For Quick Alerts
ALLOW NOTIFICATIONS  
For Daily Alerts

ಹೆಮ್ಮೆಯ ವಿಚಾರ: ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಆಯ್ಕೆಯಾದ ಭಾರತದ ಮೊದಲ ಸಂಪೂರ್ಣ ಮಹಿಳಾ ಬೆಟಾಲಿಯನ್

|

ಈ ಫೋಟೋವನ್ನು ನೋಡಿ ಮೈ ರೋಮಾಂಚನವಾಗುತ್ತೆ ಅಲ್ವಾ, ನಮ್ಮ ಭಾರತೀಯ ಮಹಿಳಾ ಸೇನಾಪಡೆಯ ಸಂಪೂರ್ಣ ತಂಡ ಇದೀಗ ವಿಶ್ವಸಂಸ್ಥೆಯ ಶಾಂತಿ ಸೇನಾ ಪಡೆಯಲ್ಲಿ(Peacekeepers In UN Mission)ಕಾರ್ಯ ನಿರ್ವಹಿಸಲಿದೆ, ಎಂಥ ಹೆಮ್ಮೆಯಲ್ಲವೇ? ಈ ದುರ್ಗೆಯರು ಭಾರತದ ಮತ್ತಷ್ಟು ಹೆಣ್ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ.

India deploys Largest Single Unit Of Women Peacekeepers In UN Mission In Sudans Abyei In kannada

ಭಾರತದ ಮಹಿಳಾ ಬೆಟಾಲಿಯನ್‌ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಜೊತೆ ಸೇರಿ ಸುಡಾನ್‌ ಅಬೈಯಲ್ಲಿ ಶಾಂತಿ ಸ್ಥಾಪನೆ ಕಾರ್ಯಕ್ಕೆ ಸಜ್ಜಾಗಿದೆ.

ವಿಶ್ವ ಸಂಸ್ಥೆಯ ಶಾಂತಿ ಪಾಲನೆ ಪಡೆಗೆ ಭಾರತದ ಕೊಡುಗೆ ಅಮೂಲಾಗ್ರ
ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆಯು ಆ ರಾಷ್ಟ್ರಗಳಲ್ಲಿ ಶಾಂತಿ ಮತ್ತು ಸ್ಥಿರತೆ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಭಾರತ ದೇಶ ಈ ಶಾಂತಿಪಾಲನಾ ಪಡೆಗೆ ಅಧಿಕ ಸೈನಿಕರನ್ನು ಕಳುಹಿಸುವ ಮೂಲಕ ದೊಡ್ಡ ಕೊಡುಗೆ ನೀಡಿದೆ.

ಶಾಂತಿ ಪಾಲನೆ ಆರಂಭವಾದಗಿನಿಂದ 49 ದೇಶಗಳಲ್ಲಿ ಸುಮಾರು ಎರಡೂವರೆ ಲಕ್ಷ ಸೇನಾ ಸಿಬ್ಬಂದಿಗಳಿದ್ದಾರೆ, ಅದರಲ್ಲಿ ಭಾರತೀಯ ಸೈನಿಕರು ಐದೂವರೆ ಸಾವಿರ ಮಂದಿ ಕಾರ್ಯನಿವರ್ಹಿಸುತ್ತಿದ್ದಾರೆ, ಈಗ ಈ ಪಡೆಗೆ ನಮ್ಮ ಭಾರತದ ಸಂಪೂರ್ಣ ಮಹಿಳಾ ತಂಡ ಸೇರ್ಪಡೆಯಾಗಿರುವುದು ಖುಷಿಯ ವಿಚಾರ.

ಲೈಬೇರಿಯಾದಲ್ಲಿ ಮೊತ್ತ ಮೊದಲು ಕಾರ್ಯ ನಿರ್ವಹಿಸಿದ ಮಹಿಳಾ ಶಾಂತಿಪಾಲನಾ ಪಡೆ
ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಭಾರತೀಯ ಮಹಿಳಾ ಸೈನಿಕರು 2007ರಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ವಿಶ್ವಸಂಸ್ಥೆ ನಡೆಸಿದ ಕಾರ್ಯಚರಣೆಯಲ್ಲಿ ಲೈಬೇರಿಯಾದಲ್ಲಿ ಕಾರ್ಯ ನಿರ್ವಹಿಸಿದ್ದರು.

24 ಗಂಟೆ ಕಾರ್ಯ ನಿರ್ವಹಿಸಿದ್ದ ನಮ್ಮ ಮಹಿಳಾ ಬೆಟಾಲಿಯನ್‌
ಲೈಬೇರಿಯಾದಲ್ಲಿ 24 ಗಂಟೆಯೂ ಶಾಂತಿಪಾಲನ ಪಡೆ ಕಾರ್ಯನಿರ್ವಹಿಸಿತ್ತು, ಈ ಪಡೆಯಲ್ಲಿದ್ದ ಮಹಿಳೆಯರು ಪುರುಷರಿಗೆ ಸಮವಾಗಿ ಕಾರ್ಯನಿರ್ವಹಿಸುವ ಮೂಲಕ ಮತ್ತೆ ಲೈಬೇರಿಯಾದಲ್ಲಿ ಶಾಂತಿ ಸುವ್ಯವಸ್ಥೆ ಜಾರಿಗೆ ತರುವಲ್ಲಿ ಲೈಬೇರಿಯಾ ಪೋಲಿಸರಿಗೆ ನೆರವಾಗಿದ್ದಾರೆ.

ಭಾರತದ ಶಾಂತಿ ಪಾಲನಾ ಪಡೆ
ಭಾರತದ ಶಾಂತಿ ಪಾಲನಾ ಪಡೆ ಸುಶಿಕ್ಷಿತ ಮತ್ತು ವೃತ್ತಿಪರ ಹಾಗೂ ವಿಶ್ವಾಸಾರ್ಹವಾಗಿದೆ. ಇದೀಗ ಹೊಸದಾಗಿ ಸೇರ್ಪಡೆಯಾಗಿರುವ ಬೆಟಾಲಿಯನ್‌ನಲ್ಲಿ ಇಬ್ಬರು ಆಫೀಸರ್‌ಗಳು ಹಾಗೂ 25 ಇತರ ರ‍್ಯಾಂಕ್‌ನ ಆಫೀಸರ್‌ಗಳಿದ್ದಾರೆ.

ಮಹಿಳಾ ಆಫೀಸರ್‌ಗಳನ್ನು ಸ್ವಾಗತಿಸಿದ ಅಬೈ
ಸುಡನ್‌ನ ಅಬೈನ್‌ನಲ್ಲಿ ಆಗಾಗ ಹಿಂಸಾ ಪ್ರಕರಣಗಳು, ಮಹಿಳೆ ಹಾಗೂ ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುತ್ತವೆ. ಇಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ವಿಶ್ವಸಂಸ್ಥೆ ನಿರ್ಧರಿಸಿದ್ದು, ವಿಶ್ವ ಸಂಸ್ಥೆ ಶಾಂತಿ ಪಾಲನಾ ಪಡೆಯನ್ನು ಈ ಕಾರ್ಯಾಚರಣೆಗೆ ಬಿಡಲಾಗಿದೆ. ಹೀಗೆ ಸುಡನ್‌ನಲ್ಲಿ ಶಾಂತಿ ಸ್ಥಾಪನೆಗೆ ಹೊರಟಿರುವ ಭಾರತದ ವೀರ ವಿನಿತೆಯರು ಇದೀಗ ಸಾಕಷ್ಟು ಗಮನ ಸೆಳೆದಿದ್ದು, ಈ ವೀರ ವನಿತೆಯರಿಗೆ ನಮ್ಮದ್ದೊಂದು ಸಲಾಂ...

ವಿಶ್ವಸಂಸ್ಥೆ ಶಾಂತಿ ಪಾಲನಾ ಸಂಸ್ಥೆಯಲ್ಲಿ ಈಗಾಗಲೇ ಛಾಪು ಮೂಡಿಸಿದ್ದಾರೆ ನಮ್ಮ ವೀರ ವನಿತೆಯರು
ಭಾರತದ ಮಹಿಳೆಯರು ಶಾಂತಿ ಸ್ಥಾಪನೆ ಮಾಡುವುದರಲ್ಲಿ ಎತ್ತಿದ ಕೈ. ಡಾ. ಕಿರಣ್ ಬೇಡಿ, ವಿಶ್ವಸಂಸ್ಥೆಯ ಮೊದಲ ಪೋಲಿಸ್‌ ಸಲಹೆಗಾರ್ತಿಯಾದ ಮೇಜರ್ ಸುಮನ್ ಗವಾನಿ, ಶಕ್ತಿ ದೇವಿ ಇವರೆಲ್ಲಾ ಈಗಾಗಲೇ ತಮ್ಮ ಶಕ್ತಿ ಏನು ಎಂಬುವುದನ್ನು ಸಾಬೀತು ಮಾಡಿದ್ದಾರೆ.

ವಿಶ್ವ ಸಂಸ್ಥೆ ಶಾಂತಿ ಪಾಲನಾ ಪಡೆಯನ್ನು 1948ರಲ್ಲಿ ಸ್ತಾಪಿಸಲಾಯಿತು. ಅಲ್ಲಿಂದ ಇದುವರೆಗೆ 2 ಲಕ್ಷ ಭಾರತೀಯರು ಸೇವೆ ಸಲ್ಲಿಸಿದ್ದಾರೆ.

English summary

India deploys Largest Single Unit Of Women Peacekeepers In UN Mission In Sudan's Abyei In kannada

India's Largest Single Unit Of Women Peacekeepers In UN Mission In Sudan's Abyei In kannada,
X
Desktop Bottom Promotion