Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ದೇವಾಲಯದಲ್ಲಿ ಘಂಟೆಗಳನ್ನು ಏಕೆ ನೇತು ಹಾಕಲಾಗುತ್ತದೆ?
ಹಿಂದೂ ಧರ್ಮದಲ್ಲಿ ಪ್ರತಿ ದೇವಾಲಯದ ಮತ್ತು ಗುಡಿಗಳ ಹೊರಭಾಗದಲ್ಲಿ ಘಂಟೆಗಳನ್ನು ನೇತು ಹಾಕಲಾಗಿರುತ್ತದೆ. ನಂಬಿಕೆಗಳ ಪ್ರಕಾರ ಎಲ್ಲಿ ದೇವಾಲಯಗಳಲ್ಲಿ ಘಂಟಾ ನಿನಾದವು ಸ್ಪಷ್ಟವಾಗಿ ಕೇಳಿ ಬರುತ್ತದೆಯೋ, ಅಂತಹ ದೇವಾಲಯಗಳನ್ನು ಜಾಗೃತ ದೇವ ಎಂದು ಕರೆಯಲಾಗುತ್ತದೆ. ಪ್ರತಿ ದೇವಾಲಯಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಆರತಿಯನ್ನು ಬೆಳಗಲಾಗುತ್ತದೆ. ಆ ಸಮಯದಲ್ಲಿ ಸಣ್ಣ ಮತ್ತು ದೊಡ್ಡಘಂಟೆಗಳನ್ನು ಬಾರಿಸುವುದು ಎಲ್ಲರಿಗೂ ತಿಳಿದ ವಿಚಾರವೇ.
ದೇವಾಲಯಗಳ ಮುಂದೆ ಏಕೆ ಘಂಟೆಗಳನ್ನು ನೇತು ಹಾಕಲಾಗುತ್ತದೆ ಎಂಬುದರ ಕುರಿತಾಗಿ ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತಿರುತ್ತದೆ. ಇದಕ್ಕೆ ಕೇವಲ ಧಾರ್ಮಿಕ ಕಾರಣಗಳೇ ಅಷ್ಟೇ ಅಲ್ಲ, ವೈಜ್ಞಾನಿಕ ಕಾರಣಗಳು ಸಹ ಇವೆ.
ದೇವಾಲಯಗಳಲ್ಲಿ ಬಳಸಲಾಗುವ ಘಂಟೆಗಳು ತಮ್ಮದೇ ಆದ ಲಯ ಮತ್ತು ಗತಿಯನ್ನು ಹೊಂದಿರುತ್ತವೆ. ನಂಬಿಕೆಗಳ ಪ್ರಕಾರ ದೇವಾಲಯಗಳಲ್ಲಿ ಘಂಟೆಗಳನ್ನು ಬಾರಿಸುವಾಗ ಮೂರ್ತಿ ರೂಪದಲ್ಲಿ ಇರುವ ದೇವರುಗಳು ಎಚ್ಚರವಾಗಿ ಭಕ್ತರನ್ನು ಹರಸುತ್ತಾರಂತೆ ಮತ್ತು ಭಕ್ತರ ಕೋರಿಕೆಯು ಹೀಗೆ ಬೇಗ ನೆರವೇರುತ್ತದಂತೆ. ಅಘೋರಿಗಳ ಮಹಾನ್ ಶಕ್ತಿಗೆ ಮೂಲ ಕಾಳಿ ಮಾತೆಯೇ?

ಸ್ಕಂದ ಪುರಾಣದಂತೆ ದೇವಾಲಯಗಳಲ್ಲಿ ಘಂಟೆಗಳನ್ನು ಬಾರಿಸುವುದರಿಂದ ಮಾನವನ ನೂರು ಜನ್ಮಗಳ ಪಾಪ ಕರ್ಮಗಳು ನಿವಾರಣೆಯಾಗುತ್ತವೆಯಂತೆ. ಘಂಟೆಗಳು ಕಾಲನ ಪ್ರತಿರೂಪ. ಧರ್ಮ ಶಾಸ್ತ್ರದ ಪ್ರಕಾರ ಪ್ರಳಯ ಕಾಲದಲ್ಲಿ ಕೋಟಿ ಘಂಟೆಗಲ ನಿನಾದವು ಕೇಳಿ ಬರುತ್ತದೆಯಂತೆ.
ದೇವಾಲಯಗಳಲ್ಲಿ ಘಂಟೆಗಳನ್ನು ನೇತು ಹಾಕುವುದರ ಹಿಂದೆ ವೈಜ್ಞಾನಿಕ ಕಾರಣಗಳು ಸಹ ಇವೆ. ಘಂಟೆಯನ್ನು ಬಾರಿಸಿದಾಗ ಆ ವಾತಾವರಣದಲ್ಲಿ ಒಂದು ಕಂಪನವು ಸೃಷ್ಟಿಯಾಗುತ್ತದೆ. ಅದು ಗಾಳಿಯ ಜೊತೆಗೆ ತುಂಬಾ ದೂರದವರೆಗೆ ತಲುಪುತ್ತದೆ. ಈ ಕಂಪನವು ಸಾಗುವ ಹಾದಿಯಲ್ಲಿ ಬರುವ ಕೀಟಗಳು ಮತ್ತು ಅಪಾಯಕಾರಿ ಅಂಶಗಳು ನಿವಾರಣೆಯಾಗುತ್ತದೆ. ಇದರಿಂದ ಇಡೀ ವಾತಾವರಣವು ಸ್ವಚ್ಛ ಮತ್ತು ಆರೋಗ್ಯಕರವಾಗುತ್ತದೆ.



Click it and Unblock the Notifications