲು ಶುಭ ದಿನಗಳು

* ಬುಧವಾರ

* ಭಾನುವಾರ

* ಉತ್ತರ ಫಲ್ಗುಣಿ ನಕ್ಷತ್ರದ ದಿನಗಳಂದು ಅಯ್ಯಪ್ಪ ಮೂಲ ಮಂತ್ರ ಪಠಿಸಿ.

ಮಂತ್ರ ಪಠಿಸಲು ಯಾವಾಗ ಪ್ರಾರಂಭಿಸಿದರೆ ಒಳ್ಳೆಯದು?

* ಯಾವುದೇ ಬುಧವಾರ ಪ್ರಾರಂಭಿಸಬಹುದು

* ಉತ್ತರ ಫಲ್ಗುಣಿ ಅಥವಾ ಕಾರ್ತಿಕ ನಕ್ಷತ್ರದ ದಿನದಂದು ಪ್ರಾರಂಭಿಸಬಹುದು.

* ಏಕಾದಶಿ ಅಥವಾ ಷಷ್ಠಿ ತಿಥಿಯಂದು ಕೂಡ ಪ್ರರಂಭಿಸಬಹುದು.

 ಮಂತ್ರವನ್ನು ಯಾವಾಗ, ಎಷ್ಟು ಬಾರಿ ಹೇಳಬೇಕು?

ಮಂತ್ರವನ್ನು ಯಾವಾಗ, ಎಷ್ಟು ಬಾರಿ ಹೇಳಬೇಕು?

ಅಯ್ಯಪ್ಪ ಮೂಲ ಮಂತ್ರವನ್ನು ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಪಠಿಸಬೇಕು.

ಎಷ್ಟು ಬಾರಿ ಪಠಿಸಬೇಕು?

9, 18 ಅಥವಾ 108 ಬಾರಿ ಪಠಿಸಿ.

 ಯಾರು ಪಠಿಸಬಹುದು?

ಯಾರು ಪಠಿಸಬಹುದು?

ಅಯ್ಯಪ್ಪ ಮೂಲ ಮಂತ್ರವನ್ನು ಲಿಂಗಬೇಧವಿಲ್ಲದೆ ಯಾರು ಬೇಕಾದರೂ ಪಠಿಸಬಹುದು.

ಹೇಗೆ ಪೂಜಿಸಬೇಕು?

ಅಯ್ಯಪ್ಪ ಸ್ವಾಮಿಯ ಫೋಟೋ ಅಥವಾ ಅಯ್ಯಪ್ಪ ಸ್ವಾಮಿಯ ಯಂತ್ರವನ್ನು ಇಟ್ಟು ಮೂಲ ಮಂತ್ರಗಳನ್ನು ಪಠಿಸಬೇಕು.

ಯಾವು ಹೂಗಳನ್ನು ಅರ್ಪಿಸಬೇಕು?

ಅಯ್ಯಪ್ಪ ಸ್ವಾಮಿಗೆ ನೀವು ಯಾವುದೇ ಬಗೆಯ ಹೂಗಳನ್ನು ಅರ್ಪಿಸಬಹುದು.

ಯಾವ ದಿಕ್ಕಿಗೆ ಸ್ವಾಮಿ ಫೋಟೋ ಇಡಬೇಕು?

ಯಾವ ದಿಕ್ಕಿಗೆ ಸ್ವಾಮಿ ಫೋಟೋ ಇಡಬೇಕು?

ಅಯ್ಯಪ್ಪ ಸ್ವಾಮಿ ಫೋಟೋವನ್ನು ಪೂರ್ವ ದಿಕ್ಕಿಗೆ ಇಟ್ಟು ಮಂತ್ರಗಳನ್ನು ಹೇಳಿ.

ಜಪ ಮಾಲೆ: ಮಂತ್ರಗಳನ್ನು ಹೇಳುವಾಗ ರುದ್ರಾಕ್ಷಿ ಅಥವಾ ತುಳಸಿ ಜಪ ಮಾಲೆ ಬಳಸಿ.

ಅಯ್ಯಪ್ಪ ಮೂಲ ಮಂತ್ರ

ಅಯ್ಯಪ್ಪ ಮೂಲ ಮಂತ್ರ

ಓಂ ಶ್ರೀ ಹರಿಹರ ಪುತ್ರಾಯ

ಪುತ್ರ ಲಾಭಾಯ

ಚತ್ರು ನಾಶಯ

ಮದ-ಗಜ ವಾಹನಾಯ

ಓಂ ಶ್ರೀ ಮಹಾ ಶಾಸ್ತ್ರೀ ನಮಃ

English summary

Lord Ayyappa Moola Mantra, Best Time To Chant and Benefits In kannada

Lord Ayyappa Moola Mantra, Best Time To Chant and Benefits In kannada,
X